Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಭ ರಾಶಿಯಲ್ಲಿ ಬುಧ ಹಿಮ್ಮುಖ ಚಲನೆ: ಈ 4 ರಾಶಿಯವರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ!
ಜ್ಯೋತಿಷ್ಯದ ಪ್ರಕಾರ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಬುಧನು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯಾಗಿದ್ದು, ಬುಧನ ಚಲನೆಯು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಬುಧನು ನಿರ್ದಿಷ್ಟ ಸಮಯದಲ್ಲಿ ರಾಶಿ, ನಕ್ಷತ್ರ ಬದಲಾಯಿಸುತ್ತಾನೆ. ಇದು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡಲಿದ್ದಾನೆ.
ಬುಧ ಚಲಾವಣೆಯಲ್ಲಿ ಹಿಮ್ಮುಖ ಚಲನೆ ಕೂಡ ಬಹಳ ಮುಖ್ಯ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಬುಧನ ಹಿಮ್ಮುಖ ಚಲನೆಯಿಂದ ಹಲವು ರಾಶಿಗಳಲ್ಲಿ ವಿಶೇಷ ಬದಲಾವಣೆಗಳು ಉಂಟಾಗುತ್ತದೆ. ಬುಧನನ್ನು ವ್ಯವಹಾರ, ಮಾತುಗಾರಿಕೆ, ಆರೋಗ್ಯ, ಆತ್ಮವಿಶ್ವಾಸದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಬುಧನ ಸ್ಥಾನದಲ್ಲಿ ಬದಲಾವಣೆಯಾದಾಗಲೆಲ್ಲಾ ಅದರ ಪ್ರಭಾವವು ಎಲ್ಲಾ ರಾಶಿ ಜನರ ಜೀವನದಲ್ಲಿ ಕಂಡುಬರುತ್ತದೆ.

ಪ್ರಸ್ತುತ ಬುಧ ಮಕರ ರಾಶಿಯಲ್ಲಿದ್ದಾನೆ. ಹಾಗೆ ಫೆಬ್ರವರಿಯ 10ರಂದು ಬುಧನು ಶನಿಯ ರಾಶಿಯಾದ ಕುಂಭ ರಾಶಿ ಪ್ರವೇಶಿಸುತ್ತಾನೆ. ಫೆ, 26ರಂದು ಬುಧನು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಗೆ ಒಳಗಾಗುತ್ತಾನೆ. ಕುಂಭ ರಾಶಿಯಲ್ಲಿ ಬುಧ ಹಿಮ್ಮುಖ ಬೆಳವಣಿಗೆ 2026 ರಲ್ಲಿ ಈ ರಾಶಿ ಜನರಿಗೆ ಹಲವು ರೀತಿಯ ಪರಿಣಾಮ ಬೀರುವುದು ನೋಡಬಹುದು.
ಫೆಬ್ರವರಿಯಿಂದ ಮಾರ್ಚ್ 23ರವರೆಗೂ ಬುಧನು ಹಿಮ್ಮುಖ ಚಲನೆಯಲ್ಲಿರಲಿದ್ದಾನೆ. ಬುಧ ಹಿಮ್ಮುಖ ಚಲನೆಯಲ್ಲಿದ್ದಾಗ ಎಲ್ಲಾ ರಾಶಿಯವರಿಗೆ ಅನುಕೂಲ ಹಾಗೆ ಅನಾನುಕೂಲವನ್ನು ತರಲಿದ್ದಾನೆ. ವಿಶೇಷವಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಸ್ಥಿತಿಯ ಹೆಚ್ಚಳ ಇತ್ಯಾದಿ ಲಾಭಗಳ ನೋಡಬಹುದು. ಹಾಗಾದ್ರೆ ಕುಂಭ ರಾಶಿಯಲ್ಲಿ ಬುಧ ಹಿಮ್ಮುಖವಾಗಿರುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಬದಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯ 9 ನೇ ಮನೆಯಲ್ಲಿ ಬುಧ ಹಿಮ್ಮುಖ ಚಲನೆಯಲ್ಲಿರುತ್ತಾನೆ. ಇದು ಮಿಥುನ ರಾಶಿ ಜನರಿಗೆ ಅದೃಷ್ಟಕರ ಎನ್ನಬಹುದು. ಬುದ್ದಿವಂತಿಕೆಯಿಂದ ಅನೇಕ ಕೆಲಸಗಳನ್ನು ಉತ್ತಮವಾಗಿ ಪೂರ್ಣ ಮಾಡುವಿರಿ. ದೀರ್ಘಕಾಲದ ಅಡೆತಡೆಗಳು ಸಹ ನಿವಾರಣೆಯಾಗುವುದು ನೋಡಬಹುದು. ಹೊಸ ವೃತ್ತಿ ಅವಕಾಶಗಳು, ಬಡ್ತಿ, ವರ್ಗಾವಣೆಯಂತಹ ವಿಚಾರದಲ್ಲಿ ನಿಮಗೆ ಶುಭದಾಯಕ ಸಮಯ ಆಗಿರಲಿದೆ. ಈಗಾಗಲೇ ಮಾಡಿದ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಮಾತಿನ ಮೂಲಕ ನೀವು ಅನೇಕ ಕೆಲಸಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ದೀರ್ಘಕಾಲೀನ ಯಶಸ್ಸಿಗೆ ಕಾರಣವಾಗುತ್ತವೆ.
ಕನ್ಯಾ ರಾಶಿ
ಕನ್ಯಾ ರಾಶಿಯ 6 ನೇ ಮನೆಯಲ್ಲಿ ಬುಧ ಹಿಮ್ಮುಖವಾಗುತ್ತಾನೆ. ಇದು ಕನ್ಯಾ ರಾಶಿ ಜನರಿಗೆ ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ನೀಡಬಹುದು ಮತ್ತು ಉನ್ನತ ಅಧಿಕಾರಿಗಳ ವಿಶ್ವಾಸವನ್ನು ಗಳಿಸಬಹುದು. ಬರವಣಿಗೆ, ಲೆಕ್ಕಪತ್ರ ನಿರ್ವಹಣೆ, ಸಂಶೋಧನೆ ಅಥವಾ ಶಿಕ್ಷಣ ಕ್ಷೇತ್ರಗಳಲ್ಲಿರುವವರಿಗೆ ಇದು ತುಂಬಾ ಒಳ್ಳೆಯದು. ಬಹುಸಮಯದಿಂದ ಎಲ್ಲಾದರು ಸಿಲುಕಿರುವ ನಿಮ್ಮ ಹಣ ಕೈ ಸೇರಲಿದೆ. ಹೂಡಿಕೆಗಳು ಲಾಭವಾಗುವುದು ನೋಡಬಹುದು. ಅವಿವಾಹಿತರಲ್ಲಿ ಇದ್ದ ಹಣಕಾಸಿನ ಸಮಸ್ಯೆ ದೂರಾಗಲಿದೆ.
ತುಲಾ ರಾಶಿ
ತುಲಾ ರಾಶಿಯ 5ನೇ ಮನೆಯಲ್ಲಿ ಬುಧ ಹಿಮ್ಮುಖವಾಗಿರುತ್ತಾನೆ. ಹೀಗಾಗಿ ಪಾಲುದಾರಿಕೆ ವ್ಯಾಪಾರದಲ್ಲಿ ಲಾಭಕರ ದಿನಗಳಿವೆ. ವ್ಯಾಪಾರಿಗಳಿಗೆ ದೊಡ್ಡ ಲಾಭವಿದೆ. ನಿಮ್ಮ ಕೌಟುಂಬಿಕ ಸಮಸ್ಯೆಗಳು ಈ ಒಂದು ತಿಂಗಳ ಅವಧಿಯಲ್ಲಿ ಶುಭಕರ. ನಿಮ್ಮ ಮನೆಯಲ್ಲಿ ಇದ್ದಂತಹ ಆರ್ಥಿಕ ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗಲಿದೆ. ಸಾಲದ ಪ್ರಮಾಣದಲ್ಲಿ ಇಳಿಕೆ ನೋಡಬಹುದು. ವಿದೇಶ ಪ್ರಯಾಣಕ್ಕೆ ಅವಕಾಶಗಳು ಸಿಗುತ್ತವೆ. ಅವರು ತಮ್ಮ ವೃತ್ತಿಜೀವನದಲ್ಲಿ ಅನಿರೀಕ್ಷಿತ ಬೆಳವಣಿಗೆಯನ್ನು ನೋಡುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯ ಮೊದಲ ಮನೆಯಲ್ಲಿ ಬುಧ ಹಿಮ್ಮುಖವಾಗಿರುತ್ತಾನೆ. ಇದು ನಿಮ್ಮ ರಾಶಿಯ ಜನರಿಗೆ ಹಣ ಗಳಿಸಲು ಹೊಸ ಆಲೋಚನೆಗಳು ಕಾಣಿಸಿಕೊಳ್ಳುತ್ತವೆ. ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಐಟಿ ವಲಯದಲ್ಲಿರುವವರಿಗೆ ಇದು ತುಂಬಾ ಅದ್ಭುತವಾಗಿರುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಗಳು ಈ ಸಮಯದಲ್ಲಿ ಶುಭ ತರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications