Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಬುಧ-ಗುರು ಸಂಯೋಗದಿಂದ ಭದ್ರ ರಾಜಯೋಗ: ಈ ರಾಶಿಯವರಲ್ಲಿ ಹಿಂದೆಂದೂ ಕಾಣದ ಲಾಭ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿಯೊಂದು ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಹೀಗಾಗಿ ಗ್ರಹಗಳ ಚಲನೆ ಯಾವ ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ. ಈಗ ಬುಧನು ಮಿಥುನ ರಾಶಿಗೆ ಚಲಿಸುವುದು ಸಹ ಹಲವು ರೀತಿಯಲ್ಲಿ ಲಾಭದಾಯಕವಾಗಲಿದೆ.
ಬುಧನು ಮಿಥುನ ರಾಶಿಗೆ ಚಲಿಸುವುದರಿಂದ ಅಲ್ಲಿ ಗುರುವಿನ ಜೊತೆಗೆ ಸಂಯೋಗವಾಗಲಿದೆ. ಈ ಸಂಯೋಗವು ವಿಶೇಷವಾದ ಭದ್ರ ರಾಜಯೋಗ ಸೃಷ್ಟಿಯಾಗಲಿದೆ. ಇದು ಎಲ್ಲಾ 12 ರಾಶಿಯವರ ಮೇಲೆಯೂ ಪರಿಣಾಮ ಬೀರಲಿದೆ. ಬುಧನ ಈ ಚಲನೆಯಿಂದ ಹಲವು ರಾಶಿಗಳಿಗೆ ಲಾಭದಾಯಕವಾಗುತ್ತಿದೆ. ಈಗ ಗುರುವಿನ ಸಂಯೋಗವು ಈ ಲಾಭದಾಯಕ ಸ್ಥಿತಿಯನ್ನು ದುಪ್ಪಟ್ಟಾಗಿಸಲಿದೆ.

ಹಾಗಾದ್ರೆ ಈ ಭದ್ರ ರಾಜಯೋಗವು ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗಲಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಬುಧ ಹಾಗೂ ಗುರುವಿನ ಸಂಯೋಗದಿಂದ ಉಂಟಾಗುವ ಈ ಭದ್ರ ರಾಜಯೋಗವು ಮಿಥುನ ರಾಶಿಯವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗಲಿದೆ. ಇದು ಶುಭಕರ ಲಾಭವೆಂದು ಪರಿಗಣಿಸಬಹುದು. ಮಿಥುನ ರಾಶಿಯವರಲ್ಲಿ ಅದರಲ್ಲೂ ನಿಮ್ಮ ವೃತ್ತಿ ಜೀವನದಿಂದ ಆರ್ಥಿಕ ಲಾಭಕ್ಕೆ ಕಾರಣವಾಗಲಿದೆ. ನಿಮ್ಮ ಜೀವನದಲ್ಲಿ ಹೊಸ ಆಯಾಮಗಳು ಸೃಷ್ಟಿಯಾಗಲಿದೆ, ಕೆಲಸದ ಹೊರೆ ಕಡಿಮೆಯಾಗಲಿದೆ. ದೊಡ್ಡ ಸಮಸ್ಯೆಗಳಿಂದ ನೀವು ಹೊರಬರಬಹುದು. ಕೆಲಸದ ಸ್ಥಳದಲ್ಲಿನ ಯಶಸ್ಸಿನಿಂದ ನಿಮ್ಮಲ್ಲಿ ನೆಮ್ಮದಿ ಇರಲಿದೆ. ವೈಯಕ್ತಿಕ ಜೀವನವು ನಿಮಗೆ ಪೂರ್ಣ ಲಾಭದಾಯಕ ಹಾಗೂ ಸಂತಸಕ್ಕೆ ಕಾರಣವಾಗಲಿದೆ. ಹಣಕಾಸಿನ ಸ್ಥಿತಿಯಲ್ಲೂ ಧನಾತ್ಮಕ ಬದಲಾವಣೆಯನ್ನು ನೋಡಬಹುದು. ಅದರಲ್ಲೂ ಆಸ್ತಿ ಸಂಬಂಧಿತ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ಹೆಚ್ಚಾಗಿದೆ.
ಕನ್ಯಾ ರಾಶಿ
ಬುಧನ ಸಂಚಾರವು ಕನ್ಯಾ ರಾಶಿಯ ಮಂದಿಗೆ ಹೆಚ್ಚಿನ ಪ್ರಯೋಜನ ತರಲಿದೆ. ಏಕೆಂದರೆ ಬುಧನು ಕನ್ಯಾ ರಾಶಿಯ ಅಧಿಪತಿ. ಹೀಗಾಗಿ ಬುಧ ಹಾಗೂ ಗುರುವಿನ ಸಂಯೋಗದಿಂದ ಉಂಟಾಗುತ್ತಿರುವ ಈ ಭದ್ರ ರಾಜಯೋಗದಿಂದ ನಿಮ್ಮ ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆಯಾಗಲಿದೆ. ನಿಮ್ಮಲ್ಲಿ ಗುರಿ ಕಡೆಗೆ ಆಲೋಚನೆಗಳು ಹಾಗೆ ನಿರ್ಧಾರವನ್ನು ತೆಗೆದುಕೊಳ್ಳುವ ಕುರಿತು ಸ್ಪಷ್ಟನೆ ಸಿಗಲಿದೆ. ನಿಮ್ಮ ದೊಡ್ಡ ನಿಧಾರಗಳು ಬಹಳ ಲಾಭ ಅಥವಾ ಶುಭ ಕಾರ್ಯಕ್ಕೆ ಕಾರಣವಾಗಲಿದೆ. ಕುಟುಂಬ ವ್ಯವಹಾರಗಳು, ಹಾಗೆ ದಾಂಪತ್ಯ ಸಂಬಂಧಗಳು ನಿಮಗೆ ಶುಭವಾಗಲಿವೆ.
ಧನು ರಾಶಿ
ಧನು ರಾಶಿಯವರಿಗೆ ಈ ಭದ್ರ ರಾಜಯೋಗವು ಲಾಭದಾಯಕವಾಗಲಿದೆ. ನಿಮ್ಮ ವ್ಯಾಪಾರ ವಿಚಾರವಾಗಿ ಯಾವುದಾದರು ಮನಸ್ತಾಪಗಳು, ಅಡ್ಡಿಗಳಿದ್ದರೆ ಈ ಸಮಯದಲ್ಲಿ ಪರಿಹಾರವಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಖ್ಯಾತಿ ಹೆಚ್ಚಳವಾಗುವಂತಹ ಕೆಲಸಕ್ಕೆ ಮುಂದಾಗುತ್ತೀರಿ. ಸ್ನೇಹಿತರೊಂದಿಗೆ ನಿಮ್ಮ ಸಂಬಂಧ ಮತ್ತಷ್ಟು ಬಲವಾಗಲಿದೆ. ಆದಾಯ ಹಾಗೂ ಖರ್ಚಿನ ನಡುವೆ ಸಮತೋಲನ ಕಾಪಾಡಿಕೊಳ್ಳಿ. ಆರೋಗ್ಯದಲ್ಲಿ ನಿಮಗೆ ಸುಧಾರಣೆಯಾಗುವ ಶುಭ ದಿನಗಳಿವೆ.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಈ ಸಮಯದಲ್ಲಿ ಆರ್ಥಿಕ ಸಂಕಷ್ಟಗಳು ದೂರಾಗಲಿವೆ. ನಿಮ್ಮ ಆದಾಯ ಮೂಲಗಳು ದಿಢೀರ್ ಲಾಭದತ್ತ ತಿರುಗಲಿವೆ. ನಿಮ್ಮ ಪ್ರವಾಸಗಳು ಶುಭಕರವಾಗಿ ಮುಗಿಯಲಿವೆ. ನೀವು ಬಹಳ ಸಮಯದಿಂದ ಬಾಕಿ ಉಳಿಸಿಕೊಂಡಿದ್ದ ಕೆಲವನ್ನು ಇಂದು ಪೂರ್ಣ ಮಾಡುತ್ತೀರಿ. ಇಂತಹ ಹತ್ತಾರು ಕೆಲಸಗಳಲ್ಲಿ ಧನಾತ್ಮಕ ವಿಚಾರಗಳನ್ನೇ ನೋಡುತ್ತೀರಿ. ವೈಯಕ್ತಿಕ ಜೀವನದಲ್ಲಿದ್ದ ದೊಡ್ಡ ಒತ್ತಡವು ಪರಿಹಾರವಾಗಲಿದೆ. ಮನೆಯಲ್ಲಿ ನಿಮ್ಮ ಒಂದು ನಿರ್ಧಾರ ಶಾಂತಿ ನೆಲೆಸುವಂತೆ ಮಾಡಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications

