Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ರೀತಿ ಭವಿಷ್ಯ: ಈ ವಾರ(ಮೇ 25-31) ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಈ ವಾರ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?
ಮೇಷ ರಾಶಿ
ಪ್ರೇಮಿಗಳಿಗೆ ಈ ವಾರ ಅನುಕೂಲಕರವಲ್ಲ, ಈ ವಾರ ನಿಮಗೆ ಏರಳಿತಗಳಿಂದ ಕೂಡಿರಲಿದೆ. ಸಂಶಯ ನಿಮ್ಮ ಸಂಬಂಧ ದುರ್ಬಲಗೊಳಿಸುತ್ತದೆ. ಸಂಬಂಧದ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ಬೇಡ. ಈ ಅವಧಿಯಲ್ಲಿ ನೀವು ತಾಳ್ಮೆಯಿಂದ ವರ್ತಿಸಬೇಕು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ವೃಷಭ ರಾಶಿ
ಈ ವಾರವು ಸಂಬಂಧದಲ್ಲಿ ನಿಮಗೆ ತುಂಬಾ ಒಳ್ಳೆಯದು. ವಾರದ ದ್ವಿತೀಯಾರ್ಧವು ನಿಮಗೆ ತುಂಬಾ ವಿಶೇಷವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಉತ್ತಮ ಉಡುಗೊರೆಯನ್ನು ಪಡೆಯಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ನೀವಿಬ್ಬರು ಟ್ರಿಪ್ ಪ್ಲ್ಯಾನ್ ಮಾಡಬಹುದು.
ಮಿಥುನ ರಾಶಿ
ಈ ವಾರ ನಿಮಗೆ ಸಂಬಂಧದ ವಿಷಯದಲ್ಲಿ ತುಂಬಾ ಚೆನ್ನಾಗಿರಲಿದೆ. ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ. ವಾರದ ಕೊನೆಯಲ್ಲಿ ನಿಮ್ಮ ನಡುವಿನ ಅಂತರ ಸ್ವಲ್ಪ ಕಡಿಮೆಯಾಗಬಹುದು.
ಕರ್ಕ ರಾಶಿ
ವಾರದ ಆರಂಭವು ಪ್ರೇಮಿಗಳಿಗೆ ತುಂಬಾ ಚೆನ್ನಾಗಿರಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರಲಿದೆ. ನಿಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತೀರಿ. ಆದರೆ ಸಂಗಾತಿಗಾಗಿ ಉತ್ತಮ ಸಮಯ ಕಳೆಯಲು ಪ್ರಯತ್ನಿಸಿ.
ಸಿಂಹ ರಾಶಿ
ಪ್ರೇಮಿಗಳಿಗೆ ಈ ವಾರ ಅನುಕೂಲಕರವಲ್ಲ, ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ತಾಳ್ಮೆಯಿಮದ ಬಗೆಹರಿಸಲು ಪ್ರಯತ್ನಿಸಿ. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಇರಬಹುದು, ಇನ್ನೂ ಸ್ವಲ್ಪ ಕಾದು ಅವರನ್ನು ಮದುವೆಗೆ ಒಪ್ಪಿಸಿ.
ಕನ್ಯಾ ರಾಶಿ
ನಿಮಗೆ ಕೆಲಸದ ಒತ್ತಡದ ಕಾರಣ ನಿಮ್ಮ ಸಂಗಾತಿಗೆ ಹೆಚ್ಚು ಸಮಯವನ್ನು ನೀಡಲು ನಿಮಗೆ ಸಾಧ್ಯವಾಗದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರು ನಿಮ್ಮೊಂದಿಗೆ ಸ್ವಲ್ಪ ಅತೃಪ್ತರಾಗುತ್ತಾರೆ. ಇದೇ ಕಾರಣಕ್ಕೆ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿರಬಹುದು. ಈ ವಾರ ನಿಮಗೆ ತುಂಬಾ ವಿಶೇಷವಾಗಿರುತ್ತದೆ. ಅವಾಹಿತರಿಗೆ ಮದುವೆ ಸಂಬಂಧ ಬರಬಹುದು.
ತುಲಾ ರಾಶಿ
ತುಲಾ ರಾಶಿಯ ಪ್ರೇಮಿಗಳಿಗೆ ಈ ವಾರ ತುಂಬಾನೇ ವಿಶೇಷವಾಗಿರಲಿದೆ. ನಿಮ್ಮ ಪ್ರೀತಿ ಮತ್ತಷ್ಟು ಗಟ್ಟಿಯಾಗಲಿದೆ. ಇನ್ನು ಇನ್ನೂ ಪ್ರೀತಿಯಲ್ಲಿ ಬೀಳದವರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ಈ ರಾಶಿಯ ವಿವಾಹಿತರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ನಿಮ್ಮಿಬ್ಬರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.
ವೃಶ್ಚಿಕ ರಾಶಿ
ಯಾವುದೋ ಕಾರಣಕ್ಕೆ ನಿಮ್ಮ ನಡುವೆ ಬಿರುಕು ಉಂಟಾಗಿದ್ದರೆ ಅದೆಲ್ಲವೂ ಬಗೆಹರಿಯಲಿದೆ. ಸಂಗಾತಿಯ ಜೊತೆಗೆ ಒರಟಾಗಿ ವರ್ತಿಸಬೇಡಿ. ಇನ್ನು ಲವ್ ಪ್ರಪೋಸ್ ಮಾಡಲು ಈ ಅವಧಿ ಅನುಕೂಲಕರವಲ್ಲ.
ಧನು ರಾಶಿ
ಈ ವಾರವು ದಂಪತಿಗಳಿಗೆ ವಿಶೇಷವಾಗಿರಲಿದೆ. ನೀವು ಪ್ರೇಮ ವಿವಾಹವನ್ನು ಹೊಂದಲು ಬಯಸಿದರೆ ಕುಟುಂಬದವರ ಒಪ್ಪಿಗೆ ಸಿಗಲಿದೆ. ವಿವಾಹಿತರ ವೈವಾಹಿಕ ಜೀವನದಲ್ಲಿ ಕೆಲವು ಗೊಂದಲಗಳು ಕಂಡುಬರುತ್ತವೆ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿರಬಹುದು. ಈ ಅವಧಿಯಲ್ಲಿ ಪ್ರೀತಿ ಪಾತ್ರರ ವರ್ತನೆ ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು.
ಮಕರ ರಾಶಿ
ಪ್ರೇಮಿಗಳಿಗೆ ಈ ವಾರ ಚೆನ್ನಾಗಿರಲಿದೆ. ಸಂಬಂಧದ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಸಂಗಾತಿಯಿಂದ ನೀವು ಎಲ್ಲಾ ರೀತಿಯಲ್ಲಿ ಬೆಂಬಲವನ್ನು ಪಡೆಯುತ್ತೀರಿ. ವಿವಾಹಿತರಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.
ಕುಂಭ ರಾಶಿ
ವಾರದ ಆರಂಭವು ನಿಮಗೆ ತುಂಬಾ ಒಳ್ಳೆಯದು. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ, ಆದರೆ ವಾರದ ಮಧ್ಯದಲ್ಲಿ ಪರಿಸ್ಥಿತಿಗಳು ಪ್ರತಿಕೂಲವಾಗಿ ಕಾಣಲಿದೆ. ನಿಮ್ಮಿಬ್ಬರ ನಡುವೆ ತಪ್ಪು ತಿಳಿವಳಿಕೆ ಉಂಟಾಗದಂತೆ ಜಾಗ್ರತೆವಹಿಸಿ. ನೀವು ಸಂವಾದವನ್ನು ಆಶ್ರಯಿಸಿ ಎಲ್ಲಾ ಕುಂದುಕೊರತೆಗಳನ್ನು ಪರಿಹರಿಸಲು ಪ್ರಯತ್ನಿಸಿದರೆ ಅದು ಉತ್ತಮವಾಗಿರುತ್ತದೆ.
ಮೀನ ರಾಶಿ
ನಿಮ್ಮ ಪ್ರೀತಿಯ ಸಂಬಂಧವು ಗಾಢವಾಗಿರಲಿದೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ಸಹ ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ರಾಶಿಯ ವಿವಾಹಿತರಿಗೆ ಈ ವಾರವು ತುಂಬಾ ಚೆನ್ನಾಗಿರಲಿದೆ. ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
