Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
Dina Bhavishya: ಮೇ 12ರಂದು ನಿಮ್ಮ ರಾಶಿಗೆ ಏನೆಲ್ಲಾ ಲಾಭವಿದೆ?
ವೈದಿಕಶಾಸ್ತ್ರದ ಪ್ರಕಾರ ಮೇ12ರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ
ಮೇಷ ರಾಶಿ
ಮೇಷ ರಾಶಿಯವರು ಈ ದಿನದಂದು ಬಹಳ ಓಡಾಟದಲ್ಲಿ ಕಳೆಯುತ್ತೀರಿ. ನಿಮ್ಮ ದೈನಂದಿನ ಕೆಲಸದಲ್ಲಿ ಸಣ್ಣ ಪುಟ್ಟ ಅಡೆತಡೆ ಕಾಡಬಹುದು. ಬಹಳ ಸಮಯದಿಂದ ನಿಮ್ಮ ಕೆಲಸಗಳಲ್ಲಿ ಒತ್ತಡ ಇದ್ದರೆ ಅದನ್ನು ಪರಿಹರಿಸಲು ನೀವು ಮುಂದಾಗಬೇಕು. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲಸ ಮಾಡುವ ಜನರು ಇಂದು ಉತ್ತಮ ಲಾಭ ಪಡೆಯಬಹುದು. ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ಸ್ಥಳೀಯರು ಮುಂದುವರಿಯಲು ಉತ್ತಮ ಅವಕಾಶವನ್ನು ಪಡೆಯಬಹುದು. ಹಣದ ವಿಷಯದಲ್ಲಿ ಇಂದು ಸರಾಸರಿ ದಿನವಾಗಲಿದೆ. ದೊಡ್ಡ ವ್ಯವಹಾರದಲ್ಲಿ ನೀವು ತೊಡಗುವುದರಿಂದ ಬಿಡುವಿಲ್ಲದ ಕೆಲಸಕ್ಕೆ ಕಾರಣವಾಗಬಹುದು. ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರು ನೋಡುತ್ತೀರಿ.
ವೃಷಭ ರಾಶಿ
ವೃಷಭ ರಾಶಿ ಮಂದಿ ಈ ದಿನ ಬಹಳ ಅನುಕೂಲ ನೋಡಬಹುದು. ದೊಡ್ಡ ಸಮಸ್ಯೆಗಳ ಪರಿಹರಿಸಲು ನೀವು ಓಡಾಟ ಮಾಡಬೇಕಾಗಬಹುದು. ದುಬಾರಿ ವಸ್ತು ಖರೀದಿ ಅಥವಾ ಕುಟುಂಬದ ಸದಸ್ಯರೊಬ್ಬರಿಗೆ ನೀವು ಹಣ ನೀಡಬೇಕಾಗಿ ಬರಬಹುದು. ಪ್ರಯಾಣದಲ್ಲಿ ತೊಡಗುವುದರಿಂದ ನೀವು ಆಯಾಸಕ್ಕೆ ಒಳಗಾಗುತ್ತೀರಿ. ಪಂಚೇಂದ್ರಿಯಕ್ಕೆ ಸಂಬಂಧಿಸಿದಂತೆ ಯಾವುದಾದರು ಸಮಸ್ಯೆಗೆ ನೀವು ಒಳಗಾಗಬಹುದು. ಪ್ರವಾಸದಂತ ವಿಶೇಷ ಕ್ಷಣಗಳನ್ನು ಆನಂದಿಸಲು ಹಿಂಜರಿಕೆ ಬೇಡ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಬಹಳ ಲಾಭದಾಯಕವಾಗುವ ನಿರೀಕ್ಷೆ ಇದೆ. ಹಣಕಾಸಿನ ದೃಷ್ಟಿಕೋನದಿಂದ ಇಂದು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಹಣದ ವಿಚಾರವಾಗಿ ಯಾರೊಂದಿಗೂ ವ್ಯವಹಾರಕ್ಕೆ ಇಳಿಯುವ ಮುನ್ನ ಎಚ್ಚರಿಕೆ ಇಡಿ. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಇಂದು ಕುಟುಂಬದೊಂದಿಗೆ ಸಂತಸದಿಂದ ನೀವು ಕಳೆಯಬಹುದು. ಸಂಗಾತಿಯ ಮನಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ನೀವು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಈ ದಿನ ಶ್ರಮ ವಹಿಸಿದ್ರೆ ಮುಂದೆ ಲಾಭದಾಯಕ ದಿನವಾಗಿ ಪರಿಣಮಿಸಬಹುದು. ಯಾರ ಬಳಿಯೂ ಸಾಲಕ್ಕೆ ಮುಂದಾಗುವುದು ತಪ್ಪಿಸಿ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನ ಹೆಚ್ಚು ಸಮಯ ಓಡಾಟದಲ್ಲಿ ಕಳೆಯುತ್ತೀರಿ. ದೊಡ್ಡ ಸಮಸ್ಯೆಗಳನ್ನು ಎದುರಿಸುವಾಗ ಆಪ್ತರಿಂದ ಸಲಹೆ ಪಡೆಯುವುದು ಬಹಳ ಉತ್ತಮ. ಇಂದು ಮಕ್ಕಳ ವಿಚಾರವಾಗಿ ನಿಮಗೆ ಖರ್ಚು ಹೆಚ್ಚಾಗಬಹುದು. ಹೀಗಾಗಿ ಹಣದ ವಿಷಯದಲ್ಲಿ ದಿನವು ಏರಿಳಿತಗಳಿಂದ ತುಂಬಿರುತ್ತದೆ. ಬಹಳ ಸಮಯದಿಂದ ಅಲರ್ಜಿ, ಕೆಮ್ಮು, ಶೀತದಂತಹ ಸಮಸ್ಯೆಗೆ ಒಳಗಾದರೆ ಸೂಕ್ತ ಚಿಕಿತ್ಸೆಗೆ ಒಳಗಾಗುವುದು ಉತ್ತಮ. ಮನೆಯಿಂದ ಹೊರ ಹೋಗುವ ಮುನ್ನ ಹಿರಿಯದ ಆಶೀರ್ವಾದ ಪಡೆಯುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನವು ಬಹಳ ಶುಭವಾಗಲಿದೆ. ನೀವು ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು. ನಿಮ್ಮಿಂದಾಗಿ ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಹಣಕಾಸು ವಿಚಾರವಾಗಿ ತಡವಾದ ನಿರ್ಧಾರ ತೆಗೆದುಕೊಳ್ಳಬೇಡಿ. ಹೂಡಿಕೆ, ಉಳಿತಾಯದ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯ. ನಿಮ್ಮ ಮನೆಯಲ್ಲಿ ಯಾರಿಗಾದರು ಉದರ ಸಂಬಂಧಿ ಸಮಸ್ಯೆ ಇದ್ದರೆ ಆ ಕುರಿತಾಗ ಎಚ್ಚರಿಕೆ ಅಗತ್ಯ. ಉದ್ಯೋಗ ಸಂಬಂಧ ಆತುರದ ನಿರ್ಧಾರಕ್ಕೆ ಮುಂದಾಗದೆ ಇರುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಉದ್ಯೋಗ ಅಥವಾ ವ್ಯವಹಾರವಾಗಿರಲಿ ತುಂಬಾ ಶ್ರಮ ಹಾಕಬೇಕಾಗುತ್ತದೆ. ಆಪ್ತರು, ಸ್ನೇಹಿತರಲ್ಲಿ ಏನಾದರು ಮನಸ್ತಾಪವಿದ್ದರೆ ಈ ದಿನ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ, ಇಲ್ಲವೇ ಈ ಸಮಸ್ಯೆ ದೊಡ್ಡದಾಗಬಹುದು. ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಿ. ಹಣದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ಫಲ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಅವಕಾಶ ನಿಮಗಿದೆ. ನಿಮ್ಮ ಅಮೂಲ್ಯವಾದ ವಸ್ತುಗಳ ಕುರಿತಾಗಿ ಎಚ್ಚರ ವಹಿಸಿ. ದೊಡ್ಡ ವ್ಯವಹಾರಕ್ಕಾಗಿ ನೀವು ಸಲಹೆ ಪಡೆಯುವುದು ಬಹಳ ಮುಖ್ಯ. ಹಾಗೆ ದಾಂಪತ್ಯದಲ್ಲಿನ ಸಮಸ್ಯೆಗಳ ಬಗೆಹರಿಸಿಕೊಳ್ಳಿ.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲ ನೀಡುವ ದಿನವಾಗಿರಲಿದೆ. ಮನೆಯಲ್ಲಿ ಅಥವಾ ಕೆಲಸದಲ್ಲಿ ನೀವು ಪ್ರತಿಕೂಲತೆಯನ್ ಎದುರಿಸಬೇಕಾಗಬಹುದು. ವ್ಯಾಪಾರಸ್ಥರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಇಂದು ಬುದ್ದಿವಂತಿಕೆಯಿಂದ ಎಲ್ಲಾ ವ್ಯವಹಾರದಲ್ಲೂ ಭಾಗಿಯಾಗುವುದು ಉತ್ತಮ. ಉನ್ನತ ಅಧಿಕಾರಿಗಳೊಂದಗೆ ಯಾವುದಾದರು ವೈಮನಸ್ಸು ಇದ್ದರೆ ಬಗೆಹರಿಸಿಕೊಳ್ಳಿ. ಎಲ್ಲರ ಮಾತನ್ನು ಕುರುಡಾಗಿ ನಂಬಲು ಹೋಗಬೇಡಿ. ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದು ಬಗೆಹರಿಯಲಿದೆ.
ವೃಶ್ಚಿಕ ರಾಶಿ
ಇಂದು ಉದ್ಯೋಗದ ವಿಚಾರವಾಗಿ ಬಹಳ ಓಡಾಡುತ್ತೀರಿ. ಬಹಳ ಸಮಯದಿಂದ ನಿಮಗೆ ಕಾಡುತ್ತಿದ್ದ ಗೊಂದಲವನ್ನು ಬಗೆಹರಿಸಿಕೊಳ್ಳಿ. ಕುಟುಂಬ ಸದಸ್ಯರೊಂದಿಗೆ ಮಾತುಕತೆಯಲ್ಲಿ ತೊಡಗುವುದು ಅವರೊಂದಿಗಿದ್ದ ಕೆಲವು ವೈಮನಸ್ಸನ್ನು ಬಗೆಹರಿಸಲಿದೆ. ಹಣದ ವಿಚಾರವಾಗಿ ಯಾರೊಂದಿಗೂ ದೊಡ್ಡ ವ್ಯವಹಾರಕ್ಕೆ ಮುಂದಾಗಬೇಡಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಉದ್ಯೋಗ ಬದಲಿಸಲು ಇದು ಸೂಕ್ತ ಸಮಯವಲ್ಲ. ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಆಪ್ತರಿಗೆ ಹೇಳುವುದರಿಂದ ಅವರು ಸಹಾಯ ಮಾಡುವ ಅಪೇಕ್ಷೆ ಹೆಚ್ಚಾಗಲಿದೆ.
ಧನು ರಾಶಿ
ವ್ಯಾಪಾರಸ್ಥರು ಇಂದು ಉತ್ತಮ ಲಾಭ ಪಡೆಯುವ ದಿನವಾಗಿದೆ. ಉದ್ಯೋಗಿಗಳು ಇಂದು ತುಂಬಾ ಕಷ್ಟಪಡಬೇಕಾಗಬಹುದು. ನಿಮ್ಮ ಕೆಲವು ಕೆಲಸಗಳಲ್ಲಿ ಆರ್ಥಿಕ ಅಡೆ3ತಡೆ ನೋಡಬಹುದು. ಯಾರಿಂದಲೂ ದೊಡ್ಡ ವಿಚಾರಗಳನ್ನು ನೀವು ಅಪೇಕ್ಷಿಸಬೇಡಿ. ಶೀತ, ಕೆಮ್ಮು ರೀತಿಯ ಸಮಸ್ಯೆಗಳು ನಿವಾರಣೆಯಾಗಬಹುದು. ಸೋಮಾರಿತನ ಬಿಟ್ಟು ಈ ದಿನ ಕೆಲಸದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಮನೆಯ ಸದಸ್ಯರೊಂದಿಗೆ ಜಗಳ, ವಾದಗಳು ಉಂಟಾಬಹುದು. ದೇವಾಲಯ ಭೇಟಿಯಂತಹ ಕೆಲಸಕ್ಕೆ ನೀವು ಮುಂದಾಗಬಹುದು.
ಮಕರ ರಾಶಿ
ಮಕರ ರಾಶಿಯ ಮಂದಿ ಈ ದಿನದಂದು ಬಹಳ ಸುತ್ತಾಟದ ಮೂಲಕ ಕಳೆಯುತ್ತೀರಿ. ಯಾವುದೇ ಕೆಲಸವನ್ನು ತಡವಾಗಿ ಮಾಡಲು ಮುಂದಾಗಬೇಡಿ. ಮನೆಯಲ್ಲಿ ಅಥವಾ ಕೆಲಸದಲ್ಲಿ ನೀವು ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು. ಹಣಕಾಸು ಪರಿಸ್ಥಿತಿ ಉತ್ತಮವಾಗಿರಲಿದೆ. ನಿಮಗೆ ಬರಬೇಕಿದ್ದ ಹಣವೊಂದು ನಿಮ್ಮ ಕೈ ಸೇರಬಹುದು. ಹಾಗೆ ಯಾರ ಬಳಿಯಾದರು ಆರ್ಥಿಕ ಸಹಾಯಕ್ಕೆ ಮನವಿ ಮಾಡಿದ್ದರೆ ಅದರಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ದೃಷ್ಟಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆ ಎದುರಿಸುತ್ತಿದ್ದರೆ ಈ ದಿನ ವೈದ್ಯರ ಭೇಟಿಯಾಗುವುದು ಅಥವಾ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಈ ದಿನ ಬಹಳ ಜಾಗರೂಕರಾಗಿರಬೇಕು. ನಿಮ್ಮ ಅಮೂಲ್ಯ ವಸ್ತುಗಳನ್ನು ಆದಷ್ಟು ಎಚ್ಚರಿಕೆಯಿಂದ ಬಳಸುವುದು ಉತ್ತಮ. ಸಮಯದೊಂದಿಗೆ ನಿಮ್ಮ ಕಷ್ಟಗಳು ಕಳೆದು ಹೋಗಲಿದೆ. ಯಾರೊಂದಿಗಾದರು ವ್ಯವಹಾರ ಸಂಬಂಧಿ ಮನಸ್ತಾಪ ಮೂಡಬಹುದು. ಕೆಲಸದ ಸ್ಥಳದಲ್ಲಿನ ಬದಲಾಣೆಯು ನಿಮಗೆ ಒತ್ತಡ ತರಬಹುದು. ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಲು ಉತ್ತಮ ದಿನ. ಸಂಬಂಧದಲ್ಲಿ ಸಾಮರಸ್ಯ ಉಳಿಯುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಅತಿಯಾದ ಆಯಾಸ ನಿಮಗೆ ಕಾಡಬಹುದು.
ಮೀನ ರಾಶಿಯವರಿಗೆ ಇಂದು ಉತ್ತಮ ದಿನ. ನಿಮ್ಮ ಎಲ್ಲಾ ಕೆಲಸದಲ್ಲೂ ಧನಾತ್ಮಕ ಬದಲಾವಣೆ ನೋಡಬಹುದು. ಈ ದಿನ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಂಡರೆ ನೆಮ್ಮದಿ ನೋಡಬಹುದು. ವ್ಯಾಪಾರ ಮಾಡುವ ಜನರು ಸಹ ಇಂದು ನಿರೀಕ್ಷಿತ ಫಲಿತಾಂಶ ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಬೇರೆಯವರ ಕುರಿತಾದ ಅನಗತ್ಯ ವಿಚಾರಗಳಲ್ಲಿ ಮಾತುಕತೆ, ವಿವಾದದಲ್ಲಿ ಭಾಗಿಯಾಗದೆ ಉಳಿಯುವುದು ಉತ್ತಮ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











