Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ವಾತಿ ನಕ್ಷತ್ರಕ್ಕೆ ಮಂಗಳ ಸಂಚಾರ: ಈ ರಾಶಿಯವರ ಬಹುದಿನದ ಸಮಸ್ಯೆ ನಿವಾರಣೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 9 ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಹಾಗೆ ನಿರ್ದಿಷ್ಟ ಸಮಯದಲ್ಲಿ ಗ್ರಹಗಳು ತಮ್ಮ ನಕ್ಷತ್ರವನ್ನು ಕೂಡ ಬದಲಾಯಿಸುವುದು ನೋಡಬಹುದು. ರಾಶಿಗಳ ಬದಲಿಸಿದಂತೆ ನಕ್ಷತ್ರಗಳ ಬದಲಾವಣೆ ಕೂಡ ಹಲವರಿಗೆ ಶುಭ ಹಾಗೂ ಅಶುಭ ಯೋಗಕ್ಕೆ ಕಾರಣವಾಗುವುದು ನೋಡಬಹುದು.
ಸದ್ಯ ಮಂಗಳ ಗ್ರಹದ ಸಂಚಾರ ನಡೆಯುತ್ತಿದೆ. ಮಂಗಳನನ್ನು ಗ್ರಹಗಳಲ್ಲಿ ಪ್ರಮುಖ ಎಂದು ಪರಿಗಣಿಸಲಾಗಿದೆ. ಹಾಗೆ ಐಶ್ವರ್ಯ, ಆಸ್ತಿ, ವಿಚಾರವಾಗಿ ಮಂಗಳನ ಆಶೀರ್ವಾದ ಪ್ರಮುಖ ಎಂದು ಹೇಳಲಾಗಿದೆ. ಹಾಗೆ ಮಂಗಳ ಅನುಗ್ರಹ ಇದ್ದಾಗ ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳ ನೋಡಬಹುದು. ಹಾಗೆ ಮಂಗಳನ ನಕ್ಷತ್ರ ಬದಲಾವಣೆಯೂ ಇಂತಹ ಹಲವು ಬದಲಾವಣೆಗೆ ಕಾರಣವಾಗಲಿದೆ.

ಮಂಗಳನು ಒಂದೇ ರಾಶಿಯಲ್ಲಿ 45 ದಿನ ಚಲಿಸಲಿದ್ದಾನೆ. ಪ್ರಸ್ತುತ ಮಂಗಳ ತುಲಾ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಹಾಗೆ ಈಗ ಮಂಗಳನು ಸ್ವಾತಿ ನಕ್ಷತ್ರಕ್ಕೆ ಚಲಿಸಿದ್ದಾನೆ. ಈ ಸ್ವಾತಿ ನಕ್ಷತ್ರದ ಅಧಿಪತಿ ರಾಹು. ಮಂಗಳನು ರಾಹು ನಕ್ಷತ್ರವನ್ನು ಪ್ರವೇಶಿಸುತ್ತದೆ ಮತ್ತು ಅಕ್ಟೋಬರ್ 15 ರ ವರೆಗೆ ಸ್ವಾತಿ ನಕ್ಷತ್ರದಲ್ಲಿ ನೆಲೆಸಲಿದ್ದಾನೆ.
ಮಂಗಳನ ಈ ಸಂಚಾರವು ಎಲ್ಲಾ ರಾಶಿ ಜನರ ಜೀವನದಲ್ಲಿ ಉತ್ತಮ ಲಾಭವನ್ನು ತರುವುದು ನೋಡಬಹುದು. ವಿಶೇಷವಾಗಿ ಕೆಲವು ರಾಶಿ ಜನರಿಗೆ ಈ ಮಂಗಳ ಸಂಚಾರವು ತುಂಬಾ ಅದೃಷ್ಟಶಾಲಿಯಾಗಲಿದೆ. ಈಗ ಮಂಗಳನ ಸಂಚಾರದಿಂದಾಗಿ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕ, ಅದೃಷ್ಟಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಮಂಗಳ ಗ್ರಹವು ವೃಷಭ ರಾಶಿಯ 6ನೇ ಮನೆಯಲ್ಲಿ ಸಂಚರಿಸುತ್ತಿದೆ. ಈ ಸಂದರ್ಭದಲ್ಲಿ ಮಂಗಳನು ನಕ್ಷತ್ರ ಬದಲಾಯಿಸುವುದು ಹಲವು ರೀತಿಯಲ್ಲಿ ಲಾಭದಾಯಕವಾಗುತ್ತಿದೆ. ನಿಮ್ಮ ಹಣಕಾಸು ಸಮಸ್ಯೆಗಳು ಬಗೆಹರಿಯಲು ಇದು ಸುಲಭದ ದಾರಿ ಸಿಗಲಿದೆ. ಜೀವನದಲ್ಲಿ ಎದುರಿಸಿದ್ದ ಪ್ರಮುಖ ಕಷ್ಟಗಳನ್ನು ಅಥವಾ ಹಿನ್ನಡೆಯಿಂದ ನೀವು ಮುಕ್ತರಾಗುತ್ತೀರಿ. ಕಚೇರಿ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ವೃತ್ತಿಪರವಾಗಿ ಇದು ತುಂಬಾ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಕೆಲಸದಲ್ಲಿ ಉನ್ನತ ಅಧಿಕಾರಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.
ಕರ್ಕ ರಾಶಿ
ಮಂಗಳ ಗ್ರಹವು ಕರ್ಕ ರಾಶಿಯ 4ನೇ ಮನೆಯಲ್ಲಿ ಸಂಚರಿಸುತ್ತಿದೆ. ಈ ಸಮಯದಲ್ಲಿ ಮಂಗಳ ಗ್ರಹದ ಸಂಚಾರದಿಂದಾಗಿ, ಈ ಕರ್ಕ ರಾಶಿಯ ಜರನಿಗೆ ಉತ್ತಮ ಲಾಭವಿದೆ. ಈ ಸಮಯ ಉದ್ಯಮಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಆರ್ಥಿಕವಾಗಿ ಈ ಸಮಯ ನಿಮಗೆ ಲಾಭದಾಯಕವಾಗಲಿದೆ. ಮನೆಯ ವಾತಾವರಣವು ಸಂತೋಷ ಮತ್ತು ಆಹ್ಲಾದಕರವಾಗಿರುತ್ತದೆ. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ನಿಮಗೆ ಬಹಳ ಅನುಕೂಲಕರ ದಿನಗಳಿವೆ.
ಕುಂಭ ರಾಶಿ
ಕುಂಭ ರಾಶಿಯ 9 ನೇ ಮನೆಯಲ್ಲಿ ಮಂಗಳ ಗ್ರಹವು ಪ್ರಯಾಣಿಸುತ್ತಿದೆ. ಇದಲ್ಲದೆ ಮಂಗಳವು ಸ್ವಾತಿ ನಕ್ಷತ್ರಕ್ಕೆ ಚಲಿಸುತ್ತಿರುವುದರಿಂದ, ಕುಂಭ ರಾಶಿಯವರಿಗೆ ಬಹಳಷ್ಟು ಉತ್ತಮ ಫಲಿತಾಂಶಗಳು ಸಿಗುತ್ತವೆ. ನಿಮ್ಮ ಹೊಸ ವ್ಯವಹಾರಗಳು ಲಾಭದಾಯಕ ಆಗಲಿವೆ. ಅನೇಕರಲ್ಲಿ ಈ ಸಮಯ ಅದೃಷ್ಟ ತರಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಅದೃಷ್ಟ ಒಲಿಯಲಿದೆ. ಸಂಗಾತಿಯೊಂದಿಗೆ ನಿಮ್ಮ ಜೀವನ ಸುಂದರವಾಗಲಿದೆ. ಆಧ್ಯಾತ್ಮಿಕವಾಗಿ ನೀವು ಬಹಳ ದೃಢರಾಗುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



