Dina Bhavishya: ಮೇ 22ರಂದು ನಿಮ್ಮ ರಾಶಿಯ ಪ್ರಕಾರ ಏನೆಲ್ಲಾ ಫಲವಿದೆ?

ವೈದಿಕ ಶಾಸ್ತ್ರದ ಪ್ರಕಾರ ಮೇ 22ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಈ ದಿನ ಬಹಳ ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ನಿಮ್ಮ ಕೆಲಸದಲ್ಲಿ ಹಣಕಾಸು ಸಮಸ್ಯೆಗಳು ಅಡ್ಡಿಯಾಗಬಹುದು. ನೀವು ಅಂದುಕೊಂಡ ಕೆಲಸದಲ್ಲಿ ಹಿನ್ನಡೆ ಅನುಭವಿಸಬಹುದು. ಹಾಗೆ ಬಹಳ ದಿನಗಳಿಂದ ಕಾಡಿದ್ದ ಅನಾರೋಗ್ಯ ಸಮಸ್ಯೆ ಸಂಬಂಧ ನೀವು ಚಿಕಿತ್ಸೆ ಪಡೆಯಲು ಪ್ರಯಾಣಿಸಬೇಕಾಗಲಿದೆ. ಯಾರ ಬಳಿಯಾದರು ನೀವು ಹಣಕಾಸು ವಿಚಾರವಾಗಿ ಮನಸ್ತಾಪ ಮಾಡಿಕೊಂಡಿದ್ದರೆ ಇಂದು ಕುಳಿತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ. ಹಾಗೆ ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸುವುದು ನಿಮಗೆ ಲಾಭದಾಯಕವಾಗುತ್ತದೆ. ಸಹೋದರರೊಂದಿಗೆ ಉತ್ತಮ ಸಂಬಂಧ ಮುಂದುವರೆಸಿ.

ವೃಷಭ ರಾಶಿ

ಇಂದು ನಿಮ್ಮ ಬಳಿ ಇರುವ ಉಳಿತಾಯದ ಹಣವನ್ನು ಮತ್ತೊಂದು ಕೆಲಸಕ್ಕೆ ಬಳಸುತ್ತೀರಿ. ಇದರಿಂದ ನಿಮ್ಮಲ್ಲಿ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುವ ಹಲವು ವಿಚಾರಗಳು ಎದುರಾಗಲಿದೆ. ಇಂದು ಎಲ್ಲಾ ವಿಚಾರದಲ್ಲು ಬುದ್ದಿವಂತಿಕೆಯ ಜೊತೆಗೆ ತಾಳ್ಮೆಯಿಂದ ವರ್ತಿಸುವುದು ಮುಖ್ಯ. ಗೃಹಿಣಿಯರಲ್ಲಿ ಹಣಕಾಸು ವಿಚಾರವಾಗಿ ಗೊಂದಲ ಅಥವಾ ಒತ್ತಡ ಎದುರಾಗಬಹುದು. ಅವಿವಾಹಿತರು ನಿಮ್ಮ ಪ್ರೀತಿ ಪಾತ್ರರಿಂದ ದೊಡ್ಡ ಸುದ್ದಿ ಕೇಳುತ್ತೀರಿ. ವ್ಯಾಪಾರಿಗಳಲ್ಲಿ ಇಂದು ಲಾಭದಾಯಕ ದಿನವಾಗಿದೆ. ಹೋಟೆಲ್ ಉದ್ಯಮಿಗಳು ನಿಮ್ಮ ವ್ಯವಹಾರ ವಿಸ್ತರಣೆಗೂ ಮುನ್ನ ಮತ್ತೆ ಆಲೋಚಿಸುವುದು ಬಹಳ ಉತ್ತಮ.

May-22-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಇಂದು ಬಹಳ ಸವಾಲುಗಳು ಎದುರಾಗುತ್ತದೆ. ಆದ್ರೆ ನೀವು ಈ ಸವಾಲುಗಳ ಎದುರಿಸಲು ಶಕ್ತರಾಗಿರುತ್ತೀರಿ. ವಾಹನ ಖರೀದಿಸುವ ನಿಮ್ಮ ಆಲೋಚನೆಗೆ ದೊಡ್ಡ ಪೆಟ್ಟು ಬೀಳಲಿದೆ. ನಿಮ್ಮ ಉಳಿತಾಯ ಅಥವಾ ಕೂಡಿಟ್ಟ ಹಣವನ್ನು ನೀವು ಬಳಸುತ್ತೀರಿ. ಹೂಡಿಕೆ ಇಂದು ಸೂಕ್ತ ದಿನವಲ್ಲ. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಆರೋಗ್ಯದಲ್ಲಿನ ಏರುಪೇರು ನಿಮ್ಮ ಕೆಲಸ ಕಾರ್ಯಕ್ಕೆ ಅಡ್ಡಿಯಾಗಲಿದೆ. ದಿನವಿಡಿ ನೀವು ಒತ್ತಡ ಹಾಗೂ ಪ್ರಯಾಣದಲ್ಲಿ ತೊಡಗಬೇಕಾಗಬಹುದು. ವಿವಾಹಿತರಲ್ಲಿ ಕೌಟುಂಬಿಕ ವಿಚಾರವಾಗಿ ಇದ್ದ ಸಮಸ್ಯೆಗಳು ಇನ್ನಷ್ಟು ಜಟಿಲವಾಗಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಇಂದು ಬಹಳ ಅನುಕೂಲಕರ ದಿನವಾಗಿರಲಿದೆ. ನೀವು ಮನೆಗಾಗಿ ಅಗತ್ಯ ವಸ್ತುವೊಂದನ್ನು ಖರೀದಿಸಬಹುದು. ಹಾಗೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಅಥವಾ ವರ್ಗಾವಣೆ ಸಂಬಂಧ ಧನಾತ್ಮಕ ಲಾಭ ನೋಡುತ್ತೀರಿ. ನಿಮ್ಮ ವೇತನ ಸಂಬಂಧ ಇದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಮನೆಯಲ್ಲಿ ಹಿರಿಯರ ಜೊತೆಗಿನ ಮನಸ್ತಾಪವೊಂದು ನಿವಾರಣೆಯಾಗಲಿದೆ. ಬಹಳ ಸಮಯದಿಂದ ನೀವು ಯಾವುದಾದರು ವ್ಯವಹಾರದಲ್ಲಿ ಅಡ್ಡಿ ಅನುಭವಿಸಿದ್ದರೆ ಅದರಿಂದ ಹೊರಬರಲು ಅಥವಾ ಪರಿಹರಿಸಲು ಮುಂದಾಗುವುದು ಉತ್ತಮ.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನ ಬಹಳ ಆತ್ಮಿವಿಶ್ವಾಸದಿಂದ ಇರುತ್ತೀರಿ. ನೀವು ಯಾವುದೇ ಕಲಸವನ್ನು ಅಂದುಕೊಂಡ ಸಮಯದಲ್ಲಿ ಮುಗಿಸುತ್ತೀರಿ. ಹಣಕಾಸು ವಿಚಾರವಾಗಿಯೂ ನಿಮಗೆ ಅನುಕೂಲಕರ ದಿನವಾಗಿರಲಿದೆ. ನೀವು ಹೋಟೆಲ್ ಉದ್ಯಮಿಯಾಗಿದ್ದರೆ ಈ ದಿನ ನಿಮಗೆ ಸವಾಲು ಎದುರಾಗಬಹುದು. ಹಾಗೆ ಚಿಕ್ಕ ಪುಟ್ಟ ವ್ಯಾಪಾರಿಗಳು ದಿನದ ಕೊನೆಯಲ್ಲಿ ಲಾಭ ನೋಡುತ್ತಾರೆ. ನೀವು ಹೊಸದಾಗಿ ವ್ಯಾಪಾರ ಆರಂಭಿಸಿದ್ದರೆ ಅಗತ್ಯ ಶ್ರಮ ಹಾಕುವುದು ಉತ್ತಮ. ಪ್ರೀತಿ ಪಾತ್ರರಿಂದ ನೀವು ಉಡುಗೊರೆಯೊಂದನ್ನು ಪಡೆಯಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡುತ್ತೀರಿ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಈ ದಿನದಂದು ಕೆಲಸದ ಕಾರಣಕ್ಕೆ ಮನೆಯಿಂದ ಹೊರಗುಳಿಯಬೇಕಾಗುತ್ತದೆ. ನೀವು ಉದರ ಸಂಬಂಧ ಸಮಸ್ಯೆಗೆ ತುತ್ತಾಗಿದ್ದರೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಂದು ನೀವು ಯಾರಿಗಾದರು ಸಾಲ ನೀಡುವುದು ಅಥವಾ ದೊಡ್ಡ ವ್ಯವಹಾರ ಕುರಿತಾದ ಲಿಖಿತ ರೂಪದ ಆಶ್ವಾಸನೆ ನೀಡುವ ಕಾರ್ಯಕ್ಕೆ ಮುಂದಾಗಬೇಡಿ. ವ್ಯಾಪಾರಿಗಳಿಗೆ ಇಂದು ಉತ್ತಮ ಅನುಕೂಲಕರ ದಿನ. ನೀವು ಆಸ್ತಿ ಮಾರಾಟ ಸಂಬಂಧ ಅಡ್ಡಿ ಅನುಭವಿಸಿದ್ದರೆ ಈ ದಿನ ಸ್ವಲ್ಪ ಹೆಚ್ಚಿಗೆ ಶ್ರಮ ಹಾಕಿದರೆ ಒಳಿತಾಗಲಿದೆ. ಮನೆಯಲ್ಲಿ ಶಾಂತಿ ಇರಲಿದೆ. ಸಂಬಂಧಿಕರ ಭೇಟಿಯಾಗುವ ನಿರೀಕ್ಷೆ ಇದೆ.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ದಿನದಂದು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸಲಹೆಗಳು ಹಾಗೂ ಆಲೋಚನೆ ಮಾಡುವುದು ಬಹಳ ಮುಖ್ಯ. ಏಕಂದರೆ ನೀವು ಇಡುವ ಒಂದು ತಪ್ಪು ಹೆಜ್ಜೆ ನಿಮಗೆ ದೊಡ್ಡ ಸಮಸ್ಯೆಗಳ ತರಬಹುದು. ವಾಹನ ಸಂಬಂಧವಾಗಿ ಜಾಗರುಕತೆಯ ನಿರ್ಧಾರಗಳ ತೆಗೆದುಕೊಳ್ಳಿ. ಕಬ್ಬಿಣ ಸಂಬಂಧಿ ವ್ಯಾಪಾರಿಗಳು ಲಾಭ ಮಾಡುತ್ತಾರೆ. ಶುಭ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ. ಇದೆ. ಮನೆಯ ಸಮಸ್ಯರೊಬ್ಬರ ಆರೋಗ್ಯ ಸಂಬಂಧ ನಿಮಗೆ ಚಿಂತೆ ಕಾಡಬಹುದು. ಖಾಸಗಿ ಸಂಸ್ಥೆಯ ನೌಕರರು ಇಂದು ಕಷ್ಟದ ದಿನ ನೋಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ದಿನದಂದು ಶಾಂತ ರೀತಿಯಲ್ಲಿ ಕಳೆಯುತ್ತೀರಿ. ವಿಶ್ರಾಂತಿಯತ್ತ ನೀವು ಗಮನ ಕೊಡಬಹುದು. ಅಪರಿಚಿತರಲ್ಲಿ ವ್ಯವಹಾರಕ್ಕೆ ಮುಂದಾಗಬೇಡಿ. ಮನೆಗಾಗಿ ನೀವು ಮುಖ್ಯ ಕೆಲಸ ಮಾಡಬಹುದು. ಬಾಕಿ ಉಳಿಸಿಕೊಂಡಿದ್ದ ಕೆಲಸಗಳಿಂದ ಸಮಸ್ಯೆಗಳು ಎದುರಾಗಬಹುದು. ದೇವಾಲಯ ಭೇಟಿ, ಚಿಕ್ಕ ಪ್ರವಾಸದಂತಹ ವಿಚಾರವಾಗಿ ನೀವು ಆಲೋಚಿಸಬಹುದು. ವಾಹನ ಸವಾರರಲ್ಲಿ ಲಾಭಕ್ಕಿಂತ ನಷ್ಟದ ಅನುಭವವಾಗಬಹುದು. ವ್ಯಾಪಾರಿಗಳಿಗೆ ಇಂದು ಸರಾಸರಿಯ ದಿನವಾಗಿರಲಿದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಲು ಬಿಡಬೇಡಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇಡುವುದು ಉತ್ತಮ.

ಧನು ರಾಶಿ

ಧನು ರಾಶಿಯ ಮಂದಿ ಈ ದಿನದಂದು ಬಹಳ ಓಡಾಟದಲ್ಲಿ ಕಳೆಯುತ್ತೀರಿ. ನೀವು ಯಾವುದೇ ಕಲಸವನ್ನು ಅರ್ಧಕ್ಕೆ ನಿಲ್ಲಿಸಲು ಮುಂದಾಗಬೇಡಿ. ಸಂಬಂಧಿಕರೊಬ್ಬರ ಶುಭ ಕಾರ್ಯ ಸಂಬಂಧವಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿ ಬರಬಹುದು. ಮಕ್ಕಳ ಭವಿಷ್ಯ ಕುರಿತಾದ ಚಿಂತೆ ಇನ್ನಷ್ಟು ಹೆಚ್ಚಾಗಬಹುದು. ಮನೆಯ ವಾತಾವರಣದಲ್ಲಿ ಅಶಾಂತಿ ಇರಬಹದು. ಸಾಕು ಪ್ರಾಣಿಗಳಿದ್ದರೆ ಇಂದು ಅವುಗಳಿಂದ ದೂರ ಇರುವುದು ಉತ್ತಮ. ನಿಮ್ಮ ಬಹುದಿನದ ಬಯಕೆಯೊಂದಕ್ಕೆ ದೊಡ್ಡ ಹೆಜ್ಜೆ ಇಡಲಿದ್ದೀರಿ.

ಮಕರ ರಾಶಿ

ಮಕರ ರಾಶಿಯವರಿಗೆ ಈ ದಿನವು ಬಹಳ ಅನುಕೂಲಕರವಾಗಲಿದೆ. ನಿಮ್ ದೈನಂದಿನ ಕೆಲಸ ಕಾರ್ಯಗಳು ಎಂದಿನಂತೆ ಸರಾಗವಾಗಿ ನಡೆಯಲಿದೆ. ಹಾಗೆ ನೀವು ಅಂದುಕೊಂಡ ಕೆಲಸವೊಂದು ಕೂಡ ಯಾವುದೇ ಅಡ್ಡಿ ಆತಂಕವಿಲ್ಲದೆ ಪೂರ್ಣವಾಗಲಿದೆ. ನೀವು ಬಯಸಿದಂತೆ ಹಣಕಾಸು ವಿಚಾರವಾಗಿ ಮೇಲುಗೈ ಸಾಧಿಸಬಹುದು. ನಿಮ್ಮ ಹಳೆಯ ಸಾಲ ಮರುಪಾವತಿಗೆ ಇದು ಉತ್ತಮ ದಿನವಾಗಿದೆ. ಹೊಸ ಸಾಲ ಮಾಡಲು ಮುಂದಾಗಬೇಡಿ. ಗೃಹಿಣಿಯರು ಅಚ್ಚರಿಯ ಮೂಲದಿಂದ ಆದಾಯ ಪಡೆಯಬಹುದು.

ಕುಂಭ ರಾಶಿ

ಕುಂಭ ರಾಶಿಯ ಮಂದಿಗೆ ಈ ದಿನವು ಮಿಶ್ರ ಫಲ ನೀಡುವ ದಿನವಾಗಿರಲಿದೆ. ಯಾರಿಂದಾದರು ನೀವು ಹಣಕ್ಕೆ ಬೇಡಿಕೆ ಇಟ್ಟಿದ್ದರೆ ಈ ದಿನ ಪಡೆಯಬಹುದು. ಹಾಗೆ ನಿಮ್ಮ ಹೂಡಿಕೆ, ಉಳಿತಾಯದಲ್ಲಿ ಏರಿಕೆ ನೋಡಬಹುದು. ಷೇರು ಕುರಿತ ಲಾಭಾಂಶ ಹೆಚ್ಚು ಮಾಡಿಕೊಳ್ಳಬಹುದು. ಆಸ್ತಿ ಖರೀದಿಯ ನಿಮ್ಮ ಕನಸಿಗೆ ದೊಡ್ಡ ಸಲಹೆಯೊಂದು ನೆರವಾಗಲಿದೆ. ಮನೆಯಲ್ಲಿ ನಿಮ್ಮ ಮಾತುಗಳಿಗೆ ಬೆಂಬಲ ಸಿಗಲಿದೆ. ಕೆಲಸದ ನಿಮಿತ್ತ ನೀವು ದೂರ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಗೆ ಅಡ್ಡಿ ಬರಲಿದೆ.

ಮೀನ ರಾಶಿ

ಮೀನ ರಾಶಿಯ ಮಂದಿಗೆ ಇಂದು ಅತ್ಯಂತ ಶುಭ ತರುವ ದಿನವಾಗಿದೆ. ನೀವು ಯಾವುದೇ ಕಲಸ ಮಾಡಿದರೂ ಅದರಿಂದ ಶುಭ ವಿಚಾರ ಪಡೆಯುತ್ತೀರಿ. ನಿಮ್ಮ ಕೆಲಸದಲ್ಲಿ ನಿಮಗೆ ತೃಪ್ತಿ ಸಿಗುವ ದಿನವಿದು. ಸರ್ಕಾರಿ ಉದ್ಯೋಗಿಗಳಿಗೆ ಇಂದು ಶುಭ ಸೂಚನೆ ಇದೆ. ನೀವು ಸಂಬಂಧಿಕರಿಗೆ ಹಣ ನೀಡಿದ್ದರೆ ಇಂದು ಮರಳಿ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಹೆಸರು, ಖ್ಯಾತಿ ಹೆಚ್ಚಾಗುವ ಕೆಲಸ ಮಾಡುವಿರಿ, ಅದರಲ್ಲೂ ರಾಜಕೀಯವಾಗಿ ಗುರುತಿಸಿಕೊಂಡಿರುವವರಿಗೆ ಇಂದು ಒಳ್ಳೆಯ ಕಾಲವಾಗಿರಲಿದೆ, ಆರೋಗ್ಯದ ವಿಚಾರವಾಗಿಯೂ ನಿಮಗೆ ಶುಭಗಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-22-2025-daily-horoscope-prediction-for-12-zodiac-signs-in-kannada

Here is May 22 daily horoscope prediction for 12 zodiac signs read on...
Story first published: Thursday, May 22, 2025, 6:18 [IST]
X
Desktop Bottom Promotion