Dina Bhavishya: ಮೇ 02ರ ಶುಕ್ರವಾರವು ನಿಮಗಿರುವ ಲಾಭವೇನು?

ಶುಭ ದಿನ, ಈ ದಿನದ ರಾಶಿಫಲ ನೋಡೋಣ:

ಮೇಷ ರಾಶಿ

ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಿದೆ. ವೈಯಕ್ತಿಕ ಅಥವಾ ವೃತ್ತಿಪರ ಜೀವನವಾಗಲಿ, ನೀವು ಹೆಚ್ಚಿನ ಜವಾಬ್ದಾರಿಗಳನ್ನು ಹೊಂದಿರುತ್ತೀರಿ. ಕಚೇರಿಯಲ್ಲಿ ಸೋಮಾರಿತನವನ್ನು ತ್ಯಜಿಸುವ ಮೂಲಕ ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಸ್ಥರು ದೊಡ್ಡ ಆರ್ಥಿಕ ವಹಿವಾಟು ನಡೆಸದಿರುವುದು ಉತ್ತಮ. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಇರಬಹುದು. ನೀವು ಹಲವು ವರ್ಷದಿಂದ ಯಾವುದಾದರು ಅನಾರೋಗ್ಯಕ್ಕೆ ಔಷಧಿ ಪಡೆಯುತ್ತಿದ್ದರೆ ಈ ದಿನ ಬಹಳ ಎಚ್ಚರಿಕೆ ಇಡಿ. ಹಾಗೆ ನಿಯಮಿತ ಪರೀಕ್ಷೆಗೆ ಒಳಗಾಗಿ. ಆರ್ಥಿಕ ಸಮಸ್ಯೆ ತಕ್ಕ ಮಟ್ಟಿಗೆ ಸಮಾಧಾನಕರವಾದ ಬದಲಾವಣೆಗೆ ಕಾರಣವಾಗಲಿದೆ.

ವೃಷಭ ರಾಶಿ

ಕೆಲಸದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಇಂದು ನಿಮ್ಮ ಕಷ್ಟಕರವಾದ ಕಾರ್ಯಗಳು ಸಹ ಸುಲಭವಾಗಿ ಪೂರ್ಣಗೊಳ್ಳುತ್ತವೆ. ಇದರೊಂದಿಗೆ ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನೂ ಪಡೆಯುತ್ತೀರಿ. ಇಂದು ನಿಮ್ಮ ಆರ್ಥಿಕ ಸಮಸ್ಯೆಯನ್ನು ಪರಿಹರಿಸಬಹುದು. ಹಣದ ವಿಚಾರವಾಗಿ ನೀವು ಯಾರಿಂದಾದರು ಹಣಕ್ಕಾಗಿ ಮನವಿ, ಅಥವಾ ಸಾಲ ಪಡೆಯಲು ಮುಂದಾದರೆ ಈ ದಿನ ಕೈ ಸೇರಬಹುದು. ಬಹಳ ಸಮಯದಿಂದ ನೀವು ಬಯಸಿದಂತಹ ಒಂದು ವಸ್ತು ನಿಮ್ಮ ಕೈ ಸೇರಲಿದೆ. ಆರೋಗ್ಯದಲ್ಲಿನ ಏರುಪೇರು ನಿಮಗೆ ಸಮಸ್ಯೆ ತರಬಹುದು.

May-02-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಕುಟುಂಬ ಜೀವನದಲ್ಲಿ ಈ ದಿನವು ಏರಿಳಿತಗಳಿಂದ ತುಂಬಿರಲಿದೆ. ದಿನದ ಆರಂಭದಲ್ಲಿ ಮನೆಯ ವಾತಾವರಣ ಸರಿಯಾಗುವುದಿಲ್ಲ. ಇಂದು ನೀವು ಕೆಲವು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಬಹುದು. ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಹೆಚ್ಚು ಕೋಪಗೊಳ್ಳುವುದನ್ನು ತಪ್ಪಿಸಿ. ಶುಭ ಕಾರ್ಯ ಸಂಬಂಧ ಮಾತುಕತೆಗಳಲ್ಲಿ ನೀವು ತೊಡಗಬಹುದು. ಸರ್ಕಾರಿ ದಾಖಲೆ, ಬ್ಯಾಂಕಿಂಗ್ ಕೆಲಸಗಳು ಬಾಕಿ ಉಳಿದಿದ್ದರೆ ಆದಷ್ಟು ಬೇಗ ಪೂರ್ಣಗೊಳಿಸುವುದು ನಿಮ್ಮಲ್ಲಿ ಒತ್ತಡ ಕಡಿಮೆ ಮಾಡಲಿದೆ. ದೊಡ್ಡ ಸಮಸ್ಯೆಯೊಂದರಿಂದ ನೀವು ಪಾರಾಗುತ್ತೀರಿ.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನದಂದು ಲಾಭ ನೋಡುವ ದಿನವಾಗಿದೆ. ನೀವು ಯಾವುದಾದರು ಹೊಸ ಹಣಕಾಸಿನ ವ್ಯವಹಾರ ಮಾಡುವುದಾದರೆ ಈ ದಿನ ಉತ್ತಮವಾಗಿದೆ. ಇಂದು ನಿಮ್ಮ ಮನೆಗೆ ಅತಿಥಿಯೊಬ್ಬರ ಆಗಮನ ಆಗಬಹುದು, ಶುಭ ಕಾರ್ಯಗಳ ಕುರಿತಾದ ತಯಾರಿಯಲ್ಲಿ ನೀವು ತೊಡಗಬಹುದು. ದೊಡ್ಡ ಹಣಕಾಸು ವ್ಯವಹಾರ ಮಾಡಲು ಹಲವು ರೀತಿ ದಾರಿ ಹುಡುಕುತ್ತೀರಿ. ನಿಮಗೆ ಯಾವುದೇ ದೊಡ್ಡ ಲಾಭವನ್ನು ಪಡೆಯಲು ಸಾಧ್ಯವಾಗದಿದ್ದರೂ, ನಿಮ್ಮ ಯೋಜನೆಗಳು ಮುಂದುವರಿಯಬಹುದು. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಯೋಜಿತ ರೀತಿಯಲ್ಲಿ ಬಲಪಡಿಸಲು ನೀವು ಪ್ರಯತ್ನಿಸಿದರೆ ಖಂಡಿತವಾಗಿಯೂ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ.

ಸಿಂಹ ರಾಶಿ

ಇಂದು ಸಿಂಹ ರಾಶಿಯವರು ದೊಡ್ಡ ಕೆಲಸಗಳನ್ನು ಮಾಡಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಎಲ್ಲಾ ವಿಚಾರಗಳನ್ನು ಬಹಳ ಆಲೋಚಿಸಿ ಮಾಡುವುದು ಉತ್ತಮ. ನಿಮ್ಮ ಪರವಾಗಿ ನೀವು ಶ್ರಮಿಸುತ್ತೀರಿ ಮತ್ತು ನಿಮ್ಮ ಕಠಿಣ ಪರಿಶ್ರಮವೂ ಮೆಚ್ಚುಗೆ ಪಡೆಯುತ್ತದೆ. ಇಂದು ನಿಮಗೆ ಕೆಲವು ಸವಾಲುಗಳು ಬರಬಹುದು, ವಿಶೇಷವಾಗಿ ಕೆಲಸದಲ್ಲಿ ಸವಾಲಿನ ಜೊತೆಗೆ ಒತ್ತಡ ಕೂಡ ಹೆಚ್ಚಾಗಬಹುದು. ವೈದ್ಯಕೀಯ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿದವರು ಆರ್ಥಿಕವಾಗಿ ಲಾಭ ಪಡೆಯಬಹುದು. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ಜನರು ನಿರಾಸೆ ಅನುಭವಿಸಬಹುದು. ನೀವು ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಅವಕಾಶಗಳ ಪಡೆಯಬಹುದು.

ಕನ್ಯಾ ರಾಶಿ

ನೀವು ಅವಿವಾಹಿತರರಾಗಿದ್ದರೆ ಈ ದಿನ ಬಹಳ ಲಾಭದಾಯಕ ದಿನವಾಗಿ ನೋಡುತ್ತೀರಿ. ನಿಮ್ಮ ಖರ್ಚುಗಳು ಕಡಿಮೆಯಾಗಲಿದೆ. ನೀವು ಬಯಸಿದಂತಹ ವಸ್ತುವೊಂದು ನಿಮ್ಮ ಕೈ ಸೇರಲಿದೆ. ವ್ಯಾಪಾರಿಗಳಾಗಿದ್ದರೆ ಈ ದಿನ ಹಲವು ಸವಾಲುಗಳು ಎದುರಿಸಬೇಕಾಗುತ್ತದೆ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಎಲ್ಲಾ ಸಮಸ್ಯೆಗಳನ್ನು ಒಂದೇ ದೃಷ್ಟಿಯಿಂದ ಬಗೆಹರಿಸಲು ಹೋಗಬೇಡಿ. ಹಣದ ವಿಚಾರದಲ್ಲಿ ಅಪರಿಚಿತರ ನಂಬಬೇಡಿ. ಅಮೂಲ್ಯ ವಸ್ತುಗಳ ಮೇಲೆ ನಿಗಾ ಇಡಿ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.

ತುಲಾ ರಾಶಿ

ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಲಿದೆ. ಪೂರ್ವ ನಿಯೋಜಿತ ಕೆಲಸವೊಂದರಲ್ಲಿ ನೀವು ಇಡೀ ದಿನ ಕಳೆಯುತ್ತೀರಿ. ಮನೆಯಲ್ಲಿ ಹೊಸ ವಸ್ತುವೊಂದರ ಖರೀದಿ ಸಂಬಂಧ ಮಾತುಕತೆಗೆ ಮುಂದಾಗಬಹುದು. ಮನೆಯನ್ನು ನವೀಕರಣ ಮಾಡುವ ಉದ್ದೇಶ ಇದ್ದರೆ ಈ ದಿನ ಇಂದು ನಿರ್ಣಯಕ್ಕೆ ಬರಬಹುದು. ಅವಿವಾಹಿತರಲ್ಲಿ ಮದುವೆ ವಿಚಾರವಾಗಿ ಚರ್ಚೆಗಳು ನಡೆಯಲಿವೆ. ಬಹಳ ಸಮಯದ ನಿಮ್ಮ ದೊಡ್ಡ ಕನಸೊಂದನ್ನು ಈಡೇರಿಸಿಕೊಳ್ಳಲು ಮುಂದಾಗಬಹುದು. ಬಹಳ ಒತ್ತಡದಿಂದ ಹೊರಬರಲು ನೀವು ವಿಶ್ರಾಂತಿ ಪಡೆಯುವುದು ಮುಖ್ಯ.

ವೃಶ್ಚಿಕ ರಾಶಿ

ಈ ರಾಶಿಯವರಿಗೆ ಇಂದು ಮಿಶ್ರ ಫಲದ ದಿನವಾಗಿದೆ. ದೊಡ್ಡ ಖರ್ಚುಗಳನ್ನು ನಿಭಾಯಿಸುವುದನ್ನು ಅಭ್ಯಾಸ ಮಾಡಿ. ಹಾಗೆ ನೀವು ಯಾರಿಗಾದರು ಹಣ ನೀಡಿದ್ದರೆ ಅವರಿಂದ ಪಾವಾಸು ಪಡೆಯುವುದು ಕಷ್ಟವಾಗಿದ್ದರೆ ಈ ದಿನ ಮತ್ತೊಂದು ವಿಧವಾಗಿ ಪ್ರಯತ್ನ ಮಾಡಿದರೆ ಫಲ ನೀಡಬಹುದು. ನೀವು ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪೂರೈಸುತ್ತೀರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಪೂರ್ಣ ಸಕಾರಾತ್ಮಕತೆಯೊಂದಿಗೆ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುತ್ತದೆ.

ಧನು ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಬಹುದು. ಇಂದು ನಿಮ್ಮ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬಾರದು. ವ್ಯಾಪಾರಿಗಳು ಈ ದಿನ ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಮನೆಗಾಗಿ ಒಂದು ವಸ್ತುವನ್ನ ನೀವು ಖರೀದಿಸಬಹುದು. ಎಲ್ಲಾ ವಿಚಾರದಲ್ಲು ಆತುರದ ನಿರ್ಧಾರ ಮಾಡುವುದನ್ನು ತಪ್ಪಿಸಿ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಪಾಡಿ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರು ನೋಡಬಹುದು.

ಮಕರ ರಾಶಿ

ಮಕರ ರಾಶಿಯವರು ಇಂದು ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಬಹುದು. ಹಣದ ಸ್ಥಿತಿ ತೃಪ್ತಿಕರವಾಗಿರುತ್ತದೆ. ವೈಯಕ್ತಿಕ ಜೀವನವಾಗಲಿ ಕೆಲಸವಾಗಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯವಹಾರದ ವಿಷಯಗಳಲ್ಲಿ ಆತುರಪಡಬೇಡಿ ವಿಶೇಷವಾಗಿ ನೀವು ಸಹಭಾಗಿತ್ವದಲ್ಲಿ ವ್ಯಾಪಾರ, ವ್ಯವಹಾರ ಮಾಡಿದರೆ ಈ ಸಮಯದಲ್ಲಿ ಎಚ್ಚರಿಕೆ ಅಗತ್ಯ. ಈ ಸಮಯದಲ್ಲಿ ದೊಡ್ಡ ಕೆಲಸವನ್ನು ಪ್ರಾರಂಭಿಸದಿದ್ದರೆ ಒಳ್ಳೆಯದು. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಉದ್ಯೋಗಿಗಳ ಹಠಾತ್ ಲಾಭದಾಯಕ ದಿನವಾಗಲಿದೆ. ನೀವು ಕೆಲವು ಸವಾಲುಗಳನ್ನು ಅತ್ಯಂತ ಬುದ್ದಿವಂತಿಕೆಯಿಂದ ನಿಭಾಯಿಸುತ್ತೀರಿ. ಈ ಅವಧಿಯಲ್ಲಿ ವ್ಯಾಪಾರಿಗಳು ಉತ್ತಮ ಯಶಸ್ಸನ್ನು ಪಡೆಯಬಹುದು. ಹಣಕಾಸಿನ ತೊಂದರೆಯಿಂದಾಗಿ ಯಾವುದೇ ಕೆಲಸವು ಸಿಲುಕಿಕೊಂಡಿದ್ದರೆ ಅದನ್ನು ಪೂರ್ಣ ಮಾಡಲು ಮುಂದಾಗುವುದು ಉತ್ತಮ. ದೈಹಿಕ ಶ್ರಮಕ್ಕಿಂತ ಇಂದು ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ. ಕುಟುಂಬಸ್ಥರಿಂದ ನಿಮ್ಮ ಮೇಲೆ ಹಣಕಾಸು ವಿಚಾರವಾಗಿ ಒತ್ತಡ ಬರಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ಶುಭವಾಗಬಹುದು. ಬಹಳ ಸಮಯದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ನಿಮ್ಮ ಕಷ್ಟಕರವಾದ ಕಾರ್ಯಗಳು ಸಹ ಸುಲಭವಾಗಿ ಪೂರ್ಣಗೊಳ್ಳುತ್ತವೆ. ದೊಡ್ಡ ಮಟ್ಟದ ವ್ಯವಹಾರದಲ್ಲಿ ದುಡುಕಿನ ನಿರ್ಧಾರ ಮಾಡಬೇಡಿ. ತಂದೆಯೊಂದಿಗೆ ಹೆಚ್ಚು ವಾದಿ ವಿವಾದವನ್ನು ತಪ್ಪಿಸುವುದು ಮುಖ್ಯ. ಅನಗತ್ಯ ಖರ್ಚುಗಳಿಂದ ದೂರ ಉಳಿಯುವುದು ಉತ್ತಮ. ಹಾಗೆ ಯಾರನ್ನೂ ಸುಲಭವಾಗಿ ನಂಬುವುದು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-02-daily-horoscope-prediction-for-12-zodiac-signs-in-kannada

Here is May 02 daily horoscope prediction for 12 zodiac signs read on...
Story first published: Friday, May 2, 2025, 6:24 [IST]
X
Desktop Bottom Promotion