Rashi Bhavishya: ಮೇ 01ರ ಈ ಗುರುವಾರದಂದು ನಿಮಗೆ ಏನೆಲ್ಲಾ ಶುಭವಿದೆ?

ಶುಭ ದಿನ, ಈ ದಿನದ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ದಿನವು ಬಹಳ ಶ್ರಮದಾಯಕ ಆಗಬಹುದು, ನೀವು ಯಾವುದಾದರು ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ನಿಮ್ಮಿಂದ ದೊಡ್ಡ ತಪ್ಪುಗಳಾಗುವುದನ್ನು ತಪ್ಪಿಸಿ. ವ್ಯವಹಾರವು ಏರಿಳಿತಗಳಿಲ್ಲದೆ ಸುಗಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವವರು ಯಶಸ್ವಿಯಾಗುತ್ತಾರೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸುವುದು ಅವಶ್ಯಕ. ನೀವು ಆರೋಗ್ಯದ ವಿಚರವಾಗಿ ಇಂದು ನಿರ್ಲಕ್ಷ ಮಾಡಿದರೆ ದೊಡ್ಡ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಹಾಗೆ ನಿಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಇಂದು ಮಿಶ್ರ ಫಲದ ದಿನವಾಗಿದೆ. ನೀವು ಹಲವು ರೀತಿಯ ಆರ್ಥಿಕ ಸಮಸ್ಯೆಗಳ ಎದುರಿಸುತ್ತೀರಿ. ಅತಿಯಾದ ಖರ್ಚು, ನಿಮ್ಮ ಒತ್ತಡ ಹೆಚ್ಚಿಸಬಹುದು. ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಅಲ್ಪಾವಧಿಯ ಆಧ್ಯಾತ್ಮಿಕ ಪ್ರವಾಸ ತೆರಳುವ ಕುರಿತು ಆಲೋಚಿಸಿರಬಹುದು. ನೀವು ಯಾವುದೇ ಕೆಲಸ ಮಾಡುವ ಮುನ್ನ ಎಚ್ಚರಿಕೆಯ ಹೆಜ್ಜೆ ಇಡಿ. ನಿಮ್ಮ ಹಣಕಾಸಿನ ಸಮಸ್ಯೆ ದೊಡ್ಡದಾಗುವ ಮುನ್ನ ಅದನ್ನು ಪರಿಹರಿಸಲು ಮುಂದಾಗಿ. ದೃಷ್ಟಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಈ ದಿನ ನೀವು ಎಚ್ಚರಿಕೆ ವಹಿಸಿ. ನಿಮ್ಮ ದೊಡ್ಡ ಕನಸೊಂದನ್ನು ಈಡೇರಿಸಿಕೊಳ್ಳಲು ಇಂದು ಸೂಕ್ತ ಸಮಯವಾಗಿದೆ.

May-01-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರೇ ಇಂದು ಸವಾಲಿನ ಸಮಯಗಳು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ ಮತ್ತು ನಿಕಟ ಸಂಬಂಧಿಯೊಬ್ಬರು ನಿಮಗೆ ಹಣ ಸಹಾಯಕ್ಕೆ ಮುಂದಾಗಬಹುದು. ನಿಮ್ಮ ಸರ್ಕಾರಿ ದಾಖಲೆ ಸಂಬಂಧಿತ ಕೆಲಸಗಳು ಮುಂದೂಡಬೇಕಾಗುತ್ತದೆ. ಸಂಗಾತಿಯ ಜೊತೆಗಿನ ಬಾಂಧವ್ಯ ವೃದ್ಧಿಸಲಿದೆ. ಸಹೋದರರೊಂದಿಗೆ ಕೆಲವು ಜಗಳಗಳು ಉಂಟಾಗಬಹುದು. ನೀವು ವಿಷಯಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸದಿದ್ದರೆ ಮಾನಸಿಕ ಒತ್ತಡವು ನಿಮ್ಮನ್ನು ಕಾಡಬಹುದು. ನಿಮ್ಮ ದೈನಂದಿನ ಕೆಲಸದಲ್ಲಿ ಅಡೆತಡೆ ಕಾಡಬಹುದು.

ಕರ್ಕ ರಾಶಿ

ಇಂದು ನಿಮಗೆ ಒಂದು ರೋಮಾಂಚಕಾರಿ ದಿನವಾಗಿರಲಿದೆ. ನೀವು ಯಾವುದೇ ಕೆಲಸ ಮಾಡಲು ಮುಂದಾದರು ಕೂಡ ಅದರಲ್ಲಿ ದೊಡ್ಡ ಸಮಸ್ಯೆ ಎದುರಿಸಬಹುದು. ಸಾಲ ಮಾಡುವುದನ್ನು ತಪ್ಪಿಸಿ ಹಾಗೆ ಖರ್ಚಿನ ಮೇಲೂ ನಿಗಾ ಇಡಿ. ಶುಭ ಸಮಾರಂಭದಲ್ಲಿ ಭಾಗಿಯಾಗಲು ನಿಮಗೆ ಅವಕಾಶಗಳು ಸಿಗಲಿವೆ. ನಿಮ್ಮ ಸುತ್ತಲಿನ ವಾತಾವರಣವು ಆಹ್ಲಾದಕರವಾಗಿರಲಿದೆ. ಪ್ರೀತಿ, ಸಂಗಾತಿ, ದಾಂಪತ್ಯದ ವಿಚಾರದಲ್ಲಿ ನೀವು ಬಹಳ ಶುಭವಾದ ದಿನವಾಗಿ ನೋಡಲಿದ್ದೀರಿ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರ ಆದಾಯ ಇಂದು ಹೆಚ್ಚಾಗಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಗಮನಾರ್ಹ ಯಶಸ್ಸನ್ನು ಸಾಧಿಸುತ್ತಾರೆ. ನಿಮ್ಮ ಮನೆ ಸದಸ್ಯರೊಬ್ಬರ ಅನಾರೋಗ್ಯ ಸಂಬಂಧವಾಗಿ ನೀವು ಒತ್ತಡಕ್ಕೆ ಒಳಗಾಗುತ್ತೀರಿ. ಸೋಮಾರಿತನ ಬಿಟ್ಟು ನಿಮ್ಮ ಕೆಸದಲ್ಲಿ ಪರಿಪೂರ್ಣ ಶ್ರಮ ಹಾಕಿ. ನಿಮ್ಮ ಕುಟುಂಬಸ್ಥರಿಂದ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಬಹುದು. ಪ್ರವಾಸದಂತಹ ಕೆಲಸಕ್ಕೆ ನೀವು ಮುಂದಾಗಬಹುದು. ವ್ಯಾಪಾರಿಗಳಿಗೆ ಈ ದಿನ ಬಹಳ ಶುಭಕರವಾಗಿರಲಿದೆ. ಐಷಾರಾಮಿ ವಸ್ತುಗಳನ್ನು ನೀವು ಖರೀದಿಸುವ ಆಲೋಚನೆ ಮಾಡಬಹುದು.

ಕನ್ಯಾ ರಾಶಿ

ಇಂದು ಕಠಿಣ ಪರಿಶ್ರಮದ ದಿನವಾಗಿರುತ್ತದೆ. ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ಅವಿವಾಹಿರಿಗೂ ಕೂಡ ಈ ದಿನ ಶುಭವಾಗುತ್ತಿದ್ದು, ನಿಮ್ಮಲ್ಲಿ ಹಣಕಾಸು ಲಾಭ ನೋಡಬಹುದು. ಹಾಗೆ ವ್ಯಾಪಾರಿಗಳು ಹೊಸ ಆದಾಯದ ಮೂಲವನ್ನು ಹುಡುಕಬಹುದು. ಖರ್ಚುಗಳ ಮೇಲೆ ಗಮನವಿಡಿ. ಹೊಸ ಕೆಲಸ ಹುಡುಕುತ್ತಿದ್ದರೆ ಒಂದಿಷ್ಟು ದಿನ ಮುಂದೂಡುವುದು ಉತ್ತಮ. ಯಾವುದೇ ಸಮಸ್ಯೆಯನ್ನು ದೊಡ್ಡದು ಮಾಡಿಕೊಳ್ಳುವ ಬದಲಾಗಿ ನೀವೇ ಬಗೆಹರಿಸಿಕೊಳ್ಳುವುದು ಉತ್ತಮ. ನಿಮ್ಮ ಮನೆಯಲ್ಲಿನ ವಸ್ತುವೊಂದನ್ನು ಬದಲಾಯಿಸಲು ನೀವು ಮುಂದಾಗಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ಇಂದು ಹಲವು ರೀತಿಯ ಧನಾತ್ಮಕ ಕಾರ್ಯಗಳ ಮಾಡುವಿರಿ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಶುಭವಾಗಲಿದೆ. ಆದಾಯ ಹಾಗೂ ನಿಮ್ಮ ಖರ್ಚಿನ ಮೇಲೆ ಹಿಡಿತ ಇರಲಿ. ವಾಹನ ಸಂಬಂಧಿಸಿದ ಖರ್ಚುಗಳು ಹೆಚ್ಚಾಗದಂತೆ ನೋಡಿಕೊಳ್ಳಿ. ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗುವ ಸಂಭವವಿದೆ. ದೂರ ಪ್ರಯಾಣಕ್ಕೆ ನೀವು ಮುಂದಾಗಬಹುದು. ಕಾಲು, ಕೈ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ತುತ್ತಾಗಬಹುದು. ಯಾರ ಬಳಿಯಾದರು ರಹಸ್ಯ ವಿಚಾರಗಳನ್ನು ಹೇಳಿಕೊಳ್ಳುವ ಮೊದಲು ಹಲವು ಬಾರಿ ಆಲೋಚಿಸುವುದು ಉತ್ತಮ.

ವೃಶ್ಚಿಕ ರಾಶಿ

ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ. ನಿಮ್ಮ ಆಪ್ತ ಬಳಗದಲ್ಲಿ ನೀವು ಹಣಕಾಸು ವಿಚಾರವಾಗಿ ಬೇಡಿಕೆ ಇಟ್ಟಿದ್ದರೆ ಈ ಸಮಯದಲ್ಲಿ ನೆರವೇರಲಿದೆ. ಹೂಡಿಕೆ, ಉಳಿತಾಯದಲ್ಲಿ ಹೆಚ್ಚು ಭಾಗಿಗಳಾಗುತ್ತೀರಿ. ಇಂದು ಮನೆಗೆ ಅತಿಥಿಗಳ ಆಗಮನವಾಗಬಹುದು. ದೊಡ್ಡ ವ್ಯವಹಾರಗಳಿಗೆ ಮುಂದಾಗಬೇಡಿ. ಸಮಸ್ಯೆಗಳ ಬಗೆಹರಿಸಲು ನೀವು ದೊಡ್ಡ ಕೆಲಸಗಳ ಮಾಡಬೇಕಾಗುತ್ತದೆ. ಎಚ್ಚರಿಕೆಯಿಂದ ನಿಮ್ಮ ಕೆಲಸಗಳ ಪೂರೈಸಲು ಮುಂದಾಗಿ. ಯಾವುದೇ ಕಷ್ಟಗಳು ಶಾಶ್ವತವಲ್ಲ ಎಂಬುದನ್ನು ಇಂದು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಿ.

ಧನು ರಾಶಿ

ಧನು ರಾಶಿಯ ಜನರಿಗೆ ಅದೃಷ್ಟದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ಯಾರಿಗಾದರು ಹಣ ನೀಡಿದ್ದರೆ ಅನಿರೀಕ್ಷಿತವಾಗಿ ವಾಪಾಸು ಬರಬಹುದು. ಹಾಗೆ ದೊಡ್ಡ ಹೂಡಿಕೆ, ಉಳಿತಾಯದಿಂದ ಲಾಭ ಮಾಡಬಹುದು. ವ್ಯಾಪಾರಿಗಳು ದೊಡ್ಡ ವ್ಯವಹಾರವನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಪೂರೈಸಬಹುದು. ಆಸ್ತಿ , ಮನೆ ಸಂಬಂಧಿಸಿದ ವಿಚಾರವಾಗಿ ಆಪ್ತರಲ್ಲಿ ವೈಮನಸ್ಸು ಮೂಡಬಹುದು. ಮನೆಯ ವಾತಾವರಣವು ದೊಡ್ಡ ಒತ್ತಡ ಅಥವಾ ಚಿಂತೆಯಲ್ಲಿ ಮುಳುಗಬಹುದು. ಪಾಲುದಾರಿಕೆ ವ್ಯಾಪಾರಸ್ಥರು ಈ ದಿನ ದೊಡ್ಡ ಸವಾಲು ಎದುರಿಸಬೇಕು.

ಮಕರ ರಾಶಿ

ಮಕರ ರಾಶಿಯವರು ಇಂದು ಬಹಳ ಜಾಗರೂಕರಾಗಿರಬೇಕು. ಕ್ಷುಲ್ಲಕ ವಿಷಯಗಳಿಗೆ ಅನಗತ್ಯವಾಗಿ ಕೋಪಗೊಳ್ಳುವುದನ್ನು ತಪ್ಪಿಸಿ. ನೀವು ಯಾರೊಂದಿಗೂ ಹಣಕಾಸು ವಿವಾರವಾಗಿ ಇಂದು ಜಗಳಕ್ಕೆ ಇಳಿಯಬೇಡಿ. ಇಂದು ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳಬೇಡಿ. ಆತಂಕಕ್ಕೆ ಕಾರಣವಾಗುವ ವಿಚಾರಗಳಿಂದ ದೂರವೇ ಇರಲು ಯತ್ನಿಸಿ. ಶುಭ ಸಮಾರಂಭಕ್ಕೆ ನೀವು ತಯಾರಿ ಮಾಡಿಕೊಳ್ಳಬಹುದು. ಆಪ್ತರೊಬ್ಬರ ಭೇಟಿಯಿಂದ ಒತ್ತಡ ಕಡಿಮೆಯಾಗಬಹುದು. ಮನೆಗೆ ಸಂಬಂಧಿಸಿದ ದೊಡ್ಡ ಖರ್ಚನ್ನು ನೀವು ಭರಿಸಬೇಕಾಗುತ್ತದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಇಂದು ಸಮಾಧಾನದ ದಿನವಾಗಿರುತ್ತದೆ. ವಿಶೇಷವಾಗಿ ವ್ಯವಹಾರದಲ್ಲಿರುವವರು ಉತ್ತಮ ಲಾಭ ಗಳಿಸಬಹುದು. ಕಚೇರಿಯಲ್ಲಿನ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ನಿಮ್ಮ ಮೇಲಧಿಕಾರಿಗಳು ನಿಮ್ಮ ಆಲೋಚನೆಗಳನ್ನು ಮೆಚ್ಚುತ್ತಾರೆ. ಸಂಬಂಧಿಗಳು, ಆಪ್ತರೊಂದಿಗಿನ ಘರ್ಷಣೆ ತಪ್ಪಿಸಿ. ಎಲ್ಲಾ ವಿಚಾರವನ್ನು ಧನಾತ್ಮಕವಾಗಿ ಆಲೋಚಿಸಿ. ಪ್ರವಾಸ ಹೋಗುವ ಸಂಬಂಧ ನೀವು ಖರ್ಚಿನ ಕುರಿತು ಚಿಂತೆ ಮಾಡಬಹುದು. ಕುಟುಂಬ ಸದಸ್ಯರೊಬ್ಬರಿಗೆ ನಿಮ್ಮಿಂದ ಹಣಕಾಸು ನೆರವು ಸಿಗಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಆರ್ಥಿಕ ತೊಂದರೆಗಳು ಉಂಟಾಗಬಹದಾದ ಸೂಚನೆ ಇದೆ. ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಸವಾಲು ಎದುರಿಸಬೇಕಾಗಬಹುದು. ವಾಹನ ಖರೀದಿಯ ನಿಮ್ಮ ಬಯಕೆಗೆ ತಯಾರಿ ವೇಗಗಾಗಲಿದೆ. ಹೂಡಿಕೆಗಳಿಂದ ಲಾಭ ಮಾಡಬಹುದು. ಎಲ್ಲಾ ವಿಚಾರಗಳಲ್ಲಿ ನಿಮ್ಮ ಬುದ್ದಿವಂತಿಕೆ ತೋರಿಸುವಿರಿ. ನಿಮ್ಮಿಂದ ಹಲವರಿಗೆ ನೋವಾಗುವಂತೆ ವರ್ತಿಸಬೇಡಿ. ನಿಮ್ಮ ಭಾವನೆಗಳ ಮೇಲೆ ಇಂದು ಹಿಡಿತ ಇರಲಿ. ಆಸ್ಪತ್ರೆಗಾಗಿ ನೀವು ಖರ್ಚು ಮಾಡಬೇಕಾಗಿ ಬರಬಹುದು. ಮಾನಸಿಕ ನೆಮ್ಮದಿ ಹಾಳು ಮಾಡುವ ವಿಚಾರಗಳಿಂದ ದೂರವೇ ಇರಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

May-01-daily-horoscope-prediction-for-12-zodiac-signs-in-kannada

Here is May 01 daily horoscope prediction for 12 zodiac signs read on...
Story first published: Thursday, May 1, 2025, 6:52 [IST]
X
Desktop Bottom Promotion