Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿ ಅಂತ್ಯದಲ್ಲಿ ಬುಧ ಅಸ್ತಮಾ: ಈ ಮೂರು ರಾಶಿಯವರಲ್ಲಿ ಅದೃಷ್ಟ, ಅಡ್ಡಿಗಳು ದೂರ!
ಜ್ಯೋತಿಷ್ಯದಲ್ಲಿ ಬುಧನನ್ನು ಗ್ರಹಗಳ ರಾಜ ಎಂದು ಕರೆಯಲಾಗಿದೆ. ಬುಧನ ಆಶೀರ್ವಾದವು ಎಲ್ಲಾ ರಾಶಿಗಳಿಗೆ ಬಹಳ ಮುಖ್ಯ. ಬುಧನು ಯಾರ ಜಾತಕದಲ್ಲಿ ಧನಾತ್ಮಕ ಮನೆಯಲ್ಲಿ ಚಲಿಸುತ್ತಾನೋ ಅವರಲ್ಲಿ ಹಲವು ರೀತಿಯ ಪ್ರಯೋಜನಗಳ ಪಡೆಯುವುದು ನೋಡಬಹುದು. ಬುಧನ ಚಲನೆಯಲ್ಲಿನ ಪ್ರತಿಯೊಂದು ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಬುಧನ ಸಂಚಾರವು ಎಲ್ಲಾ ರಾಶಿ ಜನರ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಈ ತಿಂಗಳ ಕೊನೆಯಲ್ಲಿ ಅಂದರೆ ಫೆ. 28ರಂದು ಬುಧನ ಸ್ಥಾನಪಲ್ಲಟವು ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಜ್ಯೋತಿಷ್ಯದಲ್ಲಿ ಬುಧ ಗ್ರಹವು ಬುದ್ಧಿವಂತಿಕೆ, ವ್ಯವಹಾರ, ಸಂವಹನ, ಬರವಣಿಗೆ ಮತ್ತು ತರ್ಕದ ಗ್ರಹವೆಂದು ಪರಿಗಣಿಸಲಾಗಿದೆ.

ಬುಧ ಗ್ರಹವು ಅಸ್ತಮಿಸಿದಾಗ ಅದು ಎಲ್ಲಾ 12 ರಾಶಿ ಜನರ ಮೇಲೆ ಪರಿಣಾಮ ಬೀರುತ್ತದೆ, ಆದರೆ ಕೆಲವರಿಗೆ ಈ ಸಮಯವು ವಿಶೇಷವಾಗಿ ಶುಭ ಮತ್ತು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. 2026 ರಲ್ಲಿ ಬುಧ ಗ್ರಹವು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಎರಡು ಬಾರಿ ಅಸ್ತಮಿಸುತ್ತಾನೆ ಮತ್ತು ಉದಯಿಸುತ್ತಾನೆ. ಇದನ್ನು ಜ್ಯೋತಿಷ್ಯ ದೃಷ್ಟಿಕೋನದಿಂದ ಪ್ರಮುಖ ಗ್ರಹ ಸಂಚಾರವೆಂದು ಪರಿಗಣಿಸಲಾಗಿದೆ.
ಈಗ ಬುಧನು ಫೆಬ್ರವರಿ 28ರಂದು ಅಸ್ತಮಿಸುತ್ತಾನೆ. ಇದು ಹಲವು ರಾಶಿಗಳಿಗೆ ಅದೃಷ್ಟಕರವಾಗಬಹುದು. ಹಾಗಾದ್ರೆ ಬುಧ ಅಸ್ತಮಿಸುವುದು ಯಾರಿಗೆಲ್ಲಾ ಲಾಭದಾಯಕ ಅನ್ನೋದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ಬುಧನ ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆಗಳು ಬರಬಹುದು. ನಿಮ್ಮ ಬಹು ಸಮಯದ ಅಡ್ಡಿಯ ಕೆಲಸವೊಂದು ಪರಿಪೂರ್ಣವಾಗಲಿದೆ. ಕೆಲಸದಲ್ಲಿ ಉತ್ತಮ ಲಾಭಾಂಶ ಇರಲಿದೆ. ಹಠಾತ್ ಹಣಕಾಸಿನ ಲಾಭಗಳನ್ನು ಪಡೆಯಲಿದ್ದೀರಿ. ಕೆಲಸದಲ್ಲಿದ್ದ ನಿಮ್ಮ ಆತಂಕಗಳು ದೂರಾಗಲಿದೆ. ಹೊಸ ಉದ್ಯೋಗ ಪಡೆಯುವ ನಿಮ್ಮ ಬಯಕೆ ಈಡೇರಬಹುದು. ಬಹು ಸಮಯದಿಂದ ವೇತನ ಸಂಬಂಧಿತ ಇದ್ದ ಸಮಸ್ಯೆಗಳು ನಿವಾರಣೆಯಾಗುವುದು ನೋಡಬಹುದು. ಈ ಅವಧಿಯಲ್ಲಿ ಕೆಲವು ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಮತ್ತು ಅವರು ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಆನಂದಿಸಲು ಅವಕಾಶವನ್ನು ಪಡೆಯಲಿದ್ದಾರೆ.
ಕನ್ಯಾ ರಾಶಿ
ಬುಧಗ್ರಹವು ಕನ್ಯಾ ರಾಶಿಯ ಜನರ ಜೀವನದಲ್ಲಿ ಸಂತೋಷ ಮತ್ತು ಲಾಭ ತರಲಿದೆ. ನೀವು ತೆಗೆದುಕೊಳ್ಳುವ ನಿರ್ಧಾರವು ಉತ್ತಮ ಯಶಸ್ಸು ಮತ್ತು ಲಾಭಕ್ಕೆ ಕಾರಣವಾಗಲಿದೆ. ಆರ್ಥಿಕ ಲಾಭಗಳು ನಿಮದಾಗುತ್ತವೆ. ಆರೋಗ್ಯ ಸಂಬಂಧಿತ ವಿಚಾರವಾಗಿ ನಿಮಗೆ ಅನುಕೂಲಕರ ಹಾಗೆ ಸುಧಾರಣೆಗಳ ನೋಡುವಿರಿ. ಬಹು ಸಮಯದಿಂದ ನಿಮ್ಮ ಆರ್ಥಿಕ ಹಿಂಜರಿತ ಅಥವಾ ಅಡ್ಡಿಗಳಿಗೆ ಕಾರಣವಾಗಿದ್ದ ಪ್ರಮುಖ ವಿಚಾರವೊಂದರಿಂದ ನಿಮಗೆ ಶುಭವಿದೆ. ವಿವಾಹಿತರಲ್ಲಿನ ಹಣಕಾಸು ಸಮಸ್ಯೆಯೊಂದು ಬಗೆಹರಿಯಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ಸಮಯವು ಹಣಕಾಸಿನ ಲಾಭದ ದಿನಗಳ ತರಲಿದೆ. ನೀವು ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಅದನ್ನು ಪಡೆಯುವುದು ನೋಡಬಹುದು. ಉದ್ಯೋಗ ಸಂಬಂಧಿತ ವಿಚಾರದಲ್ಲಿ ಇದ್ದಂತಹ ನಿಮ್ಮ ಕಷ್ಟಗಳು ನಿವಾರಣೆಯಾಗಲಿದೆ. ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗಲು ಅವರಿಗೆ ಅವಕಾಶಗಳು ಬರುತ್ತವೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಪರಸ್ಪರ ವಾತ್ಸಲ್ಯ ಹೆಚ್ಚಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications