ಮಕರ ರಾಶಿಯಲ್ಲಿ ಮಾ. 11ರವರೆಗೆ ಬುಧ ಅಸ್ತಂಗತ: ಈ ಮೂರು ರಾಶಿಯವರು ಜಾಗ್ರತೆ

ಫೆಬ್ರವರಿ 1ಕ್ಕೆ ಮಕರ ರಾಶಿಯನ್ನು ಪ್ರವೇಶಿಸಿದ ಬುಧ ಗ್ರಹ ಫೆಬ್ರವರಿ 7ಕ್ಕೆ ಅಸ್ತಂಗತವಾಗಿದೆ, ಬುಧನು ಮಾರ್ಚ್ 11ರ ಸಂಜೆ 7.17ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದೆ, ಯಾವುದೇ ಗ್ರಹವು ಅಸ್ತಂಗತವಾದಾಗ ಅದು ಒಳ್ಳೆಯ ಪ್ರಭಾವ ಬೀರುವುದಿಲ್ಲ ಎಂದು ಹೇಳಲಾಗುವುದು.

ಗ್ರಹ ಅಸ್ತಂಗತವಾಗುವುದು ಎಂದರೆ ಸೂರ್ಯನಿಗೆ ಸಮೀಪದಲ್ಲಿದೆ ಎಂದರ್ಥ, ಗ್ರಹಗಳು ಅಸ್ತಂಗತವಾದಾಗ ಆ ಗ್ರಹದ ಪ್ರಬಾವ ಕಡಿಮೆಯಾಗುವುದು.

ಇದೀಗ ಸೂರ್ಯ ಅಸ್ತಂಗತವಾದಾಗ ಈ ಮೂರು ರಾಶಿಯವರು ಸ್ವಲ್ಪ ಹೆಚ್ಚು ಮುನ್ನೆಚ್ಚರಿಕೆವಹಿಸಬೇಕು:

 Mercury Combust In Capricorn 2024
ಮೇಷ ರಾಶಿ

ಸೂರ್ಯ ಅಸ್ತಂಗತವಾಗಿರುವ ಈ ಅವಧಿ ನಿಮಗೆ ಒಳ್ಳೆಯದಲ್ಲ, ನೀವು ಹೆಚ್ಚು ಜಾಗ್ರತೆವಹಿಸಬೇಕು. ಈ ಅವಧಿಯಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕಚೇರಿಯಲ್ಲಿ ಜಾಗರೂಕರಾಗಿರಿ, ಬಡ್ತಿ ತಡವಾಗಬಹುದು. ಆರ್ಥಿಕ ನಷ್ಟವಾಗುವ ಸಂಭವವಿದ್ದು, ಯಾರಿಗೂ ಸಾಲ ಕೊಡಬೇಡಿ. ನೀವು ವ್ಯಾಪಾರ ಮಾಡಿದರೆ, ನೀವು ನಷ್ಟವನ್ನು ಅನುಭವಿಸಬಹುದು. ಆದ್ದರಿಂದ ವ್ಯವಹಾರಸ್ಥರು ಈ ಅವಧಿಯಲ್ಲಿ ಹೆಚ್ಚು ಜಾಗ್ರತೆವಹಿಸಿ.

ಮಿಥುನ ರಾಶಿ

ಬುಧಗ್ರಹವು ನಿಮ್ಮ ಕುಟುಂಬದಲ್ಲಿ ಕೆಲವು ಸಮಸ್ಯೆಗಳನ್ನು ಉಂಟು ಮಾಡಬಹುದು. ನೀವು ವ್ಯಾಪಾರ ಪಾಲುದಾರಿಕೆಯಲ್ಲಿದ್ದರೆ, ನೀವು ಮೋಸ ಹೋಗಬಹುದು, ಜಾಗರೂಕರಾಗಿರಿ.ನಿಮಗೆ ಕಛೇರಿಯಲ್ಲಿ ಕೆಲಸ ಮಾಡುವಾಗ ಅನೇಕ ಅಡೆತಡೆಗಳು ಎಉದುರಾಗಬಹುದು, ಕೆಲಸದ ಒತ್ತಡವು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.
ಹಣಕಾಸಿನ ನಷ್ಟ ಉಂಟಾಗಬಹುದು.

ಸಿಂಹ ರಾಶಿ

ಬುಧಗ್ರಹವು ಅಸ್ತಂಗತವಾದ ಈ ಸಮಯದಲ್ಲಿ ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ ಯಾವುದೇ ಹೂಡಿಕೆ ಮಾಡಬೇಡಿ.
ಆದಾಗ್ಯೂ, ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ಆದರೆ ಈ ಅವಧಿಯಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ.

ಬುಧ ದುರ್ಬಲವಾಗಿದ್ದಾಗ ಕಂಡು ಬರುವ ಲಕ್ಷಣಗಳು

* ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಂಡು ಬರುವುದು.
* ಬುಧ ದುರ್ಬಲನಾಗಿದ್ದರೆ, ಅದು ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರಬಹುದು. ನಿಮಗೆ ಕೂದಲು ಉದುರುವ ಸಮಸ್ಯೆಗಳಿರಬಹುದು ಅಥವಾ ನಿಮ್ಮ ಉಗುರುಗಳು ದುರ್ಬಲವಾಗಬಹುದು ಮತ್ತು ಒಡೆಯಲು ಪ್ರಾರಂಭಿಸಬಹುದು. ಅಷ್ಟೇ ಅಲ್ಲ, ನಿಮ್ಮ ಹಲ್ಲುಗಳು ದುರ್ಬಲವಾಗಬಹುದು.
* ಬುಧವು ಬುದ್ಧಿವಂತಿಕೆ ಮತ್ತು ವಿವೇಚನೆಯ ಅಂಶವಾಗಿದೆ. ನಿಮ್ಮ ರಾಶಿಯಲ್ಲಿ ಬುಧವು ದುರ್ಬಲವಾಗಿದ್ದರೆ, ಯಾವುದೇ ಪ್ರಮುಖ ಕೆಲಸದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಕಷ್ಟವನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನಿಮಗೇ ನಷ್ಟವನ್ನೂ ಉಂಟುಮಾಡಬಹುದು.
* ಬುಧವು ದುರ್ಬಲಗೊಂಡಾಗ, ನಿಮ್ಮ ಸ್ವಂತ ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಕ್ಷೀಣಿಸಲು ಪ್ರಾರಂಭಿಸುತ್ತದೆ.
* ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬಹುದು.
* ಉದ್ಯೋಗದಲ್ಲಿಯೂ ಕೆಲವು ಸಮಸ್ಯೆಗಳು ಕಂಡು ಬರುವುದು

ಬುಧನನ್ನು ಬಲಪಡಿಸಲು ಪರಿಹಾರಗಳು

* ಬುಧದ ಬಣ್ಣವು ಹಸಿರು, ಈ ಬಣ್ಣದ ಕರವಸ್ತ್ರ ನಿಮ್ಮ ಜೇಬಿನಲ್ಲಿಡಿ.
* ತುಳಸಿ ಗಿಡ ನೆಟ್ಟ ಆರೈಕೆ ಮಾಡಿ. ನೀವು ಯಾವುದೇ ಹಣಕಾಸಿನ ನಷ್ಟವನ್ನು ಅನುಭವಿಸಿದ್ದರೆ, ಆ ನಷ್ಟವನ್ನು ಸರಿದೂಗಿಸಲು ಈ ಪರಿಹಾರವು ನಿಮಗೆ ಸಹಾಯ ಮಾಡುತ್ತದೆ.
* ಬುಧವಾರದಂದು ಮಹಿಳೆಯರಿಗೆ ಹಸಿರು ಸೀರೆಯನ್ನು ದಾನ ಮಾಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mercury Combust In Capricorn 2024: These 3 Zodiac Needs To Be Very Careful

Mercury Combust In Capricorn 2024: These 3 zodiac need to be careful in this time read on...
X
Desktop Bottom Promotion