Dina Bhavishya: ಮೇ 16ರಂದು ಈ ರಾಶಿಯವರ ಜೀವನ ಬದಲಾಗುತ್ತೆ..!

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ 16ರ ರಾಶಿಫಲ ನೋಡೋಣ:

ಮೇಷ ರಾಶಿ

ಇಂದು ನಿಮಗೆ ಉತ್ತಮ ದಿನವಾಗಲಿದೆ. ಉದ್ಯೋಗದಲ್ಲಿರುವ ಜನರು ವರ್ಗಾವಣೆಯಿಂದಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತರಳಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮ ಕೆಲಸದಿಂದ ತೊಂದರೆಗೊಳಗಾಗುತ್ತಾರೆ. ನೀವು ಪಾಲುದಾರಿಕೆ ವ್ಯವಹಾರ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಆಸೆ ಈಡೇರಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು. ವ್ಯಾಪಾರಿಗಳು ಯಾವುದೇ ದೊಡ್ಡ ಹಣಕಾಸು ವಿಚಾರವಾಗಿ ನಿಮ್ಮಲ್ಲಿ ಹೊಸ ವಿಚಾರವೊಂದು ಚಿಂತೆಗೀಡು ಮಾಡಬಹುದು.

ವೃಷಭ ರಾಶಿ

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನಿಮ್ಮ ಶತ್ರುಗಳ ಬಗ್ಗೆ ನೀವು ಎಚ್ಚರದಿಂದಿರಬೇಕು. ಇಂದು ನಿಮಗೆ ಆಧ್ಯಾತ್ಮಿಕವಾಗಿ ಬಹಳ ಉತ್ತಮ ದಿನವಾಗಲಿದೆ. ನಿಮ್ಮ ಬಾಕಿ ಇರುವ ಕೆಲವು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನೀವು ಪ್ರಯತ್ನಿಸುತ್ತೀರಿ. ನೀವು ಉದ್ಯಮಿಯಾಗಿದ್ದರೆ ಹಾಗೂ ಇತ್ತೀಚೆಗೆ ಹೂಡಿಕೆ ಮಾಡಿದ್ದರೆ, ನೀವು ಅದರಿಂದ ಲಾಭ ಪಡೆಯಬಹುದು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ದೊರೆಯಲಿದೆ. ತಾಳ್ಮೆಯಿಂದ ಇದ್ದರೆ ನಿಮಗಿಂದು ಶುಭ ಸುದ್ದಿ ಕೇಳಬಹುದು. ಬಡ್ತಿ ವರ್ಗಾವಣೆ ಸೇರಿ ಸರ್ಕಾರಿ ಸಂಬಂಧಿ ಕೆಲಸಗಳು ಯಶಸ್ವಿಯಾಗಿ ಪೂರ್ಣವಾಗಲಿದೆ.

May-16-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ರಾಜಕೀಯದಲ್ಲಿ ರಂಗದಲ್ಲಿರುವವರು ಈ ದಿನದಂದು ಬಹಳ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮಗಿಂದು ಹಠಾತ್ ಧನಲಾಭದ ನಿರೀಕ್ಷೆ ಇಡಬಹುದು. ಕೌಟುಂಬಿಕ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ಇಂದು ಅದು ಕೊನೆಗೊಳ್ಳುತ್ತವೆ, ಮನೆಯ ವಾತಾವರಣದಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ. ನಿಮ್ಮ ಕಾನೂನು ಸಂಬಂಧಿ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಇತ್ಯರ್ಥಪಡಿಸಿಕೊಳ್ಳಬೇಕು. ನೀವು ಕುಟುಂಬ ಸದಸ್ಯರೊಂದಿಗೆ ಪ್ರವಾಸ ಕೈಗೊಳ್ಳಬಹುದು. ನಿಮ್ಮ ಹಣಕಾಸು ವ್ಯವಹಾರದ ಮೇಲೆ ಸಂಪೂರ್ಣ ನಿಗಾ ಇಡಿ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಲು ಮುಂದಾಗಬೇಡಿ.

ಕರ್ಕ ರಾಶಿ

ಇಂದು ನೀವು ಯಾವುದೇ ಅಪಾಯಕಾರಿ ಕೆಲಸ ಮಾಡುವುದನ್ನು ತಪ್ಪಿಸುವುದು ಉತ್ತಮ. ವಾಹನ ಚಾಲಕರು ಇಂದು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ಅಜಾಗರೂಕತೆಯನ್ನು ತೋರಿಸಬೇಡಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಕುಟುಂಬ ಸದಸ್ಯರನ್ನು ನೀವು ಸಂಪೂರ್ಣವಾಗಿ ಆನಂದಿಸುವಿರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ನಿಮ್ಮ ಯಾವುದೇ ಹಳೆಯ ಕೆಲಸ ಈಗ ಪೂರ್ಣಗೊಳ್ಳಬಹುದು. ಕೆಲಸಗಳಲ್ಲಿ ಹೆಚ್ಚು ಗಮನವಿರಲಿ.

ಸಿಂಹ ರಾಶಿ

ಇಂದು ನಿಮಗೆ ತುಂಬಾ ಸಾಮಾನ್ಯ ದಿನವಾಗಬಹುದು. ನಿಮ್ಮ ಅತಿಯಾದ ಖರ್ಚು ನಿಮಗೆ ಸಮಸ್ಯೆ ತರಬಹುದು. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು. ಮನೆಗಾಗಿ ನೀವು ಹೊಸ ವಸ್ತುವೊಂದನ್ನು ಖರೀದಿಸುತ್ತೀರಿ. ಹಲವು ದಿನದಿಂದ ನೀವು ಒಂದು ಕೆಲಸದ ಸಂಬಂಧ ಚಿಂತಗೆ ಒಳಗಾಗಿದ್ದರೆ ಅದು ನಿವಾರಣೆಯಾಗಲಿದೆ. ಯಾರೊಂದಿಗೂ ಪಾಲುದಾರಿಕೆ ವ್ಯವಹಾರ ಮಾಡಿಕೊಳ್ಳುವುದನ್ನು ತಪ್ಪಿಸಿ. ಕೌಟುಂಬಿಕ ವಿಚಾರದಲ್ಲಿ ಯಾವುದಾದರು ಸಮಸ್ಯೆ ಇದ್ದರೆ ಇಂದು ನಿವಾರಣೆಯ ಸಾಧ್ಯತೆ ಇದೆ. ಕೆಲಸದ ಸಂಬಂಧ ಕೈಗೊಳ್ಳುವ ದೂರ ಪ್ರಯಾಣವು ಸಮಸ್ಯೆ ತರಬಹುದು.

ಕನ್ಯಾ ರಾಶಿ

ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನು ಇಂದು ಪೂರ್ಣಗೊಳಿಸಲು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ದಿನ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಕುಟುಂಬದಲ್ಲೂ ವಾತಾವರಣ ಅಷ್ಟು ಸರಿಯಾಗಿ ಇರದೆ ಇರಬಹುದು. ನೀವು ಕೆಲಸವನ್ನು ಏಕಾಗ್ರತೆಯಿಂ ಮಾಡಿದರೆ ಅದರ ಫಲಿತಾಂಶ ಉತ್ತಮವಾಗಿರಲಿದೆ. ಇಂದು ಕೆಲಸದ ಒತ್ತಡ ಅಧಿಕವಿರಲಿದೆ. ವ್ಯಾಪಾರಸ್ಥರು ಬಯಸಿದ ಲಾಭ ಗಳಿಸಲು ಸಾಧ್ಯವಾಗಲಿದೆ. ಆದರೆ ಅದರಿಂದ ನಿಮ್ಮ ಬಯಕೆ ಈಡೇರದೆ ಇರಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ ಸಂಬಂಧಿಸಿದ ಯಾವುದಾದರೂ ವಿಷಯದ ಬಗ್ಗೆ ಚಿಂತಿತರಾಗಿರುತ್ತೀರಿ.

ತುಲಾ ರಾಶಿ

ಇಂದು ನಿಮಗೆ ಉತ್ಸಾಹಭರಿತ ದಿನವಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಉತ್ತಮ ಪ್ರಭಾವವಿರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಪ್ರವಾಸ ತೆರಳಬಹುದು. ನಿಮ್ಮ ಕುಟುಂಬದ ವಿಷಯಗಳ ಬಗ್ಗೆ ನೀವು ಅಸಡ್ಡೆ ತೋರಬಾರದು. ಈ ದಿನ ಕೆಲಸದಲ್ಲಿನ ವಿಳಂಬಗಳು, ಅಡೆತಡೆಗಳು ಆತಂಕಕ್ಕೆ ಕಾರಣವಾಗುತ್ತವೆ. ಕೆಲವು ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದ ಕಾರಣ ನೀವು ಚಿಂತೆ ಮಾಡುತ್ತೀರಿ. ಉದ್ಯೋಗ ಹುಡುಕುತ್ತಿರುವ ಜನರಿಗೆ ಸಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಸಿಡುಕು ಇರಬಹುದು.

ವೃಶ್ಚಿಕ ರಾಶಿ

ಇಂದು ನಿಮಗೆ ಗೊಂದಲದಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮ ಸಂತೋಷದ ಮಾರ್ಗಗಳು ಹೆಚ್ಚಾಗುತ್ತವೆ. ನಿಮ್ಮ ಮನೆಗೆ ಅತಿಥಿ ಬರಬಹುದು. ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ, ಇದು ನಿಮ್ಮ ಆರ್ಥಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನಃಶಾಂತಿ ಕೆಡಬಹುದು. ವ್ಯಾಪಾರ ಮತ್ತು ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಲ್ಲ. ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಆರೋಗ್ಯದ ಕಡೆಗೆ ಗಮನವಿರಲಿ.

ಧನು ರಾಶಿ

ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ನೀವು ಬಹಳ ದಿನಗಳ ಮಾಡಬೇಕೆಂದು ಬಯಸಿದ್ದ ಕೆಲಸವೊಂದನ್ನು ಮಾಡಿ ಪೂರೈಸುತ್ತೀರಿ. ನೀವು ಯಾವುದದಾದರು ಹಣಕಾಸಿನ ವ್ಯವಹಾರ ಮಾಡಲು ಬ್ಯಾಂಕ್‌ಗೆ ಭೇಟಿ ನೀಡುತ್ತಿದ್ದರೆ ಈ ದಿನ ಬಹಳ ನಿಮಗೆ ಒಳಿತಾಗಲಿದೆ. ಅವಿವಾಹಿತರಿಗೆ ಈ ದಿನ ಮದುವೆ ಸಂಬಂಧವಾಗಿ ಶುಭ ಸುದ್ದಿ ಇರಲಿದೆ. ನಿಮ್ಮ ವ್ಯವಹಾರದಲ್ಲಿ ನೀವು ಬಯಸಿದ ಲಾಭವನ್ನು ಪಡೆಯುವುದರಿಂದ ನೀವು ತುಂಬಾ ಸಂತೋಷವಾಗಿರುತ್ತೀರಿ. ವಿದ್ಯಾರ್ಥಿಗಳು ಉನ್ನತ ಶಿಕ್ದಷಣ ಸಂಬಂಧ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ಇದು ನಿಮಗೆ ಭವಿಷ್ಯದಲ್ಲಿ ಲಾಭದಾಯಕವಾಗಲಿದೆ. ನಿಮ್ಮ ಆಪ್ತರಿಂದ ನಿಮಗೆ ಶುಭ ಸುದ್ದಿಯೊಂದು ಕಾದಿದೆ.

ಮಕರ ರಾಶಿ

ಇಂದು ನಿಮಗೆ ತುಂಬಾ ಮೋಜಿನ ದಿನವಾಗಿರುತ್ತದೆ. ಆಸ್ತಿ ವ್ಯವಹಾರದಲ್ಲಿ ಕೆಲಸ ಮಾಡುವ ಜನರಿಗೆ ದೊಡ್ಡ ಆದೇಶ ಸಿಗಬಹುದು. ದಿನದ ಆರಂಭದಲ್ಲಿ ಸ್ವಲ್ಪ ಆಲಸ್ಯ ಇರುತ್ತದೆ. ನೀವು ಇಂದು ಯಾವುದೇ ರೀತಿಯ ಮೊಂಡುತನವನ್ನು ತಪ್ಪಿಸಬೇಕು. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ದೂರ ಪ್ರಯಾಣ ತಪ್ಪಿಸಬೇಕು. ಕುಟುಂಬದಲ್ಲಿ ಹಣಕಾಸು ಸಂಬಂಧವಾಗಿ ಒತ್ತಡ ಹೆಚ್ಚಾಗಬಹುದು. ನೀವು ಯಾರೊಬ್ಬರಿಂದ ಸಾಲ ಪಡೆದಿದ್ದರೆ, ಅದನ್ನು ಮರಳಿ ಪಡೆಯಬಹುದು. ಹಳೆಯ ತಪ್ಪನ್ನು ಪುನರಾವರ್ತಿಸಿದ್ದಕ್ಕಾಗಿ ಬೆಲೆ ತೆರುತ್ತೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ನೋವುಂಟಾಗಬಹುದು. ಯಾರ ಬಳಿಯೂ ಈ ದಿನ ಅಮೂಲ್ಯ ವಸ್ತುವನ್ನು ಪಡೆಯಬೇಡಿ.

ಕುಂಭ ರಾಶಿ

ಆರ್ಥಿಕವಾಗಿ ಇಂದು ನಿಮಗೆ ಉತ್ತಮ ದಿನವಾಗಲಿದೆ. ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿ ಕೇಳಬಹುದು. ಭಾವುಕರಾಗಿ ಯಾರ ಬಳಿಯೂ ನಿಮ್ಮ ಗುಟ್ಟನ್ನು ಹೇಳಬೇಡಿ. ಕುಟುಂಬ ಜೀವನದ ಬಗ್ಗೆ ಹೇಳುವುದಾದರೆ ನೀವು ಕೋಪ ನಿಯಂತ್ರಿಸಬೇಕು, ನಿಮ್ಮ ಮಾತುಗಳು ಸಂಬಂಧದ ಮೇಲೆ ಪ್ರಭಾವ ಬೀರದಂತೆ ಜಾಗ್ರತೆವಹಿಸಿ. ಇಂದು ನೀವು ದೊಡ್ಡ ಆತಂಕದಿಂದ ಮುಕ್ತರಾಗುತ್ತೀರಿ. ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವು ದೀರ್ಘಸಮಯದಿಂದ ಬಾಕಿ ಉಳಿದಿದ್ದರೆ ಅದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿಮ್ಮ ಮನೆ ಮತ್ತು ಹೊರಗಿನ ಕೆಲಸದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಮೀನ ರಾಶಿ

ಮೀನ ರಾಶಿಯ ಮಂದಿ ಈ ದಿನ ಬಹಳ ಶ್ರಮ ಪಡೆಬೇಕಾಗುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ಹಳೆಯ ವಿಷಯವು ನಿಮ್ಮನ್ನು ಕಾಡಬಹುದು. ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳದಂತೆ ಸಲಹೆ ನೀಡಲಾಗಿದೆ. ಈ ದಿನ ಹಣಕಾಸು ವಿಚಾರವಾಗಿ ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ಹಾಗೆ ಆರೋಗ್ಯ ಸಂಬಂಧಿಸಿದಂತೆ ಖರ್ಚು ಮಾಡಬೇಕಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-16-2025-daily-horoscope-prediction-for-12-zodiac-signs-in-kannada

Here is May 16 daily horoscope prediction for 12 zodiac signs read on...
Story first published: Friday, May 16, 2025, 6:06 [IST]
X
Desktop Bottom Promotion