Latest Updates
-
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ -
Holi 2026: ಹೋಳಿಯಂದು ನಿಮ್ಮ ರಾಶಿಗೆ ಪ್ರಕಾರ ಈ ಉಪಾಯ ಮಾಡಿ! ಸಕಲ ಸಮಸ್ಯೆ- ಸಂಕಷ್ಟಗಳಿಂದ ಮುಕ್ತಿ ಸಿಗುತ್ತೆ -
ಈ ಟ್ರಿಕ್ ಬಳಸಿ ಮಾಡಿ ಗರಿಗರಿ ಆಲೂ ಚಿಪ್ಸ್! ಬಿಳಿಯಾಗಿ ಬರಲು.. ವರ್ಷವಿಡೀ ಕೆಡದಂತೆ ಇಡೋದು ಹೇಗೆ?
Dina Bhavishya: ಮೇ 04ರ ಭಾನುವಾರ ನಿಮ್ಮ ರಾಶಿಯಲ್ಲಿ ಏನಿದೆ?
ಶುಭ ದಿನ, ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಕುಟುಂಬದ ಕಡೆಯಿಂದ ಹಣಕಾಸಿನ ನೆರವು ಸಿಗುವಂತಹ ಲಾಭವಿದೆ. ಬಹಳ ದಿನಗಳಿಂದ ನಿಮ್ಮ ಕುಟುಂಬದಲ್ಲಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ನೀವು ದೊಡ್ಡ ಜವಾಬ್ದಾರಿ ವಹಿಸಿಕೊಳ್ಳುತ್ತೀರಿ. ಕೆಲಸದ ವಿಚಾರವಾಗಿ ನೀವು ಬಹಳ ಶ್ರಮ ಹಾಕಬೇಕಾಗುತ್ತದೆ. ಹಾಗೆ ಇದರಿಂದ ಒತ್ತಡ ಕೂಡ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿದ್ದ ಸಮಸ್ಯೆಯೊಂದು ದೊಡ್ಡದಾಗಬಹುದು. ನೀವು ಪೋಷಕರ ಜೊತೆಗೆ ಶುಭ ಕಾರ್ಯ ಸಂಬಂಧ ಚರ್ಚೆ ಮಾಡಬಹುದು. ಹಣಕಾಸಿನ ವಿಚಾರವಾಗಿ ಈ ದಿನವು ನಿಮ್ಮ ಪರವಾಗಿ ಇರಬಹುದು. ಆದ್ರೆ ನಿಮ್ಮ ಖರ್ಚುಗಳ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳ ನಿರ್ಧಾರವು ಮುಂದಿನ ಭವಿಷ್ಯ ರೂಪಿಸುವಲ್ಲಿ ನೆರವಾಗಬಹುದು.
ವೃಷಭ ರಾಶಿ
ಈ ದಿನವು ನಿಮಗೆ ಅಪಾರ ಸಂಪತ್ತ ತರುವ ಅವಕಾಶ ನೀಡಲಿದೆ. ನೀವು ಬಹಳ ಸಮಯದಿಂದ ಕಾನೂನು ವಿಚಾರವಾಗಿ ಹೋರಾಡುತ್ತಿದ್ದರೆ ಈ ದಿನ ಆಪ್ತರೊಬ್ಬರ ಸಹಕಾರ ಪಡೆದು ಅದರಿಂದ ಹೊರಬರಲು ಪರುಹಾರ ಪಡೆಯಲಿದ್ದೀರಿ. ಯಾರಿಗಾದರು ಹಣ ನೀಡುವ ಅಥವಾ ಆ ಕುರಿತ ಭರವಸೆ ನೀಡುವ ಮೊದಲು ಎಚ್ಚರ ವಹಿಸಿ. ನಿಮ್ಮ ನಿರ್ಲಕ್ಷದ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು. ನಿಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರಿಂದ ಸಹಕಾರ ಪಡೆಯಲಿದ್ದೀರಿ. ಕೆಲಸದ ಕಾರಣಕ್ಕೆ ಪ್ರಯಾಣ ಮಾಡಬಹುದು. ಇಂದು ಸೋಮಾರಿತನ ಬಿಡುವುದು ಉತ್ತಮ.

ಇಂದು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ತರುವ ಹಲವು ಕೆಲಸಗಳು ಎದುರಾಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಉತ್ತಮ ಚಿಂತನೆಯಿಂದ ನಿಮಗೆ ಲಾಭವಾಗುತ್ತದೆ. ನಿಮ್ಮ ಮಕ್ಕಳ ಕೆಲಸದ ಮೇಲೆ ನಿಗಾ ಇಡಿ. ಬಹಳ ಹಿಂದೆ ಕಳೆದುಕೊಂಡ ವಸ್ತು ಸಿಗಬಹುದು. ಮನೆಯಲ್ಲಿ ಶಾಂತಿ ಇರಲಿದೆ. ದಾಂಪತ್ಯ ಜೀವನವು ಸಂತಸದಿಂದ ಕಳೆಯುತ್ತೀರಿ. ಅನಗತ್ಯ ಕಲಹಗಳಿಂದ ದೂರ ಉಳಿಯುವುದು ಉತ್ತಮ. ನೀವು ಯಾವುದಾದರು ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿದ್ದರೆ ಮರೆಯದೆ ಈ ದಿನ ಕಂತುಗಳ ಪಾವತಿ ಮಾಡಿ.
ಕರ್ಕ ರಾಶಿ
ನಿಮಗಿಂದು ಮಿಶ್ರ ಫಲದ ದಿನವಾಗಿದೆ. ನೀವು ಯಾವುದೇ ಕೆಲಸ ಮಾಡಿದರೂ ಅಡೆತಡೆಯಿಂದ ಯಶಸ್ಸಿನತ್ತ ತಿರುಗಬಹುದು. ಕುಟುಂಬಸ್ಥರಿಂದ ನಿಮ್ಮ ಆಲೋಚನೆಗಳಿಗೆ ಬೆಂಬಲ ಇರಲಿದೆ. ವ್ಯಾಪಾರಿಗಳು ಲಾಭದಾಯಕ ದಿನವಾಗಿ ಪರಿವರ್ತಿಸುವ ಅವಕಾಶ ಪಡೆಯಲಿದ್ದಾರೆ. ಬಟ್ಟೆ ಹಾಗೂ ದಿನಸಿ ವ್ಯಾಪಾರಿಗಳಿಗೆ ಈ ದಿನವು ಬಹಳ ಲಾಭ ತರಬಹುದು. ನಿಮ್ಮ ಅದೃಷ್ಟದ ಕಾರಣದಿಂದ ಧನ ಲಾಭದ ನಿರೀಕ್ಷೆ ಇಡಿ. ದೂರದ ಸಂಬಂಧಿಯೊಬ್ಬರ ಭೇಟಿ ಮಾಡಬಹುದು. ದೊಡ್ಡ ವ್ಯವಹಾರ ಸಂಬಂಧ ಮಾತುಕತೆಗೆ ನೀವು ಮುಂದಾಗಬಹುದು.
ಸಿಂಹ ರಾಶಿ
ಇಂದು ನಿಮಗೆ ಸಮಸ್ಯೆಗಳಿಂದ ತುಂಬಿದ ದಿನವಾಗಬಹುದು. ನೀವು ಯಾವುದೇ ಕೆಲಸ ಮಾಡಲು ಹೊರಟರೆ ಅಡ್ಡಿ ಆತಂಕ ಹೆಚ್ಚಾಗಿ ಕಾಡಬಹುದು. ಮನೆಯ ವಾತಾವರಣದಲ್ಲಿ ಚಿಂತನಾತ್ಮಕ ಭಾವನೆ ಇರಲಿದೆ. ಪೋಷಕರ ಆಶೀರ್ವಾದದಿಂದ, ನಿಮ್ಮ ಬಾಕಿ ಇರುವ ಯಾವುದೇ ಕೆಲಸವು ಪೂರ್ಣಗೊಳ್ಳುತ್ತದೆ. ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲದ ಬಗ್ಗೆ ಇತರರೊಂದಿಗೆ ಹಂಚಿಕೊಳ್ಳಿ. ಕುಟುಂಬದ ವ್ಯವಹಾರ ನೀವು ನೋಡಿಕೊಳ್ಳುತ್ತಿದ್ದರೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮಲ್ಲಿ ನಿದ್ರೆ ಸಂಬಂಧಿಸಿದಂತೆ ಸಮಸ್ಯೆ ಇದ್ದರೆ ಹೆಚ್ಚಾಗಬಹುದು.
ಕನ್ಯಾ ರಾಶಿ
ನೀವು ಹೊಸ ಕೆಲಸ ಹುಡುಕುತ್ತಿದ್ದರೆ ಈ ದಿನ ಉತ್ತಮ ಅವಕಾಶ ಪಡೆಯಬಹುದು. ಇಂದು ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ನೀವು ಪ್ರವಾಸಕ್ಕೆ ತೆರಳಬಹುದು. ಸಮಾಜಮುಖಿ ಕಾರ್ಯದಲ್ಲಿ ನೀವು ಭಾಗಿಯಾಗಬಹುದು. ವ್ಯಾಪಾರಿಗಳು ಈ ದಿನ ಸೋಮಾರಿತನ ಬಿಟ್ಟರೆ ಲಾಭ ಮಾಡಬಹುದು. ಬೀದಿ ಬದಿಯ ವ್ಯಾಪಾರಿಗಳಿಗೆ ಇದು ಲಾಭದಾಯಕ ದಿನ ಆಗಿರಲಿದೆ. ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಿಗೆ ನೀವು ಸಂಪೂರ್ಣ ಗಮನ ನೀಡಬೇಕು. ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅವಿವಾಹಿತರಲ್ಲಿ ವಿವಾಹ ಸಂಬಂಧ ತಯಾರಿ ನಡೆಯಲಿದೆ. ಸಹೋದರಿಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಬಹುದು.
ತುಲಾ ರಾಶಿ
ಇಂದು ತುಲಾ ರಾಶಿಯವರಿಗೆ ಈ ಧನಾತ್ಮಕ ದಿನವಾಗಿದೆ, ನೀವು ಬಹಳ ಸಮಯದಿಂದ ಮಾಡಬೇಕೆಂದು ಕಾದಿದ್ದ ಕೆಲಸವೊಂದನ್ನು ಮಾಡಿ ಮುಗಿಸುತ್ತೀರಿ. ಹೊಸ ವ್ಯವಹಾರದಲ್ಲಿ ಉತ್ತಮ ಪ್ರಗತಿ ನೋಡಬಹುದು. ಸಾಲಕ್ಕಾಗಿ ನೀವು ಬೇರೆಯವರ ಬಳಿ ಮನವಿ ಮಾಡಬಹುದು. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿದ್ದರೆ ನಿವಾರಣೆಯಾಗಲಿದೆ. ಕುಟುಂಬಸ್ಥರಿಂದ ನಿಮ್ಮ ಕೆಲಸದ ಸಂಬಂಧ ಅಥವಾ ಹಣಕಾಸು ಸಂಬಂಧವಾಗಿ ಒತ್ತಡ ಹೆಚ್ಚಾಗಬಹುದು. ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಸಂಬಂಧಿಕರಿಂದ ಕೆಟ್ಟ ಮಾತುಗಳ ಕೇಳಬೇಕಾಗಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಮಿಶ್ರ ಫಲ ನೀಡುವ ದಿನವಾಗಿದೆ. ನೀವು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಸೂಕ್ತ ಪರಿಹಾರಕ್ಕೆ ಮುಂದಾಗುವುದು ಉತ್ತಮ. ಅಪರಿಚಿತರೊಂದಿಗೆ ವ್ಯವಹಾರ ಮಾಡಲು ಮುಂದಾಗಬೇಡಿ. ನಿಮ್ಮ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳುವಂತಹ ಕೆಲಸಗಳಿಗೆ ಕೈ ಹಾಕಬೇಡಿ. ಹಿರಿಯರ ನಿರ್ಧಾರಗಳನ್ನ ಮರುಪ್ರಶ್ನಿಸುವ ಕೆಲಸ ಮಾಡಬೇಡಿ. ಆಧ್ಯಾತ್ಮಿಕವಾಗಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಬಹುದು. ನಿಮ್ಮದಲ್ಲದ ವಸ್ತುವೊಂದಕ್ಕೆ ನೀವು ಹಣ ಖರ್ಚು ಮಾಡಬೇಕಾಗಬಹುದು.
ಧನು ರಾಶಿ
ಇಂದು ನಿಮಗೆ ಮಿಶ್ರ ಫಲಿತಾಂಶಗಳ ದಿನವಾಗಲಿದೆ. ವ್ಯಾಪಾರ ವಲಯದಲ್ಲಿದ್ದರೆ ದಿನದ ಆರಂಭ ನಿಧಾನವಾಗಿ ಆರಂಭವಾಗಲಿದ್ದು, ನಂತರದ ಸಮಯದಲ್ಲಿ ಸುಧಾರಿಸಲಿದೆ. ವಾಹನ ಸವಾರರು ಈ ದಿನ ಬಹಳ ಎಚ್ಚರಿಕೆ ವಹಿಸಬೇಕು. ನಿಮ್ಮಲ್ಲಿ ಅನಾರೋಗ್ಯ ಸಮಸ್ಯೆ ಇದ್ದರೆ ಈ ದಿನ ವೈದ್ಯರ ಸಲಹೆ ಪಡೆಯುವುದು ಬಹಳ ಉತ್ತಮ. ವಿದ್ಯಾರ್ಥಿಗಳಿಗೆ ಇದು ಶುಭಕರ ದಿನವಾಗಿರಲಿದೆ. ನಿಮ್ಮ ಬಯಕೆಯಂತೆ ಉನ್ನತ ಶಿಕ್ಷಣ ಸಂಬಂಧ ಮನೆಯಲ್ಲಿ ನಿರ್ಧಾರ ಕೈಗೊಳ್ಳಬಹುದು.
ಮಕರ ರಾಶಿ
ಈ ದಿನ ನಿಮಗೆ ಬಹಳ ಸವಾಲುಗಳು ಎದುರಾಗುವ ದಿನವಾಗಿದೆ. ಮನೆಗಾಗಿ ನೀವು ಬಯಸಿದ್ದ ವಸ್ತುವೊಂದನ್ನು ಖರೀದಿಸುತ್ತೀರಿ. ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಕೆಲಸಗಳಿಗೆ ಆಪ್ತರನ್ನು ಅವಲಂಬಿಸಬೇಡಿ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಈ ದಿನವು ಶುಭಕರವಾಗಲಿದೆ. ಯಾರಿಗಾದರು ಸಾಲ ನೀಡಿದ್ದರೆ ಅವರಿಂದ ಹಣ ಪಡೆಯಲು ಮುಂದಾಗುವುದು ಉತ್ತಮ. ಗೃಹಿಣಿಯರ ಆರೋಗ್ಯದಲ್ಲಿ ಏರಿಳಿತ ನೋಡಬಹುದು. ದೊಡ್ಡ ಹಣಕಾಸಿನ ವ್ಯವಹಾರಕ್ಕೆ ಮುಂದಾಗಬೇಡಿ.
ಕುಂಭ ರಾಶಿ
ಇಂದು ನಿಮಗೆ ಕೆಲವು ದೊಡ್ಡ ಸವಾಲು ಎದುರಾಗಬಹುದು. ಕೆಲಸದ ಸ್ಥಳದಲ್ಲಿ, ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ. ನಿಮ್ಮ ಅಭಿಪ್ರಾಯಗಳಿಗೆ ಈ ದಿನ ಎಲ್ಲಾ ಕಡೆ ಮನ್ನಣೆ ಸಿಗಲಿದೆ. ನೀವು ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ನಿಮ್ಮ ಯಾವುದೇ ಹಳೆಯ ಹೂಡಿಕೆಯಿಂದ ಉತ್ತಮ ಲಾಭ ಪಡೆಯಬಹುದು. ಹಣವನ್ನು ಖರ್ಚು ಮಾಡುವ ಮುನ್ನ ಮತ್ತೊಮ್ಮೆ ಆಲೋಚಿಸಿ. ಲಾಭವಿಲ್ಲದ ಖರ್ಚುಗಳನ್ನು ಹೆಚ್ಚು ಮಾಡಲು ಮುಂದಾಗಬೇಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಉತ್ತಮ ದಿನವಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಬಹಳ ಉತ್ತಮ ದಿನ. ವಿವಾಹ ಸಂಬಂಧವಾಗಿ ನೀವು ಚರ್ಚೆಯಲ್ಲಿ ತೊಡಗಬಹುದು. ದೊಡ್ಡ ಕೆಲಸಗಳನ್ನು ಆದಷ್ಟು ಶ್ರಮ ವಹಿಸಿ ಮಾಡುವಿರಿ. ಇದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಹಿರಿಯರೊಬ್ಬರ ಮಾತಿನಂತೆ ಇಂದು ಕೆಲಸವೊಂದನ್ನ ಮಾಡಬಹುದು. ಮನೆಗಾಗಿ ನೀವು ಬಹಳ ಖರ್ಚು ಮಾಡುತ್ತೀರಿ. ಆಹಾರ ಸಂಬಂಧಿ ಖರ್ಚು ಅಧಿಕವಾಗಬಹುದು. ಕೆಲಸ ಸಂಬಂಧ ಯಾವುದೇ ಸವಾಲುಗಳನ್ನು ಧೈರ್ಯವಾಗಿ ಇಂದು ಎದುರಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











