Latest Updates
-
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ
Dina Bhavishya: ಮೇ 14ರಂದು ಯಾರಿಗೆ ಕಾದಿದೆ ಧನಲಾಭ!
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ 14ರ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನದಂದು ಬಹಳ ಶ್ರಮಪಡುತ್ತೀರಿ. ನಿಮ್ಮ ಮನೆಯಲ್ಲಿ ಕೆಲಸದ ನಿಮ್ಮಿತ್ತ ಬಹಳ ಶ್ರಮ ಇರಲಿದೆ. ಮನೆಗಾಗಿ ವಸ್ತುವೊಂದನ್ನು ಖರೀದಿಸಲು ನೀವು ಖರ್ಚು ಮಾಡುತ್ತೀರಿ. ನಿಮ್ಮ ಬಹುದೊಡ್ಡ ಕನಸೊಂದನ್ನು ಈ ದಿನ ಈಡೇರಿಸಿಕೊಳ್ಳಲು ಮುಂದಾಗಬಹುದು. ಯಾರಿಂದಾದರು ನೀವು ಹಣಕಾಸಿನ ನೆರವು ಪಡೆಯಲು ಮುಂದಾದರೆ ಈ ದಿನ ಬಹಳ ಶುಭವಾಗಲಿದೆ. ನೀವು ವ್ಯಾಪಾರ ಕ್ಷೇತ್ರದಲ್ಲಿದ್ದರೆ ಈ ದಿನ ಬಹಳ ಲಾಭದಾಯಕ ದಿನ. ದೊಡ್ಡ ಪ್ರಗತಿಗೆ ಇಂದು ನಾಂದಿಯಾಗಹುದು. ಕೌಟುಂಬಿಕ ವಿಚಾರವಾಗಿ ನೀವು ತಾಳ್ಮೆಯಿಂದ ವರ್ತಿಸುವುದು ಉತ್ತಮ. ದಾಂಪತ್ಯ ಜೀವನದವು ಸುಖಕರವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದ ಈ ದಿನ ಆರೋಗ್ಯದ ಕಡೆ ಗಮನ ಹರಿಸುವ ದಿನ. ಏಕೆಂದರೆ ನಿಮ್ಮ ದಿನವು ಆರೋಗ್ಯದಲ್ಲಿ ಏರುಪೇರು ಎದುರಿಸಬೇಕಾಗುವ ದಿನ. ಕೆಮ್ಮು, ಜ್ವರದಂತಹ ಸಾಮಾನ್ಯ ಅನಾರೋಗ್ಯಗಳು ಕಾಡಬಹುದು. ಈ ದಿನ ಹಣದ ವಿಚಾರವಾಗಿ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಯಬಹುದು. ನಿಮ್ಮ ಕುಟುಂಬದಲ್ಲಿ ಭಾವನಾತ್ಮಕ ಸಂಬಂಧ ಗಟ್ಟಿಯಾಗಲಿದೆ. ಬಹಳ ದಿನಗಳಿಂದ ನಿಮಗೆ ಕಾಡುತ್ತಿದ್ದ ಹಣಕಾಸು ಸಮಸ್ಯೆಯೊಂದು ಬಗೆಹರಿಯಬಹುದು. ಆದ್ರೆ ಈ ಸಮಸ್ಯೆಗೆ ನೀವು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ದೂರ ಪ್ರಯಾಣವನ್ನು ಆದಷ್ಟು ಮುಂದೂಡುವುದು ಮುಖ್ಯ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ಹಚ್ಚು ಸಮಯ ಮನೆಯಿಂದ ಹೊರಗೆ ಕಳೆಯಬೇಕಾಗುತ್ತದೆ. ನೀವು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರೆ, ಇಂದು ನೀವು ಒಳ್ಳೆಯ ಸುದ್ದಿ ಕೇಳಬಹುದು. ವ್ಯಾಪಾರಿಗಳಲ್ಲಿ ಬಹಳಷ್ಟು ಎಚ್ಚರಿಕೆ ಅಗತ್ಯ. ನೀವು ರಿಯಲ್ ಎಸ್ಟೇಟ್, ಕಾಂಟ್ರ್ಯಾಕ್ಟ್ ಕೆಲಸ ಮಾಡುವವರಾಗಿದ್ದರೆ ದೊಡ್ಡ ಲಾಭದ ಅಕಾಶ ಪಡೆಯಲಿದ್ದೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಅಷ್ಟು ಚೆನ್ನಾಗಿರಲ್ಲ. ಪ್ರತಿಕೂಲ ಹವಾಮಾನವು ನಿಮ್ಮಲ್ಲಿ ಅನಾರೋಗ್ಯ ಉಂಟು ಮಾಡಬಹುದು. ಪ್ರವಾಸ ಮಾಡುವ ನಿಮ್ಮ ಆಲೋಚನೆಗೆ ಹೊಸ ಪ್ರಗತಿ ಇದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನದಂದು ಬಹಳಷ್ಟು ಒತ್ತಡ ಎದುರಿಸಬೇಕಾಗುತ್ತದೆ, ಮನೆಯಲ್ಲಿ ನಿಮಗೆ ಹಣಕಾಸು ಸಂಬಂಧವಾಗಿ ಒತ್ತಡ ಇರಬಹುದು. ಹಾಗೆ ಉದ್ಯೋಗದ ಸ್ಥಳದಲ್ಲಿ ನಿಮ್ಮ ಕೆಲಸ ಸಂಬಂಧಿಸಿದ ಒತ್ತಡ ಹೆಚ್ಚಾಗಲಿದೆ. ಪ್ರಣಯ ಜೀವನದಲ್ಲಿ ಕೆಲವು ಏರುಪೇರುಗಳು ಕಂಡುಬರುತ್ತವೆ. ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಇಂದು ನೀವು ಉಳಿತಾಯದ ಕಡೆಗೂ ಗಮನವಿಡಿ. ಉದ್ಯಮಿಗಳು ಈ ದಿನವು ಉತ್ತಮ ಲಾಭ ಮಾಡುತ್ತಾರೆ, ಆದ್ರೆ ತಕ್ಕ ಶ್ರಮವನ್ನು ಹಾಕಬೇಕಾಗುತ್ತದೆ. ಆಹಾರ ಸಂಬಂಧಿಸಿದ ಖರ್ಚು ಹೆಚ್ಚಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನದಂದು ಒತ್ತಡವಿಲ್ಲದ ದಿನವಾಗಿ ಕಳೆಯುತ್ತೀರಿ, ಸಂಬಂಧಿಕರ ಮನೆಗೆ ನೀವು ಪ್ರಯಾಣ ಮಾಡಬಹುದು. ನೀವು ಯಾರಿಗಾದರೂ ಸಾಲ ನೀಡಿದ್ದರೆ, ಮರುಪಾವತಿ ಮಾಡುವುದು ಉತ್ತಮ. ವಿದ್ಯಾರ್ಥಿಗಳು ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವ್ಯಾಪಾರಿಗಳು ಇಂದು ಲಾಭದತ್ತ ತಿರುಗಬಹುದು. ಗೃಹಿಣಿಯರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಇಂದು ಆಯಾಸದಂತಹ ಸಮಸ್ಯೆಗೆ ನೀವು ಒಳಗಾಗಬಹುದು. ನಿಮ್ಮ ಶ್ರಮವು ಇಂದು ವ್ಯರ್ಥವಾಗುವುದಿಲ್ಲ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನದಂದು ಮಿಶ್ರ ಫಲ ಪಡೆಯುತ್ತೀರಿ, ನೀವು ದೊಡ್ಡ ಸವಾಲುಗಳನ್ನು ಬಹಳ ಯಶಸ್ವಿಯಾಗಿ ಎದುರಿಸುತ್ತೀರಿ. ಹಾಗೆ ನೀವು ವ್ಯಾಪಾರಸ್ಥರಾಗಿದ್ದರೆ ಇಂದು ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಬೇಕು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ದೊರೆಯಲಿದೆ. ಇಂದು ಹಣದ ವಿಷಯದಲ್ಲಿ ಮಿಶ್ರ ಫಲ ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಮನೆಯ ಸದಸ್ಯರ ಅನಾರೋಗ್ಯವನ್ನು ನಿರ್ಲಕ್ಷಿಸಬೇಡಿ. ಸಮಯಕ್ಕೆ ನೀವು ಬೆಲೆ ನೀಡಿದರೆ ನಿಮಗಾಗಿ ಹಲವು ಸಮಯ ಉತ್ತಮ ಫಲಿತಾಂಶ ನೀಡಲಿದೆ.
ತುಲಾ ರಾಶಿ
ನೀವಿಂದು ಕೆಲಸಕ್ಕೆ ಸಂಬಂಧಿಸಿದ ಒತ್ತಡ ಎದುರಿಸಲಿದ್ದೀರಿ. ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಲು ಹೊರಟಿದ್ದರೆ, ನೀವು ತುಂಬಾ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಯಾರಿಂದಾದರು ಹಣ ಪಡೆದಿದ್ದರೆ ಅದನ್ನು ಮರಳಿಸುವ ಕುರಿತು ಆಲೋಚಿಸಿ. ಹೊಸದಾಗಿ ಸಾಲ ಮಾಡಲು ಮುಂದಾಗಬೇಡಿ. ಯಾರಿಂದಾದರು ದುಬಾರಿ ವಸ್ತು ಪಡೆದರೆ ಈ ದಿನ ಬಹಳ ಎಚ್ಚರಿಕೆಯಿಂದ ಅದನ್ನು ಕಾಪಾಡಿಕೊಳ್ಳಿ. ಮನೆಯ ಸದಸ್ಯರೊಂದಿಗೆ ನಿಮ್ಮ ನಡವಳಿಕೆಯನ್ನು ಚೆನ್ನಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಈ ದಿನದಂದು ಸರ್ಕಾರಿ ಕೆಲಸ ಸಂಬಂಧ ಮನೆಯಿಂದ ಹೊರೆ ಕಳೆಯುತ್ತೀರಿ. ನಿಮ್ಮ ಪೂರ್ವಜರ ವ್ಯವಹಾರದೊಂದಿಗೆ ನೀವು ಸಂಬಂಧ ಹೊಂದಿದ್ದರೆ, ನಿಮ್ಮ ತಂದೆಯ ಯಾವುದೇ ಸಲಹೆಯನ್ನು ನಿರ್ಲಕ್ಷಿಸಬೇಡಿ. ವರ್ಗಾವಣೆ, ಬಡ್ತಿಯಂತಹ ಕೆಲಸದಲ್ಲಿ ನಿಮಗೆ ಲಾಭದಾಯಕ ದಿನವಾಗಲಿದೆ. ನಿಮ್ಮ ಶ್ರಮವು ವ್ಯರ್ಥವಾಗುವುದಿಲ್ಲ. ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು, ಅದರಲ್ಲೂ ಉದರ ಸಂಬಂಧಿ ಸಮಸ್ಯೆಗಳಿಗೆ ನೀವು ಒಳಗಾಗಬಹುದು.
ಧನು ರಾಶಿ
ಧನು ರಾಶಿಯ ಮಂದಿ ಈ ದಿನದಂದು ಬಹಳ ಲಾಭ ನೋಡುತ್ತೀರಿ. ನಿಮ್ಮ ಆರ್ಥಿಕ ಸಂಕಷ್ಟವೊಂದು ದೂರಾಗಲಿದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ಸುಲಭವಾಗಿ ಕೆಲಸ ಮಾಡುತ್ತೀರಿ. ಹಣಕಾಸಿನ ಪರಿಸ್ಥಿತಿ ಸುಧರಿಸುವುದರಿಂದ ಒತ್ತಡವಿಲ್ಲದ ದಿನವಾಗಿ ನೋಡುವಿರಿ. ಅವಿವಾಹಿತರಲ್ಲಿ ಈ ದಿನ ಬಹಳ ಖರ್ಚು ನೋಡಬಹುದು. ನೀವು ದೇವಾಲಯ ಭೇಟಿಗೆ ಮುಂದಾಗುತ್ತೀರಿ, ಇದು ನಿಮಗೆ ನೆಮ್ಮದಿ ತರಬಹುದು.
ಮಕರ ರಾಶಿ
ಮಕರ ರಾಶಿ ಮಂದಿಯು ಈ ದಿನ ತುಂಬಾನೆ ಒತ್ತಡದಿಂದ ಅಥವಾ ಕೆಲಸದಿಂದ ತುಂಬಿದ ದಿನವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಇಂದು ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನೀವು ಉದ್ಯಮಿಯಾಗಿದ್ದರೆ ಮತ್ತು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ಲಾಭಾಂಶ ಹೆಚ್ಚಾಗಬಹುದು. ಬಾಕಿ ಉಳಿದಿರುವ ಕೆಲಸಗಳನ್ನು ಈ ದಿನ ಪೂರ್ಣಗೊಳಸಿ. ಪ್ರಯಾಣದಲ್ಲಿ ನೀವು ತೊಡಗಬಹುದು. ಇದು ನಿಮ್ಮ ವಿಶ್ರಾಂತಿ ಹಾಳು ಮಾಡಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನವು ಬಹಳ ಉತ್ತಮ ಅವಕಾಶ ತಂದು ಕೊಡಬಹುದು.
ಕುಂಭ ರಾಶಿ
ಕುಂಭ ರಾಶಿ ಮಂದಿ ಈ ದಿನ ಬಹಳ ಶ್ರಮ ಹಾಕುತ್ತೀರಿ. ಇದು ನಿಮ್ಮಲ್ಲಿ ಗೆಲುವಿನ ದಾರಿಗೆ ಕಾರಣವಾಗಲಿದೆ. ನೀವು ಕೆಲವು ದಿನಗಳಿಂದ ಕೆಲಸದಲ್ಲಿ ಅಡೆತಡೆ ಎಎದುರಿಸಿದ್ದರೆ ಈ ದಿನ ಬಹಳ ಆರಾಮವಾಗಿ ಅದು ನಿವಾರಣೆಯಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಬಹಳಷ್ಟು ಸಮಯ ನೀವು ಮನೆಯಿಂದ ಹೊರಗೆ ಕಳೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ದಿನವಾಗಲಿದೆ. ಚಿಕ್ಕದಾದ ಒಂದು ಪ್ರವಾಸ ಮಾಡಬಹುದು. ವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು.
ಮೀನ ರಾಶಿ
ಮೀನ ರಾಶಿಯವರು ಈ ದಿನವು ಬಹಳ ಆರಾಮದಾಯಕ ದಿನವಾಗಿ ಕಳೆಯುತ್ತೀರಿ. ನೀವು ಎಲ್ಲಾ ಕೆಲಸದಲ್ಲಿಯೂ ಶ್ರಮ ಹಾಕುತ್ತೀರಿ, ಇದು ಲಾಭದತ್ತ ಕರೆದೊಯ್ಯಲಿದೆ. ಗೃಹಿಣಿಯರಲ್ಲಿ ದೊಡ್ಡ ಸವಾಲೊಂದು ಎದುರಾಗಲಿದೆ, ಇದರಿಂದ ನಿಮ್ಮ ಕೆಲಸದಲ್ಲಿ ಅಡೆತಡೆ ನೋಡಬಹುದು. ದೊಡ್ಡ ವ್ಯಹಾರವನ್ನು ಮಾಡುವ ಮುನ್ನ ಬಹಳ ಎಚ್ಚರಿಕೆ ಇರಲಿ. ವಾಹನ ಖರೀದಿಗಾಗಿ ನೀವು ಹಲವು ದಿನದಿಂದ ಕನಸು ಕಂಡಿದ್ದರೆ ಆ ವಿಚಾರವಾಗಿ ಒಂದು ಹೆಜ್ಜೆ ಹತ್ತಿರವಾಗುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ನೋಡಲಿದ್ದೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











