2025ರಲ್ಲಿ ಮಂಗಳ ಗ್ರಹ ಈ 5 ರಾಶಿಗಳ ಅದೃಷ್ಟ ಬದಲಿಸಲಿದೆ..! ಯಾವ ಕೆಲಸ ಮಾಡಿದ್ರೂ ಮೇಲುಗೈ

ನಾವು 2024ನೇ ವರ್ಷದ ಅಂತಿಮ ಘಟ್ಟ ತಲುಒಪಿದ್ದೇವೆ. ಹಾಗೆ ಕೆಲವೇ ದಿನದಲ್ಲಿ ನಾವು 2025ನೇ ವರ್ಷಕ್ಕೆ ಕಾಲಿಡಲಿದ್ದೇವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಹೊಸ ವರ್ಷವನ್ನು ವಿಶೇಷವಾಗಿ ಪರಿಗಣಿಸಲಾಗಿದೆ. ಈ ವರ್ಷ ಹಲವು ಯೋಗಗಳು, ಹಲವು ರೀತಿಯ ಅಪರೂಪದ ಗ್ರಹಗತಿಗಳ ಬದಲಾವಣೆ ನಡೆಯಲಿದೆ. ಹೀಗಾಗಿ 2025ನ್ನು ವಿಶೇಷ ವರ್ಷವೆಂದು ನೋಡಬಹುದು.

2025ರಲ್ಲಿ ಶನಿ, ಗುರು, ರಾಹು, ಕೇತುಗಳಂತಹ ಪ್ರಮುಖ ಗ್ರಹಗಳು ತಮ್ಮ ಸಂಚಾರ ಬದಲಿಸುವುದರಿಂದ ಹಲವು ರೀತಿಯಲ್ಲಿ ಗ್ರಹಗತಿಗಳ ಬದಲಾವಣೆ ನೋಡಬಹುದು. ಈ ಎಲ್ಲಾ ಗ್ರಹಗಳು ಒಂದೇ ರಾಶಿಯಲ್ಲಿ ಸುದೀರ್ಘ ಸಂಚಾರ ಮಾಡುವ ಗ್ರಹಗಳಾಗಿವೆ. ಹಾಗೆ 2025ರಲ್ಲಿ ಮಂಗಳ ಗ್ರಹದಿಂದ ಆಳಲ್ಪಡುತ್ತವೆ.

Mars Will Change The Fate Of These 5 Zodiac Signs In 2025

ಜ್ಯೋತಿಷ್ಯದಲ್ಲಿ ಮಂಗಳವನ್ನು ಧೈರ್ಯ, ಶೌರ್ಯ, ಶಕ್ತಿ ಮತ್ತು ನಂಬಿಕೆಯ ಗ್ರಹವೆಂದು ಪರಿಗಣಿಸಲಾಗಿದೆ. ಗ್ರಹಗಳ ಅಧಿಪತಿಯನ್ನು ಮಂಗಳನ ಕರೆಯಲಾಗಿದೆ. 2025ನೇ ವರ್ಷವನ್ನು ಮಂಗಳ ಗ್ರಹ ಆಳಲಿದ ಎಂದೇ ವಿವರಣೆ ನೀಡಲಾಗಿದೆ. ಹೀಗಾಗಿ ಹಲವು ರಾಶಿ ಜನರಿಗೆ ಇದು ಶುಭರಕ ಪರಿಣಾಮವನ್ನು ಉಂಟುಮಾಡುತ್ತಿದೆ.

2025ರಲ್ಲಿ ವಿಶೇಷವಾಗಿ ವೃತ್ತಿಪರ ಜೀವನ, ಆರ್ಥಿಕ ಜೀವನ, ದಾಂಪತ್ಯ, ಸಂಬಂಧಗಳು, ವ್ಯವಹಾರಗಳು ಸೇರಿ ಕೆಲವೊಂದು ವಿಚಾರದಲ್ಲಿ ಪ್ರಗತಿ ನೋಡಬಹುದು. ಹಾಗಾದ್ರೆ ಮಂಗಳನ ಆಶೀರ್ವಾದದಿಂದಾಗಿ, ಅನುಗ್ರಹದಿಂದ ಯಾವ ರಾಶಿಯವರಿಗೆ ಅದೃಷ್ಟ ಸಿಗಲಿದೆ ಎಂದು ನೋಡೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ 2025 ಉತ್ತಮ ವರ್ಷವಾಗಿರುತ್ತದೆ. ಈ ರಾಶಿಯ ಅಧಿಪತಿ ಮಂಗಳವಾಗಿರುವುದರಿಂದ ಈ ರಾಶಿಯ ಜನರಲ್ಲಿ ಅತ್ಯಧಿಕ ಸಂತೋಷ ಲಾಭ, ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ. ನೀವು ಮಾಡುವ ಪ್ರತಿಯೊಂದು ಕೆಲಸವು ನಿಮಗೆ ಲಾಭದಾಯಕವಾಗಿ ಬದಲಾಗುತ್ತದೆ. ನಿಮ್ಮಲ್ಲಿ ಈ ವರ್ಷ ದೊಡ್ಡ ದೊಡ್ಡ ಕೆಲಸಗಳ ಮಾಡಲು ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಪಡೆಯುವ ಸಾಧ್ಯತೆ ಕೂಡ ಇದೆ. ಪ್ರಮುಖ ವಿಷಯಗಳಲ್ಲಿ ನೀವು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ ಮತ್ತು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಏರಿಕೆ ಕಂಡುಬರಲಿದೆ.

ಕರ್ಕ ರಾಶಿ

2025ರ ವರ್ಷವು ಕರ್ಕ ರಾಶಿಯವರಿಗೆ ಅದ್ಭುತವಾಗಿರುತ್ತದೆ. ಈ ವರ್ಷದ ಆರಂಭದಲ್ಲಿ ಮಂಗಳನು ​​ಕರ್ಕಾ ರಾಶಿಯಲ್ಲಿ ಇರುವುದರಿಂದ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಹಣದ ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸುತ್ತೀರಿ. ಕೌಟುಂಬಿಕ ವಿಚಾರದಲ್ಲಿ ನಿಮಗೆ ಸದಸ್ಯರ ನೆರವು ಸಿಗಲಿದೆ.

ಸಿಂಹ ರಾಶಿ

2025 ಸಿಂಹ ರಾಶಿಯವರಿಗೆ ಸಂತೋಷ ಮತ್ತು ಪ್ರಗತಿಯಿಂದ ತುಂಬಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುವಿರಿ. ವಿವಾಹಿತರಲ್ಲಿ ಉತ್ತಮ ದಿನಗಳ ನೋಡಬಹುದು. ಹೊಸ ಪ್ರಗತಿಗೆ ಈ ವರ್ಷ ದಾರಿಯಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ವಿಚಾರಗಳು ನಡೆಯಲಿವೆ. ಆರೋಗ್ಯದಲ್ಲಿಯೂ ಸುಧಾರಣೆ ಕಾಣಲಿದ್ದೀರಿ.

ಕುಂಭ ರಾಶಿ

2025 ಕುಂಭ ರಾಶಿಯವರಿಗೆ ಶುಭ ಸುದ್ದಿಗಳು ಬರಲಿವೆ. ಅವಿವಾಹಿತರಲ್ಲಿ ವಿವಾಹ ಯೋಗದ ಅದೃಷ್ಟವಿದೆ. ಹಣಕಾಸಿನ ಪರಿಸ್ಥಿತಿಗಳು ಎಂದಿಗಿಂತಲೂ ಹೆಚ್ಚು ಸುಧಾರಿಸಲಿದೆ. ನಿಮ್ಮ ವ್ಯಹವಾರಗಳು ನಿಮಗೆ ಲಾಭದಾಯಕವಾಗಿ ಮಾರ್ಪಡಲಿವೆ. ಹಲವು ವರ್ಷಗಳಿಂದ ಆಗದೆ ಇದ್ದ ಕೆಲಸ ಕಾರ್ಯಗಳಿಗೆ ಈ ವರ್ಷ ಆರಂಭ ಸಿಗಲಿದೆ. ಆಸ್ತಿ ವಿಚಾರಗಳಲ್ಲಿ ನಿಮಗೆ ಗೆಲುವು ಆಗಲಿದೆ.

ಮೀನ ರಾಶಿ

2025 ಮೀನ ರಾಶಿಯವರಿಗೆ ಅತ್ಯುತ್ತಮ ದಿನಗಳ ತರಲಿದೆ. ನಿಮ್ಮ ನಾಯಕತ್ವದ ಗುಣಗಳು ಹೆಚ್ಚು ಜವಾಬ್ದಾರಿಗಳನ್ನು ನಿಮಗೆ ನೀಡಲಿದೆ. ಹಣಕಾಸು, ವೃತ್ತಿ, ಶಿಕ್ಷಣದಂತಹ ಕ್ಷೇತ್ರದಲ್ಲಿ ನಿಮಗೆ ಗೆಲುವಾಗಲಿದೆ. ಹೊಸ ವೃತ್ತಿಗೆ ಅವಕಾಶಗಳು ಸಿಗುತ್ತವೆ. ನಿಮ್ಮ ಗೌರವ ಹೆಚ್ಚಾಗುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ನಿಮ್ಮಿಂದ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್‌ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mars Will Change The Fate Of These 5 Zodiac Signs In 2025

Mars is considered the planet of courage, bravery, strength and faith. The ruler of the planets is called Mars. The year 2025 is described as being ruled by Mars.
Story first published: Sunday, December 22, 2024, 15:32 [IST]
X
Desktop Bottom Promotion