Dina Bhavishya: ಮೇ 24ರಂದು ಯಾರಿಗೆ ಕಾದಿದೆ ಶುಭ ಸುದ್ದಿ..?

ವೈದಿಕ ಶಾಸ್ತ್ರದ ಪ್ರಕಾರ ಮೇ 24ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನಿಮ್ಮ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ ದಿನವಾಗಿರುತ್ತದೆ. ನೀವು ಕೆಲವು ಕಾನೂನು ವಿಷಯಗಳಿಗೆ ಗಮನ ಕೊಡಬೇಕು. ನೀವು ಹೆಚ್ಚಿನ ಸಮಯ ಮನೆಯಿಂದ ಹೊರಗೆ ಕಳೆಯಬೇಕಾಗಬಹುದು. ಹಾಗೆ ದೊಡ್ಡ ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸಬೇಕಾಗಬಹುದು. ಹೀಗಾಗಿ ಎಚ್ಚರಿಕೆಯ ಜೊತೆಗೆ ಬಹಳ ಧೈರ್ಯವಾಗಿ ಇರಬೇಕು. ನಿಮ್ಮ ಮನೆಯಲ್ಲಿ ನಿಮಗಾಗಿ ಸವಾಲೊಂದು ಕಾಯಲಿದೆ. ಶಾಪಿಂಗ್, ಗೃಹಬಳಕೆ ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು. ಕೃಷಿ ಸಂಬಂಧಿ ವಿಚಾರಗಳಲ್ಲಿ ತೊಡಗಿರುವವರಿಗೆ ಇಂದು ಉತ್ತಮ ದಿನವಾಗಲಿದೆ. ವಾಹನ ಚಾಲಕರು ಎಚ್ಚರಿಕೆಯಿಂದ ಇರುವುದು ಉತ್ತಮ.

ವೃಷಭ ರಾಶಿ

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಬಾಕಿ ಉಳಿಸಿರುವ ಕೆಲಸ ಪೂರ್ಣಗೊಳಿಸುವುದು ಉತ್ತಮ. ವ್ಯಾಪಾರಿಗಳಾಗಿದ್ದರೆ ನೀವು ಇಂದು ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಆದಾಯದಲ್ಲಿ ಹೆಚ್ಚಳ ನೋಡಬೇಕಾದರೆ ಇಂದು ಶ್ರಮ ಹೆಚ್ಚು ಹಾಕಬೇಕಿದೆ. ಹಾಗೆ ಕಳೆದುಕೊಂಡಿರುವ ಹಣದ ಬಗ್ಗೆ ಚಿಂತೆ ಕಾಡಬಹುದು. ಆರ್ಥಿಕ ಸಮಸ್ಯೆಗಳ ಹೆಚ್ಚಿಸುವಂತಹ ಕೆಲಸಗಳಿಗೆ ಇಂದು ಕೈ ಹಾಕಬೇಡಿ. ಅದರಲ್ಲೂ ದೊಡ್ಡ ವ್ಯವಹಾರಗಳನ್ನು ಏಕಮುಖ ನಿರ್ಧಾರದಂತೆ ಕೈಗೊಳ್ಳಬೇಡಿ. ಮನೆಯ ಸದಸ್ಯರೊಬ್ಬರ ಆರೋಗ್ಯದ ಕುರಿತು ನೀವು ಎಚ್ಚರ ವಹಿಸಿ. ಯಾವುದೇ ಚಿಕ್ಕ ಪುಟ್ಟ ಅನಾರೋಗ್ಯವನ್ನೂ ಸಹ ನಿರ್ಲಕ್ಷಿಸಬೇಡಿ.

May-24-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಈ ದಿನ ಬಹಳ ಜಾಗರೂಕರಾಗಿರಿ. ನಿಮ್ಮ ಆರ್ಥಿಕ ಸಮಸ್ಯೆಗೆ ಕಾರಣವಾಗುವ ವಿಷಯಗಳನ್ನು ನೀವು ಆದಷ್ಟು ತಡೆಯುವುದು ಇಲ್ಲವೆ ಅದರಿಂದ ದೂರ ಉಳಿಯುವುದು ಅಗತ್ಯ. ಮನೆಯಲ್ಲಿ ಮನಸ್ತಾಪ ಅಥವಾ ಸಂಬಂಧಗಳಲ್ಲಿ ಬಿರುಕಿದ್ದರೆ ಈ ದಿನದಂದು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವತ್ತ ಗಮನ ನೀಡಿ. ಇಲ್ಲದಿದ್ದರೆ ಇದು ದೊಡ್ಡದಾಗಿ ನಿಮಗೆ ಕಾಡಬಹುದು. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಹಾಗೆ ವಾಹನ ವಿಚಾರವಾಗಿ ಎಚ್ಚರಿಕೆ ಅಗತ್ಯ. ಇಂದು ಅನಗತ್ಯವಾಗಿ ಸಾಲ ಮಾಡಲು ಮುಂದಾಗಬೇಡಿ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಇಂದು ಮಿಶ್ರ ಫಲದ ದಿನವಾಗಲಿದೆ. ನೀವು ಯಾವುದೇ ಕೆಲಸ ಮಾಡಲು ಮುಂದಾದರು ಹಲವು ಬಾರಿ ಆಲೋಚಿಸಿ. ಹಾಗೆ ಯಶಸ್ಸು ಗಳಿಸುತ್ತಿದ್ದರೂ ಕೂಡ ಅದರಿಂದ ನಿಮಗೆ ತೃಪ್ತಿ ಇಲ್ಲದೆ ಇರಬಹುದು. ಕುಟುಂಬಸ್ಥರಿಂದ ನಿಮಗೆ ಹಣಕಾಸು ವಿಚಾರವಾಗಿ ಒತ್ತಡ ಇರಬಹುದು. ಆಧ್ಯಾತ್ಮಿಕವಾಗಿ ನಿಮಗೆ ಬಹಳ ಉತ್ತಮ ದಿನವಾಗುತ್ತಿದೆ. ಹಲವು ದಿನದಿಂದ ನೀವು ಕಳೆದುಕೊಂಡಿದ್ದ ನೆಮ್ಮದಿಯನ್ನು ಮತ್ತೆ ಪಡೆಯಬಹುದು. ಹಾಗೆ ನಿಮ್ಮ ನಿಮ್ಮ ಸಹಕಾರದಿಂದಾಗಿ ಆಪ್ತರ ಸಮಸ್ಯೆಯೊಂದು ಬಗೆಹರಿಯಬಹುದು. ಯಾವುದೇ ಕಲಹಗಳಲ್ಲಿ ನೀವು ಅನಗತ್ಯವಾಗಿ ಪ್ರವೇಶ ಮಾಡಬೇಡಿ. ಇಂದು ತಾಳ್ಮೆಯಿಂದ ಇರುವುದು ಮುಖ್ಯ.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಇಂದು ದೊಡ್ಡ ಸವಾಲುಗಳ ಎದುರಿಸುತ್ತೀರಿ. ನಿಮ್ಮ ಮನೆಯಲ್ಲಿ ನಿಮಗೆ ಅಶಾಂತಿ ಉಂಟು ಮಾಡುವ ಘಟನೆಗಳು ನಡೆಯಬಹುದು. ಹಾಗೆ ನೀವು ದಾಂಪತ್ಯ ವಿಚಾರವಾಗಿಯೂ ಬಹಳ ಕೋಪಗೊಳ್ಳಬಹುದು. ಶುಭ ಕಾರ್ಯ ಸಂಬಂಧ ನೀವು ಆಪ್ತರೊಬ್ಬರೊಂದಿಗೆ ಪ್ರಯಾಣ ಮಾಡಬೇಕಾಗಬಹುದು. ಕೆಲಸದ ಸ್ಥಳದಲ್ಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಹಿಂದೆ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಿದ್ದ ತಪ್ಪುಗಳನ್ನು ಮತ್ತೆ ಮಾಡಲು ಮುಂದಾಗಬೇಡಿ. ಯಾರಿಗಾದರು ಹಣ ಮರಳಿಸುವುದು ಬಾಕಿ ಇದ್ದರೆ ಈ ದಿನ ನೆನಪು ಮಾಡಿ ವಾಪಾಸು ನೀಡುವುದು ಉತ್ತಮ. ಇಲ್ಲದಿದ್ದರೆ ಮನಸ್ತಾಪಕ್ಕೆ ಇದು ಕಾರಣವಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಇಂದು ದೊಡ್ಡ ಸವಾಲುಗಳನ್ನು ಎದುರಿಸುತ್ತೀರಿ, ಅದರಲ್ಲೂ ಹಣಕಾಸು ವಿವಾರವಾಗಿ ಗೃಹಿಣಿಯರಿಗೆ ಇಂದು ಸವಾಲಿನ ದಿನವಾಗಲಿದೆ. ಮಕ್ಕಳ ಕುರಿತಾದ ಚಿಂತೆಯೊಂದು ಕಾಡಬಹುದು. ನೀವು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದರೆ ಇಂದು ಹೊಸ ಕೆಲಸ ಇಲ್ಲವೆ ಜವಾಬ್ದಾರಿಯು ನಿಮಗೆ ಒತ್ತಡ ತರಬಹುದು. ನಿಮ್ಮ ನಿರ್ಧಾರಗಳಿಗೆ ಉತ್ತಮ ಬೆಂಬಲ ಇರಲಿದೆ. ಆಹಾರ ಸಂಬಂಧಿ ಖರ್ಚುಗಳನ್ನು ನೀವು ಕಡಿಮೆ ಮಾಡಬೇಕಾಗುತ್ತದೆ. ಹಾಗೆ ಇದರಿಂದ ನಿಮಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತಾಗಿಯೂ ಎಚ್ಚರಿಕೆ ಇರಲಿ.

ತುಲಾ ರಾಶಿ

ಇಂದು ನಿಮಗೆ ಅನುಕೂಲಕರ ದಿನವಾಗಿರುತ್ತದೆ. ಅನಿರೀಕ್ಷಿತ ವ್ಯವಹಾರಕ್ಕೆ ನೀವು ಇಳಿಯಬಹುದು. ಇದರಿಂದ ನಿಮಗೆ ಆರ್ಥಿಕವಾಗಿ ಈಗ ಸಮಸ್ಯೆಗಳು ಎದುರಾದರು ಮುಂದೆ ಅನುಕೂಲಗಳಿವೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸವಾಲುಗಳ ಎದುರಿಸುತ್ತೀರಿ. ವಿದ್ಯಾರ್ಥಿಗಳು ಬಯಸಿದಂತೆ ಈ ದಿನ ನಿಮ್ಮ ಪರವಾಗಿರಲಿದೆ. ವ್ಯಾಪಾರಿಗಳಲ್ಲಿ ದೊಡ್ಡ ಬದಲಾವಣೆಯೊಂದು ಸಮಸ್ಯೆಗೆ ಕಾರಣವಾಗಬಹುದು. ಸರ್ಕಾರಿ ನೌಕರರು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ನೀವು ಕೆಲಸದ ಕಾರಣಕ್ಕೆ ದೂರ ಪ್ರಯಾಣ ಮಾಡಬೇಕಾಗಬಹುದು.

ವೃಶ್ಚಿಕ ರಾಶಿ

ಆರ್ಥಿಕವಾಗಿ ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ದಿನ. ನೀವು ಉಳಿತಾಯ, ಹೂಡಿಕೆಯಂತಹ ಉತ್ತಮ ಕೆಲಸದಲ್ಲಿ ತೊಡಗಬಹುದು. ಶ್ರಮ ವಹಿಸಿ ಮಾಡುವ ಕೆಲಸದಿಂದಾಗಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಯಾರಿಂದಾದರು ವಸ್ತುಗಳ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ನಿಮ್ಮ ಗುರಿಗಳ ಕಡೆಗೆ ಹೆಚ್ಚು ಗಮನವಿಡಿ. ಮಕ್ಕಳ ವಿದ್ಯಾಭ್ಯಾಸ ಸಂಬಂಧ ನಿಮಗೆ ಚಿಂತೆ ಕಾಡಬಹುದು. ಉದ್ಯೋಗಸ್ಥರಿಗೆ ಇಂದು ಸವಾಲಿನ ದಿನವಾಗಬಹುದು, ಅವರ ದೈನಂದಿನ ಕೆಲಸಗಳಲ್ಲಿ ಸಣ್ಣ ಪುಟ್ಟ ಅಡೆತಡೆ ಎದುರಾಗಬಹುದು.

ಧನು ರಾಶಿ

ಧನು ರಾಶಿಯ ಮಂದಿ ಈ ದಿನದಂದು ದೊಡ್ಡ ದೊಡ್ಡ ವಿಚಾರಗಳಿಗೆ ಸಲಹೆ ಪಡೆಯುತ್ತೀರಿ, ಕುಟುಂಬದಲ್ಲಿ ಶುಭ ಕಾರ್ಯ ಸಂಬಂಧ ಧನಾತ್ಮಕ ಮಾತುಕತೆ ಇರಲಿದೆ. ನೀವು ಯಾರ ಬಳಿಯಾದರು ಹಣಕ್ಕಾಗಿ ಮನವಿ ಮಾಡಿದ್ದರೆ ಇದು ಫಲಿಸಬಹುದು. ವಾಹನ ಖರೀದಿಯ ಕುರಿತಾಗಿ ಒಂದು ಹೆಜ್ಜೆ ಮುಂದಿಡಲಿದ್ದೀರಿ. ನೀವು ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ. ಕಲಾವಿದರಿಗೆ ಈ ದಿನ ಬಹಳ ಶುಭ ತರಲಿದೆ. ದೊಡ್ಡ ಮಟ್ಟದ ವ್ಯಾಪಾರಿಗಳು ಈ ದಿನ ಶ್ರಮ ಹಾಕುವುದರಿಂದ ಲಾಭ ಮಾಡುತ್ತಾರೆ. ಮನೆಯವರೊಂದಿಗೆ ನೀವು ದೇವಾಲಯ ಭೇಟಿಯ ಸಾಧ್ಯತೆ ಇದೆ.

ಮಕರ ರಾಶಿ

ಇಂದು ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ. ಬುದ್ದಿವಂತಿಕೆಯಿಂದ ನಿಮ್ಮ ಕೆಲಸಗಳ ಪೂರ್ಣ ಮಾಡುವಿರಿ. ನೀವು ತಾಳ್ಮೆಯಿಂದ ಹಾಗೆ ಧೈರ್ಯದಿಂದ ಇಂದು ಸವಾಲು ಎದುರಿಸುತ್ತೀರಿ. ಆತುರದಿಂದ ಯಾವುದೇ ಕಲಸ ಮಾಡಲು ಮುಂದಾಗಬೇಡಿ. ತಂದೆ ತಾಯಿಯ ಸಲಹೆಯಂತೆ ಇಂದು ಕೆಲಸ ಮಾಡುವುದು ಉತ್ತಮ. ನೀವು ಬಹುಕಾಲದಿಂದ ಪಂಚೇಂದ್ರಿಯಕ್ಕೆ ಸಂಬಂಧಿಸಿದಂತೆ ಯಾವುದಾದರು ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದರೆ ಇಂದು ಅದರಿಂದ ಮುಕ್ತಿ ಪಡೆಯಬಹುದು. ಬಹುಕಾಲದ ಆರ್ಥಿಕ ಸಮಸ್ಯೆಯೊಂದು ಸುಧಾರಿಸಬಹುದು.

ಕುಂಭ ರಾಶಿ

ಇಂದು ನೀವು ಯಾವುದೇ ಕೆಲಸವನ್ನಾದರು ಬಹಳ ಎಚ್ಚರಿಕೆಯಿಂದ ಮಾಡುತ್ತೀರಿ. ತುಂಬಾ ದಿನದಿಂದ ನೀವು ಬಯಸಿದ್ದ ವಿಚಾರವೊಂದಲ್ಲಿ ನಿಮಗೆ ಧನಾತ್ಮಕ ಪ್ರಗತಿ ನೋಡಲಿದ್ದೀರಿ. ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳುವತ್ತಾ ಗಮನವಿಡಿ. ಕೆಲಸದ ಸ್ಥಳದಲ್ಲಿನ ಒತ್ತಡ ನಿಭಾಯಿಸುವುದು ಉತ್ತಮ. ನಿಮ್ಮ ಸಹಕಾರದಿಂದ ಆಪ್ತರೊಬ್ಬರ ಸಮಸ್ಯೆ ನಿವಾರಣೆಯಾಗಬಹುದು. ಅನುಭವಿಗಳಿಂದ ಪಡೆಯುವ ಸಲಹೆ ನಿಮಗೆ ನೆರವಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿದ್ದರೆ ಇಂದು ಎಚ್ಚರಿಕೆ ಅಗತ್ಯ.

ಮೀನ ರಾಶಿ

ಮೀನ ರಾಶಿಯವರು ಇಂದು ದೊಡ್ಡ ಸವಾಲುಗಳ ಎದುರಿಸಿದರೂ ಕೂಡ ದಿನದ ಅಂತ್ಯದಲ್ಲಿ ನೆಮ್ಮದಿ ನೋಡುವಿರಿ. ಹೊಸ ಆಲೋಚನೆಗಳು ನಿಮ್ಮಲ್ಲಿ ಹುಟ್ಟಿಕೊಳ್ಳುವುದು. ನಿಮ್ಮಲ್ಲಿ ಆರ್ಥಿಕ ಸಮಸ್ಯೆಯೊಂದಕ್ಕೆ ಕಾರಣವಾಗಿದ್ದ ವಿಚಾರವೊಂದು ಸುಧಾರಿಸಲಿದೆ. ಪ್ರವಾಸ ಕೈಗೊಳ್ಳುವ ಕುರಿತಾಗಿ ನೀವು ಚರ್ಚೆಯಲ್ಲಿ ತೊಡಗುತ್ತೀರಿ. ಪೂರ್ಣಾವದಿ ಆದಾಯ ಮೂಲದಲ್ಲಿ ಏರಿಳಿತ ಕಾಣುತ್ತೀರಿ. ಹಳೆಯ ಸ್ನೇಹಿತರೊಬ್ಬರ ಭೇಟಿಯಿಂದಾಗಿ ನಿಮ್ಮಲ್ಲಿ ಸಂತಸ ಇರಲಿದೆ. ಯಾರ ಬಳಿಯಾದರು ಹಣಕಾಸು ಸಹಾಯ ಪಡೆದರೆ ಇಂದು ಈಡೇಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-24-2025-daily-horoscope-prediction-for-12-zodiac-signs-in-kannada

Here is May 24 daily horoscope prediction for 12 zodiac signs read on...
Story first published: Saturday, May 24, 2025, 6:30 [IST]
X
Desktop Bottom Promotion