Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
Dina Bhavishya: ಮೇ 06ರ ಮಂಗಳವಾರವು ಧನ ಲಾಭಕ್ಕೆ ಕಾರಣ..? ಯಾರಿಗೆಲ್ಲಾ ನೋಡಿ
ಶುಭ ದಿನ, ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮ್ಮ ಗೌರವ ಮತ್ತು ಘನತೆ ಹೆಚ್ಚಾಗಲಿದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಬಹಳ ದೊಡ್ಡ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಹಿತೈಷಿಗಳ ಸಲಹೆ ಮತ್ತು ಮಾರ್ಗದರ್ಶನವು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿಮಗೆ ಸ್ವಲ್ಪ ದೊಡ್ಡ ಪರಿಹಾರ ಸಿಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಮಕ್ಕಳ ವೃತ್ತಿಜೀವನದ ಬಗ್ಗೆ ನಿಮಗೆ ಏನಾದರೂ ಚಿಂತೆ ಇದ್ದರೆ, ಅದು ಕೂಡ ದೂರವಾಗುತ್ತದೆ. ಪ್ರಯಾಣಗಳನ್ನು ನೀವು ಮುಂದೂಡಬೇಕಾಗುತ್ತದೆ.
ವೃಷಭ ರಾಶಿ
ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮಗೆ ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ಅಡೆತಡೆಗಳು ನಿವಾರಣೆಯಾಗುತ್ತವೆ. ಈ ಅವಧಿಯಲ್ಲಿ ಬಾಕಿ ಉಳಿದಿರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುತ್ತವೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹಾದಿ ಸ್ಪಷ್ಟವಾಗುತ್ತದೆ. ಅನಗತ್ಯ ವಿಷಯಗಳ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಉದ್ವಿಗ್ನತೆ ಇರುತ್ತದೆ. ಕೆಲಸದ ವಿಚಾರವಾಗಿಯೂ ಒತ್ತಡ ಹೆಚ್ಚಾಗಲಿದೆ.

ಮಿಥುನ ರಾಶಿ
ಇಂದು ನಿಮಗೆ ಧನಾತ್ಮಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಇರಲಿದೆ. ಕೆಲಸವೊಂದರ ಸಂಬಂಧ ನೀವು ದಿಢೀರ್ ಹಣ ಹೊಂದಿಸಬೇಕಾಗಬಹುದು. ಎಲ್ಲಾ ವಿಚಾರಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ಒಳ್ಳೆಯ ಸುದ್ದಿಗಳ ಕೇಳುತ್ತೀರಿ. ಅನಪೇಕ್ಷಿತ ಪ್ರಯಾಣ ನಿಮ್ಮ ಆಯಾಸವನ್ನು ಹೆಚ್ಚಿಸಬಹುದು. ವೆಚ್ಚಗಳು ಹೆಚ್ಚಾಗಬಹು, ನಿಮ್ಮ ಹಣಕಾಸಿನ ಸಮಸ್ಯೆ ಗಾಢವಾಗುವುದು. ಕುಟುಂಬ ಸದಸ್ಯರಿಂದ ನೀವು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರಾಗಹುದು. ಹೀಗಾಗಿ ಎಚ್ಚರಿಕೆ ಅಗತ್ಯ. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು.
ಕರ್ಕ ರಾಶಿ
ಇಂದು ನಿಮಗೆ ಗೊಂದಲದಿಂದ ತುಂಬಿದ ದಿನವಾಗಿರುತ್ತದೆ. ಯಾವುದೇ ಕೆಲಸಕ್ಕೂ ನೀವು ಇತರರನ್ನು ಅವಲಂಬಿಸಬಾರದು. ಬರಿ ಅದೃಷ್ಟ ನಂಬಿಕೊಂಡು ಇರುವುದು ನಿಮಗೆ ಯಶಸ್ಸು ತರುವುದಿಲ್ಲ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಇದನ್ನು ಬಳಸಿಕೊಂಡರೆ ಉತ್ತಮ ಭವಿಷ್ಯಕ್ಕೆ ಕಾರಣವಾಗಲಿದೆ. ಯಾವುದೇ ಹೊಸ ಕೆಲಸ ಪ್ರಾರಂಭಿಸಲಿದ್ದರೆ ನಿಮ್ಮ ಹಿರಿಯರ ಆಶೀರ್ವಾದ ಪಡೆಯಿರಿ. ಪ್ರೇಮಿಗಳಿಗೆ ಈ ದಿನ ಅನುಕೂಲಕರವಾಗಿದೆ. ಇಂದು ನಿಮ್ಮ ಆಧ್ಯಾತ್ಮಿಕ ಒಲವು ಹೆಚ್ಚಾಗಬಹುದು. ಹೂಡಿಕೆ ಮಾಡಲು ಇಂದು ಒಳ್ಳೆಯ ದಿನ. ಆದ್ರೆ ವ್ಯಾಪಾರಿಗಳಲ್ಲಿ ದೊಡ್ಡ ಸವಾಲುಗಳು ಎದುರಾಗಬಹುದು.
ಸಿಂಹ ರಾಶಿ
ಈ ದಿನ ನಿಮಗೆ ಧನದ ವಿಚಾರದಲ್ಲಿ ಲಾಭದಾಯಕ ದಿನ. ದೂರ ಪ್ರಯಾಣಕ್ಕೆ ನೀವು ಒಳಗಾಗಬೇಕಾಗಬಹುದು. ಹಿರಿಯರೊಬ್ಬರು ಅನಾರೋಗ್ಯದಿಂದ ಹೊರಬರಲಿದ್ದು, ನಿಮ್ಮಲ್ಲಿ ಮಾನಸಿಕ ನೆಮ್ಮದಿಗೆ ಕಾರಣವಾಗಲಿದೆ. ಸಮಯವನ್ನು ಅನಗತ್ಯವಾಗಿ ವ್ಯರ್ಥ ಮಾಡಬೇಡಿ. ಕೆಲಸದತ್ತ ಸಂಪೂರ್ಣ ಗಮನವಿರಲಿ, ವ್ಯಾಪಾರಿಗಳು ದೊಡ್ಡ ವ್ಯವಹಾರಗಳ ಮುಂದೂಡುವುದು ಉತ್ತಮ. ನಿಮ್ಮ ತಾಳ್ಮೆ ಪರೀಕ್ಷೆ ಮಾಡುವ ಹಲವು ಕೆಲಸಗಳು ನಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ದುಪ್ಪಟ್ಟಾಗಬಹುದು. ತಲೆನೋವು ಅಥವಾ ಕಣ್ಣಿಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗೆ ಕಾರಣವಾಗಬಹುದು.
ಕನ್ಯಾ ರಾಶಿ
ಆರ್ಥಿಕವಾಗಿ ಇಂದು ನಿಮಗೆ ಉತ್ತಮ ದಿನವಾಗಿರಲಿದೆ. ಕೆಲಸದ ಸ್ಥಳದಲ್ಲಿ ದೊಡ್ಡ ಸವಾಲು ಎದುರಾಗಬಹುದು. ನಿಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಲು ನೀವು ಕೆಲವು ಹೊಸ ಜನರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಬಹುದು. ಬೇಡದ ವಿಷಯಗಳಿಗೆ ಮತ್ತು ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ನಂಬಬೇಡಿ. ಮಕ್ಕಳಿಗಾಗಿ ನೀವು ಬಹಳ ಖರ್ಚು ಮಾಡಬೇಕಾಗಬಹುದು. ಹಾಗೆ ಇಷ್ಟು ದಿನದ ಉಳಿತಾಯವನ್ನು ನೀವು ಅಗತ್ಯ ಕೆಲಸವೊಂದಕ್ಕೆ ಬಳಸಬೇಕಾದ ಅನಿವಾರ್ಯತೆ ಬರಬಹುದು.
ತುಲಾ ರಾಶಿ
ಇಂದು ನೀವು ತಾಳ್ಮೆ ಮತ್ತು ತಿಳುವಳಿಕೆಯಿಂದ ಕೆಲಸಗಳನ್ನು ಮಾಡುವ ದಿನವಾಗಿರುತ್ತದೆ. ಕೆಲಸದಲ್ಲಿ ಈ ದಿನ ಉತ್ತಮವಾಗಿದೆ, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮಗೆ ಯಾವುದೇ ದೈಹಿಕ ಸಮಸ್ಯೆ ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಅನಾರೋಗ್ಯ ಸಂಬಂಧ ಸೂಕ್ತ ಚಿಕಿತ್ಸೆಗಾಗಿ ವೈದರ ಭೇಟಿಯಾಗಿ. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ಬಾಕಿ ಉಳಿದ ಕೆಲಸ ಪೂರ್ಣ ಮಾಡಿ.
ವೃಶ್ಚಿಕ ರಾಶಿ
ಇಂದು ನೀವು ಕಷ್ಟಪಟ್ಟು ಕೆಲಸ ಮಾಡುವ ದಿನವಾಗಿರುತ್ತದೆ. ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ . ಕುಟುಂಬ ಜೀವನದಲ್ಲಿ ಕೆಲ ಅಭಿಪ್ರಾಯ ಬರಬಹುದು. ಜ್ವರ, ನೆಗಡಿ, ಕೆಮ್ಮು ಮುಂತಾದ ಆನಾರೋಗ್ಯ ಸಮಸ್ಯೆಗಳಿರಬಹುದು. ಜಾಗ್ರತೆವಹಿಸದಿದ್ದರೆ ಆರ್ಥಿಕ ನಷ್ಟವನ್ನು ಸಹ ಅನುಭವಿಸಬಹುದು. ಸ್ನೇಹಿತರೊಂದಿಗೆ ಯಾವುದೋ ವಿಷಯದ ಬಗ್ಗೆ ಸ್ವಲ್ಪ ಒತ್ತಡ ಉಂಟಾಗಬಹುದು. ನಿಮ್ಮ ನೆಚ್ಚಿನ ಆಹಾರವನ್ನು ನೀವು ಆನಂದಿಸುವಿರಿ. ನಿಮ್ಮ ಸಹೋದರ ಸಹೋದರಿಯರು ನಿಮ್ಮ ಕೆಲಸದಲ್ಲಿ ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಾರೆ.
ಧನು ರಾಶಿ
ಇಂದು ನೀವು ನಿಮ್ಮ ಖರ್ಚುಗಳ ಬಗ್ಗೆ ಗಮನ ಹರಿಸಬೇಕಾದ ದಿನವಾಗಿರುತ್ತದೆ. ನಿಮ್ಮ ಖರ್ಚುಗಳು ಅನಗತ್ಯವಾಗಿ ಹೆಚ್ಚಾಗುತ್ತವೆ, ಇದು ನಿಮ್ಮ ಒತ್ತಡ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಪಾಲುದಾರಿಕೆಯ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಲಾಭ ಹೆಚ್ಚಾಗಬಹುದು. ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಆತುರ ತೋರಿಸಿದರೆ, ಅದರಲ್ಲಿ ದೊಡ್ಡ ಸಂಘರ್ಷ ಉಂಟಾಗಬಹುದು. ಆರ್ಥಿಕ ಸಮಸ್ಯೆ ಸುಧಾರಿಸಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಆಹಾರ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಬಹುದು.
ಮಕರ ರಾಶಿ
ಇಂದು ನಿಮಗೆ ಸಕಾರಾತ್ಮಕ ಫಲಿತಾಂಶಗಳ ನೀಡುವ ದಿನವಾಗಿದೆ. ದೈನಂದಿನ ಕೆಲಸದಲ್ಲಿ ನಿಮ್ಮ ಅನಾರೋಗ್ಯ ಅಡ್ಡಿತರುತ್ತಿದ್ದರೆ ಈ ದಿನ ಅದಕ್ಕೆ ಪರಿಹಾರ ಸಿಗಲಿದೆ. ಮನೆಗಾಗಿ ನೀವು ಹಣ ಖರ್ಚು ಮಾಡುತ್ತೀರಿ. ಕಳೆದು ಹೋದ ವಸ್ತುವೊಂದು ನಿಮಗೆ ವಾಪಾಸು ಸಿಗಬಹುದು. ನೀವು ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಈ ಸಮಯದಲ್ಲಿ ನೀಡುವುದು ಉತ್ತಮ. ಕೃಷಿಗೆ ಸಂಬಂಧಿಸಿದ ಮಂದಿ ಈ ದಿನ ಖರ್ಚು ಮಾಡಿ ಅಗತ್ಯ ವಸ್ತು ಖರೀದಿಸಬಹುದು.
ಕುಂಭ ರಾಶಿ
ಇಂದು ನಿಮಗೆ ಸವಾಲುಗಳಿಂದ ತುಂಬಿದ ದಿನವಾಗಿರುತ್ತದೆ. ನಿಮ್ಮಲ್ಲಿನ ಕೆಲವು ಗೊಂದಲಗಳು ಮತ್ತಷ್ಟು ಸಮಸ್ಯೆ ತರಬಹುದು. ಹಣಕಾಸು ವಿಚಾರದಲ್ಲಿ ನಿಮ್ಮ ಪರವಾದ ದಿನ ಆಗದೇ ಇರಬಹುದು. ಹೂಡಿಕೆ ಮಾಡುವಾಗ ಆತುರ ಮಾಡಬೇಡಿ. ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ. ನೀವು ಯಾರಿಗಾದರೂ ಹಣದ ಬಗ್ಗೆ ಯಾವುದೇ ಭರವಸೆಯನ್ನು ಬಹಳ ಎಚ್ಚರಿಕೆಯಿಂದ ನೀಡಬೇಕು. ನಿಮಗೆ ಯಾರಾದರು ಆಪ್ತರಿಂದ ದೊಡ್ಡ ಸವಾಲಗಳು ಬರಬಹುದು.
ಮೀನ ರಾಶಿ
ಅತಿಯಾದ ಖರ್ಚಿನಿಂದಾಗಿ ಹಣದ ಚಿಂತೆ ಹೆಚ್ಚಾಗಬಹುದು. ಹೆಚ್ಚಿನ ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಆರ್ಥಿಕವಾಗಿಯೂ ಈ ಸಮಯ ಅಷ್ಟು ಒಳ್ಳೆಯದಲ್ಲ. ಕೆಲಸದಲ್ಲಿ ತಪ್ಪುಗಳಾಗದಂತೆ ಜಾಗ್ರತೆವಹಿಸಿ. ವ್ಯಾಪಾರಿಗಳು ಈ ದಿನ ಮಾಡುವ ಪ್ರಯಾಣದಿಂದ ಉತ್ತಮ ಲಾಭ ಪಡೆಯುತ್ತೀರಿ. ಕುಟುಂಬದ ಕಡೆಗೆ ಹೆಚ್ಚು ಗಮನಹರಿಸಿ, ಚಿಕ್ಕ ಸಮಸ್ಯೆ ದೊಡ್ಡ ಸಮಸ್ಯೆಯಾಗುವುದು. ಕೆಟ್ಟ ಆಲೋಚನೆ ಮನಸ್ಸಿನಿಂದ ದೂರವಿಡಿ. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳಾಗಿದ್ದರೆ ಈ ಸಮಯದಲ್ಲಿ ಪ್ರಮುಖ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳುತ್ತೀರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











