Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಮೇ 19ರಂದು ಯಾವ ರಾಶಿಯವರ ಕಾರ್ಯ ಶುಭವಾಗಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಮೇ19ರಂದು 12 ರಾಶಿಗಳಲ್ಲಿ ಯಾವ ರೀತಿ ಫಲವಿದೆ ನೋಡಿ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನದಂದು ಬಹಳ ಲಾಭ ಮಾಡುವ ದಿನ. ನೀವು ಮಾಡುತ್ತಿರುವ ಕೆಲಸದಲ್ಲಿ ಶುಭವಾಗಲಿದೆ. ನೀವು ಕೆಲಸದ ಬದಲಾಯಿಸುವ ಮನಸ್ಸು ಮಾಡಿದ್ದರೆ ಈ ದಿನ ಆ ಕುರಿತ ತಯಾರಿಗೆ ಮುಂದಾಗಬಹುದು. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡುವ ಕೆಲಸಕ್ಕೆ ಮುಂದಾಗಬೇಡಿ. ಆಪ್ತರೊಬ್ಬರ ಭೇಟಿಯಿಂದ ನಿಮಗೆ ಧನಲಾಭದ ನಿರೀಕ್ಷೆ ಇದೆ. ಕೆಲಸದ ಸ್ಥಳದಲ್ಲಿ ನಿಮಗೆ ಒತ್ತಡ ಹೆಚ್ಚಬಹುದು. ಹೀಗಾಗಿ ಬಹಳ ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳ ಪೂರೈಸಿ. ಈ ದಿನ ಭವಿಷ್ಯದ ಯೋಜನೆಗಳಿಗೆ ಉತ್ತಮ ಅಡಿಪಾಯ ಹಾಕಲಿದ್ದೀರಿ.
ವೃಷಭ ರಾಶಿ
ಇಂದು ನಿಮಗೆ ಮಿಶ್ರ ಫಲ ನೀಡುವ ದಿನವಾಗಲಿದೆ. ದಿನದ ಆರಂಭ ಉತ್ತಮವಾಗಿರುವುದಿಲ್ಲ ಅನೇಕ ರೀತಿಯ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು. ಆದರೆ ದಿನದ ಎರಡನೇ ಭಾಗದಲ್ಲಿ ನಿಮಗೆ ಕೆಲವು ಒಳ್ಳೆಯ ಸುದ್ದಿ ಸಿಗಲಿದೆ. ನೀವು ಇಂದು ಸಣ್ಣ ಹೂಡಿಕೆಗಳನ್ನು ಮಾಡಿದರೆ ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆಯಿದೆ. ಮನೆಯಲ್ಲಿದ್ದ ಹಣಕಾಸು ಸಂಬಂಧಿ ಸಮಸ್ಯೆಯೊಂದು ಬಗೆಹರಿಯಬಹುದು, ನೀವು ಇತರರಿಗೆ ಸಹಕರವಾಗುವಂತಹ ವಸ್ತುವನ್ನು ನೀಡಬಹುದು. ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಬಹಳ ದಿನಗಳಿಂದ ಅರ್ಧಕ್ಕೆ ನಿಂತ ಕೆಲಸ ಪೂರ್ಣ ಮಾಡಲಿದ್ದೀರಿ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ದಿನದಂದು ಶ್ರಮದಾಯಕ ದಿನವಾಗಿ ನೋಡಲಿದ್ದಾರೆ. ನೀವು ಮಾಡುವ ಕೆಲಸದಲ್ಲಿ ಸಣ್ಣ ಪುಟ್ಟ ಅಡೆತಡೆ, ಸಮಯದ ಅಭಾವ ಉಂಟಾಗುವುದು ನೋಡಬಹುದು. ನೀವು ಯಾವುದರ ಬಗ್ಗೆಯಾದರು ಗೊಂದಲದಿಂದ ಅಥವಾ ತರಾತುರಿಯಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ನೀವು ಬಹಳ ಸಮಯದಿಂದ ಆರೋಗ್ಯ ತಪಾಸಣೆಗೆ ಒಳಗಾಗದೆ ಇದ್ದರೆ ಇಂದು ಒಳಗಾಗವುದು ಉತ್ತಮ. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು, ಗೃಹಪಯೋಗಿ ವಸ್ತು ಖರೀದಿಸಬಹುದು. ನಿಮ್ಮ ಆದಾಯದ ಹೆಚ್ಚಳದಿಂದಾಗಿ ಯಾವುದೇ ಹಣಕಾಸಿನ ಸಮಸ್ಯೆಯನ್ನು ಎದುರಿಸುವುದಿಲ್ಲ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನದಂದು ದೊಡ್ಡ ಸವಾಲುಗಳ ಎದುರಿಸುತ್ತೀರಿ. ಕೆಲಸದಲ್ಲಿ ಕಿರಿಕಿರಿ ಅಥವಾ ಒತ್ತಡ ಕಾಡಬಹುದು. ಇಡೀ ದಿನ ಯಾವುದೋ ವಿಚಾರವಾಗಿ ಚಿಂತೆಗೊಳಗಾಗಿರುತ್ತೀರಿ. ಉದರ ಸಂಬಂಧಿ ಸಮಸ್ಯೆ ಕಾಡಬಹುದು. ಯಾರಿಗಾದರು ಹಣ ನೀಡಿದ್ದರೆ ಅವರಿಂದ ಪಡೆಯುವುದು ನಿಮಗೆ ಕಷ್ಟವಾಗಬಹುದು. ಮನೆಯಲ್ಲಿ ಅಶಾಂತಿಗೆ ಕಾರಣವಾಗುವ ಘಟನೆ ನಡೆಯಬಹುದು. ವಾಹನ ಸವಾರರು ಎಚ್ಚರಿಕೆಯಿಂದ ಇರಿ. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳಿಬರುವ ಸಾಧ್ಯತೆ ಅಧಿಕವಾಗಿದೆ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನದಂದು ಬಹಳ ದಣಿಯಬಹುದು. ಹೊಸ ರೀತಿಯ ಬದಲಾವಣೆಗಳಿಂದ ನಿಮಗೆ ಕೈ ಕಟ್ಟಿಹಾಕಿರುವ ಅನುಭವವಾಗಬಹುದು. ಹಣಕಾಸು ವಿಚಾರವಾಗಿಯೂ ನಿಮಗೆ ಉತ್ತಮ ದಿನವಲ್ಲ. ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ನಿಮಗಾಗಿ ಅಲ್ಲದಿದ್ದರೂ ಬೇರೆಯವರಿಗಾಗಿ ಇಂದು ಖರ್ಚು ಮಾಡಬೇಕಾಗುತ್ತದೆ. ವ್ಯಾಪಾರಿಗಳಿಗೆ ಈ ದಿನ ಬಹಳ ಸವಾಲುಗಳು ಎದುರಾಗಬಹುದು. ನೀವು ಬಹಳ ದಿನದಿಂದ ಯಾರೊಂದಿಗೂ ಹೇಳದೆ ಇದ್ದ ವಿಚಾರವೊಂದನ್ನು ತಿಳಿಸುವ ಸಮಯವಿದು. ಆರೋಗ್ಯದಲ್ಲಿ ಸುಧಾರಣೆ ಅಪೇಕ್ಷಿಸಬಹದು.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಅತ್ಯಧಿಕ ದುಂದು ವೆಚ್ಚದ ದಿನ ಎನ್ನಬಹುದು. ನೀವು ಆಲೋಚಿಸದೆ ಇದ್ದ ಕೆಲಸಕ್ಕೆ ಅಥವಾ ವಸ್ತುಗಳಿಗೆ ಇಂದು ಖರ್ಚು ಮಾಡಬೇಕಾಗಿ ಬರಬಹುದು. ಬಹಳ ಸಮಯದಿಂದ ಉಳಿಸಿಕೊಂಡಿದ್ದ ಹಣವು ಇಂದು ಖರ್ಚಾಗಲಿದೆ. ಗೃಹಿಣಿಯರಲ್ಲಿ ತಲೆ, ಉದರ ಸಂಬಂಧಿ ಸಮಸ್ಯೆಗಳಿದ್ದರೆ ಸೂಕ್ತ ಪರಿಹಾರಕ್ಕೆ ಮುಂದಾಗುವುದು ಉತ್ತಮ. ಇಂದು ಕೆಲಸದ ಬಗ್ಗೆ ನೀವು ಹೆಚ್ಚು ಗಂಭೀರವಾಗಿರಬೇಕು, ಕಚೇರಿಯಲ್ಲಿ ಯಾವುದೇ ಪ್ರಮುಖ ಕೆಲಸವನ್ನು ನಿಯೋಜಿಸಿದ್ದರೆ ಸಮಯಕ್ಕೆ ಸರಿಯಾಗಿ ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ.
ತುಲಾ ರಾಶಿ
ಇಂದು ನಿಮ್ಮಲ್ಲಿ ಹೆಚ್ಚು ಶ್ರಮದಾಯಕ ದಿನ. ವಿವಾಹಿತರಲ್ಲಿ ಹೆಚ್ಚು ಖರ್ಚು ನೋಡಬಹುದು. ನೀವು ಹೊಸದಾಗಿ ಖರೀದಿಸಿದ ವಸ್ತುಗಳು ಚಿಂತೆಗೆ ತಳ್ಳಬಹುದು. ಮಕ್ಕಳ ಭವಿಷ್ಯದ ಕುರಿಯಾಗಿ ಆಲೋಚಿಸಬೇಕಾದ ದಿನವಾಗಿದೆ. ಇಂದು ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗುವ ಅವಕಾಶ ಪಡೆಯುತ್ತೀರಿ. ಕುಟುಂಬಸ್ಥರಿಗೆ ಹಣಕಾಸಿಗೆ ಸಂಬಂಧಿಸಿದ ಒತ್ತಡ ಇರಬಹುದು, ವಾಹನ ಖರೀದಿಸುವ ನಿಮ್ಮ ಬಯಕೆ ಇದ್ದರೆ ಈ ದಿನ ದೊಡ್ಡ ಹೆಜ್ಜೆ ಇಡುತ್ತೀರಿ. ಕೆಲವು ನಿರ್ಧಾರಗಳನ್ನು ಹಲವು ಬಾರಿ ಆಲೋಚಿಸಿ ತೆಗೆದುಕೊಳ್ಳಿ. ಸಾಲ ನೀಡುವುದು, ದುಂದುವೆಚ್ಚದಂತಹ ಕೆಲಸದಿಂದ ದೂರವೇ ಇರಿ.
ವೃಶ್ಚಿಕ ರಾಶಿ
ಇಂದು ಕೆಲವರು ನಿಮಗೆ ಕಿರಿಕಿರಿ ಉಂಟುಮಾಡಬಹುದು. ನೀವು ಕೆಲಸದ ಕಾರಣಕ್ಕೆ ಬಹಳ ದೂರ ಪ್ರಯಾಣಗಳು ಅಥವಾ ಹಲವು ಸಮಯಗಳ ಕಾಲ ಮನೆಯಿಂದ ಹೊರಗೆ ಉಳಿಯುತ್ತೀರಿ. ನೀವಿಂದು ವದಂತಿಗಳಿಂದ ದೂರವಿರಿ. ವೈವಾಹಿಕ ಜೀವನದಲ್ಲಿ ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಪ್ರೀತಿಪಾತ್ರರ ಭೇಟಿಯಿಂದ ಸಂತಸದ ಕ್ಷಣ ನೋಡುವಿರಿ. ಹಣಕಾಸು ವ್ಯವಹಾರವನ್ನು ಮಧ್ಯಸ್ಥಿತಿಯಲ್ಲಿ ಮಾಡುವುದು ಉತ್ತಮ. ನಿಮ್ಮ ಆರೋಗ್ಯದ ಕಡೆಗೂ ಗಮನವಿಡುವುದು ಉತ್ತಮ.
ಧನು ರಾಶಿ
ಧನು ರಾಶಿಯವರು ಬಹಳ ಸಮಯದಿಂದ ಬಯಸಿದ ದಿನವಾಗಲಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಬಂಧ ಆಲೋಚಿಸಬಹುದು. ಉದ್ಯೋಗಿಗಳು ಬಹಳ ಪ್ರಶಂಸೆಗೆ ಒಳಗಾಗಬಹುದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಅವಸರದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ನಿಮಗೆ ಹಾನಿಕಾರಕವಾಗಬಹುದು. ಮಕ್ಕಳೊಂದಿಗೆ ನೀವು ಮಾತುಕತೆಯ ಮೂಲಕ ಯಾವುದಾದರು ಮನಸ್ತಾಪ ಬಗೆಹರಿಸಿಕೊಳ್ಳಿ. ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ನಿಮಗೆ ಉತ್ತಮವಾಗಲಿದೆ.
ಮಕರ ರಾಶಿ
ಮಕರ ರಾಶಿಯ ಮಂದಿ ಈ ದಿನದಂದು ಧನಾತ್ಮಕ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಅವರ ಮುಖ್ಯ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಪಾಲುದಾರರೊಂದಿಗೆ ವಿವಾದ ಉಂಟಾಗುವ ಸಾಧ್ಯತೆಯಿದೆ. ನೀವು ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಅಧ್ಯಯನವನ್ನು ಮಾಡುತ್ತಿದ್ದರೆ ಉತ್ತಮ ಫಲಿತಾಂಶ ಪಡೆಯಬಹುದು. ಸರ್ಕಾರಿ ಹುದ್ದೆಗಾಗಿ ತಯಾರಿ ನಡೆಸಿದ್ದರೆ ಈ ಸಮಯದಲ್ಲಿ ಲಾಭದಾಯಕ ದಿನವಾಗುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಆರೋಗ್ಯದ ದೃಷ್ಟಿಯಿಂದ ಇಂದು ಮಿಶ್ರ ದಿನವಾಗಿರುತ್ತದೆ.
ಕುಂಭ ರಾಶಿ
ಇಂದು ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ನೆರವೇರಲಿದೆ. ಆದರೆ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಅನಿರೀಕ್ಷಿತ ಜವಾಬ್ದಾರಿಗಳು ನಿಮ್ಮ ದಿನದ ಯೋಜನೆಗಳಿಗೆ ಅಡ್ಡಿಪಡಿಸುತ್ತವೆ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಫಲಿತಾಂಶಕ್ಕೆ ಕಾರಣವಾಗಲಿದೆ. ಮನೆಯ ಯಾವುದೇ ಸದಸ್ಯರ ಅನಾರೋಗ್ಯವನ್ನು ಲಘುವಾಗಿ ಪರಿಗಣಿಸಬೇಡಿ. ವಿಶ್ರಾಂತಿ ಪಡೆಯುತ್ತ ನೀವು ಗಮನ ಹರಿಸಬೇಕು. ಆಪ್ತರಿಂದ ಮನೆಗಾಗಿ ವಸ್ತುವೊಂದನ್ನು ಪಡೆಯಬಹುದು.
ಮೀನ ರಾಶಿ
ಮೀಣ ರಾಶಿಯವರಿಗೆ ಇಂದು ಫಲದಾಯಕ ದಿನಗಾಗಿರಲಿದೆ. ನೀವು ಯಾವುದೇ ಕೆಲಸ ಮಾಡಿದರೂ ಶುಭದಾಯಕವಾಗಿರಲಿದೆ. ನೀವು ವ್ಯಾಪಾರಿಗಳಾಗಿದ್ದರೆ ಅನಿರೀಕ್ಷಿತ ಲಾಭ ನೋಡುವಿರಿ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳ ವರ್ಗಾವಣೆ ವಿಚಾರಗಲ್ಲಿ ಧನಾತ್ಮಕ ಪ್ರಕ್ರಿಯೆ ನೋಡಬಹುದು. ನಿಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದರೆ ಇಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಸಾಕಷ್ಟು ಪ್ರಯಾಣಿಸಬೇಕಾಗಬಹುದು. ಯಾರಿಂದಾದರು ಹಣಕಾಸು ಸಹಾಯ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










