Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 12ಕ್ಕೆ ಅಸ್ತಂಗತವಾಗಲಿದೆ ಬುಧ: ಈ ರಾಶಿಗಳಿಗೆ ಅನುಕೂಲಕರವಲ್ಲ
ಈ ಮಾಸದಲ್ಲಿ ಬುಧ ಗ್ರಹವು ಸಿಂಹ ರಾಶಿಯಲ್ಲಿ ಅಸ್ತಂಗತವಾಗುತ್ತದೆ, ಗ್ರಹ ಅಸ್ತಂಗತವಾದಾಗ ಅದರ ಪ್ರಭಾವ ಕ್ಷೀಣಿಸುವುದು ಹಾಗಾಗಿ ಜ್ಯೋತಿಷ್ಯವು ಅಸ್ತಂಗತವಾದ ಗ್ರಹವು ಉತ್ತಮ ಪ್ರಬಾವ ಬೀರುವುದಿಲ್ಲ ಎಂದು ಹೇಳುತ್ತದೆ.

ಗ್ರಹ ಅಸ್ತಂಗತವಾಗುವುದು ಎಂದರೇನು?
ಯಾವುದೇ ಗ್ರಹವು ಸೂರ್ಯನ ಸಮೀಪ ತಲುಪಿದಾಗ ಗ್ರಹ ಅಸ್ತಂಗತವಾಗುವುದು. ಸೂರ್ಯನ ಪ್ರಭಾವದಿಂದ ಈ ಗ್ರಹದ ಪ್ರಭಾವ ತಗ್ಗುವುದು. ಹಾಗಾಗಿ ಗ್ರಹದ ಅಸ್ತಂಗತ ಸಮಯವನ್ನು ಉತ್ತಮ ಎಂದು ಪರಿಗಣಿಸಲಾಗುವುದಿಲ್ಲ.
ಆಗಸ್ಟ್ 12ಕ್ಕೆ ಬುಧ ಗ್ರಹ ಅಸ್ತಂಗತವಾಗಲಿದದೆ
ಆಗಸ್ಟ್ 12ಕ್ಕೆ ಬುಧ ಗ್ರಹವು ಸಿಂಹ ರಾಶಿಯಲ್ಲಿ ಅಸ್ತಂಗತವಾಗುತ್ತದೆ.
ಸಿಂಹ ರಾಶಿಯಲ್ಲಿ ಬುಧ ಅಸ್ಥ: ಈ ರಾಶಿಚಕ್ರದ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬುಧ ಅಸ್ತಂಗತವಾದಾಗ ಈ ರಾಶಿಯವರು ಜಾಗ್ರತೆವಹಿಸಬೇಕು:
ಮೇಷ ರಾಶಿ
ಬುಧ ಅಸ್ತಂಗತವಾದಾಗ ಮೇಷ ರಾಶಿಯವರು ಕೆಲ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ವೃತ್ತಿ ಬದುಕಿನಲ್ಲಿ ಈ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬಹುದು, ವ್ಯಾಪಾರಿಗಳಿಗೂ ನಿರೀಕ್ಷಿಸಿದಂತೆ ಲಾಭ ಸಿಗುವುದು ಕಷ್ಟವಾಗುವುದು. ಅಲ್ಲದೆ ಈ ಅವಧಿಯಲ್ಲಿ ಆರೋಗ್ಯದಲ್ಲಿ ತುಂಬಾನೇ ಸಮಸ್ಯೆ ಎದುರಿಸಬೇಕಾಗುತ್ತದೆ. ಆರ್ಥಿಕ ಖರ್ಚುಗಳೂ ಬರಬಹುದು. ಈ ಅವಧಿಯಲ್ಲಿ ನೀವು ಕೋಪ ನಿಯಂತ್ರಿಸಿದರೆ ಒಳ್ಳೆಯದು. ಮಿತಿ ಮೀರಿ ಹಣ ಖರ್ಚು ಮಾಡಲು ಹೋಗಬೇಡಿ.
ಕರ್ಕ ರಾಶಿ
ಬುಧ ಅಸ್ತಂಗತವಾದಾಗ ಕರ್ಕ ರಾಶಿಯವರು ಸವಾಲುಗಳನ್ನು ಎದುರಿಸಬೇಕಾಗುವುದು. ನೆಮ್ಮದಿ ಭಂಗ ಉಂಟಾಗುವುದು, ಮನೆಯ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ, ವ್ಯಾಪಾರಿಗಳು ಬಯಸಿದ ಪ್ರತಿಫಲ ಸಿಗದೆ ತುಂಬಾನೇ ನಿರಾಸೆ, ಅತೃಪ್ತಿ ಕಾಡುವುದು. ಆರ್ಥಿಕವಾಗಿ ತೊಂದರೆಯಿರಲ್ಲ, ಆದರೆ ಹಣವನ್ನು ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡದಿದ್ದರೆ ಒಳ್ಳೆಯದು.
ಸಿಂಹ ರಾಶಿ
ಬುಧ ಅಸ್ತಂಗತವಾದಾಗ ಸಿಂಹ ರಾಶಿಯವರು ಕೂಡ ಹಲವು ಸವಾಲುಗಳನ್ನು ಎದುರಿಸಬೇಕಾಗುವುದು. ಈ ಅವಧಿಯಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಅಥವಾ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ನೀವು ಬೆಂಬಲವನ್ನು ಪಡೆಯದಿರುವ ಸಾಧ್ಯತೆಯಿದೆ, ಕೆಲಸದಲ್ಲಿ ಅತೃಪ್ತಿ ಇರಲಿದೆ, ಸರ್ಕಾರಿ ಉದ್ಯೋಗಗಳು ಬಯಸದೆ ಇದ್ದರೂ ವರ್ಗಾವಣೆಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ.
ತುಲಾ ರಾಶಿ
ತುಲಾ ರಾಶಿಯವರು ಈ ಅವಧಿಯಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಮಾಡಿದ ಕೆಲಸಕ್ಕೆ ಬೇರೆಯವರು ಕ್ರೆಡಿಟ್ ತೆಗೆದುಕೊಳ್ಳಬಹುದು. ಖರ್ಚುಗಳು ತುಂಬಾ ಹೆಚ್ಚಿರಲಿದೆ. ಹಣ ಉಳಿಸಲು ತುಂಬಾನೇ ಕಷ್ಟವಾಗುವುದು. ಕೆಲಸದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಆರೋಗ್ಯದ ದೃಷ್ಟಿಯಿಂದ ಕೂಡ ಈ ಅವಧಿಯಲ್ಲಿ ನೀವು ಹೆಚ್ಚು ಜಾಗ್ರತೆವಹಿಸಿ.
ಮಕರ ಸಂಕ್ರಾಂತಿ
ಈ ಅವಧಿಯಲ್ಲಿ ಮಕರ ರಾಶಿಯವರು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ನೀವು ಊಹಿಸಿದಂತೆ ಕೆಲಸ ಪೂರ್ಣಗೊಳ್ಳಲು ತುಂಬಾನೇ ಕಷ್ಟವಾಗುವುದು. ಖರ್ಚುಗಳು ತುಂಬಾ ಇರಲಿದೆ. ಆರೋಗ್ಯ ಸಮಸ್ಯೆಗಳಿರಬಹುದು. ಈ ಅವಧಿಯಲ್ಲಿ ನೀವು ತುಂಬಾನೇ ಜಾಗ್ರತೆವಹಿಸಿ, ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು.
ಆದರೆ ಈ ಒಂದು ರಾಶಿ ಪ್ರಯೋಜನ ಪಡೆಯುತ್ತೀರಿ
ವೃಶ್ಚಿಕ ರಾಶಿಯವರಿಗೆ ಈ ಅಸ್ತಂಗತ ಅನುಕೂಲಕರವಾಗಿದೆ. ಕೆಲಸದಲ್ಲಿನ ಅಡೆತಡೆ ದೂರಾಗಲಿದೆ.ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗುವುದು. ಆದರೆ ಹಣವನ್ನು ನೋಡಿಕೊಂಡು ಖರ್ಚು ಮಾಡಿ. ಆರೋಗ್ಯ ಕೂಡ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications



