Dina Bhavishya: ಮೇ 09ರಂದು ಯಾವ ರಾಶಿಯವರು ಹಣಲಾಭ ನೋಡುತ್ತಾರೆ?

ವೈದಿಕಶಾಸ್ತ್ರದ ಪ್ರಕಾರ ಮೇ 09ರಂದು ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ:

ಮೇಷ ರಾಶಿ

ಈ ದಿನವು ನಿಮಗೆ ಸಂತಸ ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ವೃತ್ತಿ ಸಂಬಂಧಸಿದಂತೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ವ್ಯವಹಾರದಲ್ಲಿ ನೀವು ಕೆಲವು ಹೊಸ ಒಪ್ಪಂದಗಳ ಮಾಡಿಕೊಳ್ಳುವಿರಿ. ದಿನದ ಎರಡನೇ ಭಾಗದಲ್ಲಿ ಕೆಲವು ದೊಡ್ಡ ಖರ್ಚುಗಳ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಹೊರೆ ಮತ್ತು ಒತ್ತಡ ಕಡಿಮೆಯಾಗಬಹುದು. ಸಮಸ್ಯೆಗಳ ಕುರಿತಾಗಿ ಮನೆಯ ಸದಸ್ಯರೊಂದಿಗೆ ಮಾತುಕತೆ ನಡೆಸುವುದು ಉತ್ತಮ.

ವೃಷಭ ರಾಶಿ

ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನೀವು ವ್ಯವಹಾರದಲ್ಲಿ ಉತ್ತಮ ಹೆಸರು ಗಳಿಸುವಿರಿ. ದೊಡ್ಡ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಲಿದ್ದೀರಿ. ಹಾಗೆ ಹೊರಗಿನವರ ಸಹಾಯದಿಂದಾಗಿ ನಿಮ್ಮ ಕೆಲಸ ಸುಸೂತ್ರವಾಗಿ ನಡೆಯಲಿದೆ. ಕುಟುಂಬದ ಹಿರಿಯರಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಆದರೆ ನಿಮ್ಮ ಆರೈಕೆಯಿಂದ ಅವರಲ್ಲಿ ನೆಮ್ಮದಿ ಇರಲಿದೆ. ಸಂಬಂಧದ ಕಡೆಗೆ ಗಮನಹರಿಸಬೇಕು, ನಿಮ್ಮ ಹಾಗೂ ಸಂಗಾತಿ ನಡುವಿನ ಭಿನ್ನಾಭಿಪ್ರಾಯ ತಪ್ಪಿಸುವುದು ಬಹಳ ಉತ್ತಮ.

Here is May 08 daily horoscope prediction for 12 zodiac signs read on

ಮಿಥುನ ರಾಶಿ

ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಹಣದ ವಿಷಯದಲ್ಲಿ ಇಂದು ಉತ್ತಮ ದಿನವಾಗಿರುತ್ತದೆ. ನೀವು ಹೆಚ್ಚು ಉಳಿತಾಯ ಮಾಡಲು ಮುಂದಾಗಬಹುದು. ಕಚೇರಿಯಲ್ಲಿ ನೀವು ಅಂದುಕೊಂಡಿದ್ದ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಬಹುದು. ಯಾವ ಸಲಹೆಯ ಮೇರೆಗೆ ಇಂದು ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಮನೆಗೆ ಕೆಲವು ಹೊಸ ವಸ್ತುಗಳನ್ನು ಖರೀದಿಸಬಹುದು. ಬಹಳ ದಿನಗಳ ನಂತರ ಹಳೆಯ ಸ್ನೇಹಿತನನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ವಾಹನವನ್ನು ಬಹಳ ಎಚ್ಚರಿಕೆಯಿಂದ ಬಳಸಲು ಸಲಹೆ ನೀಡಲಾಗುವುದು.

ಕರ್ಕ ರಾಶಿ

ಇಂದು ನೀವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಉತ್ತಮ ದಿನವಾಗಿರುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಚಿಂತಿತರಾಗಬಹುದು. ಆರೋಗ್ಯದಲ್ಲಿ ಈ ದಿನ ನೀವು ಜಾಗ್ರತೆವಹಿಸಬೇಕು, ಚಿಕ್ಕ ಆರೋಗ್ಯ ಸಮಸ್ಯೆಯಾದರೂ ನಿರ್ಲಕ್ಷ್ಯ ಮಾಡಬೇಡಿ. ಕುಟುಂಬ ಜೀವನದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಾಲ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ತೀರಿಸಲು ಮುಂದಾಗುವುದು ಉತ್ತಮ.

ಸಿಂಹ ರಾಶಿ

ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ದಿನವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು. ಸರ್ಕಾರಿ ಕೆಲಸದಲ್ಲಿ ಬಾಕಿ ಉಳಿದಿದ್ದರೆ ಮುಕ್ತಾಯ ಮಾಡುವುದು ಉತ್ತಮ. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಗಳ ನೀವು ಪಡೆಯಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರು ಇರಬಹುದು. ತಂದೆಯ ಆರೋಗ್ಯದ ಕುರಿತಾಗಿ ಎಚ್ಚರಿಕೆ ವಹಿಸಿ.

ಕನ್ಯಾ ರಾಶಿ

ಇಂದು ನೀವು ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನವಾಗಿರುತ್ತದೆ. ಪೂರ್ವಜರ ಆಸ್ತಿಯಿಂದ ಲಾಭ ಗಳಿಸಲು ಸಾಧ್ಯವಾಗುವುದು. ಕೆಲಸದಲ್ಲಿ ಸಮಸ್ಯೆ ಬಗೆಹರಿಯಲಿದೆ, ಈ ದಿನ ನೀವಾಡುವ ಮಾತುಗಳ ಮೇಲೆ ಹಿಡಿತ ಇರಲಿ. ಯಾರೊಂದಿಗೂ ಅನಗತ್ಯ ವ್ಯವಹಾರಗಳ ಮಾಡಬೇಡಿ. ನೀವು ಸ್ವಲ್ಪ ಸಮಯದಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ವೈದ್ಯರ ಭೇಟಿಯಾಗುವುದು ಉತ್ತಮ. ಅವಿವಾಹಿತರಲ್ಲಿ ಈ ದಿನ ಬಹಳ ಖರ್ಚು ನೋಡಬಹುದು. ಆದ್ರೆ ಇದರಿಂದ ನಿಮಗೆ ನೆಮ್ಮದಿ ಸಿಗಲಿದೆ.

ತುಲಾ ರಾಶಿ

ಇಂದು ನೀವು ಬಹಳ ಶ್ರಮ ಹಾಗೂ ಇಡಿ ದಿನ ಬಿಡುವಿಲ್ಲದೆ ಕಳೆಯಬಹುದಾದ ದಿನವಾಗಲಿದೆ. ನೀವು ಶುಭ ಕಾರ್ಯದ ತಯಾರಿಯಲ್ಲಿದ್ದರೆ ಆಯಾಸ, ಆನಾರೋಗ್ಯ ಕಾಡಬಹುದು. ನಿಮ್ಮ ಆದಾಯವನ್ನು ಹೆಚ್ಚಿಸುವ ಮೂಲಗಳಿಗೆ ನೀವು ಸಂಪೂರ್ಣ ಗಮನ ನೀಡಬೇಕು, ಇದರಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಬಹಳ ಸಮಯದಿಂದ ಯಾರೊಂದಿಗಾದರು ಮನಸ್ತಾಪ ಇದ್ದರೆ ಇಂದು ಶಾಂತಿಯಿಂದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಕೆಲಸದ ಸಂಬಂಧ ದೀರ್ಘ ಪ್ರಯಾಣಕ್ಕೆ ನೀವು ಮುಂದಾಗಬಹುದು.

ವೃಶ್ಚಿಕ ರಾಶಿ

ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಬಹುದೊಡ್ಡ ವ್ಯವಹಾರಗಳಲ್ಲಿ ನಿಮಗೆ ಆಸಕ್ತಿ ಇದ್ದರೆ ಈ ದಿನ ಅದರಿಂದ ನಿರಾಸೆ ಕಾಡಬಹುದು. ಆರೋಗ್ಯದಲ್ಲಿ ಕ್ಷೀಣತೆಯಿಂದಾಗಿ ನಿಮ್ಮ ದಿನದ ಯೋಜನೆಗಳಿಗೆ ಅಡ್ಡಿಯಾಗಬಹುದು. ಕೆಲಸದ ವಿಷಯದಲ್ಲಿ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಸ್ನೇಹಿತರು ನಿಮಗಾಗಿ ಕೆಲವು ಹೂಡಿಕೆ ಸಂಬಂಧಿತ ಯೋಜನೆಯನ್ನು ತರಬಹುದು. ವ್ಯಾಪಾರಸ್ಶರು ಇಂದು ತುಂಬಾ ದಣಿದ ದಿನವಾಗಿದೆ. ಮನದಲ್ಲಿದ್ದ ಗೊಂದಲವೊಂದನ್ನು ಇಂದು ಬಗೆಹರಿಸಿಕೊಳ್ಳಿ. ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು.

ಧನು ರಾಶಿ

ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ದುರ್ಬಲ ದಿನವಾಗಿರುತ್ತದೆ. ಕುತ್ತಿಗೆ, ಸೊಂಟ, ಬೆನ್ನಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆ ಇದ್ದರೆ ನೋವು ಅನುಭವಿಸಬಹುದು. ಕುಟುಂಬದಲ್ಲಿ ಉತ್ತಮ ವಾತಾವರಣ ಇರಲಿದೆ. ನೀವು ಉದ್ಯೋಗ ಬದಲಿಸುವ ಆಲೋಚನೆಯಲ್ಲಿದ್ದರೆ ಸ್ವಲ್ಪ ಸಮಯ ಮುಂದೂಡುವುದು ಉತ್ತಮ. ಮನೆಯಲ್ಲಿ ಹಿರಿಯ ಸದಸ್ಯರ ಮಾತುಗಳಿಗೆ ಬೆಲೆ ನೀಡಿ. ವ್ಯಪಾರದಲ್ಲಿ ಈ ಹಿಂದೆ ಅನುಭವಿಸಿದ್ದ ಸಮಸ್ಯೆ ಮತ್ತೆ ಎದುರಿಸಬೇಕಾಗಬಹುದು. ಹಾಗೆ ಯಾರೊಂದಿಗಾದರು ವ್ಯಾಪಾರ ಸಂಬಂಧಿ ತಗಾದೆ ಇದ್ದರೆ ದೊಡ್ಡದಾಗಬಹುದು.

ಮಕರ ರಾಶಿ

ಇಂದು ನಿಮಗೆ ಲಾಭದಾಯಕ ದಿನವಾಗಿರುತ್ತದೆ. ಇಂದು ನಿಮಗೆ ಏರಿಳಿತಗಳ ಪೂರ್ಣ ದಿನವಾಗಲಿದೆ. ಅನಗತ್ಯ ಚಿಂತೆಗಳಿಂದ ದೂರವಿರಿ. ವ್ಯಾಪಾರದಲ್ಲಿ ತೊಡಗಿರುವ ಜನರು ಸಾಲದ ವಹಿವಾಟುಗಳನ್ನು ತಪ್ಪಿಸಬೇಕು. ಅದೃಷ್ಟದಿಂದ ಹಣ ಮಾಡುವ ಕೆಲಸಕ್ಕೆ ನೀವು ಮುಂದಾಗಬೇಡಿ. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ವಿದ್ಯಾರ್ಥಿಗಳಿಗೆ ಈ ದಿನ ಶುಭವಾಗಲಿದೆ. ಹಳೆಯ ತಪ್ಪಿನಿಂದ ನೀವು ಬುದ್ದಿ ಕಲಿಯಬೇಕು. ಆಸ್ತಿ ವಿಚಾರವಾಗಿ ಹಿಂದಿನಿಂದ ಇದ್ದ ಸಮಸ್ಯೆಯೊಂದು ಮತ್ತೂ ನಿಮ್ಮನ್ನು ಕಾಡಬಹುದು. ವಾಹನ ಸಂಬಂಧಿ ಖರ್ಚುಗಳಿಗ ಹೆಚ್ಚು ಬುದ್ದಿವಂತಿಕೆಯಿಂದ ವ್ಯಯಿಸುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಈ ದಿನದಂದು ಬಹಳ ಓಡಾಟದಲ್ಲಿ ಕಳೆಯಬೇಕಾಗುತ್ತದೆ. ಇದರಿಂದ ಧನಲಾಭದ ನಿರೀಕ್ಷೆ ಇಡಬಹುದು. ನೀವು ರಾತ್ರಿ ಸಂಚಾರವನ್ನು ತಡೆಯುವುದು ಬಹಳ ಉತ್ತಮ. ನಿಮ್ಮ ವೈವಾಹಿಕ ಜೀವನದಲ್ಲೂ ಸಾಕಷ್ಟು ಸಂತೋಷ ಇರಲಿದೆ. ಹಣದ ವಿಷಯದಲ್ಲಿ ಇಂದು ಉತ್ತಮವಾಗಿದೆ. ಹೊಸದನ್ನು ಕಲಿಯುವ ಅವಕಾಶವನ್ನು ಪಡೆಯಬಹುದು. ದೊಡ್ಡ ಕನಸುಗಳಿಗೆ ಸಣ್ಣ ಹೆಜ್ಜೆ ಆರಂಭಿಸಲಿದ್ದೀರಿ. ಮನೆಯಲ್ಲಿ ಶಾಂತಿ ಇರಲಿದೆ. ಯಾರಿಗಾದರು ಹಣ ನೀಡುವ ನಿಮ್ಮ ಆಲೋಚನೆಯನ್ನು ಈ ದಿನ ಮುಂದೂಡಿ.

ಮೀನ ರಾಶಿ

ಮೀನ ರಾಶಿಯವರು ಈ ದಿನದಂದು ಬಹಳ ಲಾಭದಾಯಕ ದಿನವಾಗಿ ಮಾಡುವ ಅವಕಾಶ ಸಿಗಲಿದೆ. ಇಷ್ಟು ದಿನಗಳಿಂದ ನಿಮ್ಮ ಕೆಲಸದಲ್ಲಿ ಇದ್ದ ಒಂದು ಅಡೆತಡೆ ನಿವಾರಣೆಯಾಗಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ನಿಮಗೆ ಬರಬೇಕಾಗಿರುವ ಹಣ ಕೈ ಸೇರಲಿದೆ, ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿರಲಿದೆ. ಈ ದಿನ ಖುಷಿಯಿಂದ ಕಳೆಯುತ್ತೀರಿ. ಕಾನೂನು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ನಿಮ್ಮ ಆರೋಗ್ಯವನ್ನು ಸುಧಾರಿಸಲು, ನಿಮ್ಮ ಬಗ್ಗೆ ಹೆಚ್ಚು ಗಮನ ಹರಿಸಲು ಸಲಹೆ ನೀಡಲಾಗುವುದು. ಅತಿಯಾದ ಖರ್ಚು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-09-2025-daily-horoscope-prediction-for-12-zodiac-signs-in-kannada

Here is May 09 daily horoscope prediction for 12 zodiac signs read on...
Story first published: Friday, May 9, 2025, 6:44 [IST]
X
Desktop Bottom Promotion