Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
18 ತಿಂಗಳ ನಂತರ ಮಂಗಳ-ಶುಕ್ರ ಸಂಯೋಗ: ಈ ರಾಶಿಯವರಿಗಿದೆ ಅತ್ಯುತ್ತಮ ಲಾಭದ ದಿನಗಳು
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳು ಆಗಾಗ ಸ್ಥಾನ ಬದಲಾಯಿಸುವುದು ವ್ಯಕ್ತಿಯೊಬ್ಬರ ಜೀವನದಲ್ಲಿ ಒಳಿತು ಹಾಗೂ ಕೆಡುಕು ತರುವ ಅಂಶವಾಗಿರಲಿದೆ. ಇದು ಮಾನವ ಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟು ಮಾಡುವುದು ನೋಡಬಹುದು. ಹಾಗೆ ಈ ಗ್ರಹಗಳು ಕಾಲ ಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಹಾಗೆ ಮುಂಬರುವ ಫೆಬ್ರವರಿಯಲ್ಲಿಯೂ ಸಹ ಗ್ರಹಗಳು ತಮ್ಮ ಸ್ಥಾನ ಬದಲಾಯಿಸುವುದು ನೋಡಬಹುದು.
ಫೆಬ್ರವರಿಯಲ್ಲಿ ಗ್ರಹಗಳ ಅಧಿಪತಿ ಮಂಗಳ ಮತ್ತು ಸಂಪತ್ತಿನ ಅಧಿಪತಿ ಶುಕ್ರನು ಸಂಯೋಗವಾಗುವುದು ನೋಡಬಹುದು. ಈ ಸಂಯೋಗವು ಕುಂಭ ರಾಶಿಯಲ್ಲಿ ಸಂಭವಿಸುತ್ತದೆ. ಇದು ಹಲವು ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡಲಿದೆ. ಅದ್ರಲ್ಲೂ ಆರ್ಥಿಕ ಸ್ಥಿತಿ, ಪ್ರಗತಿ, ವ್ಯವಹಾರ ಲಾಭ, ವ್ಯಾಪಾರ ಉತ್ತೇಜನ, ದಾಂಪತ್ಯ ಸುಖ ಸಂಬಂಧಿತ ವಿಚಾರಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ನಾವು ನೋಡಬಹುದು.

ಹಾಗಾದ್ರೆ ಶುಕ್ರ ಹಾಗೂ ಮಂಗಳನ ಈ ಸಂಯೋಗವು ಯಾವೆಲ್ಲಾ ರಾಶಿಯವರಿಗೆ ಅನುಕೂಲಕರವಾಗಲಿದೆ? ಯಾರಿಗೆ ಶುಭಕರ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮಕರ ರಾಶಿ
ಮಂಗಳ ಮತ್ತು ಶುಕ್ರರ ಸಂಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ಸಂಪತ್ತಿನ ಮನೆಯಲ್ಲಿ ಸಂಭವಿಸುತ್ತದೆ. ಇದರಿಂದ ನಿಮ್ಮಲ್ಲಿ ಆದಾಯದ ಹೆಚ್ಚಳ ನೋಡಬಹುದು. ಹಾಗೆ ನಿಮ್ಮಲ್ಲಿ ಕಾಲ ಕಾಲಕ್ಕೆ ಎದುರಾಗುತ್ತಿದ್ದ ಆರ್ಥಿಕ ಸಮಸ್ಯೆಗಳು ಮುಕ್ತಾಯದ ಹಂತ ತಲುಪಬಹುದು. ನೀವು ಮಾರಾಟ ಮತ್ತು ಖರೀದಿ ವಲಯದಲ್ಲಿದ್ದರೆ ನಿಮ್ಮ ವ್ಯವಹಾರಗಳು ಲಾಭದಲ್ಲಿ ಅಂತ್ಯವಾಗಬಹುದು. ಉದ್ಯಮಿಗಳು, ಸ್ವಂತ ಉದ್ಯೋಗ ಮಾಡುವ ಮಂದಿಗೆ ಈ ಸಮಯವು ಬಹಳ ಅನುಕೂಲಕರವಾಗಲಿದೆ. ನಿಮ್ಮ ಯೋಜನೆಗಳು ಧನಾತ್ಮಕ ಯೋಗ ತರಲಿದೆ. ಹೊಸ ವಸ್ತುಗಳು, ಐಷಾರಾಮಿ ವಸ್ತುಗಳ ಖರೀದಿಯ ಲಾಭವಿದೆ.
ಮಿಥುನ ರಾಶಿ
ಶುಕ್ರ ಮತ್ತು ಮಂಗಳ ಗ್ರಹದ ಸಂಯೋಗವು ನಿಮಗೆ ಸಕಾರಾತ್ಮಕವಾಗಿರಲಿದೆ. ಈ ಸಂಯೋಗವು ನಿಮ್ಮ ಅದೃಷ್ಟದ ಮನೆಯಲ್ಲಿ ಉಂಟಾಗುತ್ತಿದೆ. ಆದ್ದರಿಂದ ಈ ಸಮಯದಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ವ್ಯವಹಾರದಲ್ಲಿ ಲಾಭದಾಯಕ ಅವಕಾಶಗಳನ್ನು ಸಹ ಪಡೆಯುತ್ತೀರಿ. ನೀವು ತೀರ್ಥಯಾತ್ರೆಗೆ ಹೋಗುವ ಅವಕಾಶವನ್ನು ಸಹ ಪಡೆಯಬಹುದು. ನೀವು ಧಾರ್ಮಿಕ ಅಥವಾ ಶುಭ ಕಾರ್ಯಕ್ರಮದಲ್ಲಿಯೂ ಭಾಗವಹಿಸಬಹುದು. ಈ ಸಮಯ ಉದ್ಯೋಗದಲ್ಲಿರುವವರಿಗೆ ಸಹ ಅನುಕೂಲಕರವಾಗಿರುತ್ತದೆ. ಹಲವು ಕಾರ್ಯಕ್ರಮಗಳು ನೀವು ಅಂದುಕೊಂಡಂತೆ ನೆರವೇರಲಿದೆ. ಮಕ್ಕಳ ಭವಿಷ್ಯದ ವಿಚಾರವಾಗಿ ನೀವು ಉಳಿತಾಯ ಸಂಬಂಧ ದೊಡ್ಡ ಹೆಜ್ಜೆ ಇಡಬಹುದು. ಹಾಗೆ ನಿಮ್ಮ ಉಳಿತಾಯದ ಹಣದಿಂದ ಪ್ರಮುಖ ವಸ್ತು ಖರೀದಿಯ ಸಾಧ್ಯತೆ ಇರಲಿದೆ.
ವೃಶ್ಚಿಕ ರಾಶಿ
ಶುಕ್ರ ಮತ್ತು ಮಂಗಳ ಗ್ರಹದ ಸಂಯೋಗವು ನಿಮಗೆ ಅನುಕೂಲಕರವೆಂದು ಸಾಬೀತುಪಡಿಸಬಹುದು. ನಿಮ್ಮ ರಾಶಿಯ 4ನೇ ಮನೆಯಲ್ಲಿ ಈ ಸಂಯೋಗ ನೋಡಬಹುದು. ಇದರಿಂದ ನಿಮ್ಮಲ್ಲಿ ಭೌತಿಕ ಲಾಭಗಳು ಹೆಚ್ಚಾಗುತ್ತದೆ. ವಾಹನ ಸಂಬಂಧ ಶುಭವಿದೆ. ಬಹುಸಮಯದ ನಿಮ್ಮ ಕೆಲಸ ಕಾರ್ಯಗಳು ಈ ಸಮಯದಲ್ಲಿ ಮುಕ್ತಾಯವಾಗಲಿದೆ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಶುಭವಿದೆ, ಉಳಿತಾಯದ ಹಣವೊಂದು ನಿಮ್ಮ ಕೈಸೇರುವ ಸಮಯ ಇದಾಗುತ್ತದೆ. ಹೊಸ ನಿವೇಶನ, ಮನೆ ಖರೀದಿಯಂತಹ ಐಷಾರಾಮಿ ಹಾಗೂ ದೊಡ್ಡ ವ್ಯವಹಾರವು ನಿಮಗೆ ಶುಭ ತರಲಿದೆ. ಕೌಟುಂಬಿಕ ವಿಚಾರದಲ್ಲಿನ ಮನಸ್ತಾಪಗಳು ನಿವಾರಣೆಯಾಗುವ ಸಮಯ ಇದಾಗುತ್ತಿದೆ. ಮನೆಯ ಹಣಕಾಸು ಸಮಸ್ಯೆಯೊಂದು ಈ ಸಮಯದಲ್ಲಿ ಬಗೆಹರಿಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











