Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಮೇ 28ರ ಈ ದಿನ ಹಣಕಾಸು ಸಮಸ್ಯೆ ಎದುರಿಸೋದ್ಯಾರು?
ವೈದಿಕ ಶಾಸ್ತ್ರದ ಪ್ರಕಾರ ಮೇ 28ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮ್ಮ ವ್ಯಾಪಾರದಲ್ಲಿ ಲಾಭ ತರುವ ದಿನ, ನೀವು ಹಣಕಾಸು ವಿಚಾರವಾಗಿ ಬಹಳ ಚಿಂತೆಯಲ್ಲಿದ್ದರೆ ಈ ದಿನವು ನಿಮಗೆ ನಿರಾಳತೆ ತರಲಿದೆ. ಕೆಲಸದಲ್ಲಿನ ಒತ್ತಡವು ಹೆಚ್ಚಾಗಲಿದೆ. ಬಹಳಷ್ಟು ಕೆಲಸಗಳು ಮುಗಿಯುವ ಹಂತ ತಲುಪಲಿವೆ. ನಿಮ್ಮ ಆದಾಯದ ಮೂಲವು ಈ ದಿನದಂದು ಲಾಭದಾಯಕವಾಗಬಹುದು. ಆರೋಗ್ಯದಲ್ಲಿ ಚೇತರಿಕೆ ಇರಲಿದೆ.
ವೃಷಭ ರಾಶಿ
ಇಂದು ನಿಮಗೆ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಸಂಬಂಧಗಳು ಈ ದಿನ ಗಟ್ಟಿಯಾಗುವ ಕೆಲಸ ಮಾಡುತ್ತೀರಿ. ಮನೆಯ ಸದಸ್ಯರ ನಡುವೆ ಇದ್ದ ಮನಸ್ತಾಪವೊಂದು ನಿವಾರಣೆಯಾಗಬಹುದು. ದೂರ ಸಂಬಂಧಿ ಅಥವಾ ಆಪ್ತರೊಬ್ಬರ ಭೇಟಿ ನಿಮಗೆ ಖರ್ಚು ಹೆಚ್ಚಾಗಲು ಕಾರಣವಾಗಬಹುದು. ಉದ್ಯೋಗ ಹುಡುಕುವವರಿಗೆ ಇದು ಶುಭ ಕಾಲವಾಗಿದೆ.

ಮಿಥುನ ರಾಶಿ
ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ನಿಮ್ಮ ಹಳೆಯ ವ್ಯವಹಾರಗಳಿಂದ ಲಾಭ ಮಾಡುವ ದಿನವಾಗಲಿದೆ. ಶುಭ ಕಾರ್ಯ ಸಂಬಂಧ ನೀವು ಚರ್ಚೆಯಲ್ಲಿ ಭಾಗಿಯಾಗಬಹುದು. ಮಕ್ಕಳ ಕುರಿತ ಚಿಂತೆಯೊಂದರಿಂದ ನೀವು ಮುಕ್ತಿ ಪಡೆಯಬಹುದು. ನಿಮ್ಮ ಮನೆಗಾಗಿ ಹೊಸ ವಸ್ತು ಖರೀದಿ ಸಂಬಂಧ ಪ್ರಯಾಣ ಮಾಡಬೇಕಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇಡಿ.
ಕರ್ಕ ರಾಶಿ
ಇಂದು ಕರ್ಕ ರಾಶಿಯವರು ತಾಳ್ಮೆಯಿಂದ ಕಳೆಯಬೇಕಿದೆ. ಅನಗತ್ಯ ಚರ್ಚೆಗಳು, ಮಾತುಕತೆ, ಹಸ್ತಕ್ಷೇಪದಿಂದ ದೂರ ಉಳಿಯುವುದು ಉತ್ತಮ. ವ್ಯಾಪಾರಿಗಳು, ಗೃಹಿಣಿಯರ ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು. ದುಂದು ವೆಚ್ಚದಿಂದ ಹೊರಬರಲು ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು. ಬಾಕಿ ಉಳಿಸಿಕೊಂಡ ಕೆಲಸಗಳನ್ನು ಈ ದಿನ ಪೂರ್ಣ ಮಾಡಬಹುದು.
ಸಿಂಹ ರಾಶಿ
ಇಂದು ನಿಮಗೆ ಅನುಕೂಲಕರ ದಿನ, ನಿಮ್ಮ ಒತ್ತಡಗಳು ಕೊಂಚ ಮಟ್ಟಿಗೆ ದೂರಾಗಲಿದೆ. ಆಪ್ತರಿಂದ ನಿಮಗೆ ನೋವು ಕಾಡಬಹುದು. ನಿಮ್ಮಿಂದ ಇತರರಿಗೆ ಇಂದು ಸಹಾಯವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುವ ಕೆಲಸ ಮಾಡಲಿದ್ದೀರಿ. ನೀವು ಅಂದುಕೊಂಡಂತೆ ಕೆಲಸದಲ್ಲಿ ಯಶಸ್ಸು ಗಳಿಸುವ ಸಾಧ್ಯತೆ ಇದೆ. ಆರೋಗ್ಯದ ಮೇಲೆ ಗಮನವಿಡಿ.
ಕನ್ಯಾ ರಾಶಿ
ಇಂದು ನೀವು ಸೃಜನಶೀಲ ಕೆಲಸದತ್ತ ಗಮನಹರಿಸುವ ದಿನವಾಗಿರುತ್ತದೆ. ವ್ಯವಹಾರಿಕವಾಗಿ ನೀವು ಬಹಳ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಕೆಲಸದ ಸಂಬಂಧ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ವಿದ್ಯಾರ್ಥಿಗಳಿಗೆ ಈ ದಿನ ಬಹಳ ಶುಭಕರವಾಗಿರಲಿದೆ. ಅವಿವಾಹಿತರಾಗಿದ್ದರೆ ಖರ್ಚುಗಳ ಬಗ್ಗೆ ಗಮನವಿಡಿ.
ತುಲಾ ರಾಶಿ
ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ಹಲವು ದಿನದಿಂದ ಮಾಡಲು ಯತ್ನಿಸುತ್ತಿದ್ದ ಕೆಲಸವೊಂದನ್ನು ಪೂರ್ಣ ಮಾಡುತ್ತೀರಿ. ಆಸ್ತಿ ಸಂಬಂಧಿತ ವ್ಯಾಜ್ಯಾಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಸಹೋಧರರೊಂದಿಗಿನ ಮನಸ್ತಾಪವು ನಿವಾರಣೆಯಾಗಲಿದೆ. ಆಧ್ಯಾತ್ಮಿಕವಾಗಿ ಈ ದಿನ ನಿಮಗೆ ಬಲವಾಗುವ ದಿನ. ಯಾರಿಂದಾದರು ಹಣ ಪಡೆಯಲು ಬಯಸಿದ್ದರೆ ನಿಮಗೆ ಧನಾತ್ಮಕ ಬದಲಾವಣೆ ನೋಡಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಖರ್ಚುಗಳಿಂದ ತುಂಬಿದ ದಿನ ಎನ್ನಬಹುದು. ಯಾವುದೇ ಕೆಲಸದಲ್ಲಿ ನಿಮಗೆ ಹಣ ಹೊಂದಿಕೆಯಾಗದೆ ಇದ್ದರೆ ಈ ದಿನದಂದು ಅಪ್ತರೊಬ್ಬರ ಸಹಕಾರದಿಂದ ಉತ್ತಮ ಬೆಂಬಲ ಪಡೆಯುತ್ತೀರಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿದ್ದರೆ ನಿವಾರಣೆ ಆಗಲಿದೆ. ವಾಹನಗಳಿಗೆ ಸಂಬಂಧಿಸಿದ ಚಿಂತೆ ಹೆಚ್ಚಾಗಬಹುದು ಇಲ್ಲವೆ ಖರ್ಚುಗಳಿಂದ ನಿಮಗೆ ತೃಪ್ತಿ ಇಲ್ಲದ ಇರಬಹುದು.
ಧನು ರಾಶಿ
ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನು ಇಂದು ಪೂರ್ಣಗೊಳಿಸಲು ನಿಮಗೆ ಅನುಕೂಲಕರವಾಗಿರುತ್ತದೆ. ಕಾನೂನು ಹೋರಾಗಳಲ್ಲಿ ನೀವು ತೊಡಗಿದ್ದರೆ ಧನಾತ್ಮಕ ಬದಲಾವಣೆ ಇರಲಿದೆ. ಆಪ್ತರೊಬ್ಬರ ಆಹ್ವಾನದ ಮೇರೆಗೆ ಶುಭ ಕಾರ್ಯದಲ್ಲಿ ಭಾಗಿಯಾಗಬಹುದು. ಇಂದು ತಾಳ್ಮೆಯಿಂದ ಕುಟುಂಬದಲ್ಲಿನ ಸಮಸ್ಯೆಗಳ ಆಲಿಸುವುದು ಒಳಿತು.
ಮಕರ ರಾಶಿ
ಇಂದು ನಿಮ್ಮಲ್ಲಿ ಬಹಳ ದೊಡ್ಡ ಸಮಸ್ಯೆಗಳಿಗೆ ಕಠಿಣ ನಿರ್ಧಾರಗಳಿಂದ ಉತ್ತರ ಕೊಡುವಿರಿ. ಉದ್ಯೋಗ ಹುಡುಕುತ್ತಿದ್ದರೆ ಆಪ್ತರ ಸಲಹೆಯಂತೆ ನಡೆದುಕೊಳ್ಳುವುದು ಉತ್ತಮ. ನೀಡಿದ ಭರವಸೆಯನ್ನು ಪೂರ್ಣ ಮಾಡಲು ಪ್ರಯತ್ನಿಸಿ. ದೂರ ಪ್ರಯಾಣದಿಂದಾಗಿ ನಿಮ್ಮಲ್ಲಿ ಸಣ್ಣ ಪುಟ್ಟ ಅನಾರೋಗ್ಯಗಳು ಕಾಡಬಹುದು. ದಾಂಪತ್ಯದಲ್ಲಿ ನೆಮ್ಮದಿ ಇರಲಿದೆ.
ಕುಂಭ ರಾಶಿ
ಇಂದು ನಿಮಗೆ ಬಹಳ ಸಂತೋದಷದಾಯಕ ದಿನಾಗಿರಲಿದೆ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು, ಆದ್ರೆ ಅದರಿಂದ ನೀವು ಸಂತೋಷದ ಘಳಿಗೆ ಅನುಭವಿಸುತ್ತೀರಿ. ಕುಟುಂಬ ಸದಸ್ಯರಿಂದ ಹಣಕಾಸು ವಿಚಾರವಾಗಿ ನಿಮಗೆ ಹೆಚ್ಚಿನ ಒತ್ತಡ ಇರಬಹುದು. ಯಾರಿಂದಾದರು ಈ ಮೊದಲು ಹಣಕಾಸು ಸಹಾಯ ಪಡೆದಿದ್ದರೆ ಮರಳಿ ನೀಡಬಹುದು. ಸಾಲದಿಂದ ಮುಕ್ತಿ ಹೊಂದಲು ಪ್ರಯತ್ನಿಸಿ.
ಮೀನ ರಾಶಿ
ಇಂದು ನಿಮಗೆ ಅತ್ಯಂತ ಶುಭಕರವಾದ ದಿನವಾಗಿರಲಿದೆ, ನೀವು ಬಯಸಿದಂತೆ ನಿಮ್ಮ ಕೆಲಸಗಳಲ್ಲಿ ಯಶಸ್ಸು ನೋಡಬಹುದು. ಆದರೆ ಹಣಕಾಸು ವಿಚಾರವಾಗಿ ನಿಮಗೆ ಒತ್ತಡದ ದಿನವಾಗಿರಲಿದೆ. ನಿಮ್ಮ ಕೈ ಸೇರಬೇಕಿದ್ದ ಹಣಕ್ಕೆ ಅಡೆತಡೆ ಎದುರಾಗಬಹುದು. ಬಹಳ ಸಮಯ ಮನೆಯೊಂದ ಹೊರಗೆ ನೀವು ಕಳೆಯಬೇಕಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











