Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Dina Bhavishya: ಮೇ 29ರ ಈ ದಿನವು ಯಾರಿಗೆ ಅದೃಷ್ಟ ತರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಮೇ 29ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಈ ರಾಶಿಯವರು ಈ ದಿನದಂದು ದೊಡ್ಡ ವಿಚಾರಗಳಲ್ಲಿ ಯಶಸ್ಸು ಪಡೆಯಬಹುದು. ನೀವು ಬಯಸಿದಂತೆ ಹಣಕಾಸು ವಿಚಾರದಲ್ಲೂ ಕೂಡ ಲಾಭ ಮಾಡಲಿದ್ದೀರಿ. ಬಹಳ ದಿನದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳನ್ನು ಪೂರ್ಣ ಮಾಡಲಿದ್ದೀರಿ. ಯಾವುದಾದರು ಆರ್ಥಿಕ ಸಮಸ್ಯೆಗಳಿದ್ದರೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ ನಿಮಗೆ ಸ್ವಲ್ಪ ನೆಮ್ಮದಿ ತರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಇಂದು ದೊಡ್ಡ ಯೋಜನೆಗಳಲ್ಲಿ ಹೂಡಿಕೆ ಮಾಡುವುದು, ಸಾಲ ನೀಡುವುದು ಹಾಗೆ ಅನಗತ್ಯ ಖರ್ಚುಗಳ ಮಾಡಲು ಮುಂದಾಗಬೇಡಿ. ಹಣಕಾಸು ವಿಚಾರವಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ದಿನವಾಗಿರಲಿದೆ. ಯಾರ ಬಳಿಯಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಸಮಯಕ್ಕಿಂತ ಮೊದಲು ನಿಮ್ಮ ಕೆಲಸವನ್ನು ಪೂರ್ಣ ಮಾಡುವುದು ಉತ್ತಮ.

ಮಿಥುನ ರಾಶಿ
ಇಂದು ಮಿಥುನ ರಾಶಿಯವರು ಬಹಳ ಸಮಯದಿಂದ ಮಾಡಲಿ ಯತ್ನಿಸಿ ವಿಫಲರಾಗಿದ್ದಂತಹ ಕೆಲಸವನ್ನು ಮಾಡಿ ಮುಗಿಸುತ್ತೀರಿ. ಎಲ್ಲಾ ವಿಚಾರದಲ್ಲೂ ನಿಮಗೆ ಧನಾತ್ಮಕ ಬದಲಾವಣೆಗಳ ತರುವ ಮುನ್ಸೂಚನೆ ಸಿಗಲಿದೆ. ನೀವು ಅವಿವಾಹಿತರಾಗಿದ್ದರೆ ಶುಭ ಸುದ್ದಿ ಕೇಳಿಬರಲಿದೆ. ಇಷ್ಟು ದಿನವಿದ್ದ ಆತಂಕವೊಂದು ದೂರಾಗಲಿದೆ. ಯಾವ ಕಾರಣದಿಂದಾಗಿ ನಿಮ್ಮ ಕೆಲಸಗಳಲ್ಲಿ ಅಡ್ಡಿ ಉಂಟಾಗುತ್ತಿತ್ತೋ ಆ ಸಮಸ್ಯೆಯೊಂದು ನಿವಾರಣೆಯಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ವ್ಯಾಪಾರಿಗಳಿಂದು ಅನಿರೀಕ್ಷಿತ ಲಾಭ ನೋಡಲಿದ್ದಾರೆ. ಅವರ ವ್ಯಾಪಾರ ವೃದ್ಧಿಗೆ ಬೇಕಾಗಿದ್ದ ಪ್ರಮುಖ ಕೆಲಸಗಳು ಅಡ್ಡಿ ಇಲ್ಲದೆ ನಡೆಯಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ. ಹೆಚ್ಚು ಹಣ ನೋಡುವ ಆಸೆಯಿಂದ ಅನಗತ್ಯ ವಿಚಾರಗಳಿಗೆ ಕೈ ಹಾಕಬೇಡಿ. ಆರೋಗ್ಯದ ಕಡೆಗೆ ಗಮನವಿಡುವುದು ಬಹಳ ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರು ಇಂದು ಯಾವುದೇ ಹೊಸದನ್ನು ಆರಂಭಿಸಿದರು ಕೂಡ ಅದರಲ್ಲಿ ಶುಭವಾಗಲಿದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ನಿಮಗಾಗಿ ಅವಕಾಶಗಳು ಬರಬಹುದು. ಆರ್ಥಿಕ ಸ್ಥಿತಿ ಸಂಬಂಧ ನಿಮಗೆ ಒತ್ತಡ ಹೆಚ್ಚಾಗಲಿದೆ. ಅಗತ್ಯ ಸಮಯದಲ್ಲಿ ನಿಮಗೆ ಹಣಕಾಸು ದೂರಾಗಬಹುದು. ಹಾಗೆ ನಿಮ್ಮಿಂದ ಹಣ ಪಡೆದವರು ಈ ಸಮಯದಲ್ಲಿ ನೀಡದೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನದಂದು ದಾಂಪತ್ಯದ ವಿಚಾರದಲ್ಲಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ವ್ಯಾಪಾರಿಗಳು ಶ್ರಮ ಹಾಕುವುದು ವ್ಯರ್ಥವಾಗುವುದಿಲ್ಲ. ವ್ಯವಹಾರದಲ್ಲಿ ನಿಮಗೆ ದೊಡ್ಡ ಲಾಭ ಇರಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನೀವು ತೊಡಗಿದ್ದರೆ ಈ ಸಮಯದಲ್ಲಿ ನಿಮಗೆ ಲಾಭಾಂಶ ಹೆಚ್ಚಾಗಬಹುದು. ಮೂಳೆ ಸಂಬಂಧಿತ ಸಮಸ್ಯೆಗಳಿದ್ದರೆ ಪರಿಹಾರಕ್ಕೆ ಮುಂದಾಗುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಮಂದಿ ಇಂದು ಬಹಳಷ್ಟು ಪ್ರಯಾಣದಲ್ಲಿ ತೊಡಗಬೇಕಾಗಬಹುದು. ಇದರಿಂದ ದಿನದ ಕೊನೆಯಲ್ಲಿ ನಿಮಗೆ ಲಾಭವಾಗಬಹುದು. ಯಾವುದೇ ಒತ್ತಡದ ಸಂದರ್ಭವನ್ನು ತಾಳ್ಮೆಯಿಂದ ಎದುರಿಸಿ. ಯಾರಿಂದಾದರು ಹಣ ಪಡೆದಿದ್ದರೆ ಅಥವಾ ಸಾಲ ಮಾಡಿದ್ದರೆ ಈ ದಿನ ಅದನ್ನು ತೀರಿಸಲು ಮುಂದಾಗುವುದು ಉತ್ತಮ.
ವೃಶ್ಚಿಕ ರಾಶಿ
ಇಂದು ನಿಮಗೆ ಬಹಳ ಅನುಕೂಲಕರ ದಿನವಾಗಿರಲಿದೆ. ಹಲವು ಕೆಲಸಗಳಲ್ಲಿ ಇಷ್ಟು ದಿನಗಳಿಂದ ನೀವು ಎದುರಿಸಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ನಿಮಗೆ ನಿತ್ಯದ ಕೆಲಸದಲ್ಲಿ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ವ್ಯಾಪಾರಿಗಳು ಹಣದ ವಿಚಾರವಾಗಿ ದೂರ ಪ್ರಯಾಣ ಮಾಡಬಹುದು. ಅದರಲ್ಲಿ ಯಶಸ್ಸು ಕೂಡ ಸಿಗಲಿದೆ. ಬಹಳ ದಿನಗಳಿಂದ ನೀವು ಅನುಭವಿಸಿದ್ದ ಹಣಕಾಸು ಸಮಸ್ಯೆಯೊಂದು ನಿವಾರಣೆಯಾಗಿದೆ.
ಧನು ರಾಶಿ
ಧನಿ ರಾಶಿಯ ಮಂದಿ ಈ ದಿನ ಬಹಳ ಸಮಯ ಮನೆಯಿಂದ ಹೊರಗೆ ಉಳಿಯಬೇಕಾಗುತ್ತದೆ. ಹಾಗೆ ಈ ದಿನ ನಿಮಗೆ ಆಧ್ಯಾತ್ಮಿಕ ವಿಚಾರಗಳಲ್ಲಿ ಧನಾತ್ಮಕ ಲಾಭ ನೋಡಬಹುದು. ಕುಟುಂಬಸ್ಥರ ಜೊತೆಗೆ ನೀವು ಪ್ರವಾಸ ಕೈಗೊಳ್ಳಲು ಕೂಡ ಮುಂದಾಗಬಹುದು. ಬಹಳ ಸಮಯದಿಂದ ನಿಮಗೆ ಕಾಡುತ್ತಿದ್ದ ಉದ್ಯೋಗ ಸಂಬಂಧಿ ಸಮಸ್ಯೆಯೊಂದು ಆಪ್ತರ ಸಹಕಾರದಿಂದ ಪರಿಹಾರವಾಗಲಿದೆ. ಗೃಹಿಣಿಯರಲ್ಲಿ ಈ ದಿನ ಆರೋಗ್ಯ ಸಂಬಂಧಿ ಒತ್ತಡಕ್ಕೆ ಕಾರಣವಾಗಬಹುದು.
ಮಕರ ರಾಶಿ
ಇಂದು ನಿಮ್ಮ ಎಲ್ಲಾ ವಸ್ತುಗಳ ಕಡೆಗೂ ಹೆಚ್ಚನ ಗಮನವಿಡಿ. ನಿಮ್ಮ ಮಕ್ಕಳ ಭವಿಷ್ಯದ ಕುರಿತಾದ ಚಿಂತೆಯಲ್ಲಿ ನೀವು ಮುಳುಗಬಹುದು. ವಾಹನ ಸವಾರರಿಗೆ ಇಂದು ಅಶುಭವಾಗುವ ಸಾಧ್ಯತೆ ಇದೆ. ಮನೆ. ಆಸ್ತಿ ಖರೀದಿಯಲ್ಲಿ ಅಲ್ಪ ಹಿನ್ನಡೆ ಅನುಭವಿಸಬಹುದು. ಮನೆಗಾಗಿ ವಸ್ತುವೊಂದನ್ನು ಖರೀದಿಸಿಬಹುದು. ದಾಂಪತ್ಯದಲ್ಲಿ ಸಂತಸ ಮೂಡುವಂತಹ ಕ್ಷಣಗಳಿಗೆ ನೀವು ಕಾರಣರಾಗುತ್ತೀರಿ.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನದಂದು ಬಹಳ ದಣಿಯಬಹುದು. ನೀವು ಕೆಲಸದಲ್ಲಿ ಹೆಚ್ಚು ಪ್ರಮಾಣಿಕವಾಗಿ ಗಮನವಿಟ್ಟು ಮಾಡುವುದು ಉತ್ತಮ. ಬಹಳಷ್ಟು ಸಮಯದಿಂದ ನೀವು ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ವ್ಯಾಪಾರಿಗಳು ಇಂದು ಬುದ್ದಿವಂತಿಕೆಯಿಂದ ಕೆಲಸದಲ್ಲಿ ಲಾಭ ನೋಡಬಹುದು. ಉದ್ಯೋಗ ಹುಡುಕುತ್ತಿದ್ದವರು ಸೂಕ್ತ ಅವಕಾಶಕ್ಕಾಗಿ ಕಾಯುವುದು ಉತ್ತಮ. ಹೋಟೆಲ್ ಉದ್ಯಮಿಗಳಿಗೆ ಇಂದು ಉತ್ತಮ ದಿನವಾಗಿರಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಬಹಳ ಅನುಕೂಲವಾಗಿರಲಿದೆ. ಬೇರೆಯರಿಂದ ನೀವು ಯಾವುದಾದರು ವಸ್ತು ಪಡೆದಿದ್ದರೆ ಅದನ್ನು ಮರಳಿಸಲು ಇಂದು ಉತ್ತಮ ಸಮಯ. ನೀವು ದೇವಾಲಯ ಭೇಟಿಯಂತಹ ಕೆಲಸಕ್ಕೆ ಅಥವಾ ಆಪ್ತರೊಬ್ಬರ ಆಹ್ವಾನದ ಮೇರೆಗೆ ಶುಭ ಕಾರ್ಯದಲ್ಲಿ ಭಾಗಿಯಾಗಬಹುದು. ದೊಡ್ಡ ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳು ಎದುರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










