Dina Bhavishya: ಮೇ 08ರಂದು ಈ ‍ರಾಶಿಯವರಿಗೆ ಧನಲಾಭವಿದೆ!

ಶುಭ ಗುರುವಾರ ಈ ದಿನ 12 ರಾಶಿಗಳಲ್ಲಿ ಯಾವ ರೀತಿ ಲಾಭವಿದೆ

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನವು ಮಿಶ್ರಫಲವಾಗಿರಲಿದೆ. ನೀವು ಯಾವುದೇ ಕೆಲಸ ಮಾಡುವಾಗಲು ಬಹಳ ಎಚ್ಚರಿಕೆ ಇಡಿ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಏರುಪೇರು ಉಂಟಾಗಹುದು. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳದಿರುವುದು ಉತ್ತಮ. ಬಹಳ ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಿ. ಹೊಸ ಉದ್ಯೋಗದ ಸಂಬಂಧ ಆತುರದ ನಿರ್ಧಾರ ಬೇಡ. ನೀವು ಬಯಸದ ಖರ್ಚು ನಿಮ್ಮ ಹಿಂದೆ ಬರಬಹುದು. ನೀವು ಯಾರಿಂದಾದರು ಆರ್ಥಿಕ ಸಹಾಯಕ್ಕೆ ಮೊರೆ ಹೋಗಿದ್ದರೆ ಈ ದಿನ ಅವರಿಂದ ಧನಾತ್ಮಕ ಉತ್ತರ ಬರಬಹುದು. ಹಳೆಯ ಸಾಲವನ್ನು ಮರುಪಾವತಿ ಮಾಡುವುದು ಉತ್ತಮ.

ವೃಷಭ ರಾಶಿ

ನೀವು ಕುಟುಂಬದ ಹಿರಿಯ ಸದಸ್ಯರಾಗಿದ್ದರೆ ಇಂದು ಒತ್ತಡ ಎದುರಿಸಬಹುದು. ನೀವು ಯಾವುದೇ ವಿಚಾರವನ್ನು ಮನೆಯಲ್ಲಿ ಮುಚ್ಚಿಡುವುದು ಸೂಕ್ತವಲ್ಲ. ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಇಂದು ಅತ್ಯಂತ ಎಚ್ಚರಿಕೆಯ ದಿನವಾಗಿರಲಿದೆ. ಕೆಲಸದ ಉದ್ದೇಶದಿಂದ ನೀವು ದೂರ ಪ್ರುಯಾಣಕ್ಕೆ ಮುಂದಾಗಬಹುದು. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಲು ಮುಂದಾಗಬೇಡಿ. ವಿದ್ಯಾರ್ಥಿಗಳು ಬಯಸಿದ್ದ ವಸ್ತು ಅಥವಾ ಉನ್ನತ ವ್ಯಾಸಂಗ ಸಂಬಂಧ ಇದ್ದ ಗೊಂದಲವೊಂದು ಪರಿಹಾರ ಆಗಲಿದೆ.

May-08-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಇಂದು ಬಹಳ ಉತ್ತಮ ದಿನ. ನೀವು ಹೂವು, ಹಣ್ಣು ಅಥವಾ ಬೀದಿ ಬದಿಯ ವ್ಯಾಪಾರಿಗಳಾಗಿದ್ದರೆ ಲಾಭ ಹೆಚ್ಚಾಗಲಿದೆ. ಇಂದು ನಿಮಗೆ ಯಾವುದೇ ರೀತಿಯ ಕೆಲಸಗಳಲ್ಲಿ ಶುಭವಾಗಲಿದೆ. ನೌಕರಿ ಹುಡುಕುತ್ತಿರುವವರಿಗೆ ಇಂದು ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗಬಹುದು. ವೈಯಕ್ತಿಕ ಪ್ರಯೋಜನಕ್ಕಾಗಿ ನೀವು ಹಲವು ವಿಚಾರಗಳಲ್ಲಿ ಭಾಗಿಯಾಗುತ್ತೀರಿ. ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಉಂಟಾಗಬಹುದು, ಬೆನ್ನು, ಕುತ್ತಿಗೆ ಸಂಬಂಧಿ ಸಮಸ್ಯೆ ಇದ್ದರೆ ಹೆಚ್ಛಾಗಬಹುದು. ದೀರ್ಘಕಾಲದ ನಂತರ ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವ ಸಾಧ್ಯತೆ ಇದೆ.

ಕರ್ಕ ರಾಶಿ

ಕೆಲಸಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಯು ಪರಿಹರಿಸಲ್ಪಡುತ್ತದೆ. ನಿಮಗೆ ದೊಡ್ಡ ಲಾಭವನ್ನು ಪಡೆಯಲು ಸಾಧ್ಯವಾಗದಿದ್ದರೂ ವ್ಯಾಪಾರದಲ್ಲಿ ಶುಭ‍ವಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಮಕ್ಕಳ ಕುರಿತಾದ ಚಿಂತೆಯೊಂದು ದೊಡ್ಡದಾಗಬಹುದು. ಕಾನೂನು ವಿಚಾರದಲ್ಲಿ ಯಾವುದಾದರು ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳುವುದು ಉತ್ತಮ. ಆಪ್ತರಿಂದ ಉತ್ತಮ ವಿಚಾರಗಳ ಕೇಳುತ್ತೀರಿ. ದೊಡ್ಡ ಹಣಕಾಸು ವ್ಯವಹಾರವನ್ನು ಈ ದಿನ ಮಾಡದೆ ಇರುವುದು ಉತ್ತಮ.

ಸಿಂಹ ರಾಶಿ

ಸಿಂಹ ರಾಶಿ ಮಂದಿ ದಿನ ಬಹಳ ದೊಡ್ಡ ಲಾಭಗಳ ನೋಡಬಹುದು. ನೀವು ಹಣಕಾಸು ವಿಚಾರವಾಗಿ ಬುದ್ದಿವಂತಿಕೆ ಪ್ರದರ್ಶಿಸುತ್ತೀರಿ. ಇದ್ದಕ್ಕಿದ್ದಂತೆ ಕಚೇರಿಯಲ್ಲಿ ದೊಡ್ಡ ಸಮಸ್ಯೆ ಎದುರಾಗಬಹುದು. ಬಿಡುವಿಲ್ಲದೆ ಕೆಲಸ ಮಾಡಬೇಕಾಗಿ ಬರಬಹುದು. ಅನಗತ್ಯ ಮಾತುಕತೆಯಿಂದ ದೂರವಿರಿ ಮತ್ ನಿಮ್ಮ ಕೆಲಸದತ್ತ ಗಮನ ಹರಿಸಿ. ವ್ಯಾಪಾರ ಮಾಡುವವರಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. ಬಹಳ ದಿನಗಳಿಂದ ನೀವು ಖರೀದಿಸಲು ಬಯಸಿದ್ದ ವಸ್ತುವೊಂದನ್ನು ಈ ದಿನ ಖರೀದಿಸಬಹುದು. ಮಕ್ಕಳ ಮೇಲೆ ಗಮನವಿರಲಿ.

ಕನ್ಯಾ ರಾಶಿ

ಉದ್ಯೋಗಸ್ಥರು ವಿದೇಶಿ ಕಂಪನಿಯಿಂದ ಉತ್ತಮ ಕೊಡುಗೆಯನ್ನು ಪಡೆಯಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನಿಮಗಿಂದು ಅಪೇಕ್ಷಿತ ಲಾಭವಿದೆ. ಸಾಲವೊಂದು ಮರುಪಾವತಿ ಆಗಬಹುದು. ಮನೆಯ ವಾತಾವರಣದಲ್ಲಿ ಸ್ವಲ್ಪ ಗೊಂದಲ ಇರಬಹುದು. ನಿಮ್ಮ ಭವಿಷ್ಯದ ಕುರಿತಾದ ಚಿಂತೆ ಹೆಚ್ಚಾಗಬಹುದು. ಅಗತ್ಯ ವಸ್ತುಗಳಿಗಾಗಿ ಖರ್ಚು ಹೆಚ್ಚಾಗಬಹುದು. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರಾಗಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ಪ್ರತಿಸ್ಪರ್ಧಿಗಳಿಂದ ಜಾಗರೂಕರಾಗಿರಬೇಕು.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನವು ಲಾಭದಾಯಕ ದಿನವಾಗಲಿದೆ. ನೀವು ಇತ್ತೀಚೆಗೆ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ನೀಡಿದ್ದರೆ ನೀವು ಉತ್ತಮ ಫಲಿತಾಂಶವನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರಸ್ಥರ ಆರ್ಥಿಕ ಸಮಸ್ಯೆಗಳು ಪರಿಹಾರವಾಗಬಹುದು. ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯ ಸಂಬಂಧ ನಿಮ್ಮಿಂದಲೂ ಖರ್ಚು ಹೆಚ್ಚಾಗಹುದು. ಖಾಸಗಿ ಸಂಸ್ಥೆಯ ಕೆಲಸಗಾರರಿಗೆ ಈ ದಿನ ಬಹಳ ಒತ್ತಡ ಇರಲಿದೆ. ಕೆಲಸದ ಸಂಬಂಧ ದೂರ ಪ್ರಯಾಣಗಳ ಮಾಡಬೇಕಾಗಬಹುದು. ದೇವಾಲಯಕ್ಕಾಗಿ ನೀವು ಕುಟುಂಬದೊಂದಿಗೆ ತೆರಳಬಹುದು.

ವೃಶ್ಚಿಕ ರಾಶಿ

ನಿಮಗಿಂದು ಮಿಶ್ರ ಫಲದ ದಿನವಾಗಿದೆ. ಸಂಬಂಧಗಳಲ್ಲಿ ಸಾಮರಸ್ಯದ ಕೊರತೆ ಇರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಣ್ಣ ಸಮಸ್ಯೆಯೂ ದೊಡ್ಡದಾಗಿ ಪರಿಣಮಿಸಬಹುದು. ಯಾವುದೇ ವಿಚಾರಗಳನ್ನು ಹಗುರವಾಗಿ ಪರಿಗಣಿಸಬೇಡಿ. ಹಣಕಾಸು ವಿಚಾರವಾಗಿ ಯಾವುದೇ ಬಾಕಿಯನ್ನು ಇಟ್ಟುಕೊಳ್ಳಬೇಡಿ. ಹಾಗೆ ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿದರೆ ಇಂದು ಪ್ರಯತ್ನ ಫಲ ನೀಡಬಹುದು. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿರುತ್ತದೆ. ಕೆಲಸ ಕಾರ್ಯಕ್ಕೆ ಅಡ್ಡಿಯಾಗಿದ್ದ ಅನಾರೋಗ್ಯವೊಂದರಿಂದ ಸುಧಾರಣೆ ನೋಡಬಹುದು.

ಧನು ರಾಶಿ

ಇಂದು ಧನು ರಾಶಿಯವರಲ್ಲಿ ಭವಿಷ್ಯದದಿನಗಳಿಗಾಗಿ ಉತ್ತಮ ತಯಾರಿ ನೋಡಬಹುದು. ಉಳಿತಾಯ, ಹೂಡಿಕೆಯಂತಹ ಕಾರ್ಯದಲ್ಲಿ ಅವರು ತೊಡಗಬಹುದು. ನೀವು ಅಂದುಕೊಂಡಿರದ ಕೆಲಸವೊಂದು ಸುಲಭವಾಗಿ ಪೂರ್ಣವಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ತಿಳಿಯಾಗಿರುತ್ತವೆ. ಮನೆಯ ಸದಸ್ಯರೊಂದಿಗೆ ಹೊಂದಾಣಿಕೆ ಸಾಧ್ಯ. ವಾಹನ ಚಾಲಕರು ಇಂದು ಎಚ್ಚರಿಕೆ ವಹಿಸಿ. ಕೆಲವು ವಿಚಾರಗಳಲ್ಲಿ ಆಪ್ತರ ಜೊತೆಗೆ ಮನಸ್ತಾಪ ಮೂಡಬಹುದು. ಖರ್ಚು ಹೆಚ್ಚಾಗುವುದನ್ನು ತಡೆಯಲು ನಿಮಗೆ ಅವಕಾಶಗಳಿವೆ.

ಮಕರ ರಾಶಿ

ಮಕರ ರಾಶಿಯವರಿಗೆ ಇಂದು ದೊಡ್ಡ ಸವಾಲಗಳು ಎದುರಾಗಬಹುದು. ನೀವು ಕೆಲಸದಲ್ಲಿ ಅನುಭವಿಸಿದ್ದ ಸಣ್ಣ ಸಮಸ್ಯೆಯೊಂದು ದೊಡ್ಡದಾಗಬಹುದು. ಸ್ವಂತ ಉದ್ಯೋಗ ಮಾಡುವವರಲ್ಲಿ ಹೆಚ್ಚಿನ ಆರ್ಥಿಕ ಒತ್ತಡ ಎದುರಾಗಬಹುದು. ಆಸ್ತಿ, ಹೋಟೆಲ್ ಅಥವಾ ರೆಸ್ಟೋರೆಂಟ್, ಬಟ್ಟೆ, ದಿನಸಿ ವ್ಯಾಪಾರಿಗಲ್ಲಿ ತಕ್ಕ ಮಟ್ಟಿನ ಪ್ರಗತಿ ನೋಡಬಹುದು. ನೀವು ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಹಲ್ಲು, ಗಂಟಲು ಸಂಬಂಧಿ ಸಮಸ್ಯೆ ಹೊಂದಿದ್ದರೆ ವೈದ್ಯ ಭೇಟಿಯಾಗುವುದು ಉತ್ತಮ.

ಕುಂಭ ರಾಶಿ

ಈ ದಿನ ನಿಮ್ಮ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಗೃಹಿಣಿಯರಿಗೆ ಈ ದಿನವು ಬಹಳ ಅನುಕೂಲಕರವಾಗಬಹುದು. ನೀವು ಹೊಸ ವಸ್ತುಗಳ ಖರೀದಿಗಾಗಿ ಹಣ ಹೊಂದಿಸುತ್ತಿದ್ದರೆ ಇಂದು ಧನಾತ್ಮಕ ಪರಿಣಾಮ ನೋಡುತ್ತೀರಿ. ಬಹಳ ಕಾಲದಿಂದ ಪ್ರಗತಿಯಾಗದ ವಿಚಾರವೊಂದು ಬೆಳವಣಿಗೆ ಹೊಂದಲಿದೆ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಮನೆಗೆ ಸಂಬಂಧಿಸಿದ ಖರ್ಚು ಹೆಚ್ಚಾಗಬಹುದು. ದೂರ ಪ್ರಯಾಣದ ಸಂಭವವಿದೆ. ಹಳೆಯ ಅಭ್ಯಾಸವೊಂದನ್ನು ನೀವು ಮರೆತರೆ ಉತ್ತಮ.

ಮೀನ ರಾಶಿ

ಮೀನ ರಾಶಿಯ ಮಂದಿಗೆ ಇಂದು ಉತ್ತಮ ದಿನ. ನೀವು ಯಾವುದೇ ಕೆಲಸ ಮಾಡಿದರೂ ಇಂದು ಲಾಭವಾಗಲಿದೆ. ಹಾಗೆ ಅದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಹಳೆಯ ಸ್ನೇಹಿತರು, ಬಂಧುಗಳ ನೀವು ಭೇಟಿಯಾಗಬಹುದು. ಉನ್ನತ ಅಧಿಕಾರಿಗಳು ನಿಮ್ಮ ಶ್ರಮವನ್ನು ಮೆಚ್ಚುತ್ತಾರೆ. ಆರೋಗ್ಯವು ಸರಿಯಿಲ್ಲದಿದ್ದರೆ ಅವರ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರುತ್ತದೆ. ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ಇಂದು ಕೋಪ ನಿಯಂತ್ರಿಸಿ ತಾಳ್ಮೆ ಇಂದಿರುವುದು ಉತ್ತಮ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-08-2025-daily-horoscope-prediction-for-12-zodiac-signs-in-kannada

Here is May 08 daily horoscope prediction for 12 zodiac signs read on...
Story first published: Thursday, May 8, 2025, 6:17 [IST]
X
Desktop Bottom Promotion