Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಮೇ 18ರಂದು ದ್ವಾದಶ ರಾಶಿಫಲ ನೋಡೋಣ
ವೈದಿಕ ಶಾಸ್ತ್ರದ ಪ್ರಕಾರ ಮೇ18ರ ದಿನ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ದಿನವು ಬಹಳ ಓಡಾಟ ಮಾಡುತ್ತೀರಿ, ಸುದೀರ್ಘ ಪ್ರಯಾಣವು ನಿಮಗೆ ಹಲವು ರೀತಿಯ ಸಮಸ್ಯೆಗಳ ತರಬಹುದು. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಹಾಗೆ ಯಾವುದಾದರು ಔಷಧಿ ಸೇವಿಸುವುದನ್ನು ಮರೆಯಬೇಡಿ. ವ್ಯಾಪಾರಿಗಳು ಹಠಾತ್ ಪ್ರಯೋಜನಗಳನ್ ಪಡೆಯುವ ನಿರೀಕ್ಷೆಯಿದೆ. ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಆಪ್ತರ ಭೇಟಿ ಗೊಂದಲದ ವಿಚಾರಗಳಿಗೆ ಕಾರಣವಾಗಬಹುದು.
ವೃಷಭ ರಾಶಿ
ನೀವು ಇಂದು ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡೆತಡೆ ನೋಡಬಹುದು. ಗೃಹಿಣಿಯರು ಬಹಳ ಜಾಗರುಕರಾಗಿರಬೇಕು. ನಿಮಗೆ ದೊಡ್ಡ ಸವಾಲುಗಳು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಇಂದು ಬಹಳ ಒಳ್ಳೆಯ ದಿನವಾಗಲಿದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಅನುಭವಿ ವ್ಯಕ್ತಿಯಿಂದ ಮಾರ್ಗದರ್ಶನ ಪಡೆಯುತ್ತೀರಿ. ಹಣಕಾಸಿನ ದೃಷ್ಟಿಯಿಂದ ಈ ದಿನದಂದು ನಿಮ್ಮ ಆದಾಯವು ನಿಯಮಿತವಾಗಿರುತ್ತದೆ ಮತ್ತು ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಅವಿವಾಹಿತರು ಮದುವೆ ಸಂಬಂಧ ವಿಚಿಲಿತರಾಗಬಹುದು. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಅವಕಾಶಗಳ ಪಡೆಯಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ದಿನದಂದು ಬಹಳ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ನೀವು ಬಾಡಿಗೆ ಮನೆಯನ್ನು ಬದಲಾಯಿಸುವ ಆಲೋಚನೆಯಲ್ಲಿದ್ದರೆ ಉತ್ತಮ ಅವಕಾಶ ಪಡೆಯುತ್ತೀರಿ. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಈ ಸಮಯದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತಪ್ಪಿಸುವುದು ಉತ್ತಮ. ಮನೆಯ ವಾತಾವರಣವು ಶಾಂತವಾಗಿರಲಿದೆ, ಹಣಕಾಸು ವಿಚಾರವಾಗಿ ಖರ್ಚು ಹೆಚ್ಚಾಗಿದ್ದರೂ ಈ ದಿನ ಲಾಭದಾಯಕವಾಗಿ ಪರಿಣಮಿಸಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ, ನೀವು ವ್ಯಾಪಾರಿ ಕ್ಷೇತ್ರದಲ್ಲಿ ಇದ್ದರೆ ಈ ದಿನದಂದು ಲಾಭ ನೋಡಬಹುದು. ಆದರೆ ದಿನದ ಅಂತ್ಯದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಖರ್ಚು ಕೂಡ ಇರಲಿದೆ. ನಿಮ್ಮ ಸಂಗಾತಿಯನ್ನು ಅನಗತ್ಯವಾಗಿ ಅನುಮಾನಿಸುವ ನಿಮ್ಮ ಅಭ್ಯಾಸವು ಮತ್ತಷ್ಟು ಸಮಸ್ಯೆ ತರಬಹುದು. ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನದಂದು ದೊಡ್ಡ ಸವಾಲುಗಳ ಎದುರಿಸುತ್ತೀರಿ. ದಿನವಿಡಿ ವಿಶ್ರಾಂತಿ ಪಡೆಯದೆ ನೀವು ಕೆಲಸ ಮಾಡಬೇಕಾಗುತ್ತದೆ. ಹಾಗೆ ಈ ದಿನ ದೊಡ್ಡ ನಷ್ಟಕ್ಕೆ ತುತ್ತಾಗಬಹುದು. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರಸ್ಥರು ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಲಿದ್ದರೆ ಈ ದಿನ ಬಹಳ ಮುಖ್ಯವಾಗಲಿದೆ. ಆಪ್ತರಿಂದ ನೀವು ಹಣಕಾಸು ನೆರವು ಪಡೆಯಲು ಮುಂದಾದರೆ ಇಂದು ಲಾಭವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನವು ಬಹಳ ಅನುಕೂಲಕರ ದಿನವಾಗಲಿದೆ. ನಿಮ್ಮ ಸಂಬಂಧದಲ್ಲಿ ಹೊಸತನವನ್ನು ಅನುಭವಿಸುವಿರಿ. ಹಣದ ವಿಷಯದಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ನಿಮ್ಮ ಲಾಭದಲ್ಲಿ ಏರಿಕೆ ನೋಡಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿ ಈ ದಿನದಂದು ಬಹಳ ಶ್ರಮ ಹಾಕಬೇಕಾಗುತ್ತದೆ. ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ವ್ಯಾಪಾರಸ್ಥರು ಹಣದ ಕುರಿತ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗಿಗಳಿಗೆ ಬದಲಾವಣೆಯ ಸಮಯ ಎದುರಾಗಬಹುದು. ನಿಮ್ಮ ಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ವಿಷಯದಲ್ಲಿ ಈ ವರ್ಷವು ವ್ಯಾಪಾರಿಗಳಿಗೆ ತುಂಬಾ ಒಳ್ಳೆಯದಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಈ ದಿನದಂದು ಯಾವುದೇ ಕೆಲಸಕ್ಕೆ ಕೈ ಹಾಕಿದರು ಇಂದು ಯಾವುದೇ ಅಡೆತಡೆ ಇಲ್ಲದೆ ನಡೆಯಲಿದೆ. ನಿಮ್ಮ ಯಾವುದೇ ಹಣಕಾಸಿನ ವಹಿವಾಟು ದೀರ್ಘಕಾಲದವರೆಗೆ ಬಾಕಿ ಉಳಿದಿದ್ದರೆ ಇಂದು ಪೂರ್ಣಗೊಳ್ಳುವ ಬಲವಾದ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಧನು ರಾಶಿ
ಧನು ರಾಶಿ ಮಂದಿ ಈ ದಿನದಂದು ಅನಾರೋಗ್ಯ ಸಮಸ್ಯೆಗೆ ತುತ್ತಾಗಬಹುದು. ಕೆಮ್ಮು, ಶಿತದಂತಹ ಸಮಸ್ಯೆಗೆ ನೀವು ಒಳಗಾಗಬಹುದು. ನೀವು ಹಣಕಾಸು ವಿಚಾರವಾಗಿ ಯಾರಿಂದಾದರು ಸಹಾಯ ಪಡೆಯಲು ಮುಂದಾಗಿದ್ದರೆ ಈ ದಿನ ಶುಭವಾಗಬಹುದು. ವೈವಾಹಿಕ ಜೀವನದಲ್ಲಿ ನಿಮಗೆ ಸಂತಸದ ದಿನವಾಗಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಸವಾಲುಗಳ ಎದುರಿಸಬೇಕಾಗುತ್ತೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಉತ್ತಮ ದಿನವಾಗಲಿದೆ. ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸಲಿದೆ. ಮನೆಯವರಿಂದ ಹಣಕಾಸು ಸಂಬಂಧಿಸಿದಂತೆ ಒತ್ತಡ ಹೆಚ್ಚಾಗಹುದು.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಈ ದಿನವು ಬಹಳ ಅನುಕೂಲಕರ ದಿನ. ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಖ್ಯಾತಿಯೂ ಹೆಚ್ಚುತ್ತದೆ. ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ. ಕುಟುಂಬಸ್ಥರೊಂದಿಗೆ ನೀವು ಚಿಕ್ಕ ಪ್ರವಾಸ ಕೈಗೊಳ್ಳುವ ಆಲೋಚನೆ ಮಾಡಬಹುದು.
ಮೀನ ರಾಶಿಯ ಮಂದಿ ಆರೋಗ್ಯವಾಗಿರಲು ಅನಗ್ಯತ ಚಿಂತೆಯಿಂದ ದೂರವಿರಿ. ಇಂದು ಮಕ್ಕಳ ವಿಚಾರವಾಗಿ ಚಿಂತೆ ಕಾಡಬಹುದು. ಉದ್ಯೋಗಿಗಳಿಗೆ ಸವಾಲಿನ ದಿನವಾಗಿರಲಿದೆ. ನೀವು ವ್ಯಾಪಾರಸ್ಥರಾಗಿದ್ದರೆ ಈ ದಿನದಂದು ಅನಗತ್ಯ ವ್ಯವಹಾರಗಳ ಮಾಡಬೇಡಿ. ಆರೋಗ್ಯದಲ್ಲಿ ಎಂದಿಗಿಂತ ಸುಧಾರಣೆ ಕಾಣಲಿದ್ದೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications