Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
Dina Bhavishya: ಮೇ 03ರ ಶನಿವಾರ ನಿಮ್ಮ ರಾಶಿಫಲದಲ್ಲಿ ಏನಿದೆ?
ಶುಭ ದಿನ, ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಆರ್ಥಿಕವಾಗಿ ಅನುಕೂಲಕರ ದಿನವಾಗಿರುತ್ತದೆ. ನೀವು ಯಾವುದೇ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಕೆಲಸದ ಕಾರಣಕ್ಕೆ ನೀವು ಬಹಳ ದೂರ ಪ್ರಯಾಣಿಸಬೇಕಾಗಬಹುದು. ಹಾಗೆ ನಿಮ್ಮ ಹಳೆಯ ಸಮಸ್ಯೆಯೊಂದನ್ನು ನಿವಾರಿಸಲು ನೀವು ಹಣ ಖರ್ಚು ಮಾಡಬೇಕಾಗುತ್ತದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳು ನಿಮ್ಮನ್ನು ಅರಸಿ ಬರುತ್ತವೆ. ನಿಮ್ಮ ಕಚೇರಿ ಕೆಲಸವನ್ನು ಎಚ್ಚರಿಕೆಯಿಂದ ಮಾಡುವುದು ಮುಖ್ಯ. ನಿಮ್ಮ ಬಹಳ ದಿನಗಳಿಂದ ಬಯಸಿದ್ದ ವಸ್ತು ಕೈ ಸೇರಲಿದೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಎದುರಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಮಿಶ್ರ ದಿನ ನಿರೀಕ್ಷಿಸಬಹುದು. ನಿಮ್ಮ ಉದರ ಸಂಬಂಧಿ ಸಮಸ್ಯೆಗಳಿದ್ದರೆ ಈ ದಿನ ಮತ್ತೆ ಸಮಸ್ಯೆ ತರಬಹುದು. ಕುಟುಂಬದಲ್ಲಿ ಅನಿರೀಕ್ಷಿತ ಘಟನೆಗಳು ಮತ್ತು ಕೆಲವು ನಿರಾಶಾದಾಯಕ ಸುದ್ದಿಗಳು ಕೇಳಿ ಬರಬಹುದು. ವಾಹನ ಸವಾರರು ಇಂದು ಬಹಳ ಜಾಗರುಕತೆಯಿಂದ ವಾಹನ ಚಲಾಯಿಸಬೇಕು. ನಿಮ್ಮ ಅಮೂಲ್ಯ ವಸ್ತುಗಳ ಮೇಲೆ ನಿಗಾ ಇಡಿ. ಗೃಹಿಣಿಯರಲ್ಲಿ ಆರ್ಥಿಕ ಬಲ ಹೆಚ್ಚಾಗಲಿದೆ. ಅವಿವಾಹಿತರು ತಮ್ಮ ಖರ್ಚನ್ನು ನಿಭಾಯಿಸುವುದು ಮುಖ್ಯ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸುವ ಬಗ್ಗೆ ನೀವು ಜಾಗರೂಕರಾಗಿರಬೇಕು. ವಿದ್ಯಾರ್ಥಿಗಳಿಗೆ ಈ ದಿನ ಶುಭಕರವಾಗಲಿದೆ. ಹಳೆಯ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯುತ್ತೀರಿ. ದಾಂಪತ್ಯದಲ್ಲಿ ಏರುಪೇರು ಉಂಟಾಗುವ ವಿಚಾರ ನಡೆಯಬಹುದು. ನೀವು ಯಾರಿಗಾದರು ಹಣ ನೀಡಿದ್ದರೆ ಈ ದಿನ ವಾಪಾಸು ಪಡೆಯಬಹುದು. ಹಿರಿಯರೊಬ್ಬರ ಜೊತೆಗಿನ ಮಾತುಕತೆಯಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಇದು ಕಲಹಕ್ಕೂ ಕಾರಣವಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನ ಬಹಳ ಶ್ರಮ ವಹಿಸಿ ಕೆಲಸ ಮಾಡಬೇಕಾಗುತ್ತದೆ. ನೀವು ದೂರ ಪ್ರಯಾಣಕ್ಕೆ ಮುಂದಾಗಬೇಕಾಗಬಹುದು. ಕುಟುಂಬಸ್ಥರಿಂದ ಹಣಕಾಸು ವಿಚಾರವಾಗಿ ನಿಮ್ಮ ಮೇಲೆ ಒತ್ತಡ ಹೆಚ್ಚಾಗಬಹುದು. ನಿಮ್ಮ ಕೆಲಸದಲ್ಲಿನ ಅಡೆತಡೆಗಳು ದೂರವಾಗುತ್ತವೆ. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಮುಖ್ಯ. ನಿಮ್ಮ ಕುಟುಂಬವು ಇಂದು ನಿಮಗೆ ತುಂಬಾ ಬೆಂಬಲ ನೀಡುತ್ತದೆ. ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶ ಪಡೆಯಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಕೆಲಸದ ವಿಷಯದಲ್ಲಿ ಒಳ್ಳೆಯ ದಿನವಾಗಿರುತ್ತದೆ. ಹೊಸ ರೀತಿಯ ಸವಾಲುಗಳು ನಿಮಗೆ ಎದುರಾಗಬಹುದು. ಎಲ್ಲಾ ವಿಚಾರಗಳಲ್ಲಿ ನಿಮಗೆ ಧನಾತ್ಮಕ ಪ್ರಕ್ರಿಯೆ ಮೂಡಬಹುದು. ಆರೋಗ್ಯದಲ್ಲಿ ಸಣ್ಣ ಏರುಪೇರು ಸಾಧ್ಯ. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು. ದೊಡ್ಡ ವಿಚಾರದಲ್ಲಿ ಆತುರ ಮಾಡಬೇಡಿ. ವ್ಯವಹಾರಗಳು ನಿಮ್ಮ ಅಣತಿಯಂತೆ ನಡೆಯಬಹುದು. ಆದ್ರೆ ವ್ಯಪಾರಿಗಳಲ್ಲಿ ಖರ್ಚು ಹೆಚ್ಚಾಗಬಹುದು. ಮನೆಯ ಸದಸ್ಯರಿಗಾಗಿ ಹೊಸ ವಸ್ತು ಖರೀದಿಗೆ ಮುಂದಾಗಬಹುದು. ಶುಭ ಕಾರ್ಯ ಸಂಬಂಧ ತಯಾರಿ ವೇಗವಾಗುತ್ತದೆ. ಮನೆಯ ನವೀಕರಣ ಸಂಬಂಧ ನೀವು ಚರ್ಚೆಯಲ್ಲಿ ಭಾಗಿಯಾಗುತ್ತೀರ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಕಠಿಣ ದಿನವಾಗಬಹುದು. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲು ನೀವು ತೆಗೆದುಕೊಂಡ ನಿರ್ಧಾರದಿಂದ ಮತ್ತಷ್ಟು ಸವಾಲು ಎದುರಾಗಬಹುದು. ಈ ದಿನ ಬಹಳ ದಣಿದು ಕೆಲಸದಲ್ಲಿ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸಂಗಾತಿಯೊಂದಿಗಿನ ಸಮಸ್ಯೆಗಳು ಬಗೆಹರಿಯುತ್ತವೆ. ನೀವು ಮನೆಗೆ ಹೊಸ ವಾಹನವನ್ನು ತರುವ ಆಲೋಚನೆಯಲ್ಲಿದ್ದರೆ ಮತ್ತಷ್ಟು ತಡವಾಗಬಹುದು. ವ್ಯಾಪಾರಿಗಳಲ್ಲಿ ಉತ್ತಮ ಪ್ರಗತಿ ನೋಡಬಹುದು. ಹೋಟೆಲ್ ಉದ್ಯಮಿಗಳಿಗೆ ಲಾಭದಾಯಕ ದಿನವಾಗಬಹುದು. ಸರ್ಕಾರಿ ವೃತ್ತಿಯಲ್ಲಿದ್ದರೆ ದೊಡ್ಡ ಸವಾಲು ಎದುರಿಸುತ್ತೀರಿ.
ತುಲಾ ರಾಶಿ
ತುಲಾ ರಾಶಿಯವರು ಇಂದು ನಿಮಗೆ ರೋಮಾಂಚಕಾರಿ ದಿನವಾಗಿರುತ್ತದೆ. ನೀವು ಪ್ರವಾಸ, ಪಿಕ್‌ನಿಕ್, ದೇವಾಲಯ ಭೇಟಿ, ಶುಭ ಕಾರ್ಯದಲ್ಲಿ ಭಾಗಿಯಾಗುವಂತಹ ಕಾರ್ಯ ಮಾಡಬಹುದು. ಆಹಾರ ಅಥವಾ ದಿನಸಿ ಸಂಬಂಧಿತ ಖರ್ಚುಗಳು ಹೆಚ್ಚಾಗಬಹುದು. ಮನೆಯ ಸದಸ್ಯರೊಬ್ಬರ ಆರೋಗ್ಯ ವಿಚಾರವಾಗಿ ಚಿಂತೆ ಕಾಡಬಹುದು. ಒತ್ತಡ ಮೇರೆಗೆ ನಿಮ್ಮ ಕನಸೊಂದನ್ನು ಬದಲಾಯಿಸಬೇಕಾಗಬಹುದು. ದೂರ ಪ್ರಯಾಣದಿಂದ ಆಯಾಸವಾಗುವುದು ಖಚಿತವಾದರು ನಿಮ್ಮ ಅನಾರೋಗ್ಯ ಹೆಚ್ಚಬಹುದು. ಸಣ್ಣ ಪುಟ್ಟ ವಿಚಾರಗಳಿಗೂ ತಾಳ್ಮೆ ಕಳೆದುಕೊಳ್ಳಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇದು ಮಿಶ್ರ ದಿನವಾಗಲಿದೆ. ನೀವು ಬಯಸಿದಂತೆ ಹಣಕಾಸು ವಿಚಾರ ಸಾಗುವುದಿಲ್ಲ. ಹಾಗೆ ದಿನದ ಅಂತ್ಯದಲ್ಲಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಕ್ಕರೂ ಅದರ ಫಲಿತಾಂಶ ನಿಮಗೆ ತೃಪ್ತಿದಾಯಕವಾಗುವುದಿಲ್ಲ. ವಿವಾಹಿತರಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಕುಳಿತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ. ಸರ್ಕಾರಿ ಉದ್ಯೋಗಿಗಳಲ್ಲಿ ದೊಡ್ಡ ಸವಾಲು ಎದುರಾಗಬಹುದು. ಇಲ್ಲವೆ ಒತ್ತಡಗಳು ಹೆಚ್ಚಾಗಬಹುದು. ಮಧುಮೇಹಿಗಳಾಗಿದ್ದರೆ ಈ ದಿನ ಎಚ್ಚರ ವಹಿಸಿ.
ಧನು ರಾಶಿ
ಧನು ರಾಶಿಯ ಮಂದಿ ಇಂದು ಬಹಳ ಜಾಗರೂಕರಾಗಿರಬೇಕು. ಅಪರಿಚಿತರೊಂದಿಗೆ ವ್ಯವಹಾರ ಅಥವಾ ವ್ಯಪಾರಿಗಳಲ್ಲಿ ದೊಡ್ಡ ನಷ್ಟ ಸಂಭವಿಸಬಹುದು. ನೀವು ಬುದ್ದಿವಂತಿಕೆಯಿಂದ ಇಂದಿನ ವ್ಯವಹಾರಗಳ ನೋಡಿಕೊಳ್ಳಿ. ನೀವು ಬಹಳ ಕಾಲದಿಂದ ಕೆಲಸ ಹುಡುಕುತ್ತಿದ್ದರೆ ಇಂದು ಆಪ್ತರೊಬ್ಬರ ಸಹಕಾರದಿಂದ ನಿಮಗೆ ಉತ್ತಮ ಅವಕಾಶ ಹುಡುಕಿ ಬರಬಹುದು. ನಿಮ್ಮ ಕೆಲಸದ ಒತ್ತಡವನ್ನು ನಿವಾರಿಸಲು ಮುಂದಾಗಿ. ಮೂಳೆ ಸಂಬಂಧಿ ಸಮಸ್ಯೆಯಿಂದ ನೀವು ಬಳಲಿದ್ದರೆ ಈ ದಿನ ಚಿಕಿತ್ಸೆಗೆ ಮುಂದಾಗಿ. ನಿಮ್ಮ ಆದಾಯದ ಮೂಲವೊಂದರಿಂದ ಸಮಸ್ಯೆ ಬರಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಖರ್ಚುಗಳಿಂದ ತುಂಬಿದ ದಿನವಾಗಿರುತ್ತದೆ. ಅನಗತ್ಯ ವಸ್ತುವೊಂದರ ಮೇಲೆ ನೀವು ಹಣ ವ್ಯಯಿಸುತ್ತೀರಿ. ಹಾಗೆ ದೊಡ್ಡ ಖರ್ಚುಗಳ ಮಾಡಲು ಮುಂದಾಗುವುದು ದೊಡ್ಡ ಸವಾಲುಗಳ ತರಬಹುದು. ನಿಮ್ಮ ದೊಡ್ಡ ಸಮಸ್ಯೆಗಳ ಮೂಲ ಹುಡುಕಿ ಅದರಿಂದ ಪರಿಹಾರ ಪಡೆಯುವುದು ಉತ್ತಮ. ಕೆಲಸದ ಸ್ಥಳದಲ್ಲಿ ದೊಡ್ಡ ಕಲಹ ಮೂಡಬಹುದು. ಎಲ್ಲಾ ವಿಚಾರದಲ್ಲೂ ಆತುರ ಮಾಡುವುದನ್ನು ಬಿಡಬೇಕು. ಮನೆಗಾಗಿ ವಸ್ತು ಖರೀದಿಗೂ ಮುನ್ನ ಅದನ್ನು ಸರಿಯಾಗಿ ಪರಿಶೀಲಿಸುವುದು ಮುಖ್ಯ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಸವಾಲುಗಳಿಂದ ತುಂಬಿರುತ್ತದೆ. ನಿಮ್ಮ ಕಠಿಣ ಪರಿಶ್ರಮವನ್ನು ಯಾರೊಬ್ಬರು ಗುರುತಿಸದೆ ಇರಬಹುದು. ಖರ್ಚುಗಳ ನಿಯಂತ್ರಣ ಮಾಡಿ. ಅವಿವಾಹಿತರಲ್ಲೊ ದೊಡ್ಡ ಮಟ್ಟದ ಲಾಭವಿದ್ದರೂ ಖರ್ಚುಗಳ ಪಟ್ಟಿ ಬೆಳೆಯಲಿದೆ. ವಿದ್ಯಾರ್ಥಿಗಳಿಗೆ ಬಹಳ ಮುಖ್ಯ ದಿನವಾಗಬಹುದು, ಉನ್ನತ ಶಿಕ್ಷಣ ಕುರಿತ ನಿರ್ಧಾರಕ್ಕೆ ಬರಲು ಸೂಕ್ತ ಕಾಲವಿದು. ಆಹಾರ ಸಂಬಂಧಿ ಖರ್ಚು ಹೆಚ್ಚಾಗುವ ನಿರೀಕ್ಷೆ ಇದೆ. ನಿದ್ರೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆ ಎದುರಿಸುತ್ತೀರ.
ಮೀನ ರಾಶಿ
ಮೀನ ರಾಶಿಯವರು ಇಂದು ಕಷ್ಟಪಟ್ಟು ಕೆಲಸ ಮಾಡಬೇಕಾದ ದಿನವಾಗಿರುತ್ತದೆ. ನಿಮ್ಮ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ನೀವು ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶಗಳ ಪಡೆಯಲಿದ್ದೀರಿ. ವ್ಯವಹಾರದಲ್ಲಿ ಹೊಸ ರೀತಿಯ ಬದಲಾವಣೆ ತರಲು ಮುಂದಾಗುತ್ತೀರಿ. ನಿಮ್ಮ ದೊಡ್ಡ ಸಮಸ್ಯೆಯೊಂದು ಬಗೆಹರಿಯಲಿದೆ. ಕಚೇರಿ ಸಂಬಂಧಿಸಿದಂತೆ ಒತ್ತಡ ಹೆಚ್ಚಾಗುತ್ತೆ. ಹಣಕಾಸು ಸ್ಥಿತಿ ಸುಧಾರಿಸಲಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಕಂಡುಬರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











