Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2025ರ ಮೇ ಮಾಸ ಭವಿಷ್ಯ: ಯಾವೆಲ್ಲಾ ರಾಶಿಯವರಿಗೆ ಈ ತಿಂಗಳು ಶುಭಕರವಾಗಿದೆ ನೋಡಿ!
ಮೇ ತಿಂಗಳ ನಿಮ್ಮ ಮಾಸಿಕ ರಾಶಿಫಲ
ಮೇಷ ರಾಶಿ
ಮೇ ತಿಂಗಳು ಧನಾತ್ಮಕ ವಿಚಾರಗಳಿಂದ ತುಂಬಿರುತ್ತೀರಿ. ಹೊಸ ಅವಕಾಶಗಳು, ಆರ್ಥಿಕ ಅಭಿವೃದ್ಧಿಯಂತಹ ಕೆಲಸಕ್ಕೆ ಮುಂದಾಗಲಿದ್ದೀರಿ. ಕೌಟುಂಬಿಕ ಜೀವನವು ಸಂತೋಷದಿಂದ ಕಳೆಯಬಹುದು. ಈ ತಿಂಗಳಲ್ಲಿ ನೀವು ಇಡೀ ಕುಟುಂಬದ ಜೊತೆಗೆ ಪ್ರವಾಸ ತೆರಳಲು ಮುಂದಾಗಬಹುದು. ಗುರು ಮತ್ತು ಶುಕ್ರ ನಿಮ್ಮ ಜೀವನದ ಮೇಲೆ ಉತ್ತಮ ಪರಿಣಾಮ ಬೀರಬಹುದು. ಹೊಸ ಉದ್ಯೋಗಕ್ಕೆ ಹಲವು ಅವಕಾಶಗಳು ಇರಬಹುದು. ಅನಗತ್ಯ ಖರ್ಚುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ಆರ್ಥಿಕವಾಗಿ ಮೇ ತಿಂಗಳ ಮೊದಲಾರ್ಧವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಅಪೇಕ್ಷಿತ ಲಾಭವನ್ನು ಪಡೆಯುತ್ತೀರಿ ಆದರೆ ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರಲಿದೆ.
ವೃಷಭ ರಾಶಿ
ಈ ತಿಂಗಳು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಾಗರೂಕರಾಗಿರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಈ ತಿಂಗಳ ಅಂತ್ಯದ ವೇಳೆಗೆ ನೀವು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಬಹಳ ದಿನಗಳಿಂದ ಭೂಮಿ-ಕಟ್ಟಡ ಅಥವಾ ವಾಹನ ಖರೀದಿಸಲು ಯೋಚಿಸುತ್ತಿದ್ದರೆ, ನಿಮ್ಮ ಈ ಕನಸು ಈ ತಿಂಗಳು ನನಸಾಗಬಹುದು. ಉದ್ಯೋಗದಲ್ಲಿರುವವರಿಗೆ ಅನೇಕ ಉತ್ತಮ ಅವಕಾಶಗಳು ಸಿಗಬಹುದು. ಇದರೊಂದಿಗೆ ವ್ಯಾಪಾರಿಗಳು ಸಹ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯ ಸಾಮಾನ್ಯವಾಗಲಿದೆ. ಉದ್ಯೋಗದ ವಿಚಾರವಾಗಿ ಅಡೆತಡೆಗಳು ಎದುರಾಗಬಹುದು. ಆದರೆ ಅದನ್ನು ನಿಭಾಯಿಸಲು ನೀವು ಶಸಕ್ತರಾಗಿದ್ದೀರಿ.

ಮಿಥುನ ರಾಶಿ
ಮೇ ತಿಂಗಳಲ್ಲಿ ನಿಮಗೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಉದ್ಯೋಗ ಬದಲಾಯಿಸುವ ನಿಮ್ಮ ಪ್ರಯತ್ನವು ಫಲ ನೀಡಬಹುದು. ಈ ಸಮಯದಲ್ಲಿ ನೀವು ಬಹಳಷ್ಟು ಶ್ರಮ ಹಾಕಬೇಕಾಗುತ್ತದೆ. ಹಿಂದೆ ಮಾಡಿದ ಹೂಡಿಕೆಯಿಂದ ನೀವು ಬಯಸಿದ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿನ ಪ್ರಗತಿಯಿಂದಾಗಿ ಶಕ್ತಿ ಮತ್ತು ಉತ್ಸಾಹ ಹೆಚ್ಚಿಸಿಕೊಳ್ಳುವ ಅವಕಾಶ ಪಡೆಯುತ್ತೀರಿ. ಪಡೆದ ಹಣ ಮರಳಿ ನೀಡಲು ನೀವು ಮುಂದಾಗಬಹುದು. ವ್ಯಾಪಾರಿಗಳು ಹೊಸ ಆದಾಯ ಪಡೆಯಲು ಶ್ರಮ ಹಾಕುತ್ತೀರಿ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಇರಬಹುದು.
ಕರ್ಕ ರಾಶಿ
ತಿಂಗಳ ಆರಂಭವು ನಿಮಗೆ ಉತ್ತಮ ಲಾಭ ತರಲಿದೆ. ಆದ್ರೆ ತಿಂಗಳ ಮಧ್ಯದಿಂದ ನಿಮಗೆ ಒಂದಿಷ್ಟು ಸವಾಲುಗಳು ಎದುರಾಗಬಹುದು. ಬಿಡುವಿಲ್ಲದ ದಿನಗಳು ನಿಮ್ಮದಾಗುತ್ತವೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಒಳ್ಳೆಯ ಅವಕಾಶ ಪಡೆಯುತ್ತೀರಿ. ಕಬ್ಬಿಣ, ಯಂತ್ರೋಪಕರಣ ವ್ಯಾಪಾರಿಗಳು ಈ ಸಮಯದಲ್ಲಿ ಬಹಳ ಲಾಭ ಮಾಡಬಹುದು. ವಿದೇಶಿ ವ್ಯಾಪಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯಬಹುದು. ಶನಿಯ ಕೃಪೆಯಿಂದ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಪ್ರೇಮ ವ್ಯವಹಾರಗಳು ಈ ಸಮಯದಲ್ಲಿ ಉತ್ತಮವಾಗಲಿದೆ. ಸೂರ್ಯನ ಲಾಭದಾಯಕ ಚಲನೆಯು ನಿಮಗೆ ಅತ್ಯುತ್ತಮ ದಿನಗಳ ಮುಂದೆ ತರಲಿವೆ.
ಸಿಂಹ ರಾಶಿ
ಮೇ ತಿಂಗಳಲ್ಲಿ ಸಿಂಹ ರಾಶಿಯ ಮಂದಿಗೆ ಬಹಳ ಶುಭಕರವಾದ ದಿನಗಳಿವೆ. ನಿಮ್ಮ ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ ಸೇರಿದಂತೆ ಹಲವು ರೀತಿಯ ಲಾಭ ನೋಡುತ್ತೀರಿ. ತಿಂಗಳ ಆರಂಭದಲ್ಲಿ ಸ್ನೇಹಿತ ಅಥವಾ ಪ್ರಭಾವಿ ವ್ಯಕ್ತಿಯ ಸಹಾಯದಿಂದ ನಿಮ್ಮ ವೃತ್ತಿ-ವ್ಯಾಪಾರದಲ್ಲಿನ ಸಮಸ್ಯೆ ದೂರಾಗಬಹುದು. ತಿಂಗಳ ಮಧ್ಯದಲ್ಲಿ ನೀವು ಇದ್ದಕ್ಕಿದ್ದಂತೆ ದೂರದ ಪ್ರಯಾಣಕ್ಕೆ ಹೋಗಬೇಕಾಗಬಹುದು. ಆಹಾರ, ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಆಸ್ತಿ ಸಂಬಂಧ, ನ್ಯಾಯಾಲಯ ಸಂಬಂಧಿ ವಿಷಯಗಳಲ್ಲಿ ಯಶಸ್ಸು ನೋಡಬಹುದು.
ಕನ್ಯಾ ರಾಶಿ
ಕನ್ಯಾರಾಶಿಯವರು ಈ ಮೇ ತಿಂಗಳಲ್ಲಿ ಕುಟುಂಬಸ್ಥರ ಜೊತೆಗೆ ಪ್ರವಾಸಕ್ಕೆ ಮುಂದಾಗಬಹುದು, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಹಂತ ತಲುಪಲಿದೆ. ಹಾಗೆ ಆರೋಗ್ಯದಲ್ಲಿ ಏರುಪೇರಿನ ಸಾಧ್ಯತೆ ಇದೆ. ನಿಮ್ಮ ಹೂಡಿಕೆ ಹಾಗೂ ಉಳಿತಾಯಗಳು ಹೆಚ್ಚು ಲಾಭವಾಗಿ ಪರಿಣಮಿಸದೆ ಇರಬಹುದು. ಉದ್ಯೋಗಿಗಳಿಗೆ ಈ ಸಮಯವು ಮಿಶ್ರಫಲ ನೀಡಲಿದೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ಯಾವುದೇ ಅಡ್ಡಿ ಇರುವುದಿಲ್ಲ ಆದ್ರೆ ನಿಮ್ಮಲ್ಲಿ ಒತ್ತಡ ಹೆಚ್ಚಾಗುವ ಹಲವು ಪ್ರಕ್ರಿಯೆಗಳು ನಡೆಯಲಿವೆ. ದೂರ ಪ್ರಯಾಣದಲ್ಲಿ ಹಲವು ದಿನಗಳ ಕಳೆಯುತ್ತೀರಿ. ಹಾಗೆ ಕೆಲಸದ ಸವಾಲಯಗಳನ್ನು ಎದುರಿಸುವಲ್ಲಿ ಈ ತಿಂಗಳು ಹಿಂದೇಟು ಹಾಕಬೇಡಿ.
ತುಲಾ ರಾಶಿ
ಮೇ ತಿಂಗಳು ನಿಮಗೆ ಸಮತೋಲನದಿಂದ ತುಂಬಿರಲಿದೆ. ಸಂಬಂಧಗಳಲ್ಲಿ ಮಾಧುರ್ಯ ಇರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮನೆಗಾಗಿ ನೀವು ದುಬಾರಿ ವಸ್ತುವೊಂದನ್ನು ಖರೀದಿಸಬಹುದು. ಹಾಗೆ ವಾಹನ ಸಂಬಂಧ ಖರ್ಚು ಹೆಚ್ಚಾಗಲಿದೆ. ಬಹಳ ಸಮಯದಿಂದ ನೀವು ಬಯಸಿದ್ದ ಕನಸೊಂದು ಈಡೇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡಿದ ದಿನಗಳು ಉತ್ತಮವಾಗಿರಲಿದೆ. ಪ್ರೇಮ ಸಂಬಂಧಗಳು ಮುನಿಸುಗಳಿಗೆ ಕಾರಣವಾಗಬಹುದು. ನೀವು ಅಂದುಕೊಂಡ ಕೆಲಸದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಬಹುದು. ವಿವಾಹಿತರಲ್ಲಿ ಒತ್ತಡ ಹೆಚ್ಚಳದ ನಿರೀಕ್ಷೆ ಇದೆ.
ವೃಶ್ಚಿಕ ರಾಶಿ
ಮೇ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಬಹಳಷ್ಟು ಲಾಭಗಳ ನೋಡಬಹುದು. ನೀವು ಸರ್ಕಾರಿ ಕೆಲಸ ಮಾಡುತ್ತಿದ್ದರೆ ಹಾಗೆ ವರ್ಗಾವಣೆ, ಬಡ್ತಿ ಅಂತಹ ಕೆಲಸದಲ್ಲಿ ಯಶಸ್ಸು ನೋಡಬಹುದು. ಹಾಗೆ ಖಾಸಗಿ ಕಂಪನಿಯ ಕೆಲಗಾರರದಲ್ಲಿ ಒತ್ತಡ ಹಾಗೆ ಬಹಳ ಶ್ರಮ ಹಾಕಿ ಕೆಲಸ ಮಾಡಬೇಕಾಗಬಹುದು. ನಿಮ್ಮ ಹಲವು ಕೆಲಸಗಳಿಗೆ ಸ್ನೇಹಿತರಿಂದ ಆಪ್ತರಿಂದ ಸಹಾಯ ಪಡೆಯಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ಸಮಯವು ಹೆಚ್ಚು ಮಂಗಳಕರ ಮತ್ತು ಲಾಭವನ್ನು ತರಲಿದೆ. ಹಣ ಗಳಿಸಲು ಹಲವು ಅವಕಾಶಗಳು ಇರಬಹುದು. ನೀವು ಕೆಲವು ಶುಭ ಕಾರ್ಯಗಳಲ್ಲಿ ಭಾಗವಹಿಸಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ನಿವಾರಣೆ ಆಗಲಿದೆ.
ಧನು ರಾಶಿ
ಮೇ ತಿಂಗಳಲ್ಲಿ ಧನು ರಾಶಿಯವರು ಹೆಚ್ಚು ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಜೀವನದ ಪ್ರಮುಖ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕಾಗಬಹುದು, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ನೀವು ಚಿಂತೆ ಪಡುತ್ತೀರಿ. ಹಾಗೆ ಅವಿವಾಹಿತರು ಈ ಸಮಯಲ್ಲಿ ಬಹಳ ಒತ್ತಡದಲ್ಲಿರುತ್ತಾರೆ. ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ಮಾಡಿ. ಕುಟುಂಬ ಸದಸ್ಯರಲ್ಲಿ ಏನಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯ ಅಥವಾ ತಪ್ಪು ತಿಳುವಳಿಕೆ ಪರಿಹಾರವಾಗಬಹುದು. ಗೃಹಿಣಿಯರು ತಮ್ಮ ಆರೋಗ್ಯದ ಕಡೆಗೆ ಈ ತಿಂಗಳು ಹೆಚ್ಚು ಗಮನ ಹರಿಸಿ. ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯುವ ಅವಕಾಶ ಪಡೆಯಲಿದ್ದೀರಿ.
ಮಕರ ರಾಶಿ
ಮೇ ತಿಂಗಳಲ್ಲಿ ಮಕರ ರಾಶಿಯವರ ಬಹುಕಾಲದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ವೃತ್ತಿಗೆ ಸಂಬಂಧಿಸದ ಲಾಭವೊಂದನ್ನು ನೀವು ಪಡೆಯಬಹುದು. ಆರ್ಥಿಕ ಸಮಸ್ಯೆಗೆ ಸಂಬಂಧಿಸಿದಂತೆ ಬಹಳ ದೊಡ್ಡ ವಿಚಾರದಲ್ಲಿ ಲಾಭ ಪಡೆಯಲಿದ್ದೀರಿ. ಆದ್ರೆ ಖರ್ಚುಗಳು ಹೆಚ್ಚಾಗಬಹುದು. ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಕೂಡ ಪರಿಹಾರಕ್ಕೆ ನೆರವಾಗಲಿದೆ. ಬ್ಯಾಂಕಿಂಗ್ ಕುರಿತಾದ ಒಂದು ಸಮಸ್ಯೆ ಬಗೆಹರಿಯಲಿದೆ. ನಿಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವಿವಾಹಿತರಿಗೆ ಇದು ಶುಭಕಾಲವಾಗಲಿದೆ. ಉಳಿತಾಯಗಳಿಂದ ನಿಮ್ಮ ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ಈ ಮೇ ತಿಂಗಳಲ್ಲಿ ಬಹಳ ಲೆಕ್ಕಾಚಾರದಿಂದ ಕೆಲಸ ಮಾಡಬೇಕು. ಹಾಗೆ ದಿನಗಳ ಕಳೆಯಬೇಕು. ತಂತ್ರಜ್ಞಾನ ಅಥವಾ ಸೃಜನಶೀಲ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗುತ್ತದೆ. ತಿಂಗಳ ಆರಂಭದಲ್ಲಿ ನೀವು ಲಾಭದಾಯಕ ದಿನಗಳ ನೋಡಲಿದ್ದೀರಿ. ನಿಮ್ಮ ಆದಾಯ ಹೆಚ್ಚಿಸುವ ಹಲವು ಸಣ್ಣ ಪುಟ್ಟ ಕೆಲಸಗಳ ಮಾಡಲಿದ್ದೀರಿ. ಉದ್ಯೋಗದಲ್ಲಿನ ಬದಲಾವಣೆಗೆ ಇದು ಸಕಾಲ. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚುವುದು. ಪ್ರೀತಿಯ ಸಂಬಂಧವನ್ನು ಬಲಪಡಿಸಲು, ಯಾವುದೇ ರೀತಿಯ ತಪ್ಪುಗ್ರಹಿಕೆಯನ್ನು ತಪ್ಪಿಸಿ.
ಮೀನ ರಾಶಿ
ಮೇ ತಿಂಗಳಲ್ಲಿ ಮೀನ ರಾಶಿಯ ಮಂದಿಗೆ ಬಹಳ ಅನುಕೂಲಕರ ದಿನಗಳಿವೆ. ನಿಮ್ಮಲ್ಲಿ ಆಧ್ಯಾತ್ಮಿಕ ಒಲವು ಹೆಚ್ಚಾಗುವ ಹಲವು ಕೆಲಸಗಳ ಮಾಡುವಿರಿ. ನಿಮ್ಮ ಹಣಕಾಸು ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ಲಾಭದಾಯಕ ದಿನಗಳಿವೆ. ಆದರೆ ನಿಮ್ಮ ಅನಗತ್ಯ ವಸ್ತುಗಳ ಮೇಲಿನ ಖರ್ಚುಗಳನ್ನು ಕಡಿಮೆ ಮಾಡುವುದು ಉತ್ತಮ. ಉಳಿತಾಯ ಮಾಡಿದ ಹಣದಿಂದ ಐಷಾರಾಮಿ ವಸ್ತುವೊಂದನ್ನು ನೀವು ಮನೆಗೆ ತರಬಹುದು. ದೈನಂದಿನ ಕೆಲಸಗಳಲ್ಲಿ ಇದ್ದ ಅಡೆತಡೆ ನಿವಾರಣೆಯಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











