Dina Bhavishya: ಮೇ 30ರಂದು ಯಾರ ಅದೃಷ್ಟ ಬದಲಾಗಲಿದೆ?

ವೈದಿಕ ಶಾಸ್ತ್ರದ ಪ್ರಕಾರ ಮೇ 30ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ಮೇಷ ರಾಶಿಯವರಲ್ಲಿ ಲಾಭದಾಯಕ ದಿನವಾಗಲಿದೆ. ನಿಮ್ಮ ದೊಡ್ಡ ಕೆಲಸಗಳನ್ನು ಆಪ್ತರ ಸಹಕಾರದೊಂದಿಗೆ ಸುಲಭವಾಗಿ ಮಾಡಿ ಮುಗಿಸಲಿದ್ದೀರಿ. ನಿಮ್ಮ ಹಣಕಾಸಿನ ಸಮಸ್ಯೆಯಲ್ಲಿ ಮತ್ತೊಮ್ಮೆ ಏರಿಳಿತಕ್ಕೆ ಕಾರಣವಾಗುವ ಘಟನೆಗಳು ನಡೆಯಬಹುದು. ತರಾತುರಿಯಲ್ಲಿ ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ವೃಷಭ ರಾಶಿ

ಇಂದು ವೃಷಭ ರಾಶಿಯವರ ಲಾಭಾಂಶ ಹೆಚ್ಚಾಗಲಿದೆ. ನೀವು ಬಯಸಿದಂತೆ ಕೆಲಸ ಕಾರ್ಯಗಳಲ್ಲಿ ದೊಡ್ಡ ಯಶಸ್ಸು ಪಡೆಯಬಹುದು. ಕಚೇರಿಯ ಒತ್ತಡವು ಕೊಂಚ ಕಡಿಮೆಯಾಗಬಹುದು. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧ ಮಾತುಕತೆ ನಡೆಯಬಹುದು. ಮಕ್ಕಳ ಕುರಿತಾದ ಚಿಂತೆ ಸಂಬಂಧ ನೀವು ಇಡೀ ದಿನ ಯೋಚನೆಯಲ್ಲಿ ತೊಡಗಲಿದ್ದೀರಿ.

May-30-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮ್ಮ ದೊಡ್ಡ ಪ್ರಯಾಣ ಸಂಬಂಧ ಎಚ್ಚರಿಕೆ ವಹಿಸಿ. ವಾಹನ ಸಂಬಂಧಿ ಕೆಲಸಗಳಲ್ಲಿ ನಿಮಗೆ ಶುಭವಾಗಲಿದೆ, ಒಂದು ವೇಳೆ ನೀವು ಹಣಕಾಸು ವಿಚಾರದಲ್ಲಿ ಚಿಂತೆಯಲ್ಲಿ ಮುಳುಗಿದ್ದರೆ ಇಂದು ನಿರಾಳರಾಗಬಹುದು. ಪ್ರವಾಸಕ್ಕೆ ತೆರಳುವ ಆಲೋಚನೆಯಲ್ಲಿ ಅಡ್ಡಿ ಇರಲಿದೆ. ಆರೋಗ್ಯದಲ್ಲೂ ಸುಧಾರಣೆ ನೋಡುವಿರಿ.

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಇಂದು ಬಹುತೇಕ ಸಮಯ ಮನೆಯಿಂದ ಹೊರಗುಳಿಯಬಹುದು, ಸಭೆ, ಸಮಾರಂಭ, ಶುಭ ಕಾರ್ಯದಂತಹ ಕೆಲಸದಲ್ಲಿ ಭಾಗಿಯಾಗಬಹುದು. ಯಾರಿಗಾದರು ಸಹಾಯ ಮಾಡುವ ಅವಕಾಶ ಸಿಗಬಹುದು. ಸರ್ಕಾರಿ ಕೆಲಸಗಾರರಿಗೆ ಹೆಚ್ಚು ಶ್ರಮದಾಯಕ ದಿನವಾಗಬಹುದು. ಸ್ನೇಹಿತರ ಭೇಟಿಯು ನಿಮಗೆ ನೆಮ್ಮದಿ ತರಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಇಂದು ಹೆಚ್ಚು ಶ್ರಮ ಹಾಕುತ್ತೀರಿ. ನಿಮ್ಮಲ್ಲಿ ಒತ್ತಡ ನೋಡಬಹುದು, ಪ್ರಯಾಣ ಸಂಬಂಧಿಸಿದಂತೆ ನೀವು ನಿರ್ಧಾರ ತೆಗೆದುಕೊಳ್ಳಬಹುದು. ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಹಾಗೆ ಹಣಕಾಸಿನ ವಿಚಾರವಾಗಿ ಬಹಳಷ್ಟು ಗೊಂದಲ ಕಾಡಬಹುದು. ಕುಟುಂಬಸ್ಥರ ಸಲಹೆಯಂತೆ ನೀವು ಕೆಲಸವೊಂದನ್ನು ಮಾಡಬೇಕಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ನೀವು ಅವಿವಾಹಿತರಾಗಿದ್ದರೆ ದಿನ ಖರ್ಚು ಹೆಚ್ಚಾಗಲಿದೆ, ಉಳಿತಾಯದ ಹಣವನ್ನು ನೀವು ಬೇರೊಂದು ಕೆಲಸಕ್ಕೆ ಬಳಸಬಹುದು. ವ್ಯಾಪಾರಿಗಳು ಈ ದಿನ ದೊಡ್ಡ ಲಾಭದಿಂದ ವಂಚಿತರಾಗುವ ಘಟನೆ ನಡೆಯಬಹುದು, ಹೋಟೆಲ್ ಉದ್ಯಮಿಗಳು ಲಾಭ ಗಳಿಸುವ ದಿನ.

ತುಲಾ ರಾಶಿ

ತುಲಾ ರಾಶಿಯವರು ಇಂದು ನೆಮ್ಮದಿಯ ಕಡೆಗೆ ಜಾರುವ ದಿನ. ಹಲವು ದಿನದಿಂದ ನಿಮ್ಮಲ್ಲಿ ಸಮಸ್ಯೆ ತಂದಿದ್ದ ಅಥವಾ ಗೊಂದಲಕ್ಕೆ ಕಾರಣವಾಗಿದ್ದ ವಿಚಾರ ನಿವಾರಣೆಯಾಗಲಿದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಅವಕಾಶಗಳಿಗೆ ಕಾಯುವುದು ಉತ್ತಮ. ಸಾಲ ಮರುಪಾವತಿಗೆ ಇಂದು ಉತ್ತಮ ದಿನ.

ವೃಶ್ಚಿಕ ರಾಶಿ

ಇಂದು ನಿಮ್ಮ ಹಣಕಾಸು ವಿಚಾರ ಬಲವಾಗಲಿದೆ. ಒಂದಿಷ್ಟು ಸಮಯದ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳಲಿದ್ದೀರಿ. ಇಂದು ನಿಮ್ಮ ಕೆಲಸದನ್ನು ಬದ್ಧತೆಯಿಂದ, ಪ್ರಾಮಾಣಿಕವಾಗಿ ಪೂರ್ಣ ಮಾಡಿ. ಕುಟುಂಬ ಸದಸ್ಯರೊಬ್ಬರಿಗಾಗಿ ನೀವು ಖರ್ಚು ಮಾಡಬಹುದು. ಆತುರ ನಿರ್ಧಾರಕ್ಕೆ ಮುಂದಾಗಬೇಡಿ

ಧನು ರಾಶಿ

ಧನು ರಾಶಿಯವರು ಪ್ರಯಾಣಕ್ಕೆ ಸಂಬಂಧಿಸಿದಂತೆ ಖರ್ಚು ಮಾಡಬಹುದು. ನಿಮ್ಮ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ಪ್ರಯಾಣ ಮಾಡಬೇಕಾಗಹುದು. ನೀವು ಮೂಳೆಗೆ ಸಂಬಂಧಿಸಿದ ಯಾವುದಾದರು ಸಮಸ್ಯೆ ಎದುರಿಸುತ್ತಿದ್ದರೆ ಈ ದಿನ ನಿರಾಳರಾಗಬಹುದು. ನಿಮ್ಮ ಸಮಸ್ಯೆಗಳನ್ನು ಆಪ್ತರ ಬಳಿ ಹೇಳಿಕೊಂಡರೆ ಪರಿಹಾರ ಪಡೆಯುವ ಸಾಧ್ಯತೆ ಇದೆ.

ಮಕರ ರಾಶಿ

ಮಕರ ರಾಶಿಯ ಮಂದಿ ಇಂದು ಯಾವುದೇ ಅನಗತ್ಯ ಖರ್ಚುಗಳಿಗೆ ಮುಂದಾಗಬೇಡಿ. ದುಂದು ವೆಚ್ಚ ಕಡಿಮೆ ಮಾಡಿದರೆ ಮುಂದಿನ ದಿನದಲ್ಲಿ ನಿರಾಳತೆ ನೋಡುತ್ತೀರಿ. ಪೂರ್ವ ನಿಯೋಜಿತ ಕೆಲಸದಲ್ಲಿ ಯಶಸ್ಸು ಇರಲಿದೆ. ನಿಮ್ಮ ಪ್ರಯಾಣವು ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ಸಮಸ್ಯೆಗಳಿಂದ ದೂರ ಸಾಗುವ ಬದಲು ಪರಿಹಾರ ಹುಡುಕುವುದು ಸೂಕ್ತ.

ಕುಂಭ ರಾಶಿ

ಇಂದು ಕುಂಭ ರಾಶಿಯವರಿಗೆ ಬಹಳ ಅನುಕೂಲಕರ ದಿನವಾಗಲಿದೆ. ಯಾರ ಬಳಿಯಾದರು ಹಣಕ್ಕೆ ಬೇಡಿಕೆ ಇಟ್ಟಿದ್ದರೆ ಇಂದು ಅವರಿಂದ ಹಣ ಪಡೆಯಬಹುದು. ದೂರ ಸಂಬಂಧಿಕರಿಂದ ಶುಭ ಸುದ್ದಿ ಕೇಳುವಿರಿ. ಸಮಯಕ್ಕೆ ಸರಿಯಾಗಿ ಕೆಲಸಗಳ ಮುಗಿಸಲು ಪ್ರಯತ್ನಿಸಿ. ಆಹಾರ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಶೀತ, ಕೆಮ್ಮು ಗಂಟಲು ನೋವಿನಂತಹ ಸಮಸ್ಯೆಗೆ ಒಳಗಾಗಬಹುದು.

ಮೀನ ರಾಶಿ

ಮೀನ ರಾಶಿಯವರು ಬಹಳ ಸಮಯದಿಂದ ಬಯಸಿದಂತಹ ವಸ್ತುವನ್ನು ಪಡೆಯುವ ದಿನವಾಗಬಹುದು. ಮಕ್ಕಳ ಸಂಬಂಧಿ ಸಮಸ್ಯೆಯೊಂದು ದೂರಾಗಬಹುದು. ಗೃಹಿಣಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಯಾರಿಗೂ ಹಣ ನೀಡಲು ಮುಂದಾಗಬೇಡಿ, ಇದರಿಂದ ಸಮಸ್ಯೆ ಎದುರಿಸಬೇಕಾಗಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು)

English summary

May-30-2025-daily-horoscope-prediction-for-12-zodiac-signs-in-kannada

Here is May 30 daily horoscope prediction for 12 zodiac signs read on...
Story first published: Thursday, May 29, 2025, 22:30 [IST]
X
Desktop Bottom Promotion