Dina Bhavishya: ಮೇ 17ರಂದು ದ್ವಾದಶಗಳ ದಿನದ ರಾಶಿಫಲ ನೋಡೋಣ

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ 17ರ ರಾಶಿಫಲ ನೋಡೋಣ

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಶುಭಗಳ ತರುವ ದಿನ. ನಿಮ್ಮ ಕೆಲಸಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಆರ್ಥಿಕ ರಂಗದಲ್ಲಿ ನಿಮಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನಗಳು ಫಲ ನೀಡಬಹುದು. ಕೆಲಸದ ಒತ್ತಡ ಕಾರಣ ಕುಟುಂಬಕ್ಕೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗಿರುವುದಿಲ್ಲ. ಬಹಳ ದೊಡ್ಡ ವ್ಯವಹಾರದಲ್ಲಿ ನಿಮಗೆ ಒಳಿತಾಗಲಿದೆ. ಆದ್ರೆ ನೀವು ಖರ್ಚುಗಳಿಂದ ಹೊರಬರಲು ಸಾಧ್ಯವಾಗದೆ ಇರಬಹುದು. ಸಮಸ್ಯೆಗಳನ್ನು ದೊಡ್ಡದಾಗಲು ಬಿಡಬೇಡಿ ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಬಹುದು.

ವೃಷಭ ರಾಶಿ

ನಿಮಗೆ ಇಂದು ಯಾವುದೇ ಒಪ್ಪಂದ, ವ್ಯವಹಾರಗಳ ಮಾಡುವ ಮುನ್ನ ಎಚ್ಚರಿಕೆ ಇಂದ ಇರಲು ಸೂಚಿಸಲಾಗಿದೆ. ಕುಟುಂಬ ಜೀವನದ ದೃಷ್ಟಿಯಿಂದ ಈ ದಿನ ಶುಭವಾಗಿದೆ. ಕೆಲಸದಲ್ಲಿ ಏರಳಿತವಿರಲಿದೆ. ನಿಮ್ಮ ಕೆಲಸದಿಂದ ಬೇರೆಯವರು ತೃಪ್ತರಾಗದೆ ಇರಬಹುದು. ವಾಹನ ಚಾಲಕರಲ್ಲಿ ಖರ್ಚು ಹೆಚ್ಚಾಗಲಿದೆ. ನೀವು ತಾಳ್ಮೆಯಿಂದ ದೊಡ್ಡ ಕೆಲಸಕ್ಕೆ ಕೈ ಹಾಕಿದರೆ ಫಲಿತಾಂಶ ಉತ್ತಮವಾಗಿರಲಿದೆ. ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಉನ್ನತ ಶಿಕ್ಷಣ ಸಂಬಂಧ ವಿದ್ಯಾರ್ಥಿಗಳು ಆಲೋಚಿಸುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ನಿರ್ಧಾರವು ಚಿಂತೆಗೆ ಗುರಿ ಮಾಡಬಹುದು.

May-17-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರು ಈ ದಿನದಂದು ಬಹಳ ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ದೈನಂದಿನ ಕೆಲಸದಲ್ಲಿ ಈ ಹಿಂದೆ ಇದ್ದ ಅಡೆತಡೆಯೊಂದು ನಿವಾರಣೆಯಾಗಲಿದೆ. ನೀವು ದೂರ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಇದು ನಿಮಗೆ ಖರ್ಚು ಹೆಚ್ಚಿಸಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಇಂದು ನಿಮಗೆ ತುಂಬಾ ಸವಾಲಿನ ನಿರೀಕ್ಷೆಯಿದೆ. ಕೌಟುಂಬಿಕ ವಿಚಾರವಾಗಿ ಉಂಟಾಗಿರುವ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳುವುದು ಬಹಳ ಮುಖ್ಯ. ಕೆಮ್ಮು, ಶೀತದಂತಹ ಸಾಮಾನ್ಯ ಅನಾರೋಗ್ಯಗಳಿಗೆ ನೀವು ಒಳಗಾಗಬಹುದು.

ಕರ್ಕ ರಾಶಿ

ಕರ್ಕ ರಾಶಿ ಮಂದಿ ಈ ದಿನದಂದು ದೊಡ್ಡ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಈ ದಿನ ನಿಮಗೆ ಎಲ್ಲಾ ವಿಚಾರದಲ್ಲೂ ಅನುಕೂಲಕರವಾಗಿದೆ, ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಸೂಚನೆಯನ್ನು ಪಾಲಿಸುವುದು ಉತ್ತಮ. ಅವಾಹಿತರಿದ್ದರೆ ಅವರಿಗೆ ಮದುವೆ ಸಂಬಂಧ ಶುಭ ವಿಚಾರಗಳ ಕೇಳಬಹುದು. ಮನೆಯ ವಾತಾವರಣ ಕೂಡ ಉತ್ತಮವಾಗಿರಲಿದೆ. ನಿಮ್ಮ ಬಹುದಿನದ ಕೆಲಸವೊಂದನ್ನು ಮಾಡಿ ಮುಗಿಸುತ್ತೀರಿ. ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮವನ್ನು ಆಯೋಜಿಸಬಹುದು ಇಲ್ಲವೆ ನೀವು ಭಾಗಿಯಾಗಬಹುದು.

ಸಿಂಹ ರಾಶಿ

ಇಂದು ನಿಮಗೆ ಸವಾಲಿನ ದಿನ ಎನ್ನಬಹುದು. ಎಲ್ಲಾ ವಿಚಾರಗಳಲ್ಲು ನಿಮಗೆ ಹೊಸ ರೀತಿಯ ಸವಾಲು ನೋಡಬಹುದು. ಕೆಲಸದ ಒತ್ತಡ ಹಾಗೂ ಪ್ರಯಾಣದಿಂದ ನಿಮಗೆ ಆಯಾಸ ಕಾಡಬಹುದು. ಆರೋಗ್ಯದ ವಿಚಾರದಲ್ಲೂ ಕೂಡ ಬೆನ್ನು ನೋವು, ಕಾಲು ನೋವಿನಂತಹ ಸಮಸ್ಯೆಗೆ ತುತ್ತಾಗಬಹುದು. ಉದ್ಯಮಿಗಳು ಒಂದೇ ಸಮಯದಲ್ಲಿ ಅನೇಕ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಮನೆಗಾಗಿ ಖರ್ಚು ಹೆಚ್ಚಾಗಬಹುದು. ನಿಮ್ಮ ನೆಮ್ಮದಿ ಕೆಡಿಸುವಂತಹ ಹಲವು ಘಟನೆಗಳು ನಡೆಯಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿ ಮಂದಿ ಈ ದಿನದಂದು ಬಹಳ ಓಡಾಟ ಮಾಡುತ್ತೀರಿ. ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಬಹಳ ಒಳ್ಳೆಯ ಫಲಿತಾಂಶ ದೊರೆಯಲಿದೆ, ಉದ್ಯೋಗಿಗಳು ಕಚೇರಿಯಲ್ಲಿ ಒಳ್ಳೆಯ ಸುದ್ದಿ ಕೇಳಬಹುದು, ಈ ದಿನ ನೀವು ನಿರೀಕ್ಷಿಸಿದಂತೆ ಕಾರ್ಯಗಳು ನಡೆಯಲಿವೆ. ವ್ಯಾಪಾರಿಗಳಲ್ಲಿ ದೊಡ್ಡ ಮಟ್ಟದ ಖರ್ಚು ನೋಡಬಹುದು. ಆದ್ರೆ ಇದರಿಂದ ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕೂಡ ಇರಲಿದೆ. ನಿಮ್ಮ ಹಲವು ದಿನಗಳಿಂದ ಅರ್ಧಕ್ಕೆ ನಿಂತಿರುವ ಕೆಲಸವನ್ನು ಪೂರ್ಣ ಮಾಡುತ್ತೀರಿ. ಅವಿವಾಹಿತರಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ದಿನ ದೊಡ್ಡ ಕೆಲಸಗಳಿಗೆ ಕೈ ಹಾಕಬಹುದು. ನಿಮ್ಮ ಉಳಿತಾಯ, ಹೂಡಿಕೆಯಲ್ಲಿ ಲಾಭ ಮಾಡುವ ದಿನವಿದು. ಯಾವುದೇ ಕೆಲಸವಾಗಿ ನೀವಿಂದು ನಿರ್ಲಕ್ಷ್ಯ ದೋರಣೆಯಿಂದ ಇರಬೇಡಿ. ನೀವು ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಬಹಳಷ್ಟು ಅವಕಾಶ ಪಡೆದರೂ ನಿಮಗೆ ತೃಪ್ತಿ ಇರುವುದಿಲ್ಲ. ಕುಟುಂಬ ಜೀವನದ ದೃಷ್ಟಿಯಿಂದ ಈ ದಿನ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ದೂರ ಪ್ರಯಾಣ ಮುಂದೂಡುವುದು ಉತ್ತಮ.

ವೃಶ್ಚಿಕ ರಾಶಿ

ನೀವಿಂದು ಬಹಳ ಸಮಯ ಮನೆಯಿಂದ ಹೊರಗೆ ಉಳಿಯಲಿದ್ದೀರಿ. ಕೆಲಸದ ವಿಚಾರವಾಗಿ ದೂರ ಪ್ರಯಾಣಕ್ಕೂ ಮುಂದಾಗಬಹುದು. ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ವೈವಾಹಿಕ ಬದುಕು ಕೂಡ ತುಂಬಾನೇ ಚೆನ್ನಾಗಿರಲಿದೆ. ಕಚೇರಿಯಲ್ಲಿ ನಿಮ್ಮ ಬಾಕಿಯಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಯಾರಿಗಾದರು ಹಣ ನೀಡಿ ಅದನ್ನು ವಾಪಾಸು ಪಡೆಯಲು ಬಹಳ ಕಷ್ಟ ಪಡುತ್ತಿದ್ದರೆ ಈ ದಿನದಂದು ವಾಪಾಸು ಬರಬಹುದು. ಹಾಗೆ ದೊಡ್ಡ ಸವಾಲುಗಳು ಎದುರಾಗಬಹುದು.

ಧನು ರಾಶಿ

ಧನು ರಾಶಿಯವರು ಈ ದಿನದಂದು ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಡುತ್ತೀರಿ. ಹಣದ ವಿಷಯದಲ್ಲಿ ಈ ದಿನವು ನಿಮಗೆ ತುಂಬಾ ದುಬಾರಿಯಾಗಿದೆ. ಹಠಾತ್ ದೊಡ್ಡ ಖರ್ಚು ನಿಮ್ಮ ಆದಾಯವನ್ನು ಏರುಪೇರು ಮಾಡಬಹುದು. ಕೆಲಸದ ಸ್ಥಳದಲ್ಲಿನ ಒತ್ತಡದಿಂದ ನಿಮಗೆ ಇಂದು ಕೋಪಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೊಸ ಕೆಲಸದಲ್ಲಿ ಸವಾಲುಗಳಿರುತ್ತದೆ, ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ವ್ಯಾಪಾರಿಗಳು ಈ ದಿನದಂದು ಸವಾಲುಗಳ ಎದುರಿಸಬಹುದು.

ಮಕರ ರಾಶಿ

ಮಕರ ರಾಶಿಯ ಮಂದಿ ಈ ದಿನದಂದು ಆಯಾಸವಾಗುವಂತಹ ಕೆಲಸ ಮಾಡುತ್ತೀರಿ. ಆಪ್ತರಿಗೆ ನೋವವಾಗುವಂತಹ ಕೆಲಸದಿಂದ ದೂರವಿರಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಸಲು ನೀವು ದೊಡ್ಡ ಕೆಲಸಕ್ಕೆ ಮುಂದಾಗಬಹುದು. ಆದ್ರೆ ಇದರಿಂದ ಸಮಾಧಾನಕರ ಫಲಿತಾಂಶ ಪಡೆಯಬಹುದು. ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗಲಿದೆ. ಅನಗ್ಯತ ವಿಷಯಗಳ ಕಡೆಗೆ ಗಮನಹರಿಸದೆ ನಿಮ್ಮ ಕೆಲಸ ಕಾರ್ಯದತ್ತ ಗಮನ ನೀಡಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿ, ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ.

ಕುಂಭ ರಾಶಿ

ಇಂದು ನಿಮಗೆ ಅನುಕೂಲಕರ ದಿನವಾಗಿರಲಿದೆ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಆದರೆ ವೆಚ್ಚಗಳು ಹೆಚ್ಚಾಗಬಹುದು. ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬಹುದು. ನಿಮ್ಮ ಹಣಕಾಸು ವಿಚಾರವಾಗಿ ಬೇರೆಯವರೊಂದಿಗೆ ಮನಸ್ತಾಪಗಳು ಮೂಡಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ದೊಡ್ಡ ಮಟ್ಟದ ಸವಾಲುಗಳು ಇರುವುದಿಲ್ಲ. ಕಾನೂನು ಕಟ್ಟಲೆಗಳು ಸುಖಾಂತ್ಯದ ಮುನ್ಸೂಚನೆ ನೀಡಲಿದೆ.

ಮೀನ ರಾಶಿ

ಮೀನ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಆಪ್ತರೊಬ್ಬರ ಅನಿರೀಕ್ಷಿತ ಭೇಟಿಯು ನಿಮಗೆ ಬಹಳ ಸಂತಸಕ್ಕೆ ಕಾರಣವಾಗಲಿದೆ. ವಾಹನ ಸವಾರರು ಬಹಳ ಜಾಗರುಕತೆಯಿಂದ ಇರಬೇಕು. ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳಬಹುದು. ಹಲವು ಸಮಯದಿಂದ ನಿಮಗೆ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಮನೆಯಲ್ಲಿ ನಿಮ್ಮ ಪರವಾದ ಒಲವು ಇರಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-17-2025-daily-horoscope-prediction-for-12-zodiac-signs-in-kannada

Here is May 17 daily horoscope prediction for 12 zodiac signs read on...
Story first published: Saturday, May 17, 2025, 6:08 [IST]
X
Desktop Bottom Promotion