Dina Bhavishya: ಮೇ 27ರ ಶನಿ ಜಯಂತಿಯ ದಿನದಂದು ಯಾರಿಗೆ ಕಾದಿದೆ ಶುಭಯೋಗ?

ವೈದಿಕ ಶಾಸ್ತ್ರದ ಪ್ರಕಾರ ಮೇ 27ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಈ ಶನಿ ಜಯಂತಿಯ ದಿನದಂದು ನಿಮ್ಮ ಆಲಸ್ಯಗಳ ಬದಿಗೊತ್ತು ಇಂದು ಕೆಲಸದಲ್ಲಿ ಭಾಗಿಯಾಗುವುದರಿಂದ ನಿಮಗೆ ಶುಭವಾಗಲಿದೆ. ಹಣದ ವ್ಯವಹಾರದಲ್ಲಿ ಅಧಿಕ ಲಾಭ ನೋಡಬಹುದು. ದೂರ ಪ್ರಯಾಣದಿಂದ ನೀವು ಮುಕ್ತಿ ಪಡೆಯಲಿದ್ದೀರಿ. ಆರೋಗ್ಯದ ವಿಚಾರವಾಗಿಯೂ ನಿಮಗೆ ಲಾಭವಾಗುತ್ತದೆ. ಕುಟುಂಬದಲ್ಲಿ ಶಾಂತಿ ಇರಲಿದೆ.

ವೃಷಭ ರಾಶಿ

ಇಂದು ಈ ರಾಶಿಯವರಿಗೆ ಮಿಶ್ರ ಫಲವಾಗಿದೆ. ಶನಿದೇವರ ಪೂಜೆ ಮಾಡುವುದು ನಿಮಗೆ ಒಳಿತು ತರಬಹುದು. ಹಾಗೆ ನೀವು ಅಂದುಕೊಂಡಿದ್ದ ಕೆಲಸವೊಂದು ಅರ್ಧಕ್ಕೆ ನಿಲ್ಲಬಹುದು. ರಾಜಕೀಯದಲ್ಲಿರುವ ವ್ಯಕ್ತಿಗಳ ಬಹಳ ಲಾಭ ಮಾಡಬಹುದು. ಹಣಕಾಸು, ವ್ಯವಹಾರಗಳು ನಿಮಗೆ ನಿರಾಸೆ ಮೂಡಿಸಬಹುದು. ಆದರೆ ಖರ್ಚುಗಳ ಮೇಲಿನ ನಿಮ್ಮ ನಿಯಂತ್ರಣವು ನೆಮ್ಮದಿ ತರಲಿದೆ.

May-27-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಶನಿ ಜಯಂತಿಯ ದಿನದಂದು ಶುಭಕರ ಲಾಭಗಳ ನೋಡುವಿರಿ. ನೋವು ಯಾರಿಂದಾದರು ಹಣ ಮರಳಿ ಬರುವ ಕಡೆ ನಿರೀಕ್ಷೆ ಇಟ್ಟುಕೊಂಡಿದ್ದರೆ ಇಂದು ನೆರವೇರಬಹುದು. ಸರ್ಕಾರಿ ಕೆಲಸಗಳಲ್ಲಿ ನಿಮಗೆ ಶುಭವಾಗುತ್ತಿದೆ. ಹಣಕಾಸಿನ ಪ್ರಯೋಜನದಿಂದ ನಿಮಗೆ ನೆಮ್ಮದಿ ಇರಲಿದೆ. ಆರೋಗ್ಯದಲ್ಲಿ ಚೇತರಿಕೆ ಇರಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ಶನಿ ಜಯಂತಿಯಂದು ಆರ್ಥಿಕ ಲಾಭ ತರಬಹುದು. ಬಹುಕಾಲದ ನಿಮ್ಮ ಆಸೆಯೊಂದು ಇಂದು ಈಡೇರಬಹುದು. ಹಾಗೆ ದೂರ ಪ್ರಯಾಣಗಳಲ್ಲಿ ಯಶಸ್ಸು ಸಿಗಲಿದೆ. ಮನೆ, ಜಮೀನು ಸಂಬಂಧಿಸಿದಂತೆ ನೀವು ಯಾವುದಾದರು ಒತ್ತಡದಲ್ಲಿದ್ದರೆ ಅದರಿಂದ ಹೊರಬರಬಹುದು. ಕುಟುಂಬದಲ್ಲಿ ಶಾಂತಿ ಇರಲಿದೆ.

ಸಿಂಹ ರಾಶಿ

ಇಂದು ಶನಿಯ ಅನುಗ್ರಹದಿಂದ ನೀವು ಅಂದುಕೊಂಡಿದ್ದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಬಹಳಷ್ಟು ದಿನಗಳಿಂದ ನೀವು ಎದುರಿಸಿದ್ದ ಒತ್ತಡ, ವೃತ್ತಿ ಸಂಬಂಧಿತ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಆರೋಗ್ಯದ ಕಡೆಗೆ ಗಮನವಿಡಿ. ದಾಂಪತ್ಯದಲ್ಲಿನ ಸಣ್ಣ ಪುಟ್ಟ ಮನಸ್ತಾಪಗಳು ಇಂದು ಬಗೆಹರಿಯಲಿದೆ.

ಕನ್ಯಾ ರಾಶಿ

ಶನಿ ಜಯಂತಿಯು ನಿಮಗೆ ಮಿಶ್ರ ಫಲ ತರಲಿದೆ. ನಿಮ್ಮಲ್ಲಿ ಈ ದಿನ ಸಂತೋಷದ ಗಳಿಗೆ ಬಹಳ ಸಮಯ ಇರುವುದಿಲ್ಲ. ಮನೆಯ ಹಿರಿಯ ಸದಸ್ಯರೊಬ್ಬರ ಅನಾರೋಗ್ಯ ಸಂಬಂಧವಾಗಿ ನಿಮಗೆ ಚಿಂತೆ ಕಾಡಬಹುದು. ನಿಮ್ಮ ಉಳಿತಾಯ ದುಪ್ಪಟ್ಟಾಗಲಿದೆ. ಬಹುಕಾಲದ ಆಸೆಯೊಂದನ್ನು ಈಡೇರಿಸಿಕೊಳ್ಳಲು ಈ ದಿನ ನೀವು ಒಂದು ಹೆಜ್ಜೆ ಮುಂದಿಡುತ್ತೀರಿ.

ತುಲಾ ರಾಶಿ

ಇಂದು ತುಲಾ ರಾಶಿಯವರಿಗೆ ಅನುಕೂಲಕರ ದಿನವಾಗಿರಲಿದೆ. ಬಹಳ ಸಮಯ ನೀವು ಕುಟುಂಬದೊಂದಿಗೆ ಕಳೆಯುತ್ತೀರಿ. ಆಧ್ಯಾತ್ಮಿಕವಾಗಿ ಇಂದು ನಿಮಗೆ ಬಹಳ ಅನುಕೂಲಕರ ದಿನ. ಸರ್ಕಾರಿ ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಬಹುದು. ನಿಮ್ಮ ಆಸೆಯಂತೆ ಬಡ್ತಿ ಹಾಗೂ ವರ್ಗಾವಣೆಯ ವಿಚಾರದಲ್ಲಿ ಕೊಂಚ ಹಿನ್ನಡೆ ಅನುಭವಿಸಬಹುದು.

ವೃಶ್ಚಿಕ ರಾಶಿ

ಶನಿ ಜಯಂತಿಯ ದಿನದಂದು ನಿಮಗೆ ಯಾರಿಂದಾದರು ಶುಭ ಸುದ್ದಿ ಕೇಳುವ ದಿನವಾಗಲಿದೆ. ಆದ್ರೆ ಹವಾಮಾನದಲ್ಲಿನ ಬದಲಾವಣೆಯು ನಿಮಗೆ ಸಣ್ಣ ಪುಟ್ಟ ಅನಾರೋಗ್ಯ ತರಬಹುದು. ವ್ಯಾಪಾರಿಗಳ ಈ ದಿನ ದೊಡ್ಡ ಲಾಭ ನೋಡಬಹುದು, ನೀವು ವಾಹನ ಅಥವಾ ಆಸ್ತ ಮಾರಾಟ ಮಾಡಲು ಮುಂದಾದರೆ ಲಾಭ ಮಾಡಬಹುದು. ಹಣಕಾಸು ಒತ್ತಡದಿಂದ ನಿರಾಳರಾಗಹುದು.

ಧನು ರಾಶಿ

ಧನು ರಾಶಿಯ ಮಂದಿ ಇಂದು ಬಹಳ ಓಡಾಟದಲ್ಲಿ ಕಳೆಬಹುದು. ಕುಟುಂಬಸ್ಥರೊಂದಿಗೆ ಇಲ್ಲವೆ ಆಪ್ತರೊಂದಿಗೆ ನೀವು ಪ್ರವಾಸ ಕೈಗೊಳ್ಳುವ ಕುರಿತು ಆಲೋಚಿಸಬಹುದು. ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಮಾಡುವುದನ್ನು ನಿಲ್ಲಿಸಿ. ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಮುಂದಾದರೆ ಉತ್ತಮ ಯಶಸ್ಸು ಪಡೆಯಲಿದ್ದೀರಿ. ಆರೋಗ್ಯ ಸುಧಾರಿಸಲಿದೆ.

ಮಕರ ರಾಶಿ

ಶನಿ ಜಯಂತಿಯ ಈ ದಿನವು ಮಕರ ರಾಶಿಯವರಲ್ಲಿ ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗಲಿದೆ. ನೀವು ಅವಿವಾಹಿತರಾಗಿದ್ದರೆ ನಿಮ್ಮಲ್ಲಿದ್ದ ಉದ್ಯೋಗ ಸಂಬಂಧಿ ಸಮಸ್ಯೆಯೊಂದು ಈ ದಿನ ನಿವಾರಣೆಯಾಗಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭ ನೋಡಬಹುದು. ಬಹಳ ಸಮಯದಿಂದ ಮಾಡಲು ಯತ್ನಿಸಿ ಫಲ ನೀಡದ ಕೆಲಸವು ಇಂದು ಪೂರ್ಣ ಮಾಡಬಹುದು.

ಕುಂಭ ರಾಶಿ

ಶನಿ ಜಯಂತಿಯಂದು ನಿಮಗೆ ಬಹಳ ಲಾಭದಾಯಕ ದಿನವಾಗಲಿದೆ, ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸಿದಂತೆ ಚರ್ಚೆಯಲ್ಲಿ ನೀವು ಭಾಗಿಯಾಗಬಹುದು. ಸರ್ಕಾರಿ ಸಂಬಂಧಿ ಕೆಲಸಗಳ ಪೂರ್ಣವಾಗಲು ನೀವು ಆಪ್ತರೊಬ್ಬರ ಸಹಾಯ ಪಡೆಯಬಹುದು. ಕೃಷಿ ಸಂಬಂಧಿ ವಿಚಾರದಲ್ಲಿ ಲಾಭವಿದೆ. ವಾಹನ ವಿಚಾರದಲ್ಲಿ ಜಾಗೃತೆಯಿಂದಿರಿ.

ಮೀನ ರಾಶಿ

ಮೀನ ರಾಶಿಯ ಮಂದಿ ಇಂದು ದೊಡ್ಡ ಸವಾಲುಗಳನ್ನು ಧೈರ್ಯವಾಗಿ ಎದುರಿಸುತ್ತೀರಿ. ಸಮಾಜದಲ್ಲಿ ನಿಮ್ಮ ಕೀರ್ತಿ, ಹೆಸರು ಹೆಚ್ಚಾಗುವ ಸಂಭವವಿದೆ. ಬ್ಯಾಂಕಿಂಗ್ ಕೆಲಸದಲ್ಲಿ ನಿಮಗೆ ಶುಭವಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ದಿನ, ಗೃಹಿಣಿಯರು ದಿನ ಎಚ್ಚರಿಕೆಯಿಂದ ಕೆಲಸ ಕಾರ್ಯದಲ್ಲಿ ಭಾಗಿಯಾಗಿ.

English summary

May-27-2025-daily-horoscope-prediction-for-12-zodiac-signs-in-kannada

Here is May 27 daily horoscope prediction for 12 zodiac signs read on...
Story first published: Tuesday, May 27, 2025, 6:39 [IST]
X
Desktop Bottom Promotion