Dina Bhavishya: ಮೇ 13ರಂದು ನಿಮ್ಮ ರಾಶಿಗೆ ಏನೆಲ್ಲಾ ಲಾಭವಿದೆ?

ವೈದಿಕಶಾಸ್ತ್ರದ ಪ್ರಕಾರ ಮೇ 13ರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ

ಮೇಷ ರಾಶಿ

ಮೇಷ ರಾಶಿಯ ಮಂದಿ ಈ ದಿನ ಬಹಳ ಶ್ರಮ ಪಡಬೇಕಾಗುತ್ತದೆ. ನಿಮ್ಮ ಆಲೋಚನೆಗಳಿಗೆ ಸೂಕ್ತವಾದ ಸಹಕಾರ ಸಿಗದೆ ಇರಬಹುದು. ನಿಮ್ಮ ಸಮಸ್ಯೆಗಳ ಸುಧಾರಿಸಲು ನೀವು ಹಣಕಾಸು ವಿಚಾರವಾಗಿ ಕಷ್ಟಪಡಬೇಕಾಗುತ್ತದೆ. ನೀವು ಶುಭವಾಗಲಿದೆ ಅಂದುಕೊಂಡು ಆರಂಭಿಸಿದ ಆಲೋಚನೆಯಲ್ಲಿ ಅಡೆತಡೆ ಎದುರಾಗಬಹುದು. ನಿಮ್ಮ ಬಯಕೆಯಲ್ಲಿ ಒಂದನ್ನು ಈಡೇರಿಸಿಕೊಳ್ಳಬಹುದು. ಹಾಗೆ ಬಹಳ ಸಮಯದ ಕನಸೊಂದನ್ನು ನನಸಾಗಿಸಲು ಹಾಕುವ ಶ್ರಮವು ವ್ಯರ್ಥವಾಗುವುದಿಲ್ಲ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ದಿನ ಬಹಳ ಅಚ್ಚರಿಯ ದಿನವಾಗಬಹುದು. ನೀವು ಯಾವುದೇ ಕೆಲಸ ಮಾಡಿದರು ಅದರಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ದೊಡ್ಡ ಕನಸನ್ನು ನನಸಾಗಿಸಲು ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಆಪ್ತರಲ್ಲು ನೀವು ಹಣಕಾಸು ವ್ಯವಹಾರ ಮಾಡುವಾಗ ಬಹಳ ಎಚ್ಚರ ಇಡಿ. ಯಾವ ಕಾರಣಕ್ಕೂ ದೊಡ್ಡ ವ್ಯವಹಾರ ಮಾಡುವಾಗ ಮಧ್ಯಸ್ಥಿಕೆದಾರರ ಮಾತಿಗೆ ಮರುಳಾಗಬೇಡಿ. ನಿಮ್ಮ ಕೈಯಿಂದ ಯಾವುದಾದರು ಶುಭ ಕಾರ್ಯಕ್ಕೆ ಸಹಕಾರ ಸಿಗಬಹುದು. ಅವಿವಾಹಿತರಿಗೆ ಈ ದಿನ ಬಹಳ ಶುಭವಾಗಲಿದೆ. ನೀವು ಕೆಲಸ ಮಾಡುತ್ತಿದ್ದರೆ ಇಂದು ನಿಮ್ಮ ಕೆಲಸದಲ್ಲಿ ಹಲವು ಅಡೆತಡೆಗಳು ಎದುರಾಗಬಹುದು. ಕೌಟುಂಬಿಕ ಜೀವನ ಸಾಮಾನ್ಯವಾಗಿರುತ್ತದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದರೆ ಉತ್ತಮ.

May-13-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಈ ದಿನದಂದು ಬಹಳ ಲಾಭ ಮಾಡುವ ದಿನವಾಗಬಹುದು. ಉದ್ಯೋಗ ಹುಡುಕುವವರು ಈ ದಿನ ದೊಡ್ಡ ಅವಕಾಶಗಳ ಪಡೆಯಬಹುದು. ನೀವು ಬಹಳ ಸಮಯದಿಂದ ಮಾಡಬೇಕೆಂದು ಬಯಸಿದ್ದ ಕೆಲಸವೊಂದನ್ನು ಸುಲಭವಾಗಿ ಮುಗಿಸಬಹುದು. ಹಣಕಾಸು ವಿಚಾರಗಳಲ್ಲಿ ನೀವು ತೆಗೆದುಕೊಳ್ಳಬೇಕಿದ್ದ ನಿರ್ಧಾರಗಳನ್ನು ತಕ್ಷಣ ಪೂರೈಸಿ. ಕೆಲವೊಂದು ವಿಚಾರವಾಗಿ ನೀವು ಮನೆಯಲ್ಲಿ ತಾಳ್ಮೆ ಕಳೆದುಕೊಳ್ಳುತ್ತೀರಿ. ಇದರಿಂದ ನಿಮ್ಮ ಮನಸ್ಸಿನಲ್ಲಿ ನೋವು ಉಳಿಯಬಹುದು. ವಿಶ್ರಾಂತಿ ಪಡೆಯುವ ದಿನವೂ ಹೌದು.

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಈ ದಿನದಂದು ಆರ್ಥಕವಾಗಿ ಸದೃಢವಾಗಲಿದ್ದೀರಿ. ನೀವು ಅಂದುಕೊಂಡಂತೆ ನಿಮ್ಮ ಕೆಲಸವೊಂದು ನೆರವೇರಲಿದೆ. ಇದರಿಂದ ಭವಿಷ್ಯ ದಿನಕ್ಕಾಗಿ ನಿಮಗೆ ಹಣಕಾಸು ಸ್ಥಿತಿ ಸುಧಾರಿಸುತ್ತದೆ. ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ಮುಂಬರುವ ಸಮಯದಲ್ಲಿ ನೀವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮಿಂದಾಗಿ ಸ್ನೇಹಿತರಿಗೆ ಅಥವಾ ಕುಟುಂಬ ಸದಸ್ಯರೊಬ್ಬರಿಗೆ ಸಹಕಾರ ಸಿಗಲಿದೆ. ಅವಿವಾಹಿತರಾಗಿದ್ದರೆ ಈ ದಿನದಂದು ಬಹಳ ಓಡಾಟ ಮಾಡಬೇಕಾಗಬಹುದು. ಹರಕೆಗಳ ಮರೆತ್ತಿದ್ದರೆ ನೆನಪಿಸಿಕೊಳ್ಳಿ.

ಸಿಂಹ ರಾಶಿ

ನೀವು ಉದ್ಯೋಗಿಗಳಾಗಿದ್ದರೆ ಬಹಳ ಶ್ರಮದಾಯಕ ದಿನವಾಗಲಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ಅರ್ಧಕ್ಕೆ ನಿಲ್ಲಬಹುದು. ಹಾಗೆ ಬಹಳ ಒತ್ತಡ ಇರುವುದರಿಂದ ನಿಮ್ಮಲ್ಲಿ ಗೊಂದಲ ಹಾಗೂ ಆತಂಕ ಹೆಚ್ಚಾಗಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಅದೃಷ್ಟವಿರುತ್ತದೆ. ನೀವು ಉತ್ತಮ ಹೂಡಿಕೆ ಅವಕಾಶವನ್ನು ಪಡೆಯಬಹುದು. ನಿಮ್ಮಿಂದಾಗುವ ಕೆಲವು ಕೆಲಸಗಳಲ್ಲಿ ಏರುಪೇರು ಆಗಬಹುದು. ದೂರ ಪ್ರಯಾಣ ಮಾಡುವುದರಿಂದ ನಿಮಗೆ ಮನಃಶಾಂತಿ ನೆಲೆಸಬಹುದು. ಉಳಿತಾಯ ಹಾಗೂ ಹೂಡಿಕೆ ಸಂಬಂಧಿಸಿದಂತೆ ನಿಮಗೆ ಲಾಭದಾಯಕ ದಿನವಾಗುತ್ತದೆ. ವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ಹಲವು ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಈ ದಿನ ಲಾಭದಾಯಕ ಅವಕಾಶಗಳ ಪಡೆಯುತ್ತೀರಿ, ಸಂತಸದ ಹಾಗೆ ಉಲ್ಲಾಸದ ದಿನವಾಗಿರಲಿದೆ. ಹಣ ನಷ್ಟದ ಬಲವಾದ ಸಾಧ್ಯತೆಯಿದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳುವುದನ್ನು ತಪ್ಪಿಸಿ. ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ತೆಗದುಕೊಳ್ಳಬೇಡಿ. ಆರೋಗ್ಯದಿಂದಾಗಿ ನೀವು ಇಂದು ಬಹಳಷ್ಟು ಕಿರಿಕಿರಿಯನ್ನು ಅನುಭವಿಸುವಿರಿ. ಆರ್ಥಿಕ ರಂಗದಲ್ಲಿ ದಿನವು ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲವನ್ನು ಕಾಣಬಹುದು. ಸವಾಲಿನ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುತ್ತೀರಿ.

ತುಲಾ ರಾಶಿ

ತುಲಾ ರಾಶಿಯವರು ಈ ದಿನ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕಹಿ ಇದ್ದರೆ ಈ ದಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತರೆ ಸಂಸಾರದಲ್ಲಿ ಸುಖ ಇರಲಿದೆ. ಇಂದು ವ್ಯಾಪಾರಿಗಳು ಆರ್ಥಿಕ ಲಾಭಗಳನ್ನು ಪಡೆಯಬಹುದು. ಇಂದು ನೀವು ಬೆಲೆಬಾಳುವ ವಸ್ತುಗಳ ಖರೀದಿ ಮಾಡಿದರೆ ಶುಭವಾಗಲಿದೆ. ಹೊಸ ಉದ್ಯೋಗ ಹುಡುಕುತ್ತಿದ್ದರೆ ನಿಮಗೆ ಶುಭವಾಗಲಿದೆ. ನೀವು ಯಾರಿಗಾದರು ಹಣಕಾಸು ಸಹಾಯ ಮಾಡಿದ್ದರೆ ಈ ಸಮಯದಲ್ಲಿ ಮರಳಿ ಪಡೆಯಬಹುದು. ಶುಭ ಕಾರ್ಯ ಸಂಬಂಧ ನೀವು ಆಯಾಸಕ್ಕೆ ಒಳಗಾಗಬಹುದು.

ವೃಶ್ಚಿಕ ರಾಶಿ

ನೀವು ಇಂದು ನಿಮ್ಮ ಕೆಲಸವನ್ನು ಬಹಳ ಆತ್ಮವಿಶ್ವಾಸದಿಂದ ಮಾಡಿ ಮುಗಿಸುತ್ತೀರಿ. ಇಂದು ನೀವು ಹಣಕಾಸಿನ ವಿಷಯದಲ್ಲಿ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮನೆಯಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇದ್ದರೆ ಆ ಸಂಬಂಧವಾಗಿ ನೀವು ಪರಿಹಾರ ಹುಡುಕಲು ಮುಂದಾಗಬಹುದು. ಗಂಭೀರವಾಗಿ ಚಿಂತಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬಹುದು. ಇಂದು ನಿಮ್ಮ ಕೆಲಸಕ್ಕೆ ಅನಾರೋಗ್ಯ ಸಮಸ್ಯೆಯೊಂದು ಅಡ್ಡಿಯಾಗಬಹುದು. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ ಮತ್ತು ನಿಮ್ಮ ವ್ಯಾಪಾರ ವಲಯ ಪ್ರಗತಿ ಕಾಣಲಿದೆ. ಔದ್ಯೋಗಿಕ ವಿಚಾರವಾಗಿ ನಿಮಗೆ ಯಾವುದಾದರು ಸಮಸ್ಯೆ ಇದ್ದರೆ ದೂರಾಗಬಹುದು.

ಧನು ರಾಶಿ

ಧನು ರಾಶಿಯ ಮಂದಿ ಈ ದಿನದಂದು ಬಹಳ ಲಾಭ ನೋಡಬಹುದು. ನೀವು ಆಹಾರ ಸಂಬಂಧಿ ಉದ್ಯೋಗ ಮಾಡುತ್ತಿದ್ದರೆ ಅದರಲ್ಲಿ ಲಾಭ ನೋಡುತ್ತೀರಿ. ಹಾಗೆ ನಿಮ್ಮ ಕಠಿಣ ಶ್ರಮಕ್ಕೆ ಈ ದಿನ ಫಲ ಸಿಗಲಿದೆ. ಆದಾಯದಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಯಿದೆ. ಇದಕ್ಕಾಗಿ ಹೆಚ್ಚು ಶ್ರಮ ವಹಿಸಿ. ಉದ್ಯೋಗಿಗಳಿಗೆ ಒತ್ತಡ ಇದ್ದರೂ ನಿಭಾಯಿಸುವುದನ್ನು ಕಲಿಯುವುದು ಉತ್ತಮ. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು. ಯಾರಿಂದಾದರು ಹಣ ಸಹಾಯ ಬಯಸಿದ್ದರೆ ಈ ದಿನ ಅವರಿಂದ ಧನಾತ್ಮಕ ಪ್ರತಿಕ್ರಿಯೆ ನೋಡಬಹುದು. ದೊಡ್ಡ ವ್ಯವಹಾರ ಮಾಡುವಾಗ ಎಚ್ಚರಿಕೆ ಇರಲಿದೆ.

ಮಕರ ರಾಶಿ

ಇಂದು ನಿಮ್ಮ ಆರೋಗ್ಯದಲ್ಲಿನ ಏರುಪೇರು ಬಹಳ ಸಮಸ್ಯೆಗಳ ತರಬಹುದು. ಇದು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಅದೃಷ್ಟವಿರುತ್ತದೆ. ನೀವು ಉತ್ತಮ ಹೂಡಿಕೆ ಅವಕಾಶವನ್ನು ಪಡೆಯಬಹುದು. ಕುಟುಂಬ ಸದಸ್ಯರೊಂದಿಗಿನ ಸಂಬಂಧದಲ್ಲಿ ಪ್ರೀತಿ ಇರಲಿದೆ. ಬಹಳ ದಿನಗಳಿಂದ ನೀವು ಮಾಡಲು ಯತ್ನಿಸಿದ್ದ ವಿಚಾರದಲ್ಲಿ ಅಡೆತಡೆ ಎದುರಾಗಿದ್ದರೆ ಈ ದಿನ ಸ್ವಲ್ಪ ನಿವಾರಣೆ ಸಂಭವವಿದೆ. ಬ್ಯಾಂಕಿಂಗ್, ಸರ್ಕಾರಿ, ಕೆಲಸಗಳಲ್ಲಿ ನಿಮ್ಮ ಪರವಾದ ಒಲವಿರಲಿದೆ.

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಇತರರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ, ಹಾಗೆ ಅನಗತ್ಯ ಚರ್ಚೆ, ಅನಗತ್ಯ ವಾದ ಮಾಡದೇ ಇರುವುದು ಉತ್ತಮ. ನೀವು ಖಾಸಗಿ ಕಂಪನಿ ಕೆಲಸದಲ್ಲಿದ್ದರೆ ಈ ಸಮಯದಲ್ಲಿ ಹಲವು ಅಡೆತಡೆಗಳು ಎದುರಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಕಡಿಮೆಯಾಗುವ ಸಾಧ್ಯತೆಯಿದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದರೆ ನಿಮ್ಮಲ್ಲಿ ಪ್ರತಿಫಲ ನೋಡಬಹುದು. ದೂರ ದೃಷ್ಟಿಯ ನಿಮ್ಮ ನಡೆಗೆ ಪ್ರಶಂಸೆ ಕೇಳಿಬರಲಿದೆ. ಯಾರೊಂದಿಗೂ ಇಂದು ವ್ಯವಹಾರದ ವಿಚಾರವಾಗಿ ಅದರಲ್ಲೂ ಹಣಕಾಸಿನ ವಿಚಾರವಾಗಿ ಯಾವುದೇ ದೊಡ್ಡ ನಿರ್ಧಾರ, ಒಪ್ಪಂದ ಮಾಡಬೇಡಿ.

ಮೀನ ರಾಶಿ

ಇಂದು ಮೀನ ರಾಶಿಯವರು ಬಹಳ ದಿನದಿಂದ ಬಯಸಿದ್ದ ಕನಸೊಂದನ್ನು ನನಸಾಗಿಸಲು ಮುಂದಾಗಬಹುದು. ಮನೆಗಾಗಿ ನೀವು ಅಗತ್ಯ ವಸ್ತುವೊಂದನ್ನು ಖರೀದಿಸಬಹುದು. ಯಾರ ಬಳಿಯಾದರು ಹಣಕಾಸಿನ ಸಹಾಯ ಪಡೆದಿದ್ದರೆ ಇಂದು ಸವಾಲುಗಳ ಎದುರಿಸಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ಒತ್ತಡ ಹೆಚ್ಚಾಗಬಹುದು. ವ್ಯಾಪಾರಿಗಳು ಇಂದು ಆರ್ಥಿಕ ಲಾಭಗಳನ್ನು ಪಡೆಯಬಹುದು. ಇಂದು ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚು ಗಮನ ಹರಿಸಿ. ವಾಹನ ಸಂಬಂಧಿ ಖರ್ಚುಗಳ ಮೇಲೆ ನಿಗಾ ಇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-13-2025-daily-horoscope-prediction-for-12-zodiac-signs-in-kannada

Here is May 13 daily horoscope prediction for 12 zodiac signs read on...
Story first published: Tuesday, May 13, 2025, 6:11 [IST]
X
Desktop Bottom Promotion