Dina Bhavishya: ಮೇ 05ರ ಸೋಮವಾರ ನಿಮ್ಮ ರಾಶಿಫಲದಲ್ಲಿ ಏನಿದೆ?

ಶುಭ ದಿನ, ಈ ದಿನದ ರಾಶಿಫಲ ನೋಡೋಣ:

ಮೇಷ ರಾಶಿ

ಹಣದ ದೃಷ್ಟಿಯಿಂದ ದಿನ ಒಳ್ಳೆಯದು ನಿಮ್ಮ ಹಣಕಾಸಿನ ತೊಂದರೆಗಳು ನಿವಾರಣೆಯಾಗುವ ಸಮಯ ಆಗಲಿದೆ. ನಿಮ್ಮ ದೊಡ್ಡ ವ್ಯವಹಾರಗಳು ಈ ದಿನ ಬಹಳ ಸಲೀಸಾಗಿ ನಡೆಯಲಿವೆ. ಯಾರ ಬಳಿಯಾದರು ಹಣಕಾಸಿನ ನೆರವು ಪಡೆಯಲು ಮುಂದಾದರೆ ಒಂದಿಷ್ಟು ಯಶಸ್ಸು ಕೂಡ ಪಡೆಯಬಹುದು. ಕೆಲಸದ ಸಮಯದಲ್ಲಿ ಪ್ರಯಾಣಿಸಬೇಕಾಗಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಲು ಬಿಡಬೇಡಿ. ನಿಮ್ಮ ಒಂದು ಕೆಲಸ ಇಂದು ಅಪೂರ್ಣವಾಗಿ ಉಳಿಯಬಹುದು. ನಿರುದ್ಯೋಗಿಗಳಾಗಿದ್ದರೆ ಈ ದಿನ ಆಪ್ತರೊಬ್ಬರ ಸಹಕಾರದಿಂದ ಉತ್ತಮ ಅವಕಾಸ ಪಡೆಯಲಿದ್ದೀರಿ. ಮನೆಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.

ವೃಷಭ ರಾಶಿ

ನಿಮ್ಮ ಅನಾರೋಗ್ಯವು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಇಂತಹ ಸವಾಲಿನ ಸಮಯದಲ್ಲೂ ನೀವು ಶ್ರಮ ವಹಿಸಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಹಾಯಕವಾಗಲಿದೆ. ಇಂದು ಹಚ್ಚು ಒತ್ತಡಕ್ಕೆ ಒಳಗಾಗಬೇಡಿ ಮತ್ತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಕುಟುಂಬದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದವನ್ನು ಇಂದು ಪರಿಹರಿಸಿಕೊಳ್ಳಬಹುದು. ಆರ್ಥಿಕವಾಗಿ ನೀವು ಹೆಚ್ಚು ಸದೃಢವಾಗಲು ಅವಕಾಶಗಳಿವೆ. ಹೂಡಿಕೆಯಲ್ಲಿ ಲಾಭ ಮಾಡುವ ದಿನವಾಗಿದೆ. ಹಾಗೆ ಉಳಿತಾಯದ ಕಡೆಗೂ ಹೆಚ್ಚು ಗಮನವಿಡುತ್ತೀರಿ.

May-05-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ನಿಮಗೆ ಬಿಡುವಿಲ್ಲದ ದಿನವಾಗಿರಲಿದೆ. ಶ್ರಮದಿಂದ ಮಾಡುವ ಕೆಲಸವು ನಿಮ್ಮ ಪರವಾದ ಫಲಿತಾಂಶಕ್ಕೆ ಕಾರಣವಾಗಲಿದೆ. ವ್ಯಾಪಾರಿಗಳು ನಿಮ್ಮ ವ್ಯವಹಾರದಲ್ಲಿ ಎದುರಿಸಬೇಕಾದ ಸವಾಲುಗಳ ಕುರಿತು ಅರಿವಿನಿಂದ ಇಂದು ಕೆಲಸಗಳ ಮಾಡಿ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸವಾಲುಗಳ ಬರದಂತೆ ಎಚ್ಚರಿಕೆ ವಹಿಸಿ. ಮನೆಯ ವಾತಾವರಣದಲ್ಲಿ ಸಂತಸ ಇರಲಿದೆ. ನೀವು ಉಳಿತಾಯದತ್ತ ಹೆಚ್ಚು ಗಮನ ಹರಿಸಿದರೆ ಉತ್ತಮ. ಶುಭ ಕಾರ್ಯ ಸಂಬಂಧ ನೀವು ಸಲಹೆ ನೀಡಬಹುದು. ಅವಿವಾಹಿತರಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಇರಬಹುದು. ಗೃಹಿಣಿಯರ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಕರ್ಕ ರಾಶಿ

ಇಂದು ಉದ್ಯೋಗಿಗಳಿಗೆ ಉತ್ತಮ ದಿನ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಯು ಪರಿಹಾರವಾಗಲಿದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಇಂದು ಸಂಗಾತಿಯೊಂದಿಗೆ ಉತ್ತಮ ದಿನ. ಮಕ್ಕಳ ಕುರಿತಾದ ಚಿಂತೆ ದೂರಾಗಲಿದೆ. ಈ ದಿನ ಹೆಚ್ಚು ನೀರು ಕುಡಿಯುವುದನ್ನು ಮರೆಯಬೇಡಿ. ಹಾಗೆ ಉದರ ಸಂಬಂಧಿ ಸಮಸ್ಯೆಗಳಿದ್ದರೆ ಎಚ್ಚರಿಕೆ ಅಗತ್ಯ. ಹಣಕಾಸಿನ ವಿಚಾರವಾಗಿ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಿ. ರಕ್ತ ಸಂಬಂಧಿಗಳಿಂದ ಸಹಕಾರ ಕೋರಿದ್ದರೆ ಈ ದಿನದಂದು ಫಲ ಸಿಗಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿಗೆ ಈ ದಿನವು ಬಹಳ ದೊಡ್ಡ ಸವಾಲುಗಳ ಎದುರಿಸುವ ದಿನವಾಗಲಿದೆ, ಕಚೇರಿಯಲ್ಲಿ ನಿಮಗೆ ಬಹಳ ಕಷ್ಟದ ದಿನವಾಗಬಹುದು. ಒತ್ತಡ ಹೆಚ್ಚಾಗಬಹುದು. ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಶೀಘ್ರದಲ್ಲೇ ದೊಡ್ಡ ಪ್ರಗತಿಯನ್ನು ಸಾಧಿಸಬಹುದು. ವ್ಯಾಪಾರಸ್ಥರು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು, ವಿಶೇಷವಾಗಿ ನೀವು ಪಾಲುದಾರಿಕೆ ವ್ಯವಹರದಲ್ಲಿದ್ದರೆ ಲಾಭಾಂಶ ಹೆಚ್ಚಾಗಬಹುದು. ಹಣದ ಪರಿಸ್ಥಿತಿಯು ಉತ್ತಮವಾಗಲಿದೆ. ದೈನಂದಿನ ವ್ಯಾಯಾಮ ಮಾಡುವುದು ಹಾಗೆ ದೈಹಿಕ ಚಟುವಟಿಕೆಯಾಗುವುದನ್ನು ತಪ್ಪಿಸಬೇಡಿ. ಅನಿರೀಕ್ಷಿತವಾಗಿ ನೀವು ದೂರ ಪ್ರಯಾಣ ಮಾಡಬೇಕಾಗಿ ಬರಬಹುದು.

ಕನ್ಯಾ ರಾಶಿ

ಈ ದಿನವು ನಿಮಗೆ ತುಂಬಾ ಒಳ್ಳೆಯ ಸಂದರ್ಭಗಳಿಗೆ ಕಾರಣವಾಗಬಹುದು. ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ತಾಳ್ಮೆ ಕಳೆದುಕೊಳ್ಳುವುದನ್ನು ತಪ್ಪಿಸಿ. ಬ್ಯಾಂಕಿಂಗ್ ಕೆಲಸದಲ್ಲಿ ಯಾವುದಾದರು ಅಡ್ಡಿ ಆತಂಕ ನೀವು ಎದುರಿಸಿದ್ದರೆ ಈ ದಿನ ನಿವಾರಣೆಯಾಗಲಿದೆ. ವ್ಯಾಪಾರಿಗಳು ಹಠಾತ್ ಹಣದ ನಷ್ಟದ ಜೊತೆಗೆ ಆರೋಗ್ಯದಲ್ಲಿ ಸಣ್ಣ ಏರುಪೇರು ಉಂಟಾಗಬಹುದು. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ. ಆಪ್ತರೊಬ್ಬರಿಂದ ನಿಮ್ಮ ಉದ್ಯೋಗ ಸಂಬಂಧಿಸಿದಂತೆ ಶುಭ ಸುದ್ದಿ ಕೇಳುವಿರಿ. ಪ್ರವಾಸ ಕುರಿತಾಗಿ ನೀವು ನಿರ್ಧಾರರ ಕೈಗೊಳ್ಳಬಹುದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಬಂಧ ಚರ್ಚೆ ನಡೆಸಬಹುದು.

ತುಲಾ ರಾಶಿ

ನೀವು ಅವಿವಾಹಿತರಾಗಿದ್ದರೆ ಈ ದಿನದಂದು ಬಹಳ ದೊಡ್ಡ ಸುದ್ದಿ ಕೇಳುವಿರಿ. ಕೆಲವು ದಿನಗಳವರೆಗೆ ನಿಮ್ಮ ಸಂಗಾತಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗದಿದ್ದರೆ ಇಂದು ಉತ್ತಮ ದಿನ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು ಯಾವುದೇ ದೊಡ್ಡ ಸಮಸ್ಯೆ ಕಂಡುಬರುತ್ತಿಲ್ಲ. ಉದ್ಯೋಗಸ್ಥರು ಪ್ರಮುಖ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದು ಉತ್ತಮ. ನಿಮ್ಮ ದೊಡ್ಡ ಕನಸುಗಳನ್ನು ಈಡೇಸಿಕೊಳ್ಳಲು ಇಂದು ಒಂದು ಹೆಜ್ಜೆ ಮುಂದಿಡುತ್ತೀರಿ. ಯಾವುದಾದರು ಸಾಲ ಮರುಪಾವತಿ ಕಂತು ಬಾಕಿ ಇದ್ದರೆ ನೆನಪಿಸಿಕೊಳ್ಳಿ. ಹೊಸ ವ್ಯಾಪಾರಿಗಳು, ವ್ಯವಹಾರಸ್ಥರು ತರಾತುರಿಯಲ್ಲಿ ಯಾವುದೇ ಕೆಲಸ ಅಥವಾ ನಿರ್ಧಾರಕ್ಕೆ ಮುಂದಾಗಬೇಡಿ.

ವೃಶ್ಚಿಕ ರಾಶಿ

ಇಂದು ನಿಮಗೆ ಮಿಶ್ರಫಲ ನೀಡುವ ದಿನವಾಗಲಿದೆ. ಈ ದಿನದಂದು ನಿಮ್ಮ ಕೆಲಸದಕ್ಕೆ ತಕ್ಕ ಪ್ರಶಂಸೆ ಸಿಗಲಿದೆ, ನೀವು ಸರ್ಕಾರಿ ನೌಕರರಾಗಿದ್ದರೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆಸ್ಪತ್ರೆ ಸಂಬಂಧಿಸಿದ ಖರ್ಚುಗಳು ಅಧಿಕವಾಗಬಹುದು. ಹಾಗೆ ಆಹಾರದ ವಿಚಾರವಾಗಿ ಎಚ್ಚರಿಕೆ ಅಗತ್ಯ. ಮನೆಗಾಗಿ ವಸ್ತುವೊಂದನ್ನು ನೀವು ಖರೀದಿಸಬಹುದು. ಇದು ನಿಮ್ಮ ಹಣಕಾಸು ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಲಿದೆ. ಹಾಗೆ ನಿಮ್ಮಲ್ಲಿನ ಹೆಚ್ಚು ಖರ್ಚುಗಳು ಮುಂದೆ ಸವಾಲಿನ ದಿನಗಳ ತರಬಹುದು. ಬಹಳ ದೊಡ್ಡ ವ್ಯವಹಾರದಲ್ಲಿ ತೊಡಗುವುದನ್ನು ಮುಂದೂಡುವುದು ಉತ್ತಮ. ಯಾರೊಂದಿಗೆ ಹಣದ ವ್ಯವಹಾರ ಮಾಡಬೇಕು ಎಂಬುದನ್ನು ಆಲೋಚಿಸಿ ಮುಂದುವರೆಯಿರಿ.

ಧನು ರಾಶಿ

ಹಣಕಾಸಿಗೆ ಸಂಬಂಧಿಸಿದಂತೆ ಮನೆಯಲ್ಲಿ ವಿವಾದಗಳು ಹುಟ್ಟಿಕೊಳ್ಳಬಹುದು. ಆರ್ಥಿಕ ಪರಿಸ್ಥಿತಿಯನ್ನು ಎದುರಿಸುವುದು ಕಷ್ಟಕರವಾಗಬಹುದು, ಹೀಗಾಗಿ ಸಾಲ ಮಾಡಲು ಮುಂದಾಗಬಹುದು. ವ್ಯಾಪಾರಿಗಳಲ್ಲಿ ದೊಡ್ಡ ಮಟ್ಟದ ಲಾಭ ಇಲ್ಲದಿದ್ದರೂ ಸಮಾಧಾನಕರ ದಿನವಾಗಿರಲಿದೆ. ನಿಮ್ಮ ತಂದೆಯ ವ್ಯವಹಾರದೊಂದಿಗೆ ನೀವು ಕೈ ಜೋಡಿಸಬಹುದು. ಕುಟುಂಬ ಜೀವನದಲ್ಲಿ ನಿಮ್ಮ ಪರವಾದ ಒಲವಿನಿಂದಾಗಿ ನಿಮ್ಮಲ್ಲಿದ್ದ ಸಮಸ್ಯೆಯೊಂದು ದೂರಾಗಲಿದೆ. ದೂರ ಪ್ರಯಾಣಕ್ಕೆ ಇಂದು ಸೂಕ್ತ ದಿನವಾಗಿರುವುದಿಲ್ಲ. ಮಧುಮೇಹ ಸಮಸ್ಯೆ ಹೊಂದಿರುವವರು ಈ ಸಮಯದಲ್ಲಿ ಎಚ್ಚರದಿಂದ ಇರಬೇಕು. ಹಾಗೆ ನಿಯಮಿತ ಪರೀಕ್ಷೆಗೆ ಒಳಗಾಗಬೇಕು.

ಮಕರ ರಾಶಿ

ಇಂದು ಕೆಲಸದ ಸಂಬಂಧ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಹಾಗೆ ಈ ದಿನದಂದು ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್‌ನಲ್ಲಿ ಸಂದಾಯ ಮಾಡಬಹುದು. ಹಲವು ವಿಚಾರಗಳಿಂದ ಈ ದಿನವು ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ನೀವು ಆಪ್ತರನ್ನು ಭೇಟಿಯಾಗುತ್ತೀರಿ. ಇದರಿಂದ ನೆಮ್ಮದಿ ಇರಲಿದೆ. ಹಾಗೆ ಉದ್ಯೋಗದ ಸ್ಥಳದಲ್ಲಿದ್ದ ಸಮಸ್ಯೆಯೊಂದು ನಿವಾರಣೆಯಾಗುವುದರಿಂದ ನೀವು ನಿರಾಳರಾಗುತ್ತೀರಿ. ಯಾವುದೇ ಕೆಲಸ ಮಾಡುವಾಗಲು ಅದರಿಂದ ಆಗುವ ಲಾಭದ ಕುರಿತು ಆಲೋಚಿಸಿ. ಶುಭ ಕಾರ್ಯಕ್ಕಾಗಿ ಹಣ ಹೊಂದಿಸಬೇಕಾಗಬಹುದು. ದಿನದ ಅಂತ್ಯದಲ್ಲಿ ನಿಮ್ಮ ಮೇಲೆ ದೊಡ್ಡ ಆರೋಪ ಬರುವ ಸಾಧ್ಯತೆ ಇದೆ.

ಕುಂಭ ರಾಶಿ

ಕುಂಭ ರಾಶಿ ಮಂದಿ ಈ ದಿನದಂದು ಬಹಳಷ್ಟು ಓಡಾಟದಲ್ಲಿ ಕಳೆಯಬೇಕಾಗುತ್ತದೆ. ಅದರಲ್ಲೂ ನೀವು ಯಾವುದಾದರು ಸಮಸ್ಯೆಯಿಂದ ಹೊರ ಬರಬೇಕಾದರೆ ಹಣ ಖರ್ಚು ಮಾಡುವ ಜೊತೆಗೆ ಪ್ರಯಾಣಕ್ಕೂ ಮುಂದಾಗಬೇಕಿದೆ. ಮನೆಯ ಸದಸ್ಯರರೊಬ್ಬರಲ್ಲಿ ಅನಾರೋಗ್ಯ ಕಾಡಬಹುದು. ದೊಡ್ಡ ವ್ಯಾಪಾರಸ್ಥರಿಗೆ ಇಂದು ಸವಾಲಿನ ದಿನವಾಗಿರಲಿದೆ. ಚಿಲ್ಲರೆ ವ್ಯಾಪಾರಿಗಳು ಲಾಭದಾಯಕ ದಿನ ನೋಡಬಹುದು. ದಾಂಪತ್ಯದಲ್ಲಿ ಮನಸ್ತಾಪಗಳ ನೋಡಬಹುದು. ಬಹುದಿನಗಳಿಂದ ನೀವು ವಸ್ತುವೊಂದನ್ನು ಖರೀದಿಸಲು ಕೂಡಿಟ್ಟ ಹಣವನ್ನು ಬೇರೊಂದು ಕೆಲಸಕ್ಕಾಗಿ ಬಳಸಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ದಿಢೀರ್ ಹಣಹಾಸು ಲಾಭ ನೋಡಬಹುದು, ನೀವು ಮಾಡುವ ಎಲ್ಲಾ ಹಣಕಾಸು ಸಂಬಂಧಿ ಕೆಲಸಗಳು ಫಲ ನೀಡಲಿವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅವಿವಾಹಿತರಾಗಿದ್ದರೆ ಆಪ್ತರೊಬ್ಬರು ಅಥವಾ ಸಂಬಂಧಿಕರ ಸಲಹೆಯ ಮೇರೆಗೆ ಮದುವೆ ಸಂಬಂಧ ತಯಾರಿಯಲ್ಲಿ ತೊಡಗಬಹುದು. ಮನೆಗಾಗಿ ವಿಶೇಷ ವಸ್ತುವೊಂದನ್ನು ಖರೀದಿಸಬಹುದು. ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಎದುರಿಸುತ್ತೀರಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-05- 2025-daily-horoscope-prediction-for-12-zodiac-signs-in-kannada

Here is May 05 daily horoscope prediction for 12 zodiac signs read on...
Story first published: Monday, May 5, 2025, 5:59 [IST]
X
Desktop Bottom Promotion