Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಮೇ 23ರಂದು ಯಾವ ರಾಶಿಯವರು ಧನ ಲಾಭ ನೋಡಲಿದ್ದಾರೆ?
ವೈದಿಕ ಶಾಸ್ತ್ರದ ಪ್ರಕಾರ ಮೇ 23ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನದಂದು ಬಹಳ ಅನುಕೂಲಕರ ದಿನವಾಗಿ ನೋಡಬಹುದು. ನಿಮ್ಮ ದೈನಂದಿನ ಕೆಲಸಗಳಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳುತ್ತೀರಿ, ಮನೆಗಾಗಿ ಬದಲಾವವಣೆ ಮಾಡಲು ಮುಂದಾಗುತ್ತೀರಿ. ನೀವು ಅರೆಕಾಲಿಕ ಉದ್ಯೋಗಿಗಳಾಗಿದ್ದರೆ ನಿಮ್ಮ ವೇತನ ಸಮಸ್ಯೆ ಇಂದು ಬಗೆಹರಿಯಲಿದೆ. ಆಪ್ತರಿಂದ ನಿಮಗೆ ಶುಭ ಕಾರ್ಯದ ಆಮಂತ್ರಣ ಸಿಗಬಹುದು. ನಿಮ್ಮ ಆದಾಯ ಹೆಚ್ಚಾಗುವಂತಹ ಕೆಲಸಕ್ಕೆ ಮುಂದಾಗಬಹುದು. ಸರ್ಕಾರಿ ನೌಕರರು ಇಂದು ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಇಂದು ಸಣ್ಣ ಪುಟ್ಟ ಏರಿಳಿತ ನೋಡಬಹುದು.
ವೃಷಭ ರಾಶಿ
ಇಂದು ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸಿದಂತೆ ಚರ್ಚೆ ನಡೆಯಬಹುದು. ನಿಮ್ಮ ಅದಾಯದ ಮೂಲದಿಂದ ದೊಡ್ಡ ಲಾಭ ಪಡೆಯುವ ಸಾಧ್ಯತೆ ಇದೆ. ನಿಮ್ಮ ಕನಸನ್ನು ನನಸು ಮಾಡಲು ಶ್ರಮದ ಜೊತೆಗೆ ನೀವು ಉಳಿತಾಯಕ್ಕೂ ಮುಂದಾಗಬೇಕಿದೆ. ಕೆಲಸದ ಕಾರಣಕ್ಕೆ ದೂರ ಪ್ರಯಾಣ ಮಾಡಬಹುದು. ಯಾರಿಂದಾದರು ಹಣ ವಾಪಾಸು ಪಡೆಯಲು ಮುಂದಾದರೆ ಇಂದು ಮನಸ್ತಾಪಕ್ಕೂ ಕಾರಣವಾಗಬಹುದು. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಉದ್ಯೋಗ ಹುಡುಕಲು ನೀವು ಆಪ್ತರೊಬ್ಬರ ಸಹಾಯ ಪಡೆಯಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಗೃಹಿಣಿಯರಿಗೆ ಈ ದಿನ ಬಹಳ ಉತ್ತಮವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳು ಬಹಳ ಸಲೀಸಾಗಿ ನಡೆಯಲಿವೆ. ಆದರೆ ಆಪ್ತರೊಬ್ಬರ ಸಲಹೆಯನ್ನು ನೀವು ಅನುಸರಿಸದೆ ಇರುವುದು ಉತ್ತಮ. ಯಾರಿಗಾದರು ದೊಡ್ಡ ವಿಚಾರವಾಗಿ ಮಾತು ನೀಡಲು ಹೋಗಬೇಡಿ. ವ್ಯಾಪಾರಿಗಳು ಸಾಲ ನೀಡುವುದನ್ನು ತಪ್ಪಿಸುವುದು ಉತ್ತಮ. ಉಳಿತಾಯದಲ್ಲಿ ಹೆಚ್ಚಳ ನೋಡಬಹುದು. ಆಸ್ತಿ, ಬ್ಯಾಂಕಿಂಗ್ ವ್ಯವಹಾರಗಳು ಸಲೀಸಾಗಿ ನಡೆಯಲಿದೆ. ಮನೆಯಲ್ಲಿ ಸದಸ್ಯರೊಬ್ಬರ ಆರೋಗ್ಯ ಕುರಿತಾಗಿ ಎಚ್ಚರಿಕೆ ವಹಿಸಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಸವಾಲುಗಳ ಮೇಲೆ ಸವಾಲು ಎದುರಾಗಬಹುದು. ಅದರಲ್ಲೂ ಕೆಲಸದ ಸ್ಥಳದಲ್ಲಿ ನಿಮಗೆ ದೊಡ್ಡ ಒತ್ತಡ ಇರುವ ಜವಾಬ್ದಾರಿ ಸಿಗಬಹುದು. ಹಾಗೆ ಎಲ್ಲಾ ಕೆಲಸಗಳು ನೀವು ಅಂದುಕೊಂಡ ಸಮಯಕ್ಕೆ ಮುಗಿಸಲು ಸಾಧ್ಯವಾಗದೆ ಇರಬಹುದು. ನೀವು ಆರ್ಥಿಕ ಸ್ಥಿತಿ ಉತ್ತಮವಾಗಿಸಲು ಇಂದು ಸಾಲ ಮಾಡಲು ಮುಂದಾಗಬಹುದು. ಅದರಲ್ಲೂ ಆಪ್ತರಿಂದ ಹಣಕ್ಕೆ ಮನವಿ ಮಾಡಿದ್ದರೆ ಸಿಗುವ ಸಾಧ್ಯತೆ ಹೆಚ್ಚಿದೆ. ಅಪೇಕ್ಷಿತ ಕೆಲಸಗಳಿಗೆ ಹೆಚ್ಚು ಸಮಯ ಇಡುತ್ತೀರಿ. ನಿಮ್ಮ ಬಯಕೆಯಂತೆ ಪೋಷಕರಿಂದ ಬೆಂಬಲ ಪಡೆಯುತ್ತೀರಿ. ವಿವಾಹಿತರಲ್ಲಿ ಒತ್ತಡ ಹೆಚ್ಚಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನದಂದು ಒತ್ತಡದಿಂದ ಕಳೆಯುತ್ತೀರಿ. ನೀವು ಯಾವುದೇ ಕೆಲಸ ಮಾಡಲು ಮುಂದಾದರೂ ಅದರಲ್ಲೂ ಸಂಪೂರ್ಣ ಯಶಸ್ಸು ಪಡೆಯಲು ಸಾಧ್ಯವಾಗದೆ ಇರಬಹುದು. ಹಾಗೆ ನೀವು ಅವಿವಾಹಿತರಾಗಿದ್ದರೆ ಹಣಕಾಸು ವಿಚಾರವಾಗಿ ದೊಡ್ಡ ಸವಾಲುಗಳ ಎದುರಿಸುತ್ತೀರಿ. ಹಾಗೆ ನಿಮ್ಮ ಬರಬೇಕಿದ್ದ ಹಣದಿಂದ ವಂಚಿತರಾಗಬಹುದು. ಮನೆಯಲ್ಲಿ ಅಶಾಂತಿ ಇರಲಿದೆ. ಪ್ರೀತಿ ಪಾತ್ರರಿಂದ ನಿಮಗೆ ಅಶುಭ ಸುದ್ದಿ ಕೇಳಬರಬಹುದು. ದಾಂಪತ್ಯಕ್ಕೆ ಸಂಬಂಧಿಸಿದಂತೆ ಯಾವುದಾದರು ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ. ಬೆನ್ನು ಮೂಳೆ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಮಿಶ್ರಫಲ ಇರಲಿದೆ. ನೀವು ಯಾವುದಾದರು ಪ್ರವಾಸ ಕೈಗೊಳ್ಳುವ ಆಲೋಚನೆಯಲ್ಲಿದ್ದರೆ ಅದಕ್ಕೆ ವಿಘ್ನ ಎದುರಾಗಬಹುದು. ಬಹಳ ಸಮಯದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಮತ್ತೆ ಪ್ರಾರಂಭಿಸುವ ಬದಲಾಗಿ ಅದನ್ನು ಮತ್ತೆ ಮುಂದೂಡಬೇಕಾಗಬಹುದು. ಸ್ನೇಹಿತರೊಬ್ಬರ ಸಮಸ್ಯೆಗೆ ನೀವು ನೆರವಾಗಬಹುದು ಆದ್ರೆ ಇದು ನಿಮಗೆ ನೆಮ್ಮದಿ ತರುವುದಿಲ್ಲ. ಅನಗತ್ಯ ವಿಚಾರವಾಗಿ ಇಂದು ಖರ್ಚು ಹೆಚ್ಚಾಗಬಹುದು. ಹಾಗೆ ಈ ಖರ್ಚು ಸರಿದೂಗಿಸಲು ನೀವು ಸಾಲ ಮಾಡಬೇಕಾಗಿ ಬರಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿ ಈ ದಿನ ಮನೆಗಾಗಿ ಖರ್ಚು ಮಾಡುತ್ತೀರಿ. ಅದರಲ್ಲೂ ನಿಮಗೆ ಸಂಬಂಧಿಸದ ವಸ್ತುಗಳಿಗೆ ಹಣ ಹಾಕಬೇಕಾಗುತ್ತದೆ. ನಿಮ್ಮ ಕೆಲಸದಲ್ಲಿ ಎಂದಿನಂತೆ ಸವಾಲುಗಳು ಎದುರಾಗಬಹುದು. ಆಪ್ತರಿಂದ ಪಡೆದ ಸಲಹೆಯು ನಿಮಗೆ ಒಳಿತು ಮಾಡಲಿದೆ. ವ್ಯಾಪಾರಕ್ಕೆ ಸಂಬಂಧಿಸದಂತೆ ದೊಡ್ಡ ಮಟ್ಟದ ವ್ಯವಹಾರ ಮಾಡಬೇಡಿ. ನಿಮ್ಮಲ್ಲಿ ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಯಾರಿಗಾದರು ನಿಮ್ಮ ಮಾತುಗಳಿಂದ ಇಂದು ನೋವುಂಟಾಗಬಹುದು, ಹೀಗಾಗಿ ಆಡುವ ಮಾತಿನ ಮೇಲೆ ಎಚ್ಚರ ತಪ್ಪದಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಇಂದು ಅನುಕೂಲಕರ ದಿನ ನೋಡುತ್ತೀರಿ. ನಿಮ್ಮ ಎಲ್ಲಾ ಕೆಲಸಗಳಲ್ಲಿ ನೀವು ಅಂದುಕೊಂಡ ಯಶಸ್ಸು ಪಡೆಯಬಹುದು, ನೀವು ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಉತ್ತಮ ಅವಕಾಶ ಪಡೆಯಬಹುದು. ಹಣ ಮರಳಿ ಪಡೆಯುವ ವಿಚಾರವಾಗಿ ಇಲ್ಲವೆ ವ್ಯವಹಾರದ ವಿವಾರವಾಗಿ ವೈಮನಸ್ಸುಗಳು ಏರ್ಪಡಬಹುದು. ಮನೆಯ ಹಿರಿಯ ಸದಸ್ಯರೊಬ್ಬರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ನಿಮ್ಮ ಕೆಲಸಗಳಲ್ಲಿ ಸರಿಯಾಗಿ ಶ್ರಮ ಹಾಕುವುದು ಮುಂದೆ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ.
ಧನು ರಾಶಿ
ಧನು ರಾಶಿಯ ಮಂದಿ ಈ ದಿನದಂದು ಕೆಲಸ ಕಾರ್ಯಗಳಲ್ಲಿ ದೊಡ್ಡ ಯಶಸ್ಸು ಗಳಿಸುತ್ತಾರೆ. ನೀವು ಹಣಕಾಸು ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯಲ್ಲಿ ಚರ್ಚಿಸುವುದು ಬಹಳ ಮುಖ್ಯ. ನಿಮ್ಮ ಬಳಿ ಇರುವ ವಸ್ತುವೊಂದನ್ನು ಬೇರೆಯವರಿಗೆ ನೀಡಬೇಕಾಗುತ್ತದೆ. ನೀವು ವ್ಯಾಪಾರಿಗಳಾಗಿದ್ದರೆ ಈ ದಿನ ಲಾಭದಷ್ಟು ಖರ್ಚು ಮಾಡುತ್ತೀರಿ. ಮನೆಗಾಗಿ ಹೊಸ ವಸ್ತು ಖರೀದಿಯ ಆಲೋಚನೆ ನಿಮಗೆ ಬರಬಹುದು. ನಿಮಗಾಗಿ ಯಾವುದಾದರು ವಸ್ತು ಖರೀದಿಸಿದರೆ ಅದರಿಂದ ತೃಪ್ತಿ ಪಡೆಯುತ್ತೀರಿ.
ಮಕರ ರಾಶಿ
ಇಂದು ನಿಮ್ಮ ಪಾಲಿಗೆ ಅನುಕೂಲಕರ ದಿನವಾಗಬಹುದು. ಯಾರಿಗಾದರು ಈ ದಿನ ನೀವು ಸಹಾಯ ಮಾಡಿದರೆ ಮುಂದೆ ನಿಮಗೆ ಅದರಿಂದ ಒಳಿತಾಗಬಹುದು. ನೀವು ಹಣಕಾಸು ವಿಚಾರವಾಗಿ ಯಾರಿಂದಾದರು ಸಾಲ ಪಡೆಯುವ ಮನಸ್ಸು ಮಾಡಬಹುದು. ದೂರ ಪ್ರಯಾಣ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು. ಒಂದಿಷ್ಟು ಕೆಲಸಗಳು ನೀವು ಅಂದುಕೊಂಡಂತೆ ಮುಗಿಯಲಿದೆ. ಆಸ್ಪತ್ರೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಬಹುದು. ಇದಕ್ಕೆ ತಯಾರಿ ಮಾಡಿಕೊಳ್ಳುವುದು ಉತ್ತಮ.
ಕುಂಭ ರಾಶಿ
ನೀವು ಇಂದು ದೊಡ್ಡ ಸವಾಲುಗಳು ಎದುರಾದರೂ ಕೂಡ ಧೈರ್ಯವಾಗಿ ಎದುರಿಸುವ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ದಿನವಾಗಿರಲಿದೆ. ನೀವು ವ್ಯಪಾರಿಗಳಾಗಿದ್ದರೆ ನಿಮ್ಮ ಪ್ರತಿಸ್ಪರ್ಧಿಗಳ ಕುರಿತಾಗಿ ಗಮನವಿಡಿ. ನಿಮ್ಮ ಮನೆಯಲ್ಲಿ ಹಣಕಾಸು ವಿಚಾರವಾಗಿ ನಡೆಯುವ ಮಾತುಕತೆಯಿಂದ ನಿಮ್ಮಲ್ಲಿ ಒತ್ತಡಕ್ಕೆ ಕಾರಣವಾಗಬಹುದು. ವಾಹನ ಸಂಬಂಧಿ ಖರ್ಚುಗಳು ನಿಮಗೆ ಸಮಸ್ಯೆ ತರಬಹುದು. ವಿವಾಹಿತರಲ್ಲಿ ಆದಾಯಕ್ಕಿಂತ ಹೆಚ್ಚು ಖರ್ಚು ನೋಡಬಹುದು. ದೂರ ಪ್ರಯಾಣಕ್ಕೆ ಮುಂದಾಗುವ ನಿಮ್ಮ ಬಯಕೆ ಮತ್ತೆ ಮುಂದೂಡಬೇಕಾಗಲಿದೆ.
ಮೀನ ರಾಶಿ
ಮೀಣ ರಾಶಿಯವರು ಇಂದು ಮಿಶ್ರ ಫಲ ಅನುಭವಿಸುತ್ತೀರಿ, ಈ ದಿನ ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಯಾರ ಬಳಿಯಾದರು ನೀವು ಉದ್ಯೋಗ ಸಂಬಂಧಿ ಸಹಾಯಕ್ಕೆ ಮನವಿ ಮಾಡಿದರೆ ಅದರಲ್ಲಿ ಧನಾತ್ಮಕ ಲಾಭ ನೋಡುವಿರಿ. ಸಹೋದರರೊಂದಿಗಿನ ನಿಮ್ಮ ಸಂಬಂಧದಲ್ಲಿ ಸಣ್ಣ ಮನಸ್ತಾಪಗಳು ಎದುರಾಗಲಿದೆ. ಹಿರಿಯರ ಆಶೀರ್ವಾದದಿಂದ ನಿಮ್ಮ ಕೆಲಸಗಳಲ್ಲಿ ಯಶಸ್ಸು ಪಡೆಯಬಹುದು. ಮನೆಯ ಸದಸ್ಯರೊಬ್ಬರ ಅಗತ್ಯತೆಯ ಸಂಬಂಧ ನೀವು ಖರ್ಚು ಮಾಡಬೇಕಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications