Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Dina Bhavishya: ಮೇ 07ರಂದು ನಿಮ್ಮ ರಾಶಿಫಲದಲ್ಲಿ ಏನಿದೆ?
ಶುಭ ಬುಧವಾರ ಈ ದಿನ 12 ರಾಶಿಗಳಲ್ಲಿ ಯಾವ ರೀತಿ ಲಾಭವಿದೆ ನೋಡೋಣ
ಮೇಷ ರಾಶಿ
ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ದುರ್ಬಲ ದಿನವಾಗಿರುತ್ತದೆ. ಮೂಳೆ ಸಂಬಂಧಿ ಸಮಸ್ಯೆಗಳು ಹೆಚ್ಚಾಗಲಿವೆ. ಈ ದಿನ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದ್ರೆ ಖರ್ಚುಗಳ ಮೇಲೆ ಜಾಗೃತೆ ವಹಿಸಿ, ನಿಮಗೆ ಬೇಕಾದ ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು. ನಿಮ್ಮ ಕೆಲಸಗಳಲ್ಲಿ ಧನಾತ್ಮಕತೆ ಕಂಡುಬರಲಿದೆ. ಮನೆಯ ವಾತಾವರಣವು ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಸಿಗಬಹುದು. ವಾಹನ ಮಾಲೀಕರು ಎಚ್ಚರಿಕೆಯಿಂದ ಇರಬೇಕು.
ವೃಷಭ ರಾಶಿ
ಇಂದು ನೀವು ಬಹಳ ದಿನಗಳಿಂದ ಬಾಕಿ ಉಳಿದಿದ್ದ ಹಣವನ್ನು ಪಡೆಯುವ ದಿನವಾಗಿರುತ್ತದೆ. ಮನೆಯಲ್ಲಿ ಕೆಲ ಸಮಸ್ಯೆ ಉಂಟಾಗಬಹುದು, ಹಾಗೆ ಮನೆಯಲ್ಲಿ ಹಣಕಾಸು ಸಂಬಂಧವಾಗಿ ವಿವಾದಗಳಿರಬಹುದು, ಇದರಿಂದ ಒತ್ತಡ ಹೆಚ್ಚಾಗಲಿದೆ. ಆರ್ಥಿಕವಾಗಿ ಈ ದಿನ ನಿಮಗೆ ಅನುಕೂಲಕರವಾಗಿದೆ. ಕೆಲಸ ಕಾರ್ಯಗಳು ಕೂಡ ಉತ್ತಮವಾಗಿ ನಡೆಯಲಿದೆ. ಅನಗತ್ಯ ಜಗಳಗಳು ಮತ್ತು ತೊಂದರೆಗಳಲ್ಲಿ ಸಿಲುಕಿಕೊಳ್ಳುವುದನ್ನು ನೀವು ತಪ್ಪಿಸಬೇಕಾಗುತ್ತದೆ. ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುತ್ತೀರಿ. ಕೆಲಸ ಸಂಬಂಧ ಪ್ರಯಾಣ ಮಾಡಬಹುದು. ಶುಭ ಕಾರ್ಯ ಸಂಬಂಧ ತಯಾರಿ ಮಾಡಿಕೊಳ್ಳಬಹುದು.

ಮಿಥುನ ರಾಶಿ
ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ನಿಮಗೆ ಒಳ್ಳೆಯ ದಿನವಾಗಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಆಸ್ತಿ ಖರೀದಿ ಮಾಡುತ್ತಿದ್ದರೆ ಈ ದಿನ ಶುಭವಾಗಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ನೀವು ಹೊಸ ರೀತಿ ಆದಾಯವನ್ನು ಪಡೆಯಬಹುದು. ನೀವು ಕಬ್ಬಿಣ ಸಂಬಂಧಿ ವ್ಯಾಪಾರ ಮಾಡುತ್ತಿದ್ದರೆ ಉತ್ತಮ ದಿನವಾಗಲಿದೆ. ನೀವು ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಈ ದಿನ ಬಹಳ ಸುಲಭವಾಗಿ ಮುಗಿಸುತ್ತೀರಿ. ಹೊಸ ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದು. ಅಪರಿಚಿತರೊಂದಿಗೆ ವ್ಯವಹಾರದಿಂದ ಅಂತರ ಕಾಯ್ದುಕೊಳ್ಳಿ.
ಕರ್ಕ ರಾಶಿ
ಈ ದಿನದಂದು ನಿಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಯಾರ ಬಳಿಯಾದರು ನೀವು ಹಣದ ವಿಚಾರವಾಗಿ ವಿವಾದ ಮಾಡಿಕೊಳ್ಳಬಹುದು. ದೊಡ್ಡ ಸವಾಲುಗಳನ್ನು ಎದುರಿಸುತ್ತೀರಿ. ಕೆಲಸದಲ್ಲಿನ ಅಡೆತಡೆ ದೂರಾಗಲಿದೆ, ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ. ವ್ಯಾಪಾರಿಗಳಿಗೂ ಶುಭ ದಿನವಾಗುತ್ತಿದೆ. ನೀವ ಅವಿವಾಹಿತರಾಗಿದ್ದರೆ ಮನೆಯಲ್ಲಿ ಒತ್ತಡ ಹೆಚ್ಚಾಗುತ್ತದೆ. ಹಾಗೆ ಖರ್ಚುಗಳು ಸಹ ಹೆಚ್ಚಾಗಬಹುದು. ನಿಮ್ಮ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಿ. ಮಕ್ಕಳ ಭವಿಷ್ಯದ ಚಿಂತೆಯಲ್ಲಿ ಗಮನಾರ್ಹ ಬದಲಾವಣೆ ನೋಡಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಬಿಡುವಿಲ್ಲದ ದಿನವಾಗಬಹುದು. ನೀವು ಕೆಲಸದ ಸ್ಥಳದಲ್ಲಿ ಹೆಚ್ಚು ಒತ್ತಡ ಹಾಗೆ ಮನೆಯಲ್ಲೂ ಒತ್ತಡ ಎದುರಿಸುತ್ತೀರಿ. ಇಡೀ ದಿನ ಬಿಡುವಿಲ್ಲದೆ ಯಾವುದಾದರು ಕೆಲಸದಲ್ಲಿ ತೊಡಗುತ್ತೀರಿ. ಯಾವುದೇ ವಿಷಯದ ಬಗ್ಗೆ ಗೊಂದಲವಿದ್ದರೆ, ಅದನ್ನು ಪರಿಹರಿಸಿಕೊಳ್ಳುವುದು ಮುಖ್ಯ. ನಿಮ್ಮ ಅಮೂಲ್ಯ ವಸ್ತುಗಳ ಮೇಲೆ ನಿಗಾ ಇಡಿ. ಹಣಕಾಸು ವಿಚಾರದಲ್ಲಿ ಇಂದು ಖರ್ಚು ಮಾಡುತ್ತೀರಿ, ಆದರೆ ಆದಾಯ ಸರಿದೂಗಿಸಲು ಶ್ರಮ ಹೆಚ್ಚು ಬೇಕಾಗುತ್ತದೆ. ಕೈ ಹಾಗೂ ಕಾಲುಗಳಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ನೀವು ತುತ್ತಾಗಬಹುದು.
ಕನ್ಯಾ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುವ ದಿನ. ಆರ್ಥಿಕವಾಗಿ ಕೂಡ ಉತ್ತಮವಾಗಿದೆ. ವ್ಯಾಪಾರಿಗಳು ಉತ್ತಮ ಲಾಭ ಕಾಣಬಹುದು. ಮನೆಯಲ್ಲಿಯೂ ವಾತಾವರಣ ಚೆನ್ನಾಗಿರಲಿದೆ, ಮನೆಗೆ ಅತಿಥಿಗಳು ಆಗಮನವಾಗಬಹುದು. ಅವಿವಾಹಿತರಲ್ಲಿ ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ನಿಮ್ಮ ಸ್ನೇಹಿತರೊಂದಿಗೆ ಮಾತನಾಡುವಾಗ ನೀವು ತುಂಬಾ ಜಾಗರೂಕರಾಗಿರಬೇಕು, ಏಕೆಂದರೆ ಇಂದು ಕೆಲವು ಮನಸ್ತಾಪ ಉಂಟು ಮಾಡುವ ವಿಚಾರಗಳು ನಡೆಯಬಹುದು. ವ್ಯಾಪಾರಿಗಳಾಗಿದ್ದರೆ ಈ ದಿನ ಬಹಳ ಶ್ರಮ ಹಾಕಬೇಕಿದೆ.
ತುಲಾ ರಾಶಿ
ಇಂದು ನಿಮಗೆ ಸಂತೋಷದ ದಿನವಾಗಿರುವುದಿಲ್ಲ. ಮನೆಯ ವಾತಾವರಣ ಕೂಡ ಚೆನ್ನಾಗಿರಲ್ಲ, ಚಿಕ್ಕ ವಿಷಯಕ್ಕೆ ಮನಸ್ತಾಪ ಬರಬಹುದು. ಕೆಲಸದಲ್ಲಿಯೂ ಒತ್ತಡ ಹೆಚ್ಚಿರಲಿದೆ. ಯಾವುದೇ ನಿರ್ಧಾರ ಅಥವಾ ಕೆಲಸ ಮಾಡುವಾಗಲು ಬಹಳ ಎಚ್ಚರಿಕೆಯಿಂದ ಹಾಗೆ ಚಿಂತನಾಶೀಲರಾಗಿ, ಸಲಹೆ ಪಡೆದು ಮಾಡುವುದು ಉತ್ತಮ. ನೀವು ಶಿಕ್ಷಕರಾಗಿದ್ದರೆ ಈ ದಿನ ಬಹಳ ಆಯಾಸಕ್ಕೆ ಒಳಗಾಗುತ್ತೀರಿ. ದೊಡ್ಡ ಸವಾಲುಗಳನ್ನು ಎದುರಿಸಲು ನೀವು ನಿಮ್ಮನ್ನು ತಯಾರಿ ಮಾಡಿಕೊಳ್ಳಬೇಕಾಗುತ್ತದೆ.
ವೃಶ್ಚಿಕ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಹಣಕಾಸು ವ್ಯವಹಾರ ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಪೂರ್ಣಗೊಳಿಸಬಹುದು. ನೀವು ಉದ್ಯೋಗ ಹುಡುಕುತ್ತಿದ್ದರೆ ಆಪ್ತರೊಬ್ಬರ ಸಹಕಾರದಿಂದ ದೊಡ್ಡ ಯಶಸ್ಸು ಸಿಗಬಹುದು. ನೀವು ಬಹಳ ಕಷ್ಟಪಟ್ಟು ಆರಂಭಿಸಿದ ಉದ್ಯಮವೊಂದು ಲಾಭ ತರಬಹುದು. ಮನೆಯ ಹಿರಿಯರೊಬ್ಬರ ಆರೋಗ್ಯದ ಕುರಿತು ಎಚ್ಚರಿಕೆ ಇಡಿ. ನಿಮ್ಮ ಸಂಸಾರದಲ್ಲಿ ಮೂರನೇಯ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಅತಿಯಾದ ಮಾನಸಿಕ ಒತ್ತಡ ಒಳ್ಳೆಯದಲ್ಲ.
ಧನು ರಾಶಿ
ಇಂದು ನಿಮಗೆ ಮಿಶ್ರ ಫಲದ ದಿನವಾಗಿದೆ. ನಿಮ್ಮ ಆದಾಯ ಹೆಚ್ಚಾಗುವಂತಹ ಕೆಲಸಗಳು ನಡೆದರೂ ಈ ದಿನದ ಖರ್ಚು ಕೂಡ ಹೆಚ್ಚಾಗುತ್ತದೆ. ಕೆಲಸ ಕಾರ್ಯಗಳು ಚೆನ್ನಾಗಿ ನಡೆಯಲಿದೆ. ನಿಮ್ಮ ಕುಟುಂಬ ಜೀವನದಲ್ಲಿ ಹೊಂದಾಣಿಕೆ ಇಲಿದೆ. ವ್ಯಾಪಾರಿಗಳು ಸದ್ಯಕ್ಕೆ ಹೊಸ ಹೂಡಿಕೆ ಮಾಡದೆ ವ್ಯವಹಾರದ ಕಡೆ ಇನ್ನಷ್ಟು ಗಮನ ನೀಡುವುದು ಒಳ್ಳೆಯದು. ನಿಮ್ಮ ದೈಹಿಕ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ನೀವು ಇತರರ ವಿಷಯಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬೇಡಿ. ಖರ್ಚು ನಿಯಂತ್ರಿಸಲು ಮುಂದಾಗುವುದು ಉತ್ತಮ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.
ಮಕರ ರಾಶಿ
ಇಂದು ನೀವು ದೊಡ್ಡ ಕೆಲಸದಲ್ಲಿ ಭಾಗಿಯಾಗಬಹುದು. ನೀವು ರಾಜಕೀಯ ಸಂಬಂಧಿ ಕೆಲಸದಲ್ಲಿ ತೊಡಗಿದ್ದರೆ ಈ ದಿನ ಶುಭವಾಗಲಿದೆ. ಹಣದ ವಿಷಯದಲ್ಲಿ ಇಂದು ತುಂಬಾ ದುಬಾರಿ ದಿನವಾಗಲಿದೆ. ಅನಗತ್ಯ ವೆಚ್ಚಗಳಿಂದಾಗಿ ನಿಮ್ಮ ಬಜೆಟ್ ಅಸಮತೋಲನವಾಗಬಹುದು. ನೀವು ಯಾರಿಗಾದರೂ ಯಾವುದೇ ಭರವಸೆಯನ್ನು ಬಹಳ ಎಚ್ಚರಿಕೆಯಿಂದ ನೀಡಬೇಕು. ಸಂತೋಷದ ದಿನಗಳನ್ನು ನೋಡಲು ಇಂದು ಶ್ರಮ ಹಾಕಬೇಕಾಗುತ್ತದೆ. ನಿಮ್ಮ ದೈನಂದಿನ ಕೆಲಸಕ್ಕೆ ಯಾವುದಾದರು ಅಡ್ಡಿ ಆತಂಕಗಳಿದ್ದರೆ ಈ ದಿನ ನಿವಾರಣೆಯಾಗಬಹುದು.
ಕುಂಭ ರಾಶಿ
ಇಂದು ನಿಮಗೆ ಉತ್ತಮ ಫಲ ನೀಡುವ ದಿನವಾಗಲಿದೆ. ಕೌಟುಂಬಿಕ ವಿಚಾರವಾಗಿ ದೊಡ್ಡ ಸವಾಲುಗಳು ಎದುರಾಗಬಹುದು. ನಿಮ್ಮ ವಿವಾಹ ಸಂಬಂಧವಾಗಿ ಯಾವುದಾದರು ಅಡೆತಡೆಗಳಿದ್ದರೆ ಅದು ಮತ್ತಷ್ಟು ಜಟಿಲವಾಗಬಹುದು. ಆದ್ರೆ ಅಭಿಪ್ರಾಯಗಳಿಗೆ ಮನ್ನಣೆ ಸಿಗಬಹುದು. ವ್ಯಾಪಾರಸ್ಥರು ಕೆಲವು ದೊಡ್ಡ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತಾರೆ. ವಾಹನ ಸಂಬಂಧಿ ಸಮಸ್ಯೆಗಳಿದ್ದರೆ ನಿವಾರಣೆಯಾಗಬಹುದು. ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ದಿನವಾಗಿರಬಹುದು.
ಮೀನ ರಾಶಿ
ನೀವು ಈ ದಿನ ಖುಷಿಯಿಂದ ಕಳೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆ ಬಗೆಹರಿಯಲಿದೆ. ಆರ್ಥಿಕವಾಗಿಯೂ ಈ ದಿನ ಚೆನ್ನಾಗಿರಲಿದೆ. ಉದ್ಯೋಗಿಗಳ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಕೆಲಸದಲ್ಲಿ ಈ ದಿನ ಉತ್ತಮವಾಗಿದೆ, ವ್ಯಾಪಾರಿಗಳಿಗೂ ಧನ ಲಾಭವಾಗಲಿದೆ, ಆದರೆ ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು. ನಿಮ್ಮಿಂದಾಗಿ ಮನೆಯಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಉಂಟಾಗಬಹುದು. ಆರೋಗ್ಯದಲ್ಲಿ ಏರುಪೇರಾಗಿದ್ದರೆ ವೈದ್ಯರ ಭೇಟಿಯಾಗುವುದು ಉತ್ತಮ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











