ಮೇ ತಿಂಗಳ ಭವಿಷ್ಯ: ಈ ಮಾಸ 12 ರಾಶಿಗಳಿಗೆ ಹೇಗಿರಲಿದೆ? ಯಾರಿಗೆ ವೃತ್ತಿ ಬದುಕಿನಲ್ಲಿ ಬಡ್ತಿ ಇದೆ

ವೈದಿಕ ಜ್ಯೋತಿಷ್ಯದ ಪ್ರಕಾರ ಮೇ ತಿಂಗಳು 12 ರಾಶಿಗಳಿಗೆ ಹೇಗಿರಲಿದೆ ಎಂಬ ಭವಿಷ್ಯ ನೋಡೋಣ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ತಿಂಗಳು ನಿಮಗೆ ತುಂಬಾ ಶುಭವಾಗಿರಲಿದೆ. ಈ ಮೇ ತಿಂಗಳು ಸಂತೋಷವಾಗಿರಲಿದೆ. ಕೆಲವೊಂದು ಸಮಸ್ಯೆಗಳು ಬರಬಹುದು, ಆದರೆ ಅವೆಲ್ಲಾ ಬಾಧಿಸುವಂಥ ಸಮಸ್ಯೆಗಳಲ್ಲ, ಆದ್ದರಿಂದ ಚಿಂತೆಯಿಲ್ಲ.

May month horoscope

ವೃತ್ತಿ ಬದುಕಿನ ದೃಷ್ಟಿಯಿಂದ ಈ ತಿಂಗಳು ನಿಮಗೆ ಉತ್ತಮವಾಗಿರಲಿದೆ. ವೃತ್ತಿ ಜೀವನದಲ್ಲಿ ಸಂಬಳ ಹೆಚ್ಚಾಗುವುದು, ಬಡ್ತಿ ಇರಲಿದೆ. ಇನ್ನು ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಶೀಘ್ರದಲ್ಲಿಯೇ ಕೆಲಸ ದೊರೆಯಲಿದೆ. ವ್ಯಾಪಾರಿಗಳಿಗೆ ನಿಮ್ಮ ವೃತ್ತಿಜೀವನದಲ್ಲಿ ಅಪೇಕ್ಷಿತ ಲಾಭವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ, ಭೂಮಿ, ಕಟ್ಟಡ, ವಾಹನ ಇತ್ಯಾದಿಗಳ ಬಗ್ಗೆ ನಿಮ್ಮ ಇಚ್ಛೆಗಳನ್ನು ಪೂರೈಸಬಹುದು.

ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ಚೆನ್ನಾಗಿರಲಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ತಿಂಗಳು ಮಿಶ್ರಫಲ. ಮೊದಲಾರ್ಧ ಅಷ್ಟೊಂದು ಅನುಕೂಲಕರವಿರಲ್ಲ, ಆದರೆ ದ್ವಿತೀಯಾರ್ಧ ಚೆನ್ನಾಗಿರಲಿದೆ. ಉದದ್ಯೋಗಿಗಳಿಗೆ ತಮ್ಮ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು. ವ್ಯಾಪಾರಿಗಳಿಗೆ ಬಯಸಿದ ಲಾಭ ಗಳಿಸಲು ಕಷ್ಟವಾಗುವುದು. ಉದ್ಯೋಗಿಗಳಾಗಲಿ, ವ್ಯಾಪಾರಿಗಳಾಗಲಿ ಈ ಮಾಸ ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಹೋಗದಿರುವುದು ಒಳ್ಳೆಯದು ಎಂಬ ಸಲಹೆ ನೀಡಲಾಗುವುದು.

ಪ್ರೇಮಿಗಳಿಗೆ, ವಿವಾಹಿತರಿಗೆ ಈ ತಿಂಗಳು ಚೆನ್ನಾಗಿರಲಿದೆ. ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಆರ್ಥಿಕ ದೃಷ್ಟಿಯಿಂದ ಕೆಲವೊಂದು ಸಮಸ್ಯೆ ಎದುರಿಸಬಹುದು. ಆರೋಗ್ಯ ಸರಾಸರಿಯಾಗಿರಲಿದೆ, ನಕರಾತ್ಮಕ ಆಲೋಚನೆಯಿಂದ ದೂರವಿರಿ.

ಮಿಥುನ ರಾಶಿ

ಮೇ ತಿಂಗಳು ಮಿಥುನ ರಾಶಿಯವರಿಗೆ ಅನುಕೂಲಕರವಾಗಿದೆ, ವೃತ್ತಿ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದು. ನಿಮಗೆ ಸಂಬಳ ಹೆಚ್ಚಾಗಲಿದೆ. ಇನ್ನು ಸ್ಪರ್ಧಾತ್ಮ ಫರೀಕ್ಷೆ ನೀಡಿದ್ದರೆ ಒಳ್ಳೆಯ ಫಲಿತಾಂಶ ದೊರೆಯಲಿದೆ. ವ್ಯಾಪಾರಿಗಳಿಗೆ ಈ ಸಮಯ ಲಾಭದಾಯಕವಾಗಿರಲಿದೆ.

ಇನ್ನು ನೀವು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಕೆಲಸಗಳು ಈ ತಿಂಗಳಿನಲ್ಲಿ ನಡೆಯಬಹುದು. ನೀವು ವಿದೇಶದಲ್ಲಿ ವೃತ್ತಿ ಅಥವಾ ವ್ಯಾಪಾರಕ್ಕಾಗಿ ಪ್ರಯತ್ನಿಸುತ್ತಿದ್ದರೆ ಮೇ ಅಂತ್ಯದ ವೇಳೆಗೆ ನೀವು ಬಯಸಿದ ಯಶಸ್ಸನ್ನು ಪಡೆಯಬಹುದು

ಕೆಲವೊಂದು ಆರೋಗ್ಯ ಸಮಸ್ಯೆಗಳಿರಬಹುದು, ಆದ್ದರಿಂದ ಆರೋಗ್ಯದ ಬಗ್ಗೆ ಜಾಗ್ರತೆ. ಪ್ರೇಮಿಗಳ ಬಾಂಧವ್ಯ ಚೆನ್ನಾಗಿರಲಿದೆ, ವಿವಾಹಿತರ ಕುಟುಂಬ ಜೀವನ ಚೆನ್ನಾಗಿರಲಿದೆ.

ಕರ್ಕ ರಾಶಿ

ಮೇ ತಿಂಗಳು ಕರ್ಕ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಉದ್ಯೋಗಿಗಳು ಕೆಲಸದಲ್ಲಿ ಪ್ರಗತಿಯನ್ನು ಪಡೆಯಬಹುದು. ನೀವು ಬೇರೆ ಕಡೆ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯ ಒಳ್ಳೆಯದಿದೆ.

ಆದರೆ ನೀವು ಹೆಚ್ಚು ಲಾಭ ಗಳಿಸುವ ಆಸೆಯಿಂದ ಹೂಡಿಕೆ ಮಾಡಲು ಹೋಗದಿರುವುದು ಒಳ್ಳೆಯದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಮೇ ತಿಂಗಳಲ್ಲಿ ನಿಮ್ಮ ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ಈ ತಿಂಗಳ ಕೊನೆಯಲ್ಲಿ ಕೆಲ ಚಿಂತೆಗಳು ಕಾಡಬಹುದು, ನೀವು ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಬೇಕು.

ಸಿಂಹ ರಾಶಿ

ಮೇ ತಿಂಗಳು ನಿಮಗೆ ಉತ್ತಮವಾಗಿರಲಿದೆ. ವೃತ್ತಿ ಬದುಕಿನಲ್ಲಿ ನೀವು ನಿರೀಕ್ಷೆಗೆ ತಕ್ಕಂತೆ ಫಲ ಪಡೆಯುತ್ತೀರಿ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಕೆಲಸ ಸಿಗಲಿದೆ. ಕೆಲಸ ಬದಲಾವಣೆಗೂ ಈ ಸಮಯ ಒಳ್ಳೆಯದಿದೆ. ವ್ಯಾಪಾರಿಗಳಿಗೆ ಒಳ್ಳೆಯದಿದೆ, ರಾಜಕಾರಣಿಗಳ ಹೆಸರು ಮತ್ತಷ್ಟು ಹೆಚ್ಚಾಗಲಿದೆ.

ವೈವಾಹಿಕ ಜೀವನದಲ್ಲಿ ಬಾಂಧವ್ಯ ಇನ್ನೂ ಗಟ್ಟಿಯಾಗಲಿದೆ. ಕುಟುಂಬದಲ್ಲಿ ಒಗ್ಗಟ್ಟು, ಪ್ರೀತಿ ಇರಲಿದೆ. ಆದರೆ ನೀವು ಆರೋಗ್ಯದ ಕಡೆಗೆ ಮಾತ್ರ ಗಮನಹರಿಸಬೇಕು, ಆರೋಗ್ಯಕ್ಕಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಒಳ್ಳೆಯದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ಮಾಸದಲ್ಲಿ ಸ್ವಲ್ಪ ಜಾಗ್ರತೆವಹಿಸುವುದು ಒಳ್ಳೆಯದು. ಕೆಲಸಕ್ಕೆ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯಾಪಾರಿಗಳು ಲಾಭಕ್ಕಾಗಿ ಅಡ್ಡಮಾರ್ಗ ಹಿಡಿಯಬಾರದು.

ಕುಟುಂಬ ಜೀವನ ಚೆನ್ನಾಗಿರಲಿದೆ, ಕಷ್ಟದ ಸಮಯದಲ್ಲಿ ಅವರ ಸಲಹೆ, ಬೆಂಬಲ ಸಿಗಲಿದೆ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ದುಬಾರಿಯಾಗಬಹುದು. ವೃತ್ತಿ ಜೀವನದಲ್ಲಿ ನೀವು ಹೆಚ್ಚಿನ ಪ್ರಯತ್ನ ಹಾಕಿದರೆ ಅದರ ಲಾಭ ಪಡೆಯಲು ಸಾಧ್ಯವಾಗುವುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಮೇ ತಿಂಗಳು ಮಿಶ್ರಫಲ. ವೃತ್ತಿ, ವ್ಯವಹಾರದಲ್ಲಿ ಸವಾಲುಗಳು ಬರಬಹುದು. ಈ ಸಮಯದಲ್ಲಿ ನೀವು ಬಯಸಿದ ವ್ಯಕ್ತಿಯಿಂದ ಸಹಾಯ ಕೂಡ ಸಿಗುವುದಿಲ್ಲ, ಇದರಿಂದ ತೀವ್ರ ನಿರಾಸೆ ಉಂಟಾಗುವುದು. ನಿಮ್ಮ ಕೆಲಸ ಯಾರೂ ಗುರುತಿಸುತ್ತಿಲ್ಲ ಎಂಬ ಬೇಸರ ಕಾಡಬಹುದು.

ವ್ಯಾಪಾರಿಗಳಿಗೆ ದ್ವಿತಿಯಾರ್ಧ ಸಮಯ ಚೆನ್ನಾಗಿದೆ, ಅಡೆತಡೆಗಳು ದೂರಾಗಿ ಆದಾಯ ಹೆಚ್ಚಾಗುತ್ತದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆದರೆ ಸಂಗಾತಿಯ ಆರೋಗ್ಯದ ಕಡೆಗೆ ಗಮನಹರಿಸಬೇಕು.


ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆಯಾಗಲಿದೆ, ಅದರಿಂದ ನಿಮಗೆ ತುಂಬಾನೇ ಒಳಿತಾಗುವುದು. ಹೊಸ ವ್ಯವಹಾರ ಕೈ ಹಿಡಿಯಬಹುದು, ಉದ್ಯೋಗಿಗಳಿಗೆ ಲಾಭವಾಗಲಿದೆ. ಒಟ್ಟಾರೆ ಈ ಮಾಸ ಆರ್ಥಿಕವಾಗಿ ಒಳ್ಳೆಯದಿದೆ. ನೀವು ಭೂಮಿ ಮತ್ತು ಕಟ್ಟಡಗಳ ಖರೀದಿ ಮತ್ತು ಮಾರಾಟದಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ರಾಜಕಾರಣಿಗಳಿಗೆ ಈ ಸಮಯ ಒಳ್ಳೆಯದಿದೆ. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ಅಹಂ ನಿಯಂತ್ರಿಸುವುದು ಒಳ್ಳೆಯದು.

ಧನು ರಾಶಿ

ಆರ್ಥಿಕವಾಗಿ ಈ ತಿಂಗಳು ತುಂಬಾ ಒಳ್ಳೆಯದಿದೆ. ಪಡೆದ ಸಾಲ ಹಿಂತಿರುಗಿಸಲು ಸಾಧ್ಯವಾಗುವುದು. ಉದ್ಯೋಗಿಗಳಿಗೆ ಈ ಸಮಯ ಒಳ್ಳೆಯದಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವ್ಯಾಪಾರಿಗಳಿಗೆ ಏರಳಿತವಿರಬಹುದು, ಆದರೆ ಅರ್ಥಿಕವಾಗಿ ತೊಂದರೆಯಿಲ್ಲ.

ದಾಂಪತ್ಯ ಜೀವನ ಚೆನ್ನಾಗಿರಲಿದೆ, ಪ್ರೇಮಿಗಳಿಗೂ ಈ ಸಮಯ ತುಂಬಾ ಚೆನ್ನಾಗಿರಲಿದೆ, ಇನ್ನು ಈ ಮಾಸ ನೀವು ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ತೆಗೆದುಕೊಂಡರೆ ಒಳ್ಳೆಯದು.

ಮಕರ ರಾಶಿ

ಮಕರ ರಾಶಿಯವರಿಗೆ ಶುಭ. ಈ ತಿಂಗಳು, ನೀವು ನಿಮ್ಮ ಕೆಲಸವನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಾಡಲು ಪ್ರಯತ್ನಿಸಿದರೆ, ನಿಮ್ಮ ಶ್ರಮ ಮತ್ತು ಪ್ರಯತ್ನದ ಸಂಪೂರ್ಣ ಫಲವನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಸಂಬಳ ಹೆಚ್ಚಾಗಲಿದೆ, ವ್ಯಾಪಾರಿಗಳಿಗೂ ಲಾಭ ಗಳಿಸಲು ಸಾಧ್ಯವಾಗುವುದು, ಈ ಸಮಯದಲ್ಲಿ ಹೂಡಿಕೆ ಮಾಡಲು ಕೂಡ ಸಾಧ್ಯವಾಗುವುದು. ಕುಟುಂಬ ಹಾಗೂ ದಾಂಒತ್ಯ ಜೀವನ ಚೆನ್ನಾಗಿರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಮೇ ತಿಂಗಳು ಮಿಶ್ರ ಫಲಿತಾಂಶ, ಕೆಲವೊಂದು ಸವಾಲುಗಳು ಬರಬಹುದು, ನೀವು ತಾಳ್ಮೆಯಿಂದ ಬಗೆಹರಿಸಬೇಕು. ನೀವು ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಖರ್ಚು ಕೂಡ ಹೆಚ್ಚಾಗಲಿದೆ. ಆದರೆ ತಿಂಗಳ ದ್ವಿತೀಯಾರ್ಧ ತೊಂದರೆಯಿಲ್ಲ. ವ್ಯಾಪಾರವನ್ನು ವಿಸ್ತರಿಸುವ ಯೋಜನೆಗಳು ಯಶಸ್ವಿಯಾಗುತ್ತವೆ. ಉದ್ಯೋಗಿಗಳಿಗೂ ಅನುಕೂಲಕರ. ದಾಂಒತ್ಯ ಜೀವನದಲ್ಲಿ ಕೋಪ ನಿತಂತ್ರಿಸಿದರೆ ಸಂಸಾರ ಚೆನ್ನಾಗಿರುತ್ತದೆ.

ಮೀನ ರಾಶಿ

ಮೇ ತಿಂಗಳ ಆರಂಭವು ಮೀನ ರಾಶಿಯವರಿಗೆ ಮಂಗಳಕರವಾಗಿರುತ್ತದೆ.ಈ ಅವಧಿಯಲ್ಲಿ ನಿಮ್ಮೆಲ್ಲಾ ಕೆಲಸ ಯೋಜನೆಯಂತೆಯೇ ಪೂರ್ಣವಾಗಲಿದೆ. ವಿದೇಶಕ್ಕೆ ಹೋಗ ಬಯಸುವವರಿಗೂ ಈ ಸಮಯ ಚೆನ್ನಾಗಿದೆ. ಆದರೆ ಅಪಾಯಕಾರಿ ಹೂಡಿಕೆ ಬಗ್ಗೆ ಜಾಗ್ರತೆ. ಮಕ್ಕಳಿಗೆ ಸಂಬಂಧಿಸಿದ ಚಿಂತೆ ಕಾಡಬಹುದು. ಮಾತನಾಡಿ ನಿಮ್ಮ ದಾಂಪತ್ಯ ಕಲಹ ಪರಿಹರಿಸುವುದು ಒಳ್ಳೆಯದು. ಆರೋಗ್ಯ ಸಮಸ್ಯೆ ಇದ್ದರೆ ಸ್ವಲ್ಪವೂ ನಿರ್ಲಕ್ಷ್ಯ ಬೇಡ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May 2024 Prediction For 12 Zodiac Signs In Kannada

Here are May month horoscope for each zodiac signs,
Story first published: Monday, April 29, 2024, 22:24 [IST]
X
Desktop Bottom Promotion