Dina Bhavishya: ಮೇ 26ರಂದು ನಿಮಗೆ ಯಾವ ರೀತಿ ಶುಭವಾಗಲಿದೆ?

ವೈದಿಕ ಶಾಸ್ತ್ರದ ಪ್ರಕಾರ ಮೇ 26ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಈ ದಿನದಂದು ಶುಭವಾಗಲಿದೆ. ನೀವು ಬಯಸಿದಂತೆ ಈ ದಿನದಲ್ಲಿ ಕೆಲಸಗಳನ್ನು ಪೂರೈಸಿ ಹೊಣೆಗಾರಿಕೆಯಿಂದ ಮುಕ್ತರಾಗುತ್ತೀರಿ. ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳಿಗೆ ಈ ದಿನವು ಬಹಳ ಒತ್ತಡ ಎದುರಾಗಬಹುದು. ನಿಮ್ಮ ಕೆಲಸದಲ್ಲಿ ಅಡೆತಡೆಗಳು ಎದುರಾದರೂ ಕೂಡ ಬಹಳ ತಾಳ್ಮೆಯಿಂದ ಎಲ್ಲವನ್ನೂ ಎದುರಿಸುತ್ತೀರಿ. ಆಹಾರ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಈ ಹಿಂದೆ ನೀವು ಯಾವುದಾದರು ಕೆಲಸದ ಕಾರಣಕ್ಕೆ ಪ್ರಯಾಣ ಮಾಡಿದ್ದರೆ ಇಂದು ಅದರಿಂದ ಲಾಭ ಪಡೆಯಬಹುದು.

ವೃಷಭ ರಾಶಿ

ಇಂದು ನಿಮಗೆ ಬಹಳ ಶ್ರಮದಾಯಕ ದಿನವಾಗಿರಲಿದೆ. ನೀವು ಯಾವುದಾದರು ಶುಭ ಕಾರ್ಯದಲ್ಲಿ ಭಾಗಿಯಾಗುವುದಾದರೆ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ನಿಮಗೆ ಮಿಶ್ರ ಫಲವಿದೆ. ಹಾಗೆ ಹಣವನ್ನು ಖರ್ಚು ಮಾಡುವ ಮುನ್ನ ಮತ್ತೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನೀವು ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಸಂದರ್ಶನಕ್ಕಾಗಿ ತೆರಳಬಹುದು. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿದ್ದವರು ಈ ದಿನ ಸೋಮಾರಿತನ ಬಿಟ್ಟು ಅದರ ಕಡೆ ಶ್ರಂ ಹಾಕುವುದು ಮುಖ್ಯ. ವಾಹನ ಸವಾರರು ಎಚ್ಚರಿಕೆ ಇಂದ ಇರುವುದು ಒಳಿತು.

May-26-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ನಿಮ್ಮಲ್ಲಿ ಈ ದಿನವು ಸಾಮಾನ್ಯವಾಗಿರಲಿದೆ. ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಲಹೆ ಸೂಚನೆಗಳ ಪಾಲಿಸಿ. ಕೃಷಿ ಸಂಬಂಧಿ ಕೆಲಸಗಾರರು, ಯಂತ್ರೋಪರಣ ಮಾರಾಟಗಾರರಲ್ಲಿ ಇಂದು ಲಾಭವಾಗುತ್ತಿದೆ. ಮಾರುಕಟ್ಟೆ ಸಂಬಂಧಿ ಕೆಲಸಗಳು ಅಡೆತಡೆಯಿಲ್ಲದೆ ನೆರವೇರಲಿವೆ. ನಿಮ್ಮ ಸಣ್ಣ ವ್ಯಾಪಾರವನ್ನು ದೊಡ್ಡದಾಗಿಸುವ ನಿಮ್ಮ ಆಸೆಗೆ ಪುಷ್ಟಿ ನೀಡುವಂತಹ ಕೆಲಸಗಳು ನಡೆಯಲಿವೆ. ನೀವು ಮೂಳೆಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ಒಳ‍ಗಾಗಿದ್ದರೆ ಈ ದಿನ ಅದರಿಂದ ಸುಧಾರಣೆ ಪಡೆಯಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ದಿನದಂದು ದೊಡ್ಡ ಸವಾಲುಗಳು ಇರುವುದಿಲ್ಲ. ಆದ್ರೆ ಹಣಕಾಸಿನ ವಿಚಾರವಾಗಿ ನಿಮಗೆ ಸವಾಲು ಎದುರಾಗಬಹುದು. ಹೀಗಾಗಿ ನೀವು ಬಹಳ ಎಚ್ಚರಿಕೆಯಿಂದ ಎಲ್ಲಾ ವ್ಯವಹಾರದಲ್ಲೂ ಭಾಗಿಯಾಗುವುದು ಉತ್ತಮ. ಉದ್ಯೋಗದ ಸ್ಥಳದಲ್ಲಿನ ಒತ್ತಡದಿಂದ ನಿಮಗೆ ಮಾನಸಿಕ ಕಿರಿಕಿರಿ ಉಂಟಾಗಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಆಪ್ತರೊಬ್ಬರಿಂದ ಹೊಸ ಉದ್ಯೋಗ ಸಂಬಂಧ ಅವಕಾಶ ಕುರಿತ ಮಾಹಿತಿ ಪಡೆಯಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಈ ದಿನದಂದು ದೂರ ಪ್ರಯಾಣ ಕೈಗೊಳ್ಳಬಹುದು. ಹೀಗಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಬಹುದು. ನಿಮ್ಮ ಕೆಲಸದಲ್ಲಿ ಎದುರಾಗಿದ್ದ ಸಮಸ್ಯೆಯೊಂದು ಪರಿಹಾರವಾಗಲಿದೆ. ಎಲ್ಲಾ ವಿಚಾರಗಳಲ್ಲಿ ಧನಾತ್ಮಕ ಪ್ರಗತಿ ನೋಡಬಹುದು. ಹಾಗೆ ಹಲವು ಸಮಸ್ಯೆಗಳನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದು. ನಿಮ್ಮ ಕೆಲಸದಿಂದ ಬೇರೆಯವರು ತೃಪ್ತರಾಗದೇ ಇರಬಹುದು. ದಾಂಪತ್ಯದಲ್ಲಿನ ಸಣ್ಣ ಮನಸ್ತಾಪವು ದೊಡ್ಡದಾಗಬಹುದು. ಆದರೆ ಪ್ರೀತಿ, ಪ್ರೇಮದ ವಿಚಾರದಲ್ಲಿ ಈ ದಿನವು ಬಹಳ ಉತ್ತಮವಾಗಿರಲಿದೆ. ನಿಮ್ಮವರ ಮನಸ್ಸು ಗೆಲ್ಲುವ ದಿನ ಇದಾಗಿದೆ. ನಿಮ್ಮ ಮನೆಗಾಗಿ ಖರೀದಿಸುವ ವಸ್ತು ನಿಮಗೆ ತೃಪ್ತಿ ತರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಇದು ನಿಮ್ಮ ಆಯಾಸಕ್ಕೆ ಕಾರಣವಾಗಬಹುದು. ನೀವು ಅನಾರೋಗ್ಯ ಸಂಬಂಧ ಇಂದು ಆಸ್ಪತ್ರೆಗೆ ತೆರಳಬೇಕಾಗಿ ಬರಬಹುದು. ಹಾಗೆ ಪ್ರೀತಿ ಪಾತ್ರರಿಂದ ನೀವು ಉಡುಗೊರೆಯೊಂದನ್ನು ಪಡೆಯಬಹುದು. ವ್ಯವಹಾರ ಸಂಬಂಧವಾಗಿ ಚರ್ಚಿಸಲು ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಬಹಳ ಕಾಲದ ಸ್ನೇಹಿತರು ನಿಮ್ಮ ಹಣಕಾಸಿನ ನೆರವಿಗೆ ಬರಬಹುದು. ಯಾವುದಾದರು ಪೂರ್ವ ಬಳಕೆ ಮಾಡಿದ ವಸ್ತುವನ್ನು ಖರೀದಿಸಲು ನೀವು ಇಚ್ಛಿಸಿದ್ದರೆ ಈ ದಿನ ಯಶಸ್ಸು ಸಿಗಲಿದೆ.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ದಿನ ಬಹಳಷ್ಟು ಓಡಾಟದಲ್ಲಿ ಕಳೆಯುತ್ತೀರಿ. ಮನೆಯ ಕೆಲಸವೊಂದರ ವಿಚಾರವಾಗಿ ಓಡಾಟ ಇರಲಿದೆ. ನಿಮ್ಮ ಸಂಬಂಧಿಕರ ಸಹಾಯದಿಂದ ನಿಮ್ಮ ಆರ್ಥಿಕ ಸಮಸ್ಯೆ ಬಗೆಹರಿಯಬಹುದು. ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಮಾಡಲು ನೀವು ಮುಂದಾಗಬಹುದು. ನಿಮಗಾಗಿ ಯಾವುದಾದರೊಂದು ದುವಾರಿ ವಸ್ತು ಖರೀದಿಸಬಹುದು. ವಾಹನ ಸಂಬಂಧವಾಗಿ ನಿಮಗೆ ಶುಭವಾಗುತ್ತಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿ ತ ನೋಡಬಹುದು. ನಿಮಗೆ ಬರಬೇಕಿದ್ದ ಹಣಕಾಸು ವಿಚಾರವಾಗಿ ದೊಡ್ಡ ಅಡೆತಡೆ ಕಾಡಬಹುದು.

ವೃಶ್ಚಿಕ ರಾಶಿ

ಈ ದಿನ ನಿಮ್ಮ ದೊಡ್ಡ ಕೆಲಸವೊಂದನ್ನು ಸುಲಭವಾಗಿ ಮಾಡಬಹುದು. ನೀವು ಹಲವು ದಿನಗಳಿಂದ ಮಾಡಬೇಕೆಂದು ಬಯಸಿದ್ದ ಕೆಲಸವೊಂದು ಪೂರ್ಣವಾಗಲಿದೆ. ಹಾಗೆ ವ್ಯವಹಾರದಲ್ಲಿ ನಷ್ಟಕ್ಕೆ ಕಾರಣವಾಗಿದ್ದ ವಿಚಾರವೊಂದು ಪರಿಹಾರವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮಲ್ಲಿದ್ದ ದೊಡ್ಡ ಕೌಟುಂಬಿಕ ಸಮಸ್ಯೆಗೆ ಪರಿಹಾರ ಪಡೆಯಲಿದ್ದೀರಿ. ಯಾರಿಗಾದರು ಈ ದಿನ ಸಹಾಯ ಮಾಡುವ ಅವಕಾಶ ಒಲಿದು ಬರಲಿದೆ. ದೂರ ಸಂಬಂಧಿಕರಿಂದ ನಿಮಗೆ ಕಹಿ ಸುದ್ದಿಯೊಂದು ಕೇಳಿಬರಲಿದೆ.

ಧನು ರಾಶಿ

ಧನು ರಾಶಿಯವರು ಈ ದಿನ ಮಿಶ್ರ ಫಲ ನೋಡುತ್ತೀರಿ. ಬಹಳಷ್ಟು ಸಮಯದಿಂದ ನೀವು ಬಯಸಿದ್ದ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಮುಗಿಸುವಿರಿ. ಸಂಬಂಧಿಕರೊಬ್ಬರ ಆಹ್ವಾನದ ಮೇರೆಗೆ ನೀವು ಶುಭ ಕಾರ್ಯದಲ್ಲಿ ಭಾಗಿಯಾಗಬಹುದು. ಯಾರೊಂದಿಗಾದರು ಮನಸ್ತಾಪಗಳಿದ್ದರೆ ಈ ದಿನ ಬಗೆಹರಿಸಿಕೊಳ್ಳುವುದು ಉತ್ತಮ. ದಾಂಪತ್ಯದಲ್ಲಿ ಕಾಡಿದ್ದ ಬಹುಕಾಲದ ಒತ್ತಡವೊಂದು ನಿವಾರಣೆಯಾಗಲಿದೆ. ಕೆಲಸದ ಕಾರಣದಿಂದ ದೂರ ಪ್ರಯಾಣವನ್ನು ನೀವು ಮುಂದೂಡುತ್ತಾ ಬಂದಿದ್ದರೆ ಈ ದಿನ ಪೂರ್ಣ ಮಾಡಬೇಕಾಗುತ್ತದೆ.

ಮಕರ ರಾಶಿ

ಇಂದು ನಿಮಗೆ ಯಾವುದೇ ಅಡೆತಡೆಯಿಲ್ಲದೆ ನಿಮ್ಮ ಕೆಲಸವನ್ನು ಪೂರ್ಣ ಗೊಳಿಸುವ ಅವಕಾಶಗಳು ಸಿಗಲಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಇಂದು ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ನೀವು ಹಣಕಾಸು ಸಂಬಂಧ ಯಾರಿಂದಾದರು ಸಾಲ ಕೇಳಿದ್ದರೆ ಈ ದಿನ ಪಡೆಯಬಹುದು. ಹಾಗೆ ಬ್ಯಾಂಕ್ ಸಂಬಂಧಿ ವಿಚಾರಗಳಲ್ಲಿ ಅನುಕೂಲಕರ ದಿನವಾಗಲಿದೆ. ಶುಭ ಕಾರ್ಯಕ್ಕಾಗಿ ನೀವು ಹಣ ಖರ್ಚು ಮಾಡುತ್ತೀರಿ, ಆಸ್ತಿ ಖರೀದಿ ಸಂಬಂಧ ದೊಡ್ಡ ಕನಸುಗಳನ್ನು ಇಂದು ಈಡೇರಿಸಿಕೊಳ್ಳಲು ಒಳ್ಳೆಯ ದಿನ.

ಕುಂಭ ರಾಶಿ

ಇಂದು ಕುಂಭ ರಾಶಿಯವರಿಗೆ ಅತ್ಯುತ್ತಮ ಶುಭಕಾರಕ ದಿನವಾಗಲಿದೆ. ನೀವು ಬಯಸಿದ್ದಂತೆ ಇಂದು ನಿಮ್ಮ ಕೆಲಸಗಳು ಪೂರ್ಣವಾಗಲಿವೆ. ಯಾರಿಗಾದು ನೀವು ಹಣ ನೀಡಿದ್ದರೆ ವಾಪಾಸು ಪಡೆಯಬಹುದು. ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡಲು ನಿಮಗೆ ಸಹಕಾರ ಸಿಗಲಿದೆ. ನೀವು ಮೂಳೆ ಸಂಬಂಧಿಸಿದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಈ ದಿನ ಬಹಳ ನೋವು ಅನುಭವಿಸಬೇಕಾಗಬಹುದು. ನೌಕರರ ವರ್ಗ ಇಂದು ಬಹಳ ಶ್ರಮ ಹಾಕುತ್ತೀರಿ. ಅದರ ಲಾಭ ನಿಮಗೆ ತೃಪ್ತಿ ನೀಡದೆ ಇರಬಹುದು. ತಂದೆ ತಾಯಿಯ ಆರೋಗ್ಯದ ಕಡೆಗೆ ಗಮನವಿಡಿ.

ಮೀನ ರಾಶಿ

ಮೀನ ರಾಶಿಯ ಮಂದಿ ಇಂದು ದೊಡ್ಡ ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ. ಯಾರ ಬಳಿಯಾದರು ನಿಮ್ಮ ಕಷ್ಟಗಳನ್ನು ಹಾಗೆ ಆರ್ಥಿಕ ಸಮಸ್ಯೆಗಳನ್ನು ಹಂಚಿಕೊಳ್ಳುವುದರಿಂದ ನಿಮಗೆ ನೆಮ್ಮದಿ ಸಿಗಬಹುದು. ಸಂಬಂಧಿಕರ ಭೇಟಿಯು ನಿಮಗೆ ಖರ್ಚು ತರಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಶಿತ ಶತ್ರುಗಳ ಕುರಿತು ನೀವಿಂದು ತಿಳಿದುಕೊಳ್ಳುತ್ತೀರಿ. ಕೌಟುಂಬಿಕ ಒತ್ತಡಗಳ ವಿಚಾರವಾಗಿ ನೀವು ಕಲಹಗಳಲ್ಲಿ ಭಾಗಿಯಾಗದೇ ಇರುವುದು ಉತ್ತಮ.

English summary

May-26-2025-daily-horoscope-prediction-for-12-zodiac-signs-in-kannada

Here is May 26 daily horoscope prediction for 12 zodiac signs read on...
X
Desktop Bottom Promotion