Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
Dina Bhavishya: ಮೇ 25ರಂದು ಯಾರು ದುಂದು ವೆಚ್ಚ ಮಾಡಬಾರದು..?
ವೈದಿಕ ಶಾಸ್ತ್ರದ ಪ್ರಕಾರ ಮೇ 25ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಶುಭಫಲ ನೀಡುವ ದಿನವಾಗಿದೆ. ನಿಮ್ಮ ಭವಿಷ್ಯದ ಯೋಜನೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಇಂದು ದೊಡ್ಡ ಕೆಲಸಕ್ಕೆ ಮುಂದಾಗಬಹುದು. ನಿಮ್ಮ ದೈನಂದಿನ ಕೆಲಸದಲ್ಲೂ ನಿಮಗೆ ಉತ್ತಮ ಯಶಸ್ಸು ಪಡೆಯಲಿದ್ದೀರಿ. ಕುಟುಂಬದ ಹಿರಿಯ ಸದಸ್ಯರೊಬ್ಬರಲ್ಲಿ ಅನಾರೋಗ್ಯವೊಂದು ಕಾಣಿಸಲಿದೆ. ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಪಡೆಯುವ ಉದ್ದೇಶದಿಂದಾಗಿ ನೀವು ವ್ಯಕ್ತಿಯೊಬ್ಬರ ಭೇಟಿಯಾಗಬಹುದು. ನಿಮ್ಮ ದೊಡ್ಡ ಕೆಲಸವನ್ನು ಬೇರೆಯವರಿಗೆ ವಹಿಸುತ್ತೀರಿ. ಇದರಿಂದ ನಿಮಗೆ ಸಮಸ್ಯೆ ಬರಬಹುದು. ದೂರ ಸಂಬಂಧಿಕರೊಬ್ಬರ ಭೇಟಿಯು ನಿಮ್ಮಲ್ಲಿ ಸಂತಸ ತರಬಹುದು ಕೃಷಿ ಸಂಬಂಧಿ ವಿಚಾರಗಳಲ್ಲಿ ಫಲ ಸಿಗಲಿದೆ.
ವೃಷಭ ರಾಶಿ
ವ್ಯಾಪಾರ ಮಾಡುವ ಮಂದಿಗೆ ಈ ದಿನವು ಬಹಳ ಬಹಳ ಶ್ರಮದಾಯಕ ದಿನವಾಗಿರಲಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೀವು ಹಣ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಕೆಲಸವನ್ನು ವಿಶ್ವಾಸದಿಂದ ಮುಗಿಸುತ್ತೀರಿ. ಉದ್ಯೋಗ ಹುಡುಕುತ್ತಿದ್ದವರಿಗೆ ಆಪ್ತರಿಂದ ಇಂದು ಅವಕಾಶ ಸಿಗಬಹುದು. ಆದರೆ ನಿಮಗೆ ತೃಪ್ತಿ ನೀಡದೆ ಇರಬಹುದು. ನೀವು ಮೇಲ್ವಿಚಾರಕರಾಗಿದ್ದರೆ ನಿಮ್ಮ ಕೆಲಸಗಳಲ್ಲಿ ಹೆಚ್ಚು ಯಶಸ್ಸು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ನೀವು ಪ್ರವಾಸ ಹೋಗುವ ಕುರಿತಾಗಿ ಚರ್ಚೆ ಮಾಡಬಹುದು. ಗೃಹಿಣಿಯರಲ್ಲಿ ಒತ್ತಡ ಹೆಚ್ಚಬಹುದು.

ಮಿಥುನ ರಾಶಿ
ಇಂದು ನಿಮಗೆ ತುಂಬಾ ಉತ್ಸಾಹದಿಂದ ತುಂಬಿದ ದಿನವಾಗಿದೆ. ನೀವು ಬಾಕಿ ಉಳಿಸಿಕೊಂಡಿರುವ ಹಲವು ಕೆಲಸಗಳನ್ನು ಒಮ್ಮೆಲೆ ಪೂರ್ಣಗೊಳಿಸುತ್ತೀರಿ. ಕೆಲಸದ ಕಾರಣಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ಯಾರಿಂದಾದರು ನೀವು ಹಣ ಪಡೆದಿದ್ದರೆ ವಾಪಾಸು ಪಡೆಯಬಹುದು. ಬೇರೆಯವರಿಗೆ ನೀವು ಸಹಾಯ ಮಾಡುವ ದಿನವಾಗಿದೆ. ದೊಡ್ಡ ಕನಸಿಗೆ ನೀವು ಹತ್ತಿರವಾಗಬಹುದು. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ಇಂದು ಶುಭ ಸುದ್ದಿ ಕೇಳಬಹುದು. ವ್ಯಾಪಾರಿಗಳು ವಿಶ್ರಾಂತಿ ಪಡೆಯಲು ಮುಂದಾಗಬಹುದು. ಹಾಗೆ ಚಿಕ್ಕ ವ್ಯವಹಾರದಲ್ಲಿ ಲಾಭ ಮಾಡಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನದಂದು ದೊಡ್ಡ ಸವಾಲನ್ನು ಎದುರಿಸುತ್ತೀರಿ. ನಿಮ್ಮ ಕಣ್ಣಗಳಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಬಹುದು, ಹೀಗಾಗಿ ಹಣದ ಬಗ್ಗೆ ಆಲೋಚಿಸದೆ ಆಸ್ಪತ್ರೆಗೆ ತೆರೆಳುವುದು ಉತ್ತಮ. ನೀವು ಆರ್ಥಿಕ ಸಮಸ್ಯೆಗಳ ಕುರಿತಾಗಿ ಪರಿಹಾರ ಹುಡುಕುತ್ತಿದ್ದರೆ ದೂರ ಪ್ರಯಾಣಕ್ಕೆ ಒಳಪಡಬೇಕಾಗುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ನೀವು ದಿನಸಿ ವ್ಯಾಪಾರಿಗಳಾಗಿದ್ದರೆ ದೊಡ್ಡ ಸಮಸ್ಯೆಯೊಂದು ನಿವಾರಣೆಯ ಪ್ರಯತ್ನದಲ್ಲಿ ನಿಮಗೆ ಅಡೆತಡೆ ಎದುರಾಗುತ್ತದೆ. ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಹಿಂದೊಮ್ಮೆ ಮಾಡಿದ್ದ ತಪ್ಪಿನಿಂದ ನೀವು ಪಾಠ ಕಲಿಯಬೇಕಿದೆ. ಹೊಸ ಆದಾಯದ ಮೂಲವನ್ನು ನೀವು ಹುಡುಕುತ್ತೀರಿ.
ಸಿಂಹ ರಾಶಿ
ಇಂದು ನಿಮಗೆ ಮಿಶ್ರ ಫಲಿತಾಂಶ ನೀಡುವ ದಿನವಾಗಿರಲಿದೆ. ನಿಮ್ಮ ಪ್ರಮುಖ ಕೆಲಸ ಕಾರ್ಯಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ನೆರವೇರಲಿವೆ. ನೀವು ಸಮಯಕ್ಕೆ ಸರಿಯಾಗಿ ಕೆಲಸಗಳ ಪೂರ್ಣಗೊಳಿಸುವುದು ಉತ್ತಮ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳು ಉಲ್ಬಣವಾಗಬಹುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಛಾಗುವ ಸಂಭವವಿದೆ. ದಿನದ ಅಂತ್ಯದಲ್ಲಿ ಖರ್ಚುಗಳಿಗೆ ಕಾರಣವಾಗುವ ಕೆಲಸಕ್ಕೆ ನೀವು ಮುಂದಾಗಬಹುದು. ಕೆಲಸದ ಸಂಬಂಧ ನೀವು ತೆಗೆದುಕೊಳ್ಳುವ ನಿರ್ಧಾರವೊಂದು ನಿಮಗೆ ಒತ್ತಡ ಉಂಟು ಮಾಡಬಹುದು. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನದಂದು ವಿಶ್ರಾಂತಿ ಪಡೆಯಲು ಮುಂದಾಗಬಹುದು. ನಿಮ್ಮ ಮಕ್ಕಳ ಭವಿಷ್ಯದ ಕುರಿತಾದ ಚಿಂತೆ ಹೆಚ್ಚಾಗಬಹುದು. ಬಹಳ ಸಮಯದಿಂದ ನೀವು ಉಳಿಸಿಕೊಂಡಿರುವ ಕೆಲಸವೊಂದನ್ನು ಪೂರ್ಣ ಮಾಡುತ್ತೀರಿ. ನಿಮ್ಮ ವ್ಯಾಪಾರ ವ್ಯವಹಾರ ಸಂಬಂಧ ದೊಡ್ಡ ಮಟ್ಟದ ಒಪ್ಪಂದದಲ್ಲಿ ಅಡ್ಡಿ ಎದುರಾಗಬಹುದು, ಇಂದು ಶುಭ ಕಾರ್ಯದಲ್ಲಿ ಭಾಗಿಯಾಗುವ ಸಂಬಂಧ ನೀವು ಪ್ರಯಾಣದಲ್ಲಿ ತೊಡಗಬಹುದು. ಮನೆಗಾಗಿ ಯಾವುದಾದರು ವಸ್ತುವೊಂದನ್ನು ನೀವು ಖರೀದಿಸಲು ಮುಂದಾಗಬಹುದು.
ತುಲಾ ರಾಶಿ
ಇಂದು ತುಲಾ ರಾಶಿಯವರಿಗೆ ಎಂದಿನಂತೆ ಸಾಮಾನ್ಯ ದಿನವಾಗಿರಲಿದೆ. ಹಾಗೆ ಗೊಂದಲದಿಂದ ತುಂಬಿದ ದಿನವಾಗಿರಲಿದೆ. ಕುಟುಂಬದಲ್ಲಿನ ಚರ್ಚೆಯೊಂದು ನಿಮಗೆ ಒತ್ತಡಕ್ಕೆ ಕಾರಣವಾಗಬಹುದು. ಇಂದು ಅನಗತ್ಯ ಚರ್ಚೆ, ಸಲಹೆ ನೀಡುವುದು ಮಾಡಬೇಡಿ. ದಾಂಪತ್ಯದಲ್ಲಿನ ಒಂದು ಸಮಸ್ಯೆಯು ಮತ್ತಷ್ಟು ದೊಡ್ಡದಾಗುವ ಮುನ್ನ ಪರಿಹಾರಕ್ಕೆ ಮುಂದಾಗಿ. ಪ್ರವಾಸ ತೆರಳುವಂತಹ ಯೋಗವಿದೆ. ಕೆಲಸದ ಸ್ಥಳದಲ್ಲಿ ನಿಮಗೆ ಪ್ರಶಂಸೆ ಸಿಗಲಿದೆ. ಸಂಬಂಧಿಕರೊಬ್ಬರ ಭೇಟಿಯಿಂದ ನಿಮ್ಮಲ್ಲಿ ಸಂತಸ ಇರಲಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
ವೃಶ್ಚಿಕ ರಾಶಿ
ಇಂದು ನೀವು ಜವಾಬ್ದಾರಿಯುತವಾಗಿ ಕೆಲಸ ಕಾರ್ಯಗಳನ್ನು ಪೂರೈಸುತ್ತೀರಿ. ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ. ಇಂದು ದುಂದುವೆಚ್ಚದಿಂದ ದೂರ ಇರುವುದು ಉತ್ತಮ. ಯಾರಿಂದಾದರು ಹಣ ಪಡೆಯುವ ನಿಮ್ಮ ಆಲೋಚನೆಯಾಗಿದ್ದರೆ ಸ್ವಲ್ಪ ಮಟ್ಟಿನ ಯಶಸ್ಸು ಕೂಡ ನೋಡಬಹುದು. ಕೆಲಸದ ಕುರಿತಾದ ಚಿಂತೆಯೊಂದು ದೂರಾಗಬಹುದು. ಆಪ್ತರೊಬ್ಬರ ಸಲಹೆ ನಿಮಗೆ ಒಳಿತು ಮಾಡಲಿದೆ. ಯಾವುದಾದರು ವಸ್ತುವೊಂದಕ್ಕೆ ಸಂಬಂಧಿಸಿದಂತೆ ನೀವು ಬಹಳ ಚಿಂತೆಗೆ ಒಳಗಾಗಬಹುದು. ಕುಟುಂಬದಿಂದ ನಿಮ್ಮ ಆಲೋಚನೆಗೆ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳು ಈ ದಿನ ತಮ್ಮ ಭವಿಷ್ಯದ ಕುರಿತಾದ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.
ಧನು ರಾಶಿ
ಧನು ರಾಶಿಯ ಮಂದಿ ಈ ದಿನದಂದು ದೊಡ್ಡ ಸವಾಲಿಗೆ ಪರಿಹಾರ ಹುಡುಕಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಹಣಕಾಸು ಸಂಬಂಧ ಒತ್ತಡ ಹೆಚ್ಚಾಗಬಹುದು. ಶುಭ ಕಾರ್ಯಕ್ಕಾಗಿ ನೀವು ಹಣ ಖರ್ಚು ಮಾಡಬೇಕಾಗಿಬರಬಹುದು. ವ್ಯವಹಾರದಲ್ಲಿ ನೀವು ಪಾಲುದಾರರಾಗಿದ್ದರೆ ಈ ದಿನದಂದು ವ್ಯವಹಾರ ಸಂಬಂಧ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಿ. ಪ್ರವಾಸಕ್ಕೆ ತೆರಳಲು ತಯಾರಿ ಮಾಡಿಕೊಳ್ಳಬಹುದು. ಗೃಹಿಣಿಯರಲ್ಲಿ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ನೀವು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮಂದಿಯಾಗಿದ್ದರೆ ಅದರ ಲಾಭ ಪಡೆಯಲು ಬಹಳ ಸಮಯ ಕಾಯಬೇಕಿದೆ. ಹೀಗಾಗಿ ಆತುರದ ನಿರ್ಧಾರಕ್ಕೆ ಮುಂದಾಗಬೇಡಿ.
ಮಕರ ರಾಶಿ
ಇಂದು ನಿಮಗೆ ಮಿಶ್ರ ಫಲದ ದಿನವಾಗಿರಲಿದೆ. ನೀವು ಯಾವುದೇ ಕೆಲಸದಲ್ಲಿ ಸೋಮಾರಿತನ ತೋರದೆ ಪ್ರಾಮಾಣಿಕವಾಗಿ ಮುಗಿಸುವುದು ಉತ್ತಮ. ಕೆಲಸದ ಸ್ಥಳದಲ್ಲಿ ನಿಮಗೆ ನೋವುಂಟಾಗುವ ಸಂಭವವಿದೆ. ಪ್ರೀತಿ ಪಾತ್ರರೊಂದಿಗೆ ನೀವು ಚಿಕ್ಕ ಪ್ರವಾಸ ಕೈಗೊಳ್ಳಬಹುದು. ಮನೆಯವರೊಂದಿಗೆ ಶಾಪಿಂಗ್ ತೆರಳುವ ಸಾಧ್ಯತೆ ಇದೆ. ಹಣಕಾಸಿನ ವಿಚಾರವಾಗಿ ನಿಮ್ಮಲ್ಲಿ ದೊಡ್ಡ ಸವಾಲುಗಳಿರುವುದಿಲ್ಲ, ಆದರೆ ಈ ದಿನ ಹಣಕಾಸು ವಿಚಾರವಾಗಿ ನಿಮ್ಮಲ್ಲಿ ತೃಪ್ತಿ ಇರುವುದಿಲ್ಲ. ಕುಟುಂಬಸ್ಥರ ಆರೋಗ್ಯದ ಕಾರಣಕ್ಕೆ ನಿಮ್ಮ ಕೆಲಸದಲ್ಲಿ ಅಡೆತಡೆ ನೋಡಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನವು ಬಹಳ ದೊಡ್ಡ ವಿಚಾರಗಳ ಕುರಿತ ನಿರ್ಧಾರ ತೆಗೆದುಕೊಳ್ಳಬಹುದು. ವಿವಾಹಿತರಲ್ಲಿ ಈ ದಿನ ಬಹಳ ಖರ್ಚು ಉಂಟಾಗಬಹುದು. ಸಂಗಾತಿಯೊಂದಿಗೆ ಬಹಳ ಸಮಯ ನೀವು ಕಳೆಯುತ್ತೀರಿ. ನೀವು ನವವಿವಾಹಿತರಾಗಿದ್ದರೆ ಈ ದಿನದಂದು ಪ್ರಯಾಣ ಮಾಡಬಹುದು. ಬಹಳ ದಿನಗಳ ನಂತರ ನಿಮ್ಮ ಸ್ನೇಹಿತರೊಬ್ಬರ ಭೇಟಿಯಾಗಬಹುದು. ನೀವು ಯಾರ ಬಳಿಯಾದರು ವಸ್ತುವೊಂದನ್ನು ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಹೂಡಿಕೆ, ಉಳಿತಾಯದ ಕಡೆಗೂ ನೀವು ಯೋಚಿಸಬೇಕಿದೆ.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಇದು ಸಮಸ್ಯೆಗಳಿಂದ ತುಂಬಿದ ದಿನವಾಗಿರಲಿದೆ. ನೀವು ಹಣಕಾಸು ವಿಚಾರವಾಗಿ ಬಹಳ ಸಮಸ್ಯೆ ಎದುರಿಸುತ್ತಿದ್ದರೆ ಈ ದಿನದಂದು ಮತ್ತಷ್ಟು ಹೆಚ್ಚಾಗಬಹುದು. ಹೀಗಾಗಿ ನಿಮ್ಮ ಹಣಕಾಸು ಸಮಸ್ಯೆ ಸಂಬಂಧಿಸಿದಂತೆ ಹಿರಿಯರಲ್ಲಿ ಅಥವಾ ಮನೆಯಲ್ಲಿ ಚರ್ಚಿಸುವುದು ಮುಖ್ಯ. ಮನೆಯಲ್ಲಿ ಸಹೋದರರು ಅಥವಾ ಸ್ನೇಹಿತರೊಂದಿಗೆ ನೀವು ಮುಕ್ತವಾಗಿ ಮಾತನಾಡಬೇಕಿದೆ. ನೀವು ವ್ಯಾಪಾರಿಗಳಾಗಿದ್ದರೆ ಈ ದಿನದಂದು ತಮ್ಮ ಪ್ರತಿಸ್ಪರ್ಧಿಗಳ ಕುರಿತು ಆಲೋಚಿಸುವುದು ಉತ್ತಮ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











