Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 22ರಿಂದ ಸಿಂಹದಿಂದ ಕರ್ಕ ರಾಶಿಗೆ ಬುಧನ ಹಿಮ್ಮುಖ ಚಲನೆ: ಈ 6 ರಾಶಿಗಳು ಜಾಗ್ರತೆವಹಿಸಬೇಕು
ಸಿಂಹ ರಾಶಿಯಲ್ಲಿರುವ ಬುಧನು ಅಕ್ಟೋಬರ್ 22ಕ್ಕೆ ಮತ್ತೆ ಕರ್ಕ ರಾಶಿಗೆ ಹಿಮ್ಮುಖ ಚಲನೆ ಮಾಡಲಿದೆ, ಸೆಪ್ಟೆಂಬರ್ 4ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರುವ ಬುಧ ಮತ್ತೆ ಮಾರ್ಗಿಯಾಗಲಿದೆ. ಬುಧನ ಈ ಹಿಮ್ಮುಖ ಚಲನೆ ಕೆಲ ರಾಶಿಗಳಿಗೆ ಅಶುಭ ಫಲ ನೀಡುವುದು.
ಈ ಅವಧಿಯಲ್ಲಿ ಆ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಕೆಲ ಸವಾಲುಗಳು ಎದುರಾಗುವುದು ಆದರೆ ಕುಗ್ಗಬೇಡಿ ಬುಧನು ಮಾರ್ಗಿಯಾದಾಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಬುಧ ಕರ್ಕದಲ್ಲಿ ಹಿಮ್ಮುಖ ಚಲನೆ ಮಾಡುವ ಅವಧಿ ಈ ರಾಶಿಗಳಿಗೆ ನಕರಾತ್ಮಕವಾಗಿದೆ:
ಮೇಷ ರಾಶಿ
ಬುಧ ಸಿಂಹ ರಾಶಿಯಿಂದ ಕರ್ಕ ರಾಶಿಗೆ ಸೆಪ್ಟೆಂಬರ್ 4ರವರೆಗೆ ಹಿಮ್ಮುಖ ಚಲನೆಯಲ್ಲಿರುವ ಈ ಅವಧಿ ವೃತ್ತಿ ಬದುಕಿಗೆ ಅಷ್ಟೊಂದು ಅನುಕೂಲಕರವಲ್ಲ, ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳು ಎದುರಾಗಬಹುದು. ಇನ್ನು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ನೀವು ಹೆಚ್ಚಿನ ಪ್ರಯತ್ನ ಹಾಕಬೇಕು. ಇನ್ನು ನೀವು ಮನೆ ಕಟ್ಟುತ್ತಿದ್ದರೆ ಈ ಸಮಯದಲ್ಲಿ ಕೆಲಸದ ಪ್ರಗತಿಗೆ ಕೆಲ ಅಡೆತಡೆ ಎದುರಾಗಬಹುದು, ಆರ್ಥಿಕವಾಗಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಇನ್ನು ನೀವು ಆಸ್ತಿ ಅಥವಾ ವಾಹನ ಖರೀದಿಸಬೇಕು, ಹೂಡಿಕೆ ಮಾಡಬೇಕು ಎಂದಿದ್ದರೆ ಬುಧ ಹಿಮ್ಮುಖವಾಗಿರುವ ಈ ಅವಧಿಯಲ್ಲಿ ಮಾಡಬೇಡಿ, ಸೆಪ್ಟೆಂಬರ್ 4ರ ನಂತರವಷ್ಟೇ ಮಾಡಿ.
ಮಿಥುನ ರಾಶಿ
ಮಿಥುನ ರಾಶಿಯ ಹಿಮ್ಮುಖ ಚಲನೆಯ ಈ ಅವಧಿಯಲ್ಲಿ ಮಿಥುನ ರಾಶಿಯವರು ಕೂಡ ತುಂಬಾನೇ ಜಾಗ್ರತೆವಹಿಸಬೇಕು. ನೀವು ನಿಮ್ಮ ಕುಟುಂಬದವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು, ನಿಮ್ಮ ಮಾತಿನಿಂದ ಅವರಿಗೆ ನೋವು ಮಾಡಬೇಡಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗದಂತೆ ನೋಡಿಕೊಳ್ಳಿ. ಇನ್ನು ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಕೆಲ ಅಡೆತಡೆಗಳಿರಬಹುದು, ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ.
ಕರ್ಕ ರಾಶಿ
ಈ ಅವಧಿಯಲ್ಲಿ ನೀವು ನಿಮ್ಮ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಅದರಲ್ಲಿಯೂ ಮಾನಸಿಕ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಅದರಲ್ಲಿಯೂ ಮಾನಸಿಕ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ವೃತ್ತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸವಾಲುಗಳು ಎದುರಾಗಬಹುದು, ಇದರಿಂದ ಕೆಲಸದ ಕಡೆಯಾಗಲಿ, ವೃತ್ತಿ ಬದುಕಿನ ಕಡೆಯಾಗಲಿ ಗಮನಹರಿಸುವುದು ಕಷ್ಟವಾಗುವುದು. ಇನ್ನು ಅನಗ್ಯತ ಖರ್ಚುಗಳು ಕೂಡ ಬರುವುದು.
ಸಿಂಹ ರಾಶಿ
ಬುಧ ಕರ್ಕರಾಶಿಗೆ ಹಿಮ್ಮುಖ ಚಲನೆ ಮಾಡಿದಾಗ ಸಿಂಹ ರಾಶಿಯವರು ಕೂಡ ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ಈ ಅವಧಿಯಲ್ಲಿ ಖರ್ಚು ತುಂಬಾನೇ ಅಧಿಕವಿರಲಿದೆ. ಇನ್ನು ಕುಟುಂಬದಲ್ಲಿ ಕೂಡ ಕೆಲ ಭಿನ್ನಾಭಿಪ್ರಾಯವಿರಬಹುದು. ಕೆಲಸದ ಕಾರಣದಿಂದ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಕೂಡ ಸಾಧ್ಯವಾಗಲ್ಲ.
ಮಕರ ರಾಶಿ
ಬುಧನು ಹಿಮ್ಮುಖ ಚಲನೆಯಲ್ಲಿರುವ ಈ ಅವಧಿಯಲ್ಲಿ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳಬೇಡಿ. ಅದರಲ್ಲಿಯೂ ಆಸ್ತಿಗೆ ಸಂಬಂಧಿಸಿದ ವ್ಯವಹಾರ ಮಾಡಲು ಹೋಗಬೇಡಿ. ಇನ್ನು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಮಾನಸಿಕ ಒತ್ತಡ ಅಧಿಕವಿರಲಿದೆ. ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು. ಕೋಪವನ್ನು ನಿಯಂತ್ರಿಸದಿದ್ದರೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ.
ಕುಂಭ ರಾಶಿ
ಈ ಅವಧಿಯಲ್ಲಿ ಕುಂಭ ರಾಶಿಯವರು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅತಿ ಅಧಿಕ ಮಾನಸಿಕ ಒತ್ತಡ ಇರಲಿದೆ, ಅಲ್ಲದೆ ಆರ್ಥಿಕ ಸಮಸ್ಯೆ ಎದುರಾಗುವುದು, ಸಾಲ ತೆಗೆದುಕೊಳ್ಳಬೇಕಾಗುತ್ತದೆ, ಕೋರ್ಟ್ ಕೇಸ್‌ಗಳಿದ್ದರೆ ಹೆಚ್ಚಿನ ಜಾಗ್ರತೆವಹಿಸಬೇಕು.
ಗಣೇಶನ ಆರಾಧನೆ ಮಾಡಿ
ಬಡ ಮಕ್ಕಳಿಗೆ ದಾನ ಮಾಡಿ
ಧಾನ್ಯಗಳನ್ನು ಪಾರಿವಾಳಕ್ಕೆ ಹಾಕಿ.
ಓಂ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ".
ನಿರ್ವಿಘ್ನಂ ಕುರು ಮೇ ದೇವ್, ಸರ್ವ ಕಾರ್ಯೇಷು ಸರ್ವದಾ.
ಈ ಮಂತ್ರ ಪ್ರತಿದಿನ ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications