Dina Bhavishya: ಮೇ 10ರಂದು ಯಾವೆಲ್ಲಾ ರಾಶಿಯವರಿಗೆ ಅದೃಷ್ಟದ ದಿನ?

ವೈದಿಕಶಾಸ್ತ್ರದ ಪ್ರಕಾರ ಮೇ10ರ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ

ಮೇಷ ರಾಶಿ

ಈ ದಿನ ನಿಮ್ಮ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಇಡಿ. ನೀವು ನೋವು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಉದ್ಯಮಿಗಳಿಗೆ ಈ ದಿನ ಉತ್ತಮವಾಗಿದೆ. ನೆರೆಹೊರೆಯವರಲ್ಲಿ ಮನಸ್ತಾಪಗಳು ಇದ್ದರೆ ಈ ದಿನ ಹೆಚ್ಚಾಗುವ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆಗಳಲ್ಲಿ ಹೊಸ ರೀತಿ ಸವಾಲು ಎದುರಾಗಬಹುದು. ದಿನದ ಅಂತ್ಯದಲ್ಲಿ ನಿಮ್ಮ ಹಣಕಾಸು ಸಮಸ್ಯೆಗಳು ನಿವಾರಣೆಯಾಗಬಹುದು. ಶೀಘ್ರ ನೀವು ಹಣಕಾಸು ಸಮಸ್ಯೆಯಿಂದ ಹೊರಬರುತ್ತೀರಿ. ಹಾಗೆ ದೊಡ್ಡ ಅನಾರೋಗ್ಯ ಸಮಸ್ಯೆಯಿಂದಲೂ ಹೊರಬರಬಹದು. ಯಾವುದಾದರು ತಪ್ಪು ಕೆಲಸ ಮಾಡಿರುವ ವಿಚಾರವಾಗಿ ನಿಮಗಿಂದು ಅಪರಾಧಿ ಮನೋಭಾವ ಬೆಳೆಯಬಹುದು. ವ್ಯಾಪಾರಿಗಳಿಗೆ ಉತ್ತಮ ದಿನವಾಗಿರಲಿದೆ.

ವೃಷಭ ರಾಶಿ

ಕೆಲಸದ ವಿಷಯದಲ್ಲಿ ಇಂದು ನಿಮಗೆ ಶುಭವಾಗುಲಿದೆ. ಇಂದು ನಿಮ್ಮ ಗೌರವವೂ ಹೆಚ್ಚಾಗುವ ಕೆಲಸ ಮಾಡುತ್ತೀರಿ. ಬೇರೆಯವರಿಗೆ ಸಹಾಯ ಮಾಡುವ ನಿಮ್ಮ ಆಲೋಚನೆಗೆ ಪ್ರಶಂಸೆ ಸಿಗಲಿದೆ. ಕೆಲಸದ ಸಂಬಂಧ ದೂರ ಪ್ರಯಾಣಕ್ಕೆ ನೀವು ಮುಂದಾಗಬಹುದು. ಕೌಟುಂಬಿಕ ಜೀವನದಲ್ಲಿದ್ದ ಮನಸ್ತಾಪ ದೂರಾಗಲಿದೆ, ಉದ್ತೋಗಸ್ಥರಲ್ಲಿ ಒತ್ತಡ ಇರಬಹುದು. ಆರೋಗ್ಯದ ದೃಷ್ಟಿಯಲ್ಲಿ ನಿಮಗೆ ಆಯಾಸ, ಕೈ ಕಾಲು ನೋವಿನಂತಹ ಸಮಸ್ಯೆ ಹೆಚ್ಚಾಗಬಹುದು. ವ್ಯಾಪಾರಿಗಳು ದೊಡ್ಡ ವ್ಯವಹಾರಗಳ ಮುಂದೂಡಿ. ಹಾಗೆ ವ್ಯಾಪಾರ ವಿಸ್ತರಣೆ ಸಂಬಂಧ ಮತ್ತಷ್ಟು ಆಲೋಚಿಸಿ.

May-10-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಅದೃಷ್ಟ ನಿಮ್ಮ ಪರವಾಗಿದೆ. ಎಲ್ಲಾ ಕೆಲಸಗಳು ನಿಮಗೆ ಯಶಸ್ಸು ತರಬಹುದು. ನೀವು ನಿರುದ್ಯೋಗಿಯಾಗಿ ಸೂಕ್ತ ಉದ್ಯೋಗ ಹುಡುಕುತ್ತಿದ್ದರೆ ನಿಮ್ಮ ಬಯಕೆಯಂತಹ ಕೆಲಸ ಪಡೆಯುತ್ತೀರಿ. ಶೂಭ ಕಾರ್ಯದಲ್ಲಿ ಭಾಗಿಯಾಗುವ ಸಂಬಂಧ ನಿಮ್ಮಿಂದ ತಯಾರಿ ನಡೆಯಲಿದೆ. ಬಹಳ ದೊಡ್ಡ ಹೂಡಿಕೆಗೆ ಮುಂದಾಗಬೇಡಿ. ಸಕಲ ಸಮಸ್ಯೆಗಳಿಗೂ ನಿಮ್ಮ ಕೆಲಸ ಕಾರಣವಾಗಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಿ. ಆರ್ಥಿಕ ಸ್ಥಿತಿ ಸುಧಾರಿಸಬೇಕಾದರೆ ಶ್ರಮ ಹೆಚ್ಚು ಹಾಕಬೇಕಾಗುತ್ತದೆ. ನಿಮ್ಮ ಹಿರಿಯರಿಂದ ಉತ್ತಮ ಸಲಹೆ ಪಡೆಯುತ್ತೀರಿ.

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಈ ದಿನ ಅನಗತ್ಯ ಚಿಂತೆಗಳಿಗೆ ಒಳಗಾಗಬಹುದು. ಆದ್ರೆ ದಿನದ ಅಂತ್ಯದಲ್ಲಿ ಎಲ್ಲವು ಸುಧಾರಿಸಲಿದೆ. ನಿಮ್ಮ ಸಂಗಾತಿ, ಸ್ನೇಹಿತರು, ಆಪ್ತರಿಂದ ಅತ್ಯುತ್ತಮ ಬೆಂಬಲ ಪಡೆಯುವ ದಿನವಿದು. ಉನ್ನತ ಅಧಿಕಾರಿಗಳ ಒತ್ತಡವೂ ನಿಮ್ಮ ಮೇಲೆ ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ಇಂದು ವಾದಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ನಿಮ್ಮ ಕೆಲಸಗಳಲ್ಲಿ ಅಡೆತಡೆ ಬರುವ ಸಾಧ್ಯತೆ ಇದೆ. ಹೆಚ್ಚಿನ ಸಮಯ ನೀವು ಮನೆಯಿಂದ ಹೊರಗೆ ಕಳೆಯಬೇಕಾದ ಅನಿವಾರ್ಯತೆ ಇರಬಹುದು.

ಸಿಂಹ ರಾಶಿ

ನಿಮಗಿಂದು ಶ್ರಮದಾಯಕ ದಿನವಾಗಬಹುದು. ಬೇರೆಯವರ ಲಾಭಕ್ಕಾಗಿ ನೀವು ದುಡಿಬೇಕಾಗಬಹುದು. ಇಂದು ಉದ್ಯೋಗ ಮಾಡುವವರಿಗೆ ಬಹಳ ಮಂಗಳಕರ ದಿನ. ವ್ಯಾಪಾರಸ್ಥರು ಯಾವುದೇ ಹಳೆಯ ನ್ಯಾಯಾಲಯದ ಪ್ರಕರಣದಿಂದ ಮುಕ್ತರಾಗಬಹುದು. ನೀವು ಹೊಸ ಆಸ್ತಿ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿದೆ. ಕೆಲಸದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ತಪ್ಪನ್ನು ಮಾಡಬೇಡಿ, ಇಲ್ಲದಿದ್ದರೆ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ವ್ಯಾಪಾರಿಗಳು ಬಹಳ ಸವಾಲುಗಳ ಎದುರಿಸಬಹುದು.

ಕನ್ಯಾ ರಾಶಿ

ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಚರ್ಚೆಗೆ ಒಳ‍ಗಾಗಬಹುದು ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಮನೆಗಾಗಿ ದುಬಾರಿ ವಸ್ತುವೊಂದನ್ನು ಖರೀದಿಸುತ್ತೀರಿ. ಯಾವುದೇ ದೊಡ್ಡ ಹಣಕಾಸು ವಿವ್ಯಹಾರಗಳ ಮಾಡುವುದನ್ನು ತಪ್ಪಿಸಿ. ಕಚೇರಿಯಲ್ಲಿ ಬಾಕಿ ಇರುವ ಕೆಲಸದ ಹೊರೆ ಸ್ವಲ್ಪ ಹೆಚ್ಚಾಗಬಹುದು. ವ್ಯಾಪಾರ ವ್ಯವಹಾರ ವಿಸ್ತರಣೆ ಸಂಬಂಧ ನೀವು ದೊಡ್ಡ ಎದುರಾಳಿಯ ಎದುರಿಸಬೇಕಾಗಬಹುದು. ಗೃಹಿಣಿಯರ ಆರೋಗ್ಯಲ್ಲಿ ಏರುಪೇರಾಗಬಹುದು.

ತುಲಾ ರಾಶಿ

ತುಲಾ ರಾಶಿಯ ಮಂದಿ ಬಹಳ ಲಾಭ ಮಾಡುವ ದಿನವಿದು. ನೀವು ಹಲವು ದಿನದಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸಿದ್ದರೆ ಈ ದಿನ ಸ್ವಲ್ಪ ಸುಧಾರಣೆ ನೋಡಲಿದ್ದೀರಿ. ಇದಕ್ಕಾಗಿ ನೀವು ಸಹಕಾರದ ನಿರೀಕ್ಷೆಯಲ್ಲಿದ್ದರೆ ನೆರವೇರಬಹುದು. ನಿಮ್ಮ ದೊಡ್ಡ ಕನಸುಗಳ ಈಡೇರಿಸಿಕೊಳ್ಳಲು ಈ ದಿನದಂದು ದೊಡ್ಡ ಹೆಜ್ಜೆ ಇಡಲಿದ್ದೀರಿ. ಸಮಯ ಪಾಲನೆಯಿಂದಾಗಿ ನಿಮ್ಮ ಕೆಲಸಗಳು ಸುಸೂತ್ರವಾಗಿ ನಡೆಯಬಹುದು. ಆಹಾರ ಸಂಬಂಧಿಸಿದ ಖರ್ಚು ಹೆಚ್ಚಾಗಬಹುದು. ಬಹಳ ಸಮಯದಿಂದ ಮಾಡಬೇಕು ಎಂದುಕೊಂಡಿದ್ದ ಕೆಲಸವೊಂದು ಮಧ್ಯದಲ್ಲೇ ನಿಲ್ಲಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಮಂದಿ ಈ ದಿನ ಬಹಳ ಶ್ರಮಪಡುವ ದಿನವಾಗಲಿದೆ. ಕಚೇರಿಯ ವಾತಾವರಣವು ಹದಗೆಡಬಹುದು. ವ್ಯಾಪಾರಿಗಳಿಗೆ ಒಳ್ಳೆಯ ದಿನವಾಗಬಹುದು, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುವಂತಹ ಕೆಲಸ ಮಾಡಬಹುದು. ಆಪ್ತರೊಂದಿಗೆ ಯಾವುದಾದರು ಮನಸ್ತಾಪವಿದ್ದರೆ ಈ ಸಮಯದಲ್ಲಿ ನಿವಾರಣೆಯಾಗಬಹುದು. ವೈವಾಹಿಕ ಜೀವನ ಕೂಡ ಸವಾಲಿನಿಂದ ಕೂಡಿರಬಹುದು. ಈ ದಿನ ಹೆಚ್ಚು ಸಮಯ ನಿಮ್ಮ ಮನೆಯವರೊಂದಿಗೆ ಕಳೆಯುವುದು ಉತ್ತಮ. ನೀವು ಬಾಡಿಗೆದಾರರಾಗಿದ್ದರೆ ಈ ದಿನ ಮನೆ ಸಂಬಂಧ ಸಮಸ್ಯೆ ಎದುರಿಸಬಹುದು.

ಧನು ರಾಶಿ

ಧನು ರಾಶಿ ಮಂದಿ ಈ ದಿನದಂದು ಬಹಳ ಎಚ್ಚರಿಕೆಯಿಂದ ಎಲ್ಲಾ ಕೆಲಸ ಮಾಡಿ. ಕಠಿಣ ಸಮಯಗಳು ದೂರಾಗುವ ವೇಳೆ ಹತ್ತಿರವಾಗಬಹುದು. ಮನೆಯಲ್ಲಿ ನಿಮ್ಮಿಂದಾಗಿ ಒತ್ತಡ ಹೆಚ್ಚಾಗುವ ನಿರೀಕ್ಷೆ ಇದೆ. ಯಾರೊಂದಿಗೂ ದೊಡ್ಡ ಹಣಕಾಸು ವಹಿವಾಟಿಗೆ ಮುಂದಾಗಬೇಡಿ. ಸಮಸ್ಯೆಗಳು ಹೆಚ್ಚಾಗುವ ಮುನ್ನ ಅದನ್ನು ನಿವಾರಣೆ ಮಾಡುವುದು ಉತ್ತಮ. ನಿಮ್ಮ ದೊಡ್ಡ ಆಸೆಯೊಂದನ್ನು ಬೇರೆಯವರೊಂದಿಗೆ ಹೇಳಿಕೊಳ್ಳುವುದು ಅವರಿಂದ ಸಹಕಾರ ಪಡೆಯಲು ಸಹಾಯವಾಗಲಿದೆ. ಮನೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪಗಳಿದ್ದರೆ ಬಗೆಹರಿಸಿಕೊಳ್ಳಿ.

ಮಕರ ರಾಶಿ

ಮಕರ ರಾಶಿಯವರು ಇಂದು ಬಹಳ ಲಾಭ ಮಾಡುವ ದಿನವಾಗಲಿದೆ, ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರಕ್ಕಾಗಿ ನೀವು ಪ್ರಯಾಣ ಮತ್ತು ಖರ್ಚು ಮಾಡಬೇಕಾಗಬಹುದು, ಇಂದು ತಾಳ್ಮೆಯಿಂದ ಎಲ್ಲಾ ಸವಾಲುಗಳ ಎದುರಿಸುವುದು ಉತ್ತಮ. ಆರ್ಥಿಕವಾಗಿ ನಿಮ್ಮ ಸವಾಲುಗಳು ಕಡಿಮೆಯಾಗಬಹುದು. ಹಲವು ಕಾರಣದಿಂದ ಅರ್ಧದಲ್ಲೇ ನಿಲ್ಲಿಸಿದ್ದ ಕೆಲಸವೊಂದು ಪೂರ್ಣ ಮಾಡಲಿದ್ದೀರಿ. ವ್ಯಾಪಾರಿಗಳು ಯಾವುದೇ ದೊಡ್ಡ ಹಣಕಾಸಿನ ವ್ಯವಹಾರ ಅಥವಾ ಯಾವುದೇ ಒಪ್ಪಂದಕ್ಕೆ ಮುಂದಾಗದೇ ಇರುವುದು ಉತ್ತಮ. ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಆದಷ್ಟು ಗುಣಪಡಿಸಿಕೊಳ್ಳಲು ಮುಂದಾಗಿ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಈ ದಿನದಂದು ಬಹಳ ಸುತ್ತಾಟದಲ್ಲಿ ನಿರತರಾಗಬಹುದು. ನೀವು ದಿನಸಿ ಅಥವಾ ಬೀದಿ ಬದಿಯ ವ್ಯಾಪಾರಿಗಳಾಗಿದ್ದರೆ ನಿಮ್ಮ ವ್ಯವಹಾರದಲ್ಲಿ ದೊಡ್ಡ ತಿರುವು ಬರಬಹುದು. ಆರ್ಥಿಕ ಸಮಸ್ಯೆಗಳು ದೊಡ್ಡದಾಗಲು ಬಿಡಬೇಡಿ. ನೀವು ಕುಟುಂಬ ಸದಸ್ಯರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ, ವಿಶೇಷವಾಗಿ ಪೋಷಕರೊಂದಿಗೆ ನೀವು ಇಂದು ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಅವಿವಾಹಿತರಿಗೆ ಶುಭ ಸುದ್ದಿ ಬರುವ ಸಮಯವಿದು. ನಿಮ್ಮ ಆಲೋಚನೆಗಳಿಗೆ ಬೆಂಬಲ ಸಿಗಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಬಹಳ ಶುಭಕರ ದಿನವಾಗಲಿದೆ. ನಿಮ್ಮ ಬಹಳ ದಿನಗಳಿಂದ ಈಡೇರದ ಬಯಕೆಯೊಂದು ನೆರವೇರಬಹುದು. ಉದ್ಯೋಗಿಗಳ ಕೆಲಸದ ಹೊರೆ ಕಡಿಮೆಯಾಗುವ ಸಾಧ್ಯತೆಯಿದೆ ಮತ್ತು ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಕೆಲವು ಪ್ರಮುಖ ಚರ್ಚೆಯನ್ನು ಸಹ ನಡೆಸಬಹುದು. ಇಂದು ಯಾವುದೇ ದೊಡ್ಡ ಸಮಸ್ಯೆ ಕಂಡುಬರುತ್ತಿಲ್ಲ. ತರಾತುರಿಯಲ್ಲಿ ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಮಸ್ಯೆಗಳನ್ನು ದೊಡ್ಡದಾಗಲು ಬಿಡಬೇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-10-2025-daily-horoscope-prediction-for-12-zodiac-signs-in-kannada

Here is May 10 daily horoscope prediction for 12 zodiac signs read on...
Story first published: Saturday, May 10, 2025, 6:58 [IST]
X
Desktop Bottom Promotion