Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
Dina Bhavishya: ಮೇ 31ರಂದು ಯಾವ ರಾಶಿಯ ಗೃಹಿಣಿಯರು ಎಚ್ಚರಿಕೆಯಿಂದಿರಬೇಕು?
ವೈದಿಕ ಶಾಸ್ತ್ರದ ಪ್ರಕಾರ ಮೇ 31ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನ ದೊಡ್ಡ ಲಾಭಗಳ ನೋಡಬಹುದು. ನೀವು ಅಂದುಕೊಂಡಂತೆ ನಿಮ್ಮ ಕೆಲಸ ಕಾರ್ಯಗಳು ಧನಾತ್ಮಕ ರೀತಿಯಲ್ಲಿ ಮುಗಿಯಬಹುದು. ಬಹಳ ಸಮಯದಿಂದ ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದ ಕೆಲಸವನ್ನು ಪೂರ್ಣ ಮಾಡುವಿರಿ. ವಿದ್ಯಾರ್ಥಿಗಳು ಇಂದಿನಿಂದ ಅಧ್ಯಯನದ ಕಡೆಗೆ ಪ್ರಾಮಾಣಿಕವಾಗಿ ಶ್ರಮಿಸುವುದು ಉತ್ತಮ. ಸರ್ಕಾರಿ ಉದ್ಯೋಗದ ಪ್ರಯತ್ನದಲ್ಲಿದ್ದವರು ಈ ದಿನ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಬಹುದು. ವ್ಯಾಪಾರಿಗಳು ತಾವುಗಳು ಅಂದುಕೊಂಡಂತೆ ದಿನ ಕಳೆಯಬಹುದು. ಗೃಹಿಣಿಯರಲ್ಲಿ ಖರ್ಚಿಗೆ ದಾರಿಯಾಗುವ ಹಲವು ಸಂದರ್ಭ ಬರಲಿದೆ. ನೀವು ದಿನದ ಅಂತ್ಯದಲ್ಲಿ ದೂರ ಪ್ರಯಾಣಕ್ಕೆ ಮುಂದಾಗಬಹುದು, ಈ ಪ್ರಯಾಣ ಸುಖಕರ ಅಂತ್ಯ ಕಾಣಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನದಂದು ದೊಡ್ಡ ಸವಾಲುಗಳಲ್ಲಿ ಜಯ ಗಳಿಸುತ್ತಾರೆ. ಇದು ಹಲವು ದಿನದಿಂದ ನಿಮಗೆ ಎದುರಾಗಿದ್ದ ಯಾವುದೇ ಸವಾಲಾಗಿದ್ದರೂ ಅದನ್ನು ಪೂರ್ಣವಾಗಿ ಎದುರಿಸುತ್ತೀರಿ. ಭವಿಷ್ಯದ ದೃಷ್ಟಿಯಿಂದ ನೀವು ತೆಗೆದುಕೊಳ್ಳುವ ನಿರ್ಧಾರವೊಂದು ಬಹಳ ಅನುಕೂಲಕರವಾಗಿ ಬದಲಾಗುತ್ತದೆ. ನೀವು ಯಾರಿಂದಾದರು ಹಣಕಾಸು ಸಹಾಯಕ್ಕೆ ಮನವಿ ಮಾಡಿದ್ದರೆ ಅವರಿಂದ ಧನಾತ್ಮಕ ಫಲವಿದೆ. ವ್ಯಾಪಾರಿಗಳಿಗೂ ಈ ಸಮಯದಲ್ಲಿ ದೊಡ್ಡ ಅಡ್ಡಿ ಆತಂಕ ದೂರಾಗಲಿದೆ. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಇರಬಹುದು.

ಮಿಥುನ ರಾಶಿ
ಇಂದು ನಿಮ್ಮ ಎಲ್ಲಾ ಕೆಲಸಗಳು ತಾರ್ಕಿಕ ಅಂತ್ಯಗಳ ಕಾಣಲಿವೆ. ನಿಮ್ಮ ಹಣಕಾಸು ವಿಚಾರವಾಗಿ ಬಹಳ ಅನುಕೂಲಕರ ದಿನವಲ್ಲ. ಏಕೆಂದರೆ ಇಂದು ನಿಮ್ಮ ಆರ್ಥಿಕ ಸ್ಥಿತಿ ಏರಿಳಿತದಿಂದ ಕೂಡಿರಬಹುದು. ಹಲವು ಸಮಯದಿಂದ ನಿಮ್ಮ ಆದಾಯಕ್ಕೆ ಕಾರಣವಾಗಿದ್ದ ವಿಚಾರದಲ್ಲಿ ಅಡೆತಡೆ ನೋಡಬಹುದು. ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವಾಗ ಇಂದು ಎಚ್ಚರಿಕೆ ಅಗತ್ಯ. ಯಾರೊಂದಿಗೂ ಅನಗತ್ಯ ಚರ್ಚೆ ಅಥವಾ ಮನಸ್ತಾಪಕ್ಕೆ ದಾರಿ ಮಾಡಿಕೊಡುವ ಘಟನೆಗಳಿಗೆ ಆಸ್ಪದ ನೀಡಬೇಡಿ. ಆರೋಗ್ಯದ ಕಡೆಗೆ ಗಮನವಿಡಿ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನ ತುಂಬಾನೆ ಅನುಕೂಲಕರ ವಿಚಾರಗಳಿಗೆ ಒಳಗಾಗುತ್ತಾರೆ. ನೀವು ಅವಿವಾಹಿತರಾಗಿದ್ದರೆ ವಿವಾಹ ಸಂಬಂಧವಾಗಿ ಶುಭ ಸುದ್ದಿ ಕೇಳಬಹುದು. ನಿಮ್ಮ ಪ್ರೀತಿ ವ್ಯವಹಾರಗಳು ಈ ಸಮಯದಲ್ಲಿ ಉತ್ತಮವಾಗಿರಲಿದೆ. ನಿಮಗಾಗಿ ಯಾವುದಾದರು ವಸ್ತು ಖರೀದಿಸಲು ನೀವು ಬಹಳ ಸಮಯದಿಂದ ಬಯಸಿದ್ದರೆ ಈ ದಿನದಂದು ದೊಡ್ಡ ಹೆಜ್ಜೆ ಇಡುತ್ತೀರಿ. ಮನೆಯವರಲ್ಲಿದ್ದ ಹಣಕಾಸು ಸಂಬಂಧಿ ಒತ್ತಡ ಕಡಿಮೆಯಾಗಬಹುದು. ಬ್ಯಾಂಕಿಂಗ್ ವಿಚಾರವಾಗಿ ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಪೂರ್ಣ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯವರು ಇಂದು ಹಣಕಾಸು ವಿಚಾರವಾಗಿ ಮೇಲುಗೈ ಸಾಧಿಸಲಿದ್ದಾರೆ. ನೀವು ಬಯಸಿದಂತೆ ನಿಮ್ಮ ಕೈಗೆ ಹಣ ಸಿಗಲಿದೆ. ಇದನ್ನು ಉತ್ತಮ ಕೆಲಸಕ್ಕೆ ನೀವು ಬಳಸುತ್ತೀರಿ. ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವಾಗ ಎಚ್ಚರಿಕೆ ಇಡಿ. ವಿದ್ಯಾರ್ಥಿಗಳು ಬಯಸಿದಂತೆ ಉನ್ನತ ಶಿಕ್ಷಣ ಸಂಬಂಧ ಶುಭ ಸುದ್ದಿ ಕೇಳಬಹುದು. ಉದ್ಯೋಗ ಹುಡುಕುವವರು ಆಪ್ತರ ಮೂಲಕ ಉತ್ತಮ ಅವಕಾಶ ಪಡೆಯಬಹುದು. ಆದ್ರೆ ಅದರಿಂದ ಆರಂಭಿಕ ತೃಪ್ತಿ ಇಲ್ಲದೆ ಇರಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಮಿಶ್ರ ಫಲದ ದಿನವಾಗಲಿದೆ. ನೀವು ಅವಿವಾಹಿತರಾಗಿದ್ದರೆ ಖರ್ಚು ಹೆಚ್ಚಾಗುವ ನಿರೀಕ್ಷೆ ಇದೆ. ನೀವು ಮನೆಗಾಗಿ ಖರ್ಚು ಮಾಡುತ್ತೀರಿ, ಹಾಗೆ ನಿಮ್ಮ ಬಹುದೊಡ್ಡ ಕೆಲಸವೊಂದಕ್ಕೆ ಇಂದು ಅಡ್ಡಿಯಾಗಬಹುದು. ಇದರಿಂದ ಒತ್ತಡ ಎದುರಿಸಬೇಕಾಗಬಹುದು. ವಾಹನ ಸಂಬಂಧಿ ಖರ್ಚುಗಳು ಸಹ ಹೆಚ್ಚಾಗಬಹುದು. ನಿಮ್ಮ ಹಾಗೂ ಕುಟುಂಬದಲ್ಲಿ ಏನಾದರು ಮನಸ್ತಾಪಗಳಿದ್ದರೆ ಅದರಲ್ಲೂ ಹಣಕಾಸು ವಿಚಾರವಾಗಿ ಮನಸ್ತಾಪಗಳಿದ್ದರೆ ಅದನ್ನು ನಿವಾರಿಸಿಕೊಳ್ಳುವುದು ಬಹಳ ಉತ್ತಮ.
ತುಲಾ ರಾಶಿ
ಇಂದು ನಿಮಗೆ ಆರೋಗ್ಯದ ವಿಚಾರದಲ್ಲಿ ಶುಭಕರ. ನೀವು ಯಾವುದಾದರು ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರೆ ಧನಾತ್ಮಕವಾಗಿ ಸುಧಾರಣೆ ನೋಡಲಿದ್ದೀರಿ. ವ್ಯಾಪಾರಿಗಳಿಗೆ ದಿಢೀರ್ ಲಾಭದ ಜೊತೆಗೆ ಒಂದಿಷ್ಟು ಖರ್ಚು ಕೂಡ ಎದುರಾಗಲಿದೆ. ನಿಮ್ಮದಲ್ಲದ ಕೆಲಸದ ಕಾರಣಕ್ಕೆ ನೀವು ಪ್ರಯಾಣ ಮಾಡಬೇಕಾಗಬಹುದು. ರಸ್ತೆ ಬದಿ ವ್ಯಾಪಾರಿಗಳು ಬಹಳ ಲಾಭ ಮಾಡುವ ದಿನವಿದು. ಗೃಹಿಣಿಯಲ್ಲಿ ಧನ ಲಾಭದ ನಿರೀಕ್ಷೆ ಇದೆ.
ವೃಶ್ಚಿಕ ರಾಶಿ
ಇಂದು ನಿಮಗೆ ಅತ್ಯಂತ ಫಲದಾಯಕ ದಿನವಾಗಿರಲಿದೆ. ನಿಮ್ಮ ಕೆಲಸಗಳು ಸಮಯದ ಒಳಗೆ ಪೂರ್ಣವಾಗಲಿದೆ. ಕೌಟುಂಬಿಕ ವಿಚಾರದಲ್ಲಿ ಇಂದು ಕಹಿ ಇದ್ದರೂ, ಧೈರ್ಯವಾಗಿ ಸವಾಲುಗಳ ಎದುರಿಸಿ. ಖರ್ಚುಗಳ ಮೇಲೆ ಹಿಡಿತವಿರಲಿ. ಸಮಸ್ಯೆಗಳಿಂದ ದೂರ ಹೋಗುವ ಬದಲಾಗಿ ಅದನ್ನು ಪರಿಹರಿಸುವುದು ಉತ್ತಮ. ನಿಮ್ಮ ಆದಾಯ ಮೂಲದಲ್ಲಿ ಹೆಚ್ಚಳ ನೋಡಬಹುದು. ಹೋಟೆಲ್ ಉದ್ಯಮಿಗಳು ದೊಡ್ಡ ಒಪ್ಪಂದ ಮಾಡಿಕೊಳ್ಳದೆ ಇದ್ದರೆ ಉತ್ತಮ. ಆರೋಗ್ಯದ ವಿಚಾರವಾಗಿ ನಿಮಗೆ ಉತ್ತಮ ದಿನವಲ್ಲ.
ಧನು ರಾಶಿ
ಧನು ರಾಶಿಯವರು ಈ ದಿನ ಎಲ್ಲಾ ಕೆಲಸಗಳನ್ನು ಶ್ರಮ ವಹಿಸಿ ಮಾಡಿ. ಇದರಿಂದ ನಿಮಗೆ ದಿನದ ಅಂತ್ಯದಲ್ಲಿ ನೆಮ್ಮದಿ ಇರಲಿದೆ. ಕಚೇರಿ ವಿಚಾರವಾಗಿ ಇರುವ ಒತ್ತಡ ಹೆಚ್ಚಾಗಬಹುದು. ಸಮಯ ಕಳೆದಂತೆ ನಿಮ್ಮ ಆರ್ಥಿಕ ಬಿಕ್ಕಟ್ಟು ಸುಧಾರಿಸಲಿದೆ, ಹೀಗಾಗಿ ಆ ಕುರಿತಾದ ಪ್ರಯತ್ನ ಬಿಡಬೇಡಿ. ಎಲ್ಲಾ ಕಡೆಗಳಿಂದ ನಿಮಗೆ ಒಳ್ಳೆಯ ಸುದ್ದಿ ಕೇಳಬಹುದು. ಖಾಸಗಿ ಸಂಸ್ಥೆ ನೌಕರರಲ್ಲಿ ಇಂದು ಶ್ರಮ ಹೆಚ್ಚಾಗಲಿದೆ. ಆಹಾರ ಸಂಬಂಧಿಸಿದಂತೆ ಖರ್ಚು ಇರಬಹುದು. ಶಾಪಿಂಗ್, ಓಡಾಟ ಹೆಚ್ಚಾಗಬಹುದು.
ಮಕರ ರಾಶಿ
ಇಂದು ನಿಮಗೆ ಉತ್ತಮ ದಿನವಾಗಿ ನೋಡಬಹುದು. ದಿನದ ಆರಂಭದಲ್ಲಿ ಆಲಸ್ಯವಿದ್ದರೂ ನಂತರದ ಸಮಯ ನಿಮಗೆ ಉಲ್ಲಾಸದಾಯಕವಾಗಿರಲಿದೆ. ದಾಂಪತ್ಯದಲ್ಲಿ ನಿಮಗೆ ಇಂದು ಸಂತಸದ ದಿನ. ಮಕ್ಕಳಿಂದ ನೀವು ಶುಭ ಸುದ್ದಿ ಕೇಳಬಹುದು. ಉದ್ಯೋಗ ಸಂಬಂಧಿಸಿದಂತೆ ಇಂದು ನಿರಾಳವಾಗುವ ದಿನ. ದೂರ ಪ್ರಯಾಣಕ್ಕೆ ನೀವು ಮುಂದಾಗಬಹುದು. ಸ್ನೇಹಿತರೊಂದಿಗಿನ ಮಾತುಕತೆ ನಿಮಗೆ ನೆಮ್ಮದಿ ತರಲಿದೆ. ನಿಮ್ಮದಲ್ಲದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಬೇಡಿ. ಹಿಂದೆ ಮಾಡಿದ್ದ ತಪ್ಪುಗಳನ್ನು ಮತ್ತೆ ಮಾಡಲು ಮುಂದಾಗಬೇಡಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಬಹಳಷ್ಟು ಶ್ರಮದಾಯಕ ದಿನ. ನೀವು ವಿಶ್ರಾಂತಿ ಬಯಸಿದರೂ ಸುಲಭವಾಗಿ ಸಿಗದ ದಿನವಾಗಿರಲಿದೆ. ದೊಡ್ಡ ಹಣಕಾಸು ಒಪ್ಪಂದಗಳಿಂದ ದೂರ ಇರುವುದು ಉತ್ತಮ. ಉದರ ಸಂಬಂಧಿ ಅಥವಾ ಸೊಂಟಕ್ಕೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ನೀವು ಗುರಿಯಾಗಬಹುದು. ಯಾರ ಬಳಿಯೂ ನಿಮ್ಮ ಮುಂದಿನ ಹೆಜ್ಜೆಗಳ ಕುರಿತಾಗಿ ಚರ್ಚಿಸಬೇಡಿ. ದಾಂಪತ್ಯದಲ್ಲಿ ನೀವು ಬಯಸಿದ ದಿನವಲ್ಲ, ಇಂದು ಸರಳ ಸಮಸ್ಯೆಗಳು ನಿಮಗೆ ದೊಡ್ಡದಾಗಿ ಕಾಡಬಹುದು. ವಾಹನ ಚಾಲಕರು ಎಚ್ಚರಿಕೆ ವಹಿಸಿ.
ಮೀನ ರಾಶಿ
ಇಂದು ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯಬೇಕಾದರೆ ಆಲಸ್ಯ, ಸೋಮಾರಿಯನ ಬಿಡಬೇಕಿದೆ. ಯಾರಿಂದಾದರು ಕೆಲಸದ ಸಂಬಂಧ ನೆರವು ಪಡೆದಿದ್ದರೆ ಈ ದಿನದಂದು ಲಾಭ ಪಡೆಯಲಿದ್ದೀರಿ. ಸಮಸ್ಯೆಗಳಿಗೆ ಪರಿಹಾರ ಹುಡುಕಲು ನೀವು ಪ್ರಯಾಣ ಮಾಡಬೇಕಾಗಬಹುದು. ಸರ್ಕಾರಿ ಉದ್ಯೋಗಿಗಳು ಈ ದಿನದಂದು ಅನುಕೂಲಕರ ದಿನವಾಗಿ ನೋಡುತ್ತಾರೆ. ನಿಮ್ಮ ಬಯಕೆಯಂತೆ ಕಚೇರಿ ಕೆಲಸ ಮುಗಿಯಲಿದೆ. ಆತ್ಮಿಯರಿಂದ ನೀವು ಉತ್ತಮ ಸಲಹೆಯೊಂದನ್ನು ಇಂದು ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಉತ್ತಮ ಲಾಭದ ದಿನ.



Click it and Unblock the Notifications











