Dina Bhavishya: ಮೇ 15ರಂದು ನಿಮ್ಮ ರಾಶಿಯಲ್ಲಿ ಯಾವ ಲಾಭವಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ 15ರ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಈ ದಿನದಂದು ಬಹಳ ಲಾಭ ಪಡೆಯುತ್ತೀರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ಸಿಗಲಿದೆ. ನೀವು ಯಾವುದಾದರು ವಸ್ತುವನ್ನು ಖರೀದಿಸಲೆಂದು ಬಹಳ ಸಮಯನ್ನು ಹಣ ಒಟ್ಟು ಮಾಡಿಟ್ಟದರೆ ಅದರಲ್ಲಿ ಸ್ವಲ್ಪ ಪ್ರಮಾನದ ಹಣವನ್ನು ಬೇರೆ ಕೆಲಸಗಳಿಗೆ ಬಳಸಬೇಕಾಗಬಹುದು. ಕೆಸಲದ ಕಾರಣಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ಸಮಯದ ಜೊತೆಗೆ ದೊಡ್ಡ ಕೆಲಸಗಳ ಮಾಡಲು ಮುಂದಾಗುವುದು ಯಶಸ್ಸಿಗೆ ಕಾರಣವಾಗಲಿದೆ. ವಾಹನ ಚಾಲಕರು ಈ ದಿನ ಎಚ್ಚರಿಕೆಯಿಂದ ಇರುವುದು ಉತ್ತಮ. ದುಂದು ವೆಚ್ಚವನ್ನು ಕಡಿಮೆ ಮಾಡುವುದು ಬಹಳ ಉತ್ತಮ ಇಲ್ಲದಿದ್ದರೆ ಈ ದಿನದಂದು ಬಹಳ ಖರ್ಚು ಮಾಡುವ ಸಾಧ್ಯತೆ ಇದೆ. ನೀವು ತಾಳ್ಮೆ ಕಳೆದುಕೊಳ್ಳುವುದನ್ನು ತಪ್ಪಿಸಿ ಶಾಂತವಾಗಿರಲು ಯತ್ನಿಸಿ.

ವೃಷಭ ರಾಶಿ

ಕೆಲಸದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ಉದ್ಯಮಿಗಳು ಇಂದು ಲಾಭದಾಯಕ ದಿನವಾಗಿ ನೋಡಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸಲಿದ್ದು, ಮತ್ತೆ ಹಳೆಯ ತಪ್ಪನ್ನೇ ಮುಂದುವರೆಸಲು ಹೋಗಬೇಡಿ. ನಿಮ್ಮಲ್ಲಿ ಬಹುಕಾಲದ ಅನಾರೋಗ್ಯ ಸಮಸ್ಯೆಗಳಿದ್ದರೆ ಆ ಕುರಿತಾಗಿ ವಿಶೇಷ ಕಾಳಜಿ ಇಡಿ. ಮನೆಯ ಸದಸ್ಯರೊಬ್ಬರ ಆರ್ಥಿಕ ಸಮಸ್ಯೆ ದೊಡ್ಡದಾಗಬಹುದು. ದಿನಸಿ, ಬೀದಿ ಬದಿಯ ವ್ಯಾಪಾರಿಗಳಲ್ಲಿ ಇಂದು ದೊಡ್ಡ ಲಾಭ ನೋಡಬಹುದು. ನೀವು ಯಾವುದಾದರು ಸರ್ಕಾರಿ ದಾಖಲೆಗಳ ಸಂಬಂಧ ಕಚೇರಿಗಳಿಗೆ ಅಲೆದಾಡುತ್ತಿದ್ದರೆ ಈ ದಿನ ಅದರಿಂದ ಮುಕ್ತಿ ಪಡೆಯಬಹುದು. ಹಾಗೆ ನಿಮ್ಮಿಂದಾಗಿ ಬೇರೆಯವರ ಕೆಲಸಕ್ಕೂ ನೆರವಾಗಬಹುದು.

May-15-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿ ಮಂದಿ ಈ ದಿನದಂದು ಬಹಳ ದಣಿಯುತ್ತೀರಿ. ವ್ಯಾಪಾರಸ್ಥರಿಗೆ ಇಂದು ಸವಾಲಿನ ದಿನವಾಗಲಿದೆ. ನಿಮ್ಮ ಯಾವು ಕೆಲಸಗಳು ಬಾಕಿ ಉಳಿದಿದ್ದರೆ, ಅದರಿಂದ ನೀವು ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಕಚೇರಿಯಲ್ಲಿ ಅಧಿಕ ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ನೀವು ಯಾರಿಗಾದರು ಹಣ ನೀಡಿದ್ದರೆ ಈ ದಿನ ಅವರಿಂದ ವಾಪಾಸು ಪಡೆಯಬಹುದು. ಹಾಗೆ ದೇವಸ್ಥಾನಕ್ಕೆ, ಸಂಬಂಧಿಕರ ಮನೆಗೆ ನೀವು ಭೇಟಿ ನೀಡಬಹುದು. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು. ಮನೆಯಲ್ಲಿ ಯಾವುದಾದರು ನವೀಕರಣ ಕೆಲಸ ಮಾಡುತ್ತಿದ್ದರೆ ಇಂದು ಸುಲಭವಾಗಿ ಮಾಡಬಹುದು. ಅತಿಥಿಗಳ ಆಗಮನದ ನಿರೀಕ್ಷೆ ಇದೆ.

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಈ ದಿನದಂದು ಮಿಶ್ರಫಲ ಅನುಭವಿಸುತ್ತೀರಿ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಇರದೇ ಇದ್ದರೂ ಆ ಕೆಲಸಗಳು ಪರಿಪೂರ್ಣ ಆಗಲಿದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತ ಹಲವು ಕೆಲಸಗಳ್ನು ಪೂರ್ಣ ಮಾಡುತ್ತೀರಿ. ಆರ್ಥಿಕವಾಗಿ ನೀವು ಬಯಸಿದ ದಿನ ಇದಾಗಿರುವುದಿಲ್ಲ. ನಿಮ್ಮಿಂದಾಗಿ ಖರ್ಚು ಅಥವಾ ಸಾಲ ಪಡೆಯುವ ಸಾಧ್ಯತೆ ಇದೆ. ಮನೆಗಾಗಿ ಒಂದು ವಸ್ತು ಖರೀದಿಸಬಹುದು. ಹಾಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಕ್ಕೆ ಈ ದಿನ ಕಾರಣವಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿ ಮಂದಿ ಈ ದಿನ ವಿಶ್ರಾಂತಿಗೆ ಒಳಗಾಗುತ್ತೀರಿ. ಯಾವುದೋ ಒಂದು ಕೆಲಸ ಪೂರ್ಣಗೊಂಡ ಭಾವ ನಿಮ್ಮಲ್ಲಿರಲಿದೆ. ಹಣಕಾಸು ವಿಚಾರವಾಗಿ ಶುಭಕರ ಸುದ್ದಿ ಪಡೆಯುತ್ತೀರಿ. ಅವಿವಾಹಿತರಲ್ಲಿ ಈ ದಿನ ಬಹಳ ಆರಾಮದಾಯಕವಾಗಿರಲಿದೆ. ದೊಡ್ಡ ವ್ಯವಹಾರಕ್ಕೂ ಮುನ್ನ ಹಲವು ಬಾರಿ ಆಲೋಚಿಸುವುದು ಉತ್ತಮ. ನಿಮ್ಮಿಂದಾಗಿ ಬೇರೊಬ್ಬರಿಗೆ ಹಾನಿಯಾಗದಂತೆ ಎಚ್ಚರ ವಹಿಸಿ. ತಾಳ್ಮೆ ಕಳೆದುಕೊಳ್ಳಬೇಡಿ. ಇಂದು ಕೆಲಸದ ವಿಷಯದಲ್ಲಿ ಅನುಕೂಲಕರವಾಗಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಉನ್ನತ ಅಧಿಕಾರಿಗಳ ಸಲಹೆ ಪಡೆಯುವಿರಿ. ಪ್ರವಾಸ ತೆರಳುವ ಕುರಿತಾಗಿ ನೀವು ಗಟ್ಟಿ ನಿರ್ಧಾರ ತೆಗೆದುಕೊಳ್ಳಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಈ ದಿನದಂದು ದೊಡ್ಡ ಸವಾಲುಗಳ ಎದುರಿಸುತ್ತೀರಿ, ಹಣಕಾಸು ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಭಾಗಿಯಾಗಿ. ನಿಮ್ಮ ಸಂಬಂಧಿಕರಲ್ಲಿ ವ್ಯವಹಾರ ಮಾಡುತ್ತಿದ್ದರೆ ಎಲ್ಲವನ್ನು ನಿಭಾಯಿಸುವುದು ಕಲಿಯಿರಿ. ಈ ದಿನ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಮೇಲಾಧಿಕಾರಿಗಳ ಮಾತು ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರಿಗಳಲ್ಲಿ ಈ ಹಿಂದೆ ಕಾಡಿದ್ದ ಹಣಕಾಸು ಸಮಸ್ಯೆಯೊಂದು ಬಗೆಹರಿಯಲಿದೆ. ಯಾರಿಂದಾದರು ಆರ್ಥಿಕ ಸಹಾಯಕ್ಕೆ ಮನವಿ ಬರಬಹುದು. ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ಸಮಯದಲ್ಲಿ ದೂರ ಪ್ರಯಾಣಕ್ಕೆ ಮುಂದಾಗುತ್ತೀರಿ. ನಿಮ್ಮ ಆಲೋಚನೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಈ ದಿನ ಉತ್ತಮವಾಗಿ ಸಾಗಲಿದೆ. ನೀವು ಖಾಸಗಿ ಸಂಸ್ಥೆಯ ಕೆಲಸಗಾರರಾಗಿದ್ದರೆ ಈ ದಿನ ನಿಮಗೆ ಒತ್ತಡ ಹೆಚ್ಚಾಗಬಹುದು, ಇದರಿಂದ ನಿಮ್ಮ ಮನಃಶಾಂತಿ ಹಾಳಾಗಬಹುದು. ಬ್ಯಾಂಕಿಂಗ್ ವ್ಯವಹಾರದಲ್ಲಿ ನಿಮಗೆ ದೊಡ್ಡ ಸವಾಲುಗಳು ಎದುರಾಗಬಹುದು. ಸ್ಮೇಹಿತರೊಂದಿಗೆ ನೀವು ಹಣಕಾಸು ವ್ಯವಹಾರ ಮಾಡಿದ್ದರೆ ಅದರಿಂದ ಕಲಹಗಳು ಉಂಟಾಗಬಹುದು.

ವೃಶ್ಚಿಕ ರಾಶಿ

ನೀವು ಸ್ವಂತ ಉದ್ಯೋಗ ಮಾಡುವ ಕನಸು ಹೊತ್ತಿದ್ದರೆ ಆ ಸಂಬಂಧ ದೃಢ ನಿರ್ಧಾರ ಕೈಗೊಳ್ಳಿ. ಇಂದು ನೀವು ಕುಟುಂಬದೊಂದಿಗೆ ಸಮಯ ಕಳೆದರೆ ಉತ್ತಮ. ಮಕ್ಕಳ ಭವಿಷ್ಯ ಕುರಿತಾದ ಚಿಂತೆಯೊಂದು ಮತ್ತಷ್ಟು ದೊಡ್ಡದಾಗಬಹುದು. ಆದರೆ ಹಣಕಾಸು ಸಂಬಂಧ ಈ ಹಿಂದೆ ಇದ್ದ ಸಮಸ್ಯೆಯೊಂದು ದೂರಾಗಬಹುದು. ಬಹಳ ಕಾಲದಿಂದ ಬರಬೇಕಿದ್ದ ಹಣವೊಂದು ನಿಮ್ಮ ಕೈ ಸೇರಲಿದೆ. ದಿನಗೂಲಿ ನೌಕರರಾಗಿದ್ದರೆ ಆರೋಗ್ಯದಲ್ಲಿ ಏರುಪೇರು ನೋಡುತ್ತೀರಿ. ನೀವು ಆಸ್ಪತ್ರೆ, ಕಾರ್ಖಾನೆ ನೌಕರರಾಗಿದ್ದರೆ ಇಂದು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಆಪ್ತರೊಬ್ಬರಿಂದ ನಿಮ್ಮ ತಾಳ್ಮೆ ಪರೀಕ್ಷೆಯಾಗಲಿದೆ.

ಧನು ರಾಶಿ

ಧನು ರಾಶಿಯ ಮಂದಿ ಈ ದಿನದಂದು ಬಹಳ ಜಾಗರುಕತೆಯಿಂದ ಇರಬೇಕು. ನೀವು ಇಂದು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಇತರರ ಸಲಹೆ ಕೇಳುವ ಬದಲಿಗೆ ಸ್ವ ನಿರ್ಧಾರ ತೆಗೆದುಕೊಳ್ಳಿ. ಕೌಟುಂಬಿಕ ವಿಚಾರದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಎದುರಾಗಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಅನಾರೋಗ್ಯವೊಂದು ಅಡ್ಡಿಯಾಗಬಹುದು, ಇದರಿಂದ ಒತ್ತಡ ಕುಡ ಹೆಚ್ಚಾಗಬಹುದು. ಮುಖ್ಯ ಕೆಲಸವೊಂದಕ್ಕೆ ಕೂಡಿಟ್ಟ ಹಣವನ್ನು ನೀವು ಅನಗತ್ಯ ವಿಚಾರಕ್ಕೆ ಖರ್ಚು ಮಾಡಬಹುದು. ಸಂಬಂಧಿಕರಿಂದ ನೀವು ಕಹಿ ಸುದ್ದಿ ಕೇಳಬಹುದು.

ಮಕರ ರಾಶಿ

ಮಕರ ರಾಶಿಯ ಮಂದಿ ಈ ದಿನದಂದು ದೊಡ್ಡ ಸವಾಲುಗಳನ್ನು ಎದುರಿಸಬಹುದು. ನೀವು ಯಾವುದಾದರು ಕೆಲಸದ ವಿಚಾರವಾಗಿ ಮಾತುಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಲು ಶ್ರಮ ಪಡೆಬೇಕಾಗುತ್ತದೆ. ನಿಮ್ಮ ಅಭ್ಯಾಸವೊಂದನ್ನು ಬದಲಾಯಿಸಿಕೊಳ್ಳುವುದರಿಂದ ಹಣಕಾಸು ವಿಚಾರವಾಗಿ ಉಳಿತಾಯಕ್ಕೆ ಮುಂದಾಗಬಹುದು. ಹಣಕಾಸು ಸ್ಥಿತಿ ಉತ್ತಮಾಗಿರಲಿದೆ. ಆದರೆ ಆಲೋಚನೆ ಮಾಡಿ ಖರ್ಚು ಮಾಡಿ. ಮನೆಯ ವಾತಾವರಣವು ಶಾಂತವಾಗಿರಲಿದೆ. ಸರ್ಕಾರಿ ನೌಕರರಿಗೆ ವರ್ಗಾವಣೆ, ಬಡ್ತಿ ವಿಚಾರದಲ್ಲಿ ಯಶಸ್ಸು ಸಿಗಲಿದೆ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಈ ದಿನದಂದು ಮುಖ್ಯ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹಣಕಾಸು ವಿಚಾರವಾಗಿ ಇಂದು ಎಲ್ಲರನ್ನು ಒಂದೇ ರೀತಿಯಲ್ಲಿ ನಂಬಬೇಡಿ. ವ್ಯಾಪಾರಸ್ಥರಿಗೆ ಇಂದು ದೀರ್ಘ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ನಿಮ್ಮ ಬಹಳಷ್ಟು ಹಣವನ್ನು ಅನಗತ್ಯವಾಗಿ ಖರ್ಚು ಮಾಡಲು ಮುಂದಾಗಬೇಡಿ. ಕೆಲಸದ ಸ್ಥಳದಲ್ಲಿ ನಿಮಗೆ ಅಚ್ಚರಿ ಎದುರಾಗಬಹುದು. ಅವಿವಾಹಿತರಾಗಿದ್ದರೆ ಧನಲಾಭದ ನಿರೀಕ್ಷೆ ಇಡಬಹುದು. ಹೊಸ ವಸ್ತು ಖರೀದಿಯನ್ನು ಮುಂದೂಡುವುದು ಉತ್ತಮ.

ಮಿನ ರಾಶಿ

ಮೀನ ರಾಶಿಯ ಮಂದಿ ಈ ದಿನದಂದು ಕುಟುಂಬ ಸದಸ್ಯರೊಂದಿಗೆ ಪ್ರವಾಸ ಕೈಗೊಳ್ಳಬಹುದು. ಪ್ರೇಮಿಗಳ ನಡುವೆ ಮಾಧುರ್ಯ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ಈ ಹಿಂದೆ ಯಾವುದಾದರು ಮನಸ್ತಾಪ ಇದ್ದರೆ ಅದು ನಿವಾರಣೆಯಾಗಲಿದೆ. ಆದ್ರೆ ದಿನದ ಅಂತ್ಯದಲ್ಲಿ ದಿಢೀರ್ ಖರ್ಚುಗಳು ಬರಬಹುದು. ಇದರಿಂದ ಒತ್ತಡ ನಿಮ್ಮಲ್ಲಿ ಹೆಚ್ಚಾಗಬಹುದು. ವ್ಯಾಪಾರಿಗಳಿಗೆ ಮಿಶ್ರಲಾಭವಿದೆ. ನಿಮ್ಮ ಆರೋಗ್ಯ ವಿಚಾರವಾಗಿ ವೈದ್ಯರ ಭೇಟಿಯಾಗುತ್ತೀರಿ, ಇದರಿಂದ ಮಾನಸಿಕ ನೆಮ್ಮದಿ ಪಡೆಯಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-15-2025-daily-horoscope-prediction-for-12-zodiac-signs-in-kannada

Here is May 15 daily horoscope prediction for 12 zodiac signs read on...
Story first published: Thursday, May 15, 2025, 6:15 [IST]
X
Desktop Bottom Promotion