Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಜುಲೈ 18ರಿಂದ ಬುಧನ ಹಿಮ್ಮುಖ ಚಲನೆ: ಈ ರಾಶಿಯವರಲ್ಲಿ ಹೆಚ್ಚಾಗಲಿದೆ ಸಮಸ್ಯೆ!
ಗ್ರಹಗಳ ಸಂಚಾರವು ಹಲವು ರೀತಿಯಲ್ಲಿ ವ್ಯಕ್ತಿಗಳ ಮೇಲೆ ಪ್ರಭಾವ ಉಂಟು ಮಾಡುವುದು ನೋಡಬಹುದು. ಹಾಗೆ ಗ್ರಹಗಳ ಚಲನೆಯಿಂದ ಯಾವೆಲ್ಲಾ ರಾಶಿಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದ್ಯೋ ಹಾಗೆ ಹಲವು ರಾಶಿಗಳ ಮೇಲೆ ಪರೋಕ್ಷವಾಗಿಯೂ ಪರಿಣಾಮ ಬೀರುವುದು ನೋಡಬಹುದು. ಇನ್ನು ಎಲ್ಲಾ ಗ್ರಹಗಳ ಸಂಚಾರವು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ.
ಈಗ ಬುಧ ಗ್ರಹದ ಸಂಚಾರ ಕೂಡ ಹಲವು ರಾಶಿಗಳಿಗೆ ಶುಭಕರ ಹಾಗೆ ಅಶುಭವನ್ನು ತರಬಹುದು. ಬುಧ ಅತ್ಯಂತ ವೇಗವಾಗಿ ಚಲಿಸುವ ಗ್ರಹವಾಗಿದೆ. ಈಗ ಬುಧನು ಹಿಮ್ಮುಖ ಚಲನೆಯಲ್ಲಿರಲಿದ್ದಾನೆ. ಜುಲೈನಲ್ಲಿ ಬುಧವು ಹಿಮ್ಮುಖ ಚಲನೆಗೆ ಒಳಗಾಗುತ್ತದೆ ಮತ್ತು ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಶುಭ ಮತ್ತು ಅಶುಭ ಪರಿಣಾಮಗಳನ್ನು ಉಂಟುಮಾಡುತ್ತದೆ.

ಬುಧನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಜುಲೈ 18 ರಂದು ಬುಧವು ಕರ್ಕದಲ್ಲಿ 09:45 ಕ್ಕೆ ಹಿಮ್ಮುಖವಾಗಿ ಚಲಿಸಲಿದ್ದಾನೆ. ಬುಧ ಆಗಸ್ಟ್ 11ರ ವರೆಗೂ ಹಿಮ್ಮುಖ ಚಲನೆಯಲ್ಲಿದ್ದು, ಬಳಿಕ ಕರ್ಕ ರಾಶಿಯಲ್ಲಿ ನೇರ ಚಲನೆಗೆ ಒಳಗಾಗುತ್ತಾನೆ. ಈಗ ಬುಧನು ಹಿಮ್ಮುಖವಾಗಿ ಚಲಿಸುವ ಕಾರಣದಿಂದಾಗಿ ಹಲವರಿಗೆ ಲಾಭದಾಯಕ ಹಾಗೆ ಮತ್ತೆ ಕೆಲವರಲ್ಲಿ ಅನಾನುಕೂಲತೆಗೆ ಕಾರಣವಾಗಬಹುದು. ಹಾಗಾದ್ರೆ ಬುಧನ ಹಿಮ್ಮುಖ ಚಲನೆಯು ಯಾರಿಗೆ ಅಶುಭಕಾರಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಬುಧನ ಹಿಮ್ಮುಖ ಚಲನೆಯಿಂದಾಗಿ ಮೇಷ ರಾಶಿಯವರು ಮನೆ ಮತ್ತು ಕಚೇರಿಯಲ್ಲಿ ವಿವಿಧ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಹಲವು ರೀತಿಯ ಬದಲಾವಣೆಗಳ ನೋಡಬಹುದು. ನಿಮ್ಮ ವ್ಯವಹಾರದಲ್ಲಿ ಹಣಕಾಸು ವಿಚಾರವಾಗಿ ಸಂಕಷ್ಟಗಳು ಎದುರಾಗಬಹುದು. ಬಹಳ ದಿನಗಳ ಕೆಲಸವೊಂದು ನೀವು ಬಯಿಸಿದ ಫಲಿತಾಂಶ ನೀಡದೆ ಇರಬಹುದು. ಆಸ್ತಿ ಸಂಬಂಧಿತ ವಿಚಾರದಲ್ಲಿ ಹಿನ್ನಡೆ ಅನುಭವಿಸಬಹುದು. ಕೌಟುಂಬಿಕ ವಿಚಾರದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ಮಕ್ಕಳ ಕುರಿತಾದ ವಿಚಾರದಲ್ಲಿ ಗೊಂದಲ ಅಥವಾ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ಮಿಥುನ ರಾಶಿ
ಬುಧನ ಹಿಮ್ಮೆಟ್ಟುವಿಕೆ ಮಿಥುನ ರಾಶಿಯವರ ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅವರು ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕವಾಗಿ ನಿಮಗೆ ಉತ್ತಮ ಸಮಯವಲ್ಲ. ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಮತ್ತೆ ಅಡೆತಡೆ ಎದುರಾಗಬಹುದು. ಕುಟುಂಬದಲ್ಲಿ ಹಣಕಾಸು ಕುರಿತ ಒತ್ತಡವಿದ್ದರೆ ಈ ಸಮಯದಲ್ಲಿ ಅದು ಹೆಚ್ಚಾಗಬಹುದು. ಮನೆಯ ಕಡೆಯಿಂದ ಹೊಸ ಹೊಸ ಖರ್ಚುಗಳು ಬರಬಹುದು. ನಿಮ್ಮ ಕೈ ಸೇರಬೇಕಿದ್ದ ಹಣ ಮತ್ತಷ್ಟು ವಿಳಂಬವಾಗಬಹುದು. ಆರೋಗ್ಯದಲ್ಲಿನ ಏರುಪೇರಿನಿಂದಾಗಿ ನೀವು ನಿತ್ಯದ ಕೆಲಸ ಕಾರ್ಯದಲ್ಲಿ ಅಡ್ಡಿ ಎದುರಿಸಬಹುದು.
ಸಿಂಹ ರಾಶಿ
ಬುಧನ ಹಿಮ್ಮುಖ ಚಲನೆಯು ಸಿಂಹ ರಾಶಿಯವರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ನಿಮಗೆ ಯಾರಿಂದಾದರು ಹಣ ಬರಬೇಕಿದ್ದರೆ ಮತ್ತಷ್ಟು ವಿಳಂಬ ನೋಡಬಹುದು. ಮನೆಯಲ್ಲಿ ವಿವಾಹಿತರಿಗೆ ಹೊಸ ರೀತಿಯ ಸಮಸ್ಯೆಗಳು ಎದುರಾಗಬಹುದು. ಪ್ರತಿಯೊಂದು ಕೆಲಸವು ಅಡಚಣೆಯನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ನೀವು ಸದಸ್ಯರೊಂದಿಗೆ ಹೋರಾಡಬೇಕಾಗುತ್ತದೆ. ಈ ಅವಧಿಯಲ್ಲಿ ಆರೋಗ್ಯ ಕುರಿತು ಬಹಳ ಎಚ್ಚರಿಕೆ ವಹಿಸಿ. ಔದ್ಯೋಗಿಕ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











