Dina Bhavishya: ಮೇ 20ರಂದು ನಿಮ್ಮ ರಾಶಿಯಲ್ಲಿ ಏನೆಲ್ಲಾ ಶುಭವಿದೆ?

ವೈದಿಕ ಶಾಸ್ತ್ರದ ಪ್ರಕಾರ ಮೇ 20ರ ರಾಶಿಫಲ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನಿಮಗೆ ಎಲ್ಲಾ ವಿಚಾರದಲ್ಲೂ ಉತ್ತಮ ದಿನವಾಗಿರುತ್ತದೆ. ಉದ್ಯೋಗಸ್ಥರು ತಮ್ಮ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯಬಹುದು. ವೃತ್ತಿ ಸಂಬಂಧಿತ ಸಮಸ್ಯೆಗಳು ಇಂದು ನಿವಾರಣೆಯಾಗಬಹುದು. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಕುಟುಂಬ ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಿಗಳು ಇಂದು ಲಾಭ ಪಡೆಯಬಹುದು. ಮನೆಗೆ ಹೊಸ ವಸ್ತು ಖರೀದಿಯ ಲಾಭವಿದೆ. ನಿಮ್ಮ ಆರೋಗ್ಯದಲ್ಲಿ ಏನಾದರು ಏರುಪೇರು ಇದ್ದರೆ ಅಥವಾ ಆಸ್ಪತ್ರೆಗೆ ತೆರಳುವುದನ್ನು ಮುಂದೂಡುತ್ತಾ ಬಂದಿದ್ದರೆ ಈ ದಿನ ವೈದ್ಯರ ಭೇಟಿಯಾಗುವುದು ಬಹಳ ಉತ್ತಮ.

ವೃಷಭ ರಾಶಿ

ವೃಷಭ ರಾಶಿ ಮಂದಿ ಈ ದಿನದಂದು ಬಹಳ ಜಾಗರೂಕರಾಗಿರಬೇಕು. ಸ್ವಲ್ಪ ಪ್ರಯತ್ನದಿಂದ ನೀವು ಉತ್ತಮ ಉದ್ಯೋಗದ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಪ್ರೀತಿಪಾತ್ರರ ಬೆಂಬಲವು ಈ ಅವಧಿಯಲ್ಲಿ ಸಿಗುವುದು. ನೀವು ಪ್ರಭಾವಿ ಜನರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಳ್ಳುತ್ತೀರಿ, ಇದರಿಂದಾಗಿ ನಿಮ್ಮ ವೃತ್ತಿಪರ ಜೀವನದಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಆದರೆ ಮಾತುಕತೆಯ ಮೂಲಕ ನೀವು ಬಗೆಹರಿಸಿಕೊಳ್ಳುತ್ತೀರಿ. ಕೆಲಸದ ಹಿನ್ನಲೆ ನೀವು ಪ್ರಯಾಣಕ್ಕೆ ಮುಂದಾಗಬಹುದು.

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಈ ದಿನದಂದು ದೊಡ್ಡ ಸವಾಲುಗಳನ್ನು ಎದುರಿಸುತ್ತಾರೆ. ಆದ್ರೆ ಸುಲಭವಾಗಿ ಇವು ಬಗೆಹರಿಯುವ ಮಾರ್ಗವು ನಿಮಗೆ ಹೊಳೆಯಲಿದೆ. ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಪೂರ್ವ ನಿಯೋಜಿತ ಕೆಲಸದಲ್ಲಿ ಭಾಗಿಯಾಗುವುದು ಉತ್ತಮ. ಆರ್ಥಿಕವಾಗಿ ಈ ದಿನ ಉತ್ತಮವಾಗಿರಲಿದೆ. ನೀವು ಬಯಸಿದ್ದಂತೆ ಆಪ್ತರೊಬ್ಬರಿಂದ ಹಣಕಾಸಿನ ಸಹಾಯ ಪಡೆಯುತ್ತೀರಿ. ಇದರಿಂದ ನೀವು ಹಣದ ಸಮಸ್ಯೆಯೊಂದರಿಂದ ತಾತ್ಕಾಲಿಕ ರಿಲೀಫ್ ಪಡೆಯುತ್ತೀರಿ. ಅವಿವಾಹಿತರಲ್ಲಿ ಮದುವೆ ಯೋಗ ಸಂಬಂಧ ಮಾತುಕತೆಗಳ ನೋಡಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳ ನಿರ್ಲಕ್ಷ ಮಾಡಬೇಡಿ.

May-20-2025-daily-horoscope-prediction-for-12-zodiac-signs-in-kannada

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಈ ದಿನದಂದು ದೊಡ್ಡ ಕೆಲಸಗಳಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಬಹುದು. ಕೆಟ್ಟ ಸಹವಾಸದಿಂದ ನಿಮ್ಮ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು. ಉದ್ಯೋಗಿಗಳು ಈ ದಿನ ಏರಿಳಿತವನ್ನು ಕಾಣಬಹುದು. ಕೆಲಸದ ಸ್ಥಳದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಸ್ನೇಹಿತರಿಂದ ಅಥವಾ ಸಂಬಂಧಿಕರಿಂದ ಹಣಕಾಸು ಸಹಾಯ ಪಡೆದಿದ್ದರೆ ಮರಳಿ ನೀಡುವ ಕುರಿತು ಆಲೋಚಿಸಿ. ನೀವು ಉದ್ಯೋಗ ಹುಡುಕುತ್ತಿದ್ದರೆ ಮತ್ತಷ್ಟು ಶ್ರಮ ಹಾಕುವುದು ಉತ್ತಮ. ಬಿಡುವಿಲ್ಲದ ಕೆಲಸದಿಂದಾಗಿ ನೀವು ಆಯಾಸಕ್ಕೆ ಒಳಗಾಗಬಹುದು. ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದು ಉತ್ತಮ.

ಸಿಂಹ ರಾಶಿ

ಇಂದು ಸಿಂಹ ರಾಶಿಯವರು ಹಣಕಾಸು ವಿಚಾರವಾಗಿ ಬಹಳ ಲಾಭ ಮಾಡಲಿದ್ದಾರೆ. ನೀವು ಅಂದುಕೊಂಡಂತೆ ಹಣಕಾಸು ನಿಮ್ಮ ಕೈ ಸೇರಲಿದೆ. ನೀವು ಹಣವನ್ನು ಮುಕ್ತವಾಗಿ ಖರ್ಚು ಮಾಡುತ್ತೀರಿ. ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ದೊಡ್ಡ ವಿಚಾರಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಕೆಲಸದ ಒತ್ತಡವನ್ನು ನಿಭಾಯಿಸುವುದನ್ನು ಕಲಿಯಿರಿ. ನಿದ್ರೆ, ಆಹಾರ, ಉದರ ಸಂಬಂಧಿ ಸಮಸ್ಯೆಗಳಿದ್ದರೆ ಪರಿಹಾರಕ್ಕೆ ಮುಂದಾಗುವುದು ಉತ್ತಮ. ವ್ಯಾಪಾರಿಗಳು ದೊಡ್ಡ ಮೊತ್ತ ಪಡೆಯಲಿದ್ದೀರಿ. ವೈವಾಹಿಕ ಜೀವನ ಸುಖಮಯವಾಗಿರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಹಣದ ವಿಷಯದಲ್ಲಿ ನಿಮಗೆ ಒಳ್ಳೆಯದಿನವಲ್ಲ. ಕೈಯಲ್ಲಿರುವ ಹಣ ಸುಲಭವಾಗಿ ಖರ್ಚಾಗಬಹುದು. ನೀವು ಯಾವುದಾದರು ಕಾರ್ಯ ಸಂಬಂಧ ದೂರ ಪ್ರಯಾಣಕ್ಕೆ ಮುಂದಾದರೆ ಆ ಕೆಲಸದಲ್ಲಿ ಅಡೆತಡೆ ಎದುರಾಗಬಹುದು. ನೀವು ಬಹಳ ದಿನಗಳಿಂದ ಅನುಭವಿಸಿದ್ದ ಹಣಕಾಸು ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಈ ದಿನ ಬಹಳ ಮುಖ್ಯವಾಗಲಿದೆ. ನೀವು ಅರೆಕಾಲಿನ ನೌಕರರಾಗಿದ್ದರೆ ಉದ್ಯೋಗ ಸಂಬಂಧ ಸಮಸ್ಯೆ ಬರಬಹುದು. ಹಿರಿಯರ ಮಾತನ್ನು ಪಾಲಿಸುವುದು ಉತ್ತಮ.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ದಿನದಂದು ಬಹಳ ಜಾಗರೂಕರಾಗಿರಿ. ನೀವು ವಾಹನ ಚಾಲಕರಾಗಿದ್ದರೆ ಈ ದಿನ ಎಚ್ಚರಿಕೆ ಅಗತ್ಯ. ಈ ದಿನ ಖರ್ಚು ಹೆಚ್ಚು ಬರಲಿದೆ. ಕೆಲಸದಲ್ಲಿ ಸವಾಲುಗಳು ಬರಹುದು. ಒಂದು ಪ್ರಮುಖ ಕಾರ್ಯವನ್ನು ತಂದೆಯ ಸಹಾಯದಿಂದ ಸಾಧಿಸಬಹುದು. ಮಕ್ಕಳಿಂದ ಖುಷಿ ವಿಚಾರವೊಂದನ್ನು ಕೇಳಬಹುದು. ನೀವು ವ್ಯಾಪಾರಿಗಳಾಗಿದ್ದರೆ ಈ ದಿನದಂದು ದೊಡ್ಡ ಒಪ್ಪಂದ ಅಥವಾ ವ್ಯವಹಾರಕ್ಕೆ ಮುಂದಾಗಬಹುದು. ಒಳ್ಳೆಯವರ ಸಂಘ ಮಾಡುವುದು ಉತ್ತಮ. ಆರೋಗ್ಯದಲ್ಲಿ ಯಥಾಸ್ಥಿತಿ ಇರಲಿದೆ.

ವೃಶ್ಚಿಕ ರಾಶಿ

ಇಂದು ನೀವು ಸಂಬಂಧಿಕರ ಭೇಟಿಯಿಂದ ಸಂತಸಗೊಳ್ಳುವ ದಿನವಾಗಿರಲಿದೆ. ವ್ಯಾಪಾರಿಗಳಲ್ಲಿ ಪ್ರತಿಕೂಲ ಪರಿಸ್ಥಿತಿ ನೋಡಬಹುದು. ಆರೋಗ್ಯದಲ್ಲಿ ಸಣ್ಣ ಕಿರಿಕಿರಿ ಉಂಟಾಗಬಹುದು. ದಿನದ ಆರಂಭದಲ್ಲಿ ಒತ್ತಡ ಇರಲಿದೆ. ನೀವು ಯಾರಿಗಾದರು ಹಣ ನೀಡಿದ್ದರೆ ಈ ದಿನ ಮರಳಿ ಪಡೆಯಬಹುದು. ಪಂಚೇಂದ್ರಿಯ ಸಂಬಂಧಿ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಇಂದು ಪರಿಹಾರ ಪಡೆಯಬಹುದು. ಆಪ್ತರ ಜೊತೆಗೆ ತಾಳ್ಮೆಯಿಂದ ವರ್ತಿಸುವುದು ಉತ್ತಮ. ಕುಟುಂಬಸ್ಥರಿಂದ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಒತ್ತಡ ಬೀಳಬಹುದು. ಹಿರಿಯರೊಬ್ಬರಿಂದ ನೀವು ಉತ್ತಮ ಸಲಹೆ ಪಡೆಯುತ್ತೀರಿ.

ಧನು ರಾಶಿ

ಇಂದು ನಿಮಗೆ ಮಿಶ್ರಫಲದ ದಿನವಾಗಿರಲಿದೆ. ನೀವು ಖಾಸಗಿ ಕಂಪನಿಯ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಹಣಕಾಸು ವಿಚಾರವಾಗಿ ಇಂದು ತೃಪ್ತಿ ಇರಲಿದೆ. ವ್ಯಾಪಾರಿಗಳು ತಮ್ಮ ಲಾಭ ಹೆಚ್ಚಿಸಿಕೊಳ್ಳುವ ಭರದಲ್ಲಿ ದೊಡ್ಡ ಸವಾಲುಗಳ ಎದುರಿಸಬೇಕಾಗುತ್ತದೆ. ಯಾವುದೇ ವ್ಯವಹಾರ, ವ್ಯಾಪಾರ ಸಂಬಂಧವಾಗಿ ತರಾತುರಿಯ ನಿರ್ಧಾರಕ್ಕೆ ಮುಂದಾಗಬೇಡಿ. ಅಪರಿಚಿತರಲ್ಲಿ ಇಂದು ಮಾತುಕತೆಗೆ ಮುಂದಾಗುವುದು ಸೂಕ್ತವಲ್ಲ. ಅವಿವಾಹಿತರು ಶುಭ ಕಾರ್ಯಗಳಲ್ಲಿ ಭಾಗಿಯಾಗುವುದು ಶುಭವಾಗಬಹುದು.

ಮಕರ ರಾಶಿ

ಮಕರ ರಾಶಿಯ ಮಂದಿ ಈ ದಿನದಂದು ದೊಡ್ಡ ವಿಚಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು. ನೀವು ವ್ಯಾಪಾರ ಮಾಡುವವರಾಗಿದ್ದರೆ ಈ ಸಮಯದಲ್ಲಿ ನೀವು ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದು ಸರಿಯಲ್ಲ. ನಿಮ್ಮ ಕಠಿಣ ಪರಿಶ್ರಮವು ನಿಮ್ಮನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತದೆ. ಮನೆಯ ವಾತಾವರಣವು ನಿಮಗೆ ಶುಭ ತರುವಂತಹ ಕೆಲಸಕ್ಕೆ ಪೂರಕವಾಗಲಿದೆ. ನೀವು ವರ್ಗಾವಣೆ, ಬಡ್ತಿಯಂತಹ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ದಿನ ಒಂದು ಹೆಜ್ಜೆ ಮುಂದೆ ಸಾಗುತ್ತೀರಿ.

ಕುಂಭ ರಾಶಿ

ಇಂದು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಮಾರ್ಗ ಹುಡುಕುತ್ತೀರಿ. ನೀವು ಯಾವುದಾದರು ಅನಾರೋಗ್ಯ ಸಮಸ್ಯೆಗೆ ನಾಟಿ ಔಷಧಿ ಮಾಡುತ್ತಿದ್ದರೆ ಅದರ ಫಲಿತಾಂಶ ಅನುಭವಿಸಬಹುದು. ಈ ಸಮಯದಲ್ಲಿ ನಿಮ್ಮ ಒಲವು ಧಾರ್ಮಿಕ ಮತ್ತು ಆಧ್ಯಾತ್ಮದ ಕಡೆಗೆ ಹೆಚ್ಚಾಗಲಿದೆ. ನೀವು ಸಾಧ್ಯವಾದಷ್ಟು ಶಾಂತವಾಗಿ ಮತ್ತು ತಾಳ್ಮೆಯಿಂದಿರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಸಾಕಷ್ಟು ಹಣ ಖರ್ಚಾಗುವ ಸಾಧ್ಯತೆ ಇದೆ. ಪೋಷಕರಿಂದ ಯಾವುದಾದರು ವಿಚಾರವಾಗಿ ಒತ್ತಡ ಎದುರಿಸುತ್ತೀರಿ.

ಮೀನ ರಾಶಿ

ಇಂದು ನಿಮಗೆ ಲಾಭದಾಯಕ ದಿನ. ಉದ್ಯೋಗಿಗಳು ತಮ್ಮ ಕೆಲಸದ ಮೇಲೆ ಉತ್ತಮ ಹಿಡಿತವನ್ನು ಹೊಂದಿರುತ್ತಾರೆ. ಸ್ನಾಯು ನೋವು ಅಥವಾ ಬೆನ್ನುನೋವಿನಂತಹ ಆರೋಗ್ಯ ಸಮಸ್ಯೆಗಳಿಂದ ನೀವು ಮುಕ್ತರಾಗಬಹುದು. ವ್ಯಾಪಾರಸ್ಥರು ಯಾವುದೇ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಇಂದು ಅದಕ್ಕೆ ಒಳ್ಳೆಯ ದಿನವಾಗಲಿದೆ. ಕಾನೂನು, ಸರ್ಕಾರಿ ಕೆಲಸಗಳು, ಅರ್ಜಿಯಂತಹ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಎಲ್ಲಾ ವಿಚಾರಗಳಲ್ಲೂ ಎಚ್ಚರಿಕೆ ಅಗತ್ಯ, ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇಂದಿರಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-20-2025-daily-horoscope-prediction-for-12-zodiac-signs-in-kannada

Here is May 20 daily horoscope prediction for 12 zodiac signs read on...
Story first published: Tuesday, May 20, 2025, 6:05 [IST]
X
Desktop Bottom Promotion