Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
Dina Bhavishya: ಮೇ 11ರ ಈ ದಿನ ನಿಮ್ಮ ರಾಶಿಫಲದಲ್ಲಿ ಏನಿದೆ?
ವೈದಿಕಶಾಸ್ತ್ರದ ಪ್ರಕಾರ ಮೇ11ರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ
ಮೇಷ ರಾಶಿ
ನೀವು ಸರ್ಕಾರಿ ಕೆಲಸಕ್ಕೆ ತಯಾರಿ ನಡೆಸುತ್ತಿದ್ದರೆ ಇಂದು ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಉನ್ನತ ವ್ಯಾಸಂಗ ಬಯಸುವವರಿಗೆ ಉತ್ತಮ ದಿನವಾಗಬಹುದು. ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ನಿಮ್ಮ ದುಂದುವೆಚ್ಚದ ಸ್ವಭಾವವನ್ನೂ ನೀವು ನಿಯಂತ್ರಿಸಬೇಕು. ಕುಟುಂಬ ಜೀವನದಲ್ಲಿ ಶಾಂತಿ, ಸಂತೋಷ ಇರುತ್ತದೆ. ನಿಮ್ಮ ಎಲ್ಲಾ ಕೆಲಸಕ್ಕೆ ಸಂಬಂಧಿಸಿದ ಯೋಜನೆ ಪ್ರಕಾರ ಮಾಡಿದರೆ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಪೂರ್ಣವಾಗಲಿದೆ. ಶುಭ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ.
ವೃಷಭ ರಾಶಿ
ಇಂದು ನಿಮಗೆ ಬಹಳ ಅನುಕೂಲಕರ ದಿನವಾಗಿರಲಿದೆ, ನಿಮ್ಮ ದೈನಂದಿನ ಸಮಸ್ಯೆಗಳು ನಿವಾರಣೆಯಾಗಬಹುದು. ದೊಡ್ಡ ವಿಚಾರಗಳಲ್ಲಿ ನಿಮಗೆ ಧನಲಾಭದ ನಿರೀಕ್ಷೆ. ಇಂದು ನಿಮ್ಮ ಕೆಲವು ದೊಡ್ಡ ಸಮಸ್ಯೆ ಬಗೆಹರಿಯಲಿದೆ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ನಿಮ್ಮ ಒತ್ತಡಗಳು ನಿವಾರಣೆಯಾಗಬಹುದು. ಆಪ್ತರೊಂದಿಗೆ ನಿಮ್ಮ ಯಾವುದಾದರು ಮನಸ್ತಾಪ ಇದ್ದರೆ ನಿವಾರಣೆ ಆಗಲಿದೆ. ಮಕ್ಕಳ ಭವಿಷ್ಯ ಕುರಿತಾಗಿ ನೀವು ಅನಗತ್ಯ ಚಿಂತೆಗೆ ಗುರಿಯಾಗುತ್ತೀರಿ. ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಂಪರ್ಕಿಸುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ದಿನದಂದು ಬಹಳ ಓಡಾಟದಲ್ಲಿ ಕಳೆಯಬೇಕಾಗುತ್ತದೆ. ನೀವು ಕೆಲಸದ ವಿಚಾರವಾಗಿ ಬಹಳ ಕಾರ್ಯ ಪ್ರವೃತ್ತರಾಗುತ್ತೀರಿ. ಆದರೆ ದಿನದ ಅಂತ್ಯದಲ್ಲಿ ದೊಡ್ಡ ಖರ್ಚು ಮಾಡಬೇಕಾಗಬಹುದು. ಈ ದಿನ ನಿಮಗೆ ಶುಭವಾಗಿದೆ, ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ಆದರೆ ವ್ಯಾಪಾರಿಗಳು ಆರ್ಥಿಕ ವ್ಯವಹಾರ ಮಾಡುವಾಗ ಜಾಗ್ರತೆವಹಿಸಬೇಕು. ಆಪ್ತರೊಬ್ಬರ ಸಮಸ್ಯೆಗೆ ನೀವು ಕೂಡ ಕೈ ಜೋಡಿಸಿ. ಸಂಬಂಧಿಕರ ಭೇಟಿಯಾಗುವುದು ನಿಮಗೆ ಶುಭ ತರಬಹುದು. ವಿವಾಹಿತರಿಗೆ ಕುಟುಂಬಕ್ಕೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನದಂದು ಬಹಳ ದಣಿಯಬಹುದು. ಶುಭ ಕಾರ್ಯ ಸಂಬಂಧ ತಯಾರಿ ಮಾಡಬಹುದು. ನೀವು ಅನಗ್ಯತ ಚಿಂತೆ ಬಿಡಿ, ಸೂಕ್ತ ಸಮಯ ಬಂದಾಗ ನಿಮ್ಮ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ. ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನ ಮಾಡಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ನಿಮಗೆ ಹೊಸ ಪಾತ್ರಗಳು, ಜವಾಬ್ದಾರಿಗಳು ಅಥವಾ ಯಾವುದಾದರು ಹುದ್ದೆ ಸಿಗುವಂತಹ ದಿನವಾಗಬಹುದು. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ಸಮಯದಲ್ಲಿ ದೊಡ್ಡ ಲಾಭದಾಯಕ ದಿನವನ್ನು ನೋಡಬಹುದು. ನೀವು ಶುಭ ಕಾರ್ಯದಲ್ಲಿ ಭಾಗಿಯಾಗುತ್ತೀರಿ. ಖರ್ಚು ಹೆಚ್ಚಾಗಲಿದೆ. ಯಾರಿಗಾದರು ಹಣ ಪಾವತಿ ಉಳಿಸಿಕೊಂಡಿದ್ದರೆ ಈ ದಿನದಂದು ಸಂದಾಯ ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ದಿನವಾಗಲಿದೆ. ಉತ್ತಮ ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಅವಿವಾಹಿತರಿಗೆ ಇಂದು ಅತ್ಯುತ್ತಮ ದಿನ. ಬಹಳ ದಿನಗಳ ಕನಸೊಂದು ನನಸಾಗಲಿದೆ, ಸಂಬಂಧಿಕರ ಭೇಟಿ ನಿಮ್ಮಲ್ಲಿ ನೆಮ್ಮದಿ ತರಲಿದೆ. ಆರ್ಥಿಕವಾಗಿ ಸದೃಢರಾದರು ಇಂದು ಖರ್ಚು ಮಾಡುವ ದಿನವಾಗಲಿದೆ. ದೂರ ಪ್ರಯಾಣದಂತಹ ಕಾರ್ಯದಲ್ಲಿ ನೀವು ಭಾಗಿಯಾಗುತ್ತೀರಿ. ಆಯಾಸ, ದಣಿವು ನಿಮಗೆ ಕಾಡಬಹುದು. ಆಪ್ತರಲ್ಲಿ ನಂಬಿಕೆ ಇಡಿ. ವ್ಯಾಪಾರಿಗಳು ಇಂದು ಯಾರಿಗೂ ಸಾಲ ನೀಡದಿದ್ದರೆ ಒಳ್ಳೆಯದು, ಸರ್ಕಾರಿ ಕೆಲಸ ಮಾಡಿದರೆ ಬಡ್ತಿ ಪಡೆಯಬಹುದು. ಕಲಾವಿದರಿಗೆ ಈ ದಿನ ಬಹಳ ಶುಭಕರವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯ ಮಂದಿ ಈ ದಿನ ಓಡಾಟದಲ್ಲಿ ಕಳೆಯಬಹುದು. ವ್ಯಾಪಾರಸ್ಥರು ಲಾಭದ ನಡುವೆ ಇರುತ್ತಾರೆ ಆದರೆ ಪಾಲುದಾರಿಕೆಗೆ ಪ್ರವೇಶಿಸುವಾಗ ಜಾಗರೂಕರಾಗಿರಬೇಕು. ನೀವು ಕೆಲವು ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಇಂದು ನೀವು ತಾಳ್ಮೆಯಿಂದ ಇರುವುದು ನಿಮಗೆ ಒಳ್ಳೆಯದಾಗಲಿದೆ. ನಿಮ್ಮ ಹಲವು ಕನಸುಗಳನ್ನು ಈಡೇರಿಸಿಕೊಳ್ಳುವ ದಿನವಾಗಬಹುದು. ಸ್ನೇಹಿತರು, ಆಪ್ತರಿಂದ ನೀವು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ನಿಮಗೆ ಶುಭವಾಗಬಹುದು. ಬಹಳ ಸಮಯದಿಂದ ನೀವು ಜೋಪಾನವಾಗಿಟ್ಟಿದ್ದ ವಸ್ತುವೊಂದನ್ನು ಕಳೆದುಕೊಳ್ಳಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಈ ದಿನದಂದು ಬಹಳಷ್ಟು ಅನುಕೂಲಗಳ ನೋಡಬಹುದು. ದೊಡ್ಡ ಸವಾಲುಗಳನ್ನು ಎದುರಿಸುಲು ನೀವು ಮುಂದಾಗಬೇಕು. ನೀವು ಬೇಡದ ವಿಷಯಗಳನ್ನು ಬಿಟ್ಟು ನಿಮ್ಮ ಕೆಲಸದ ಕಡೆಗೆ ಗಮನಹರಿಸಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮಗಾಗಿ ಯಾವುದಾದರೊಂದು ವಸ್ತುವೊಂದನ್ನು ಖರೀದಿಸಬಹುದು. ವೈವಾಹಿಕ ಜೀವನದಲ್ಲಿದ್ದ ಕೆಲ ಭಿನ್ನಾಭಿಪ್ರಾಯಗಳು ನಿವಾರಣೆಯಾಗಬಹುದು. ಈ ದಿನ ಆರೋಗ್ಯ ಕೂಡ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಹಾಗಾಗಿ ವಿಶ್ರಾಂತಿ ಪಡೆಯುವುದು ಉತ್ತಮ. ನಿಮ್ಮ ದೈನಂದಿನ ಕೆಲಸಗಳಿಗೆ ಎದುರಾಗುತ್ತಿದ್ದ ಯಾವುದಾದರು ಅಡೆತಡೆ ನಿವಾರಣೆಯಾಗಬಹುದು.
ಧನು ರಾಶಿ
ಈ ದಿನ ನಿಮಗೆ ಆರ್ಥಿಕ ವಿಚಾರದಲ್ಲಿ ಶುಭವಾಗಲಿದೆ. ವೃತ್ತಿ ಬದುಕು, ಆರ್ಥಿಕ ಬದುಕು ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರುವುದು. ವ್ಯಾಪಾರಿಗಳು ಇಂದು ಸಾಲದ ವಹಿವಾಟು ನಡೆಸದೆ ಇರುವುದು ಉತ್ತಮ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ನೀವು ನಿಮ್ಮ ಕೋಪವನ್ನು ನಿಯಂತ್ರಿಸಲು ಸಲಹೆ ನೀಡಲಾಗುವುದು. ಮೂಳೆ, ಕೀಲು, ಬೆನ್ನು ನೋವಿಗೆ ಸಂಬಂಧಿಸಿದಂತೆ ಯಾವುದಾದರು ಸಮಸ್ಯೆಗೆ ನೀವು ಗುರಿಯಾಗಿದ್ದರೆ ಈ ದಿನ ವಿಶ್ರಾಂತಿ ಪಡೆಯುವುದು ಉತ್ತಮ. ಮನೆಯವರೊಂದಿಗೆ ಸಮಯ ಕಳೆಯುತ್ತೀರಿ.
ಮಕರ ರಾಶಿ
ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ನೋಡಬಹುದು. ಹೂಡಿಕೆ ಇತ್ಯಾದಿಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮನೆಯ ವಾತಾವರಣ ಚೆನ್ನಾಗಿರಲಿದೆ, ವೈವಾಹಿಕ ಬದುಕು ಉತ್ತಮವಾಗಿರಲಿದೆ. ನಿಮ್ಮ ಮನೆಗಾಗಿ ದುಬಾರಿ ವಸ್ತುವೊಂದನ್ನು ಖರೀದಿಸಲು ಮುಂದಾಗಬಹುದು. ಯಾವುದಾದರು ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಿದ್ದರೆ ಇಂದು ಸಂಪೂರ್ಣ ಮಾಡುವುದು ಉತ್ತಮ. ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಉತ್ತಮ ಅವಕಾಶ ಪಡೆಯಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಈ ದಿನದಂದು ಬಹಳ ಖರ್ಚು ಮಾಡುತ್ತೀರಿ. ಅದರಲ್ಲೂ ಆಹಾರ, ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ನೀವು ಅನಗ್ಯತ ಚಿಂತೆ ಬಿಡಿ, ಸೂಕ್ತ ಸಮಯ ಬಂದಾಗ ನಿಮ್ಮ ಸಮಸ್ಯೆ ಖಂಡಿತಾ ಪರಿಹಾರವಾಗುತ್ತದೆ. ಮನೆಯ ಹಿರಿಯರ ಅನಾರೋಗ್ಯವು ನಿಮಗೆ ಒತ್ತಡ ಹೆಚ್ಛಾಗಲು ಕಾರಣಾಗಲಿದೆ. ಯಾರಿಂದಾದರು ಸಾಲ ಪಡೆದಿದ್ದರೆ ಅದನ್ನು ತೀರಿಸುವುದು ಉತ್ತಮ. ಆಸ್ತಿ ವಿಚಾರವಾಗಿ ನೀವು ದೊಡ್ಡ ವ್ಯವಹಾರಕ್ಕೆ ಮುಂದಾಗಬಹುದು. ಕೆಲಸದಲ್ಲಿ ಸವಾಲುಗಳು ಬರಹುದು, ಕೆಲಸ ಬದಲಾಯಿಸುವ ನಿರ್ಧಾರವನ್ನು ಮುಂದೂಡುವುದು ಉತ್ತಮ.
ಮೀನ ರಾಶಿ
ಈ ದಿನ ನಿಮಗೆ ಹಣದ ಚಿಂತೆ ಹೆಚ್ಚಿರಲಿದೆ. ಆತುರದಿಂದ ಯಾವುದೇ ನಿರ್ಧಾರಕ್ಕೆ ಮುಂದಾಗಬೇಡಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಸಲಹೆ ನೀಡಲಾಗುವುದು. ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ. ಸಮಸ್ಯೆಗಳು ಹೆಚ್ಚಾಗುವ ಮುನ್ನ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ. ನಿಮ್ಮ ಯಾವುದೇ ವಿಚಾರವನ್ನು ಆಪ್ತರಲ್ಲಿ ಇಂದು ಹಂಚಿಕೊಂಡರೆ ಅದರಿಂದ ಲಾಭ ಪಡೆಯಬಹುದು. ವ್ಯಾಪಾರಿಗಳಿಗೆ ಇಂದು ಧನಾತ್ಮಕ ಬದಲಾವಣೆಗಳ ನೋಡುವ ದಿನವಾಗಲಿದೆ. ಕೆಲಸ ಮಾಡುವ ಮಂದಿ ಬಹುಕಾಲದ ಸಮಸ್ಯೆಯಿಂದ ಮುಕ್ತರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











