Dina Bhavishya: ಮೇ 21ರಂದು ನಿಮ್ಮ ರಾಶಿಯಲ್ಲಿ ಏನೆಲ್ಲಾ ಶುಭವಿದೆ?

ವೈದಿಕ ಶಾಸ್ತ್ರದ ಪ್ರಕಾರ ಮೇ 21ರ ರಾಶಿಫಲ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಉದ್ಯೋಗ ಹುಡುಕುತ್ತಿದ್ದರೆ ನಿಮಗೆ ಶುಭ ತರುವಂತಹ ಅವಕಾಶಗಳು ಸಿಗಲಿದೆ. ನಿಮ್ಮ ವೇತನ ಸಂಬಂಧಿ ಸಮಸ್ಯೆಗಳಿದ್ದರೆ ನಿವಾರಣೆಯ ಸಂಭವವಿದೆ. ಕೆಲಸದ ಜೊತೆಗೆ ನೀವು ನಿಮ್ಮ ಕುಟುಂಬದ ಬಗ್ಗೆಯೂ ಗಮನ ಹರಿಸಬೇಕು, ವಿಶೇಷವಾಗಿ ಇಂದು ಮಕ್ಕಳೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಅಪರಿಚಿತ ಜನರಿಂದ ಅಂತರ ಕಾಯ್ದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಗೃಹಿಣಿಯರು ಬಹುಕಾಲದ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯಬೇಕಾಗುತ್ತದೆ. ನಿಮ್ಮ ಕುಟುಂಬದಲ್ಲಿ ಎದುರಾಗಿದ್ದ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗಲಿದೆ. ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವಾಗ ಸಲಹೆ ಪಡೆಯುವುದು ಉತ್ತಮ.

ವೃಷಭ ರಾಶಿ

ಇಂದು ನಿಮಗೆ ಅನಿರೀಕ್ಷಿತ ಲಾಭದ ದಿನವಾಗಿರುತ್ತದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಕುಟುಂಬ ಜೀವನ, ವೈವಾಹಿಕ ಬದುಕು ಚೆನ್ನಾಗಿರಲಿದೆ. ವ್ಯಾಪಾರಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಿದೆ. ನಿಮ್ಮ ವ್ಯವಹಾರವು ಹೊಸ ದಿಕ್ಕಿನಲ್ಲಿ ಚಲಿಸುವುದು. ಇದಲ್ಲದೆ ನಿಮ್ಮ ಹಣಕಾಸಿನ ಸಮಸ್ಯೆಯನ್ನು ಸಹ ಪರಿಹರಿಸಬಹುದು. ಉದ್ವೇಗದ ಸ್ವಭಾವದಿಂದಾಗಿ ನಿಮ್ಮ ಕೆಲಸದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ನೀವು ಪ್ರವಾಸ ಸಂಬಂಧವಾಗಿ ಚರ್ಚೆಯಲ್ಲಿ ಭಾಗಿಯಾಗಬಹುದು. ಸಂಬಂಧಿಕರೊಬ್ಬರ ಸಲುವಾಗಿ ನೀವು ಖರ್ಚು ಮಾಡಬೇಕಾಗಬಹುದು. ಮಕ್ಕಳ ಭವಿಷ್ಯ ಕುರಿತಾದ ಚಿಂತೆ ಕಾಡಬಹುದು. ಇದರಿಂದ ನಿಮ್ಮ ಮನೆಯಲ್ಲಿ ದೊಡ್ಡ ಕಲಹಕ್ಕೂ ಕಾರಣವಾಗಬಹುದು.

May-21-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ವ್ಯಾಪಾರ ಮಾಡುವ ಜನರಿಗೆ ಕೆಲವು ದೊಡ್ಡ ಜನರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನೀವು ವ್ಯಾಪಾರದಲ್ಲಿ ದೊಡ್ಡ ವ್ಯವಹಾರಕ್ಕೆ ಮುಂದಾಗುವ ಆಲೋಚನೆಯಲ್ಲಿದ್ದರೆ ಸಣ್ಣ ಪುಟ್ಟ ಅಡಚಣೆ ಎದುರಾಗಬಹುದು. ಪೋಷಕರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಬಹುದು.

ಕರ್ಕ ರಾಶಿ

ಇಂದು ನಿಮಗೆ ಮಿಶ್ರ ಫಲಿತಾಂಶಗಳ ದಿನವಾಗಲಿದೆ. ಇಂದಿನ ದಿನದ ಆರಂಭ ಸ್ವಲ್ಪ ದುರ್ಬಲವಾಗಿರುತ್ತದೆ. ಈ ದಿನ ಕೆಲಸ ಕಾರ್ಯಗಳನ್ನು ಯೋಜನೆಯಂತೆಯೇ ಪೂರ್ಣಗೊಳಿಸುವುದು ಒಳ್ಳೆಯದು. ನಿಮ್ಮ ಮನೆಗೆ ಅತಿಥಿಯ ಆಗಮನದಿಂದಾಗಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಕೆಲಸದ ವಿಚಾರವಾಗಿ ನೀವು ದೂರ ಪ್ರಯಾಣ ಮಾಡಬೇಕಾಗಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಗಮನವಿಡಿ.

ಸಿಂಹ ರಾಶಿ

ಇಂದು ನಿಮ್ಮ ನಾಯಕತ್ವದ ಕೌಶಲ್ಯಗಳು ಹೆಚ್ಚಾಗುತ್ತವೆ. ಮಕ್ಕಳ ಕೆಲಸದ ವಿಚಾರವಾಗಿ ನಿಮಗೆ ಚಿಂತೆ ಕಾಡಬಹುದು. ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. ನೀವು ಯಾರಿಂದಾದರು ಹಣ ಪಡೆದಿದ್ದರೆ ಅಥವಾ ಪಡೆಯಲು ಮುಂದಾಗುವುದಾದರೆ ಮಧ್ಯಸ್ಥಿಕೆಯಲ್ಲಿ ಮಾಡುವುದು ಉತ್ತಮ. ವಿದ್ಯಾರ್ಥಿಗಳು ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆಸ್ತಿ ಖರೀದಿಯಲ್ಲಿ ನಿಮಗೆ ಶುಭವಾಗಲಿದೆ. ಅಪೇಕ್ಷಿತ ಕೆಲಸಗಳಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಆರೋಗ್ಯದ ವಿಚಾರವಾಗಿ ನಿಮಗೆ ಸವಾಲುಗಳು ಇರಬಹುದು.

ಕನ್ಯಾ ರಾಶಿ

ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಿರುತ್ತದೆ. ಸಣ್ಣ ವಿಷಯಗಳಲ್ಲಿ ಸವಾಲುಗಳು ಎದುರಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಅಸಡ್ಡೆ ತೋರಬಾರದು. ಕುಟುಂಬದಲ್ಲಿನ ಸಮಸ್ಯೆಗಳು ನಿಮಗೆ ಒತ್ತಡ ತರಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಒಂದು ಹೆಜ್ಜೆ ಮುಂದಿಡಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ನಿಮ್ಮ ಕಾರ್ಯತಂತ್ರಗಳನ್ನು ಮರುಪರಿಶೀಲಿಸುವುದು ಉತ್ತಮ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ನಿಮ್ಮ ಮನೆಯ ವಸ್ತುವೊಂದು ದುರಸ್ಥಿಯಾಗಬಹುದು.

ತುಲಾ ರಾಶಿ

ಇಂದು ನಿಮಗೆ ಮಿಶ್ರ ಫಲಿತಾಂಶಗಳ ದಿನವಾಗಲಿದೆ. ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದರೆ ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಿಗಳು ಈ ದಿನ ದೊಡ್ಡ ಹೂಡಿಕೆ ಮಾಡುತ್ತೀರಿ. ಮುಂದೆ ಅದು ಲಾಭ ತರಬಹುದು. ಕುಟುಂಬಸ್ಥರು ಹಣಕಾಸು ವಿಚಾರವಾಗಿ ನಿಮಗೆ ಒತ್ತಡ ತರಬಹುದು. ಯಾವುದೇ ಕಾರಣದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಪೂರ್ಣ ಮಾಡಿ. ಹೊಸ ಸ್ನೇಹಿತರನ್ನು ನೀವು ಭೇಟಿಯಾಗಬಹುದು. ಇಂದು ಆತುರದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

ವೃಶ್ಚಿಕ ರಾಶಿ

ಇಂದು ನಿಮಗೆ ಸವಾಲಿನ ದಿನವಾಗಿರುತ್ತದೆ. ನೀವು ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಅನಗತ್ಯವಾಗಿ ಕೋಪಗೊಳ್ಳಬೇಡಿ, ಹಾಗೆ ತಾಳ್ಮೆ ಕಳೆದುಕೊಳ್ಳಬೇಡಿ. ಸ್ನೇಹಿತರೊಬ್ಬರಿಗೆ ನೀವು ಹಣಕಾಸು ಸಹಾಯ ಮಾಡಬಹುದು. ದೀರ್ಘಕಾಲದಿಂದ ನೀವು ಮಾಡಬೇಕು ಅಂದುಕೊಂಡಿದ್ದ ಕೆಲಸವನ್ನು ಇಂದು ಮಾಡಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ತಲೆನೋವು, ಆಯಾಸ ಇತ್ಯಾದಿ ಸಮಸ್ಯೆಗಳಿಗೆ ನೀವು ಒಳಗಾಗಬಹುದು. ಆದ್ರೆ ಕೆಲ ಸಮಯದಲ್ಲಿ ನಿವಾರಣೆಯೂ ಆಗಲಿದೆ.

ಧನು ರಾಶಿ

ಇಂದು ನೀವು ಯಾವುದಾದರು ವಿಶೇಷ ಕೆಲಸಕ್ಕೆ ಮುಂದಾದರೆ ಅದರಲ್ಲಿ ಯಶಸ್ಸು ಪಡೆಯುತ್ತೀರಿ. ನೀವು ದೂರದ ಪ್ರಯಾಣಕ್ಕೆ ಹೋಗಲು ಯೋಜಿಸಬಹುದು. ಕೆಲಸದ ಸ್ಥಳದಲ್ಲಿ ಕೆಲವು ಹೊಸ ಅನುಭವಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತೀರಿ. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ವಿದ್ಯಾರ್ಥಿಗಳು ಬಹಳ ದಿನದಿಂದ ಅನುಭವಿಸುತ್ತಿದ್ದ ಒತ್ತಡ ನಿವಾರಣೆಯಾಗಲಿದೆ.

ಮಕರ ರಾಶಿ

ಇಂದು ನಿಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸಬೇಕಾದ ದಿನವಾಗಿರುತ್ತದೆ. ಅನಗತ್ಯ ವಿಚಾರವಾಗಿ ಇಲ್ಲವೆ ಅಗತ್ಯವಿಲ್ಲದ ವಸ್ತುಗಳ ಮೇಲೆ ಖರ್ಚು ಮಾಡಬೇಡಿ.
ನಿಮ್ಮ ಬಾಕಿ ಇರುವ ಯಾವುದೇ ಕೆಲಸವು ಪೂರ್ಣಗೊಳ್ಳುತ್ತದೆ. ನಿಮ್ಮ ಅಗತ್ಯ ಕೆಲಸವೊಂದರ ಸಂಬಂಧ ಸಾಲ ಪಡೆಯಲು ಮುಂದಾಗಬಹುದು. ಮಕ್ಕಳ ವಿವಾಹ ಸಂಬಂಧವಾಗಿ ಶುಭ ಸುದ್ದಿ ಕೇಳುವಿರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಹಿಂದೆ ನೀವು ಹೂಡಿಕೆ ಮಾಡಿದ್ದ ಹಣವನ್ನು ಅಗತ್ಯ ವಿಚಾರವಾಗಿ ಬಳಸಹುದು. ಬೇರೆಯವರ ಸಹಾಯಕ್ಕಾಗಿ ನೀವು ಸಾಲ ಮಾಡಬಹುದು.

ಕುಂಭ ರಾಶಿ

ಇಂದು ನಿಮಗೆ ಮಿಶ್ರ ಫಲಿತಾಂಶಗಳ ನೀಡುವ ದಿನವಾಗಲಿದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ನಿಮಗೆ ಕೆಲವು ಹೊಸ ವಿಚಾರಗಳು ಸಿಗುತ್ತವೆ. ಕಣ್ಣಿಗೆ ಇಲ್ಲವೆ ಯಾವುದೇ ಪಂಚೇಂದ್ರಿಯ ಸಂಬಂಧಿ ಸಮಸ್ಯೆಗೆ ತುತ್ತಾಗಿದ್ದರೆ ಸೂಕ್ತ ಚಿಕಿತ್ಸೆಗೆ ಒಳಪಡುವುದು ಉತ್ತಮ. ಹಣದ ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಇಂದು ಹಠಾತ್ ಹಣವನ್ನು ಪಡೆಯಬಹುದು. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಬುದ್ಧಿವಂತಿಕೆಯಿಂದ ತೆಗೆದುಕೊಂಡರೆ. ಕೆಲಸದ ಬಗ್ಗೆ ಹೇಳುವುದಾದರೆ ಸರ್ಕಾರಿ ಕೆಲಸ ಮಾಡುವ ಜನರಿಗೆ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ.

ಮೀನ ರಾಶಿ

ಇಂದು ನಿಮ್ಮ ಅತ್ಯಂತ ದೊಡ್ಡ ಲಾಭದಾಯಕ ದಿನವಾಗಿ ನೋಡಬಹುದು. ಉದ್ಯೋಗ ಹುಡುಕುತ್ತಿರುವ ಜನರಿಗೆ ಇಂದು ಒಳ್ಳೆಯ ಸುದ್ದಿ ಕೇಳುವಿರಿ. ನೀವು ಅಪರಿಚಿತ ಜನರಿಂದ ಅಂತರ ಕಾಯ್ದುಕೊಳ್ಳಬೇಕು. ವ್ಯಾಪಾರಿಗಳು ತಮ್ಮ ವ್ಯವಹಾರದ ಕಡೆಗೆ ಗಮನಹರಿಸೇಕು. ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿರಲಿದೆ. ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯ ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಇದ್ದರೂ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ಆಪ್ತರೊಂದಿಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-21-2025-daily-horoscope-prediction-for-12-zodiac-signs-in-kannada

Here is May 21 daily horoscope prediction for 12 zodiac signs read on...
Story first published: Wednesday, May 21, 2025, 6:41 [IST]
X
Desktop Bottom Promotion