ತುಲಾ ರಾಶಿಗೆ ಮಂಗಳ ಸಂಚಾರ: ಎರಡು ರಾಶಿಯವರು ಮುಟ್ಟಿದ್ದು ಚಿನ್ನ..! ಬದುಕು ಬಂಗಾರ!

ಜ್ಯೋತಿಷ್ಯದಲ್ಲಿ ಗ್ರಹಗಳು ತಮ್ಮ ರಾಶಿ ಮತ್ತು ನಕ್ಷತ್ರಗಳ ಬದಲಾಯಿಸುತ್ತಲೇ ಇರುತ್ತವೆ. ನಿರ್ದಿಷ್ಟ ಸಮಯದಲ್ಲಿ ಗ್ರಹಗಳು ಆಯಾ ರಾಶಿಗಳ ಬದಲಾಯಿಸುವುದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಕೆಲವು ಗ್ರಹಗಳ ಚಲನೆಯು ಹಲವು ರಾಶಿಗಳಲ್ಲಿ ಅದ್ಭುತ ಬದಲಾವಣೆಗಳ ತರುವುದು ನೋಡಬಹುದು.

ಮಂಗಳನ ಸಂಚಾರವು ಸಹ ವಿಶೇಷ ಪರಿಣಾಮಗಳ ತರುವಂತಹ ಗ್ರಹ ಎಂದು ಪರಿಗಣಿಸಲಾಗಿದೆ. ಧೈರ್ಯ, ಶಕ್ತಿ, ಬುದ್ದಿವಂತಿಗೆ, ಹಣಕಾಸು ಸಂಬಂಧಿತ ಗ್ರಹವಾಗಿ ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನದ ಆದಾರದ ಮೇಲೆ ಭವಿಷ್ಯದ ದಿನಗಳ ನಿರ್ಧರಿಸಬಹುದು. ಬಲಿಷ್ಠ ಗ್ರಹವಾದ ಮಂಗಳ ಈಗ ತನ್ನ ರಾಶಿಯನ್ನು ಬದಲಾಯಿಸಲಿದೆ.

Mars Transits Libra Turning Point For These Two Zodiac Signs

ಕನ್ಯಾ ರಾಶಿಯಿಂದ ಮಂಗಳನು ತುಲಾ ರಾಶಿಗೆ ಚಲಿಸಲಿದ್ದಾನೆ, ಸೆಪ್ಟೆಂಬರ್ 13ರಂದು ಮಂಗಳು ತುಲಾ ರಾಶಿಗೆ ಚಲಿಸಲಿದ್ದಾನೆ. ತುಲಾ ರಾಶಿಯನ್ನು ಮಂಗಳನ ಶತ್ರು ರಾಶಿ ಎಂದು ಪರಿಗಣಿಸಲಾಗಿದೆ. ಇದು ಕೆಲವು ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ಮತ್ತು ಕೆಲವು ರಾಶಿ ಜನರಿಗೆ ನಕಾರಾತ್ಮಕ ಫಲಿತಾಂಶಗಳ ಅನುಭವಿಸುತ್ತವೆ. ಹಾಗಾದ್ರೆ ಮಂಗಳನ ಚಲನೆಯಿಂದ ಯಾವ ರಾಶಿಯವರಿಗೆ ಶುಭಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಮಂಗಳ ಲಗ್ನದ ಅಧಿಪತಿ ಮತ್ತು 6 ನೇ ಮನೆಯ ಅಧಿಪತಿ, ಮತ್ತು ಈ ಸಂಚಾರದಲ್ಲಿ, ಮಂಗಳವು ಸಾಮಾನ್ಯವಾಗಿ 7 ನೇ ಮನೆಯಲ್ಲಿರುತ್ತಾನೆ. 7ನೇ ಮನೆಯಲ್ಲಿ ಲಗ್ನದ ಅಧಿಪತಿ ಶತ್ರು ರಾಶಿಯಲ್ಲಿದ್ದರೂ ಸಹ, ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. 7ನೇ ಮನೆಯಲ್ಲಿ ಮಂಗಳವು ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಪ್ರಗತಿಯನ್ನು ತರಲಿದೆ. ನಿಮ್ಮ ನಿರ್ಧಾರಗಳು ಸರಿಯಾದ ಫಲಿತಾಂಶಗಳಿಗೆ ಕಾರಣವಾಗಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಲಾಭದಾಯಕ ದಿನಳಿವೆ. ವ್ಯಾಪಾರಿ ವಲಯದಲ್ಲಿ ದಿಢೀರ್ ಲಾಭ ನೋಡಬಹುದು. ಅವಿವಾಹಿತರಲ್ಲಿ ವಿವಾಹ ಸಂಬಂಧವಾಗಿ ಇದ್ದ ಕಂಟಕಗಳು ದೂರಾಗುವ ಸಮಯವಿದು. ಹಾಗೆ ಗೃಹಿಣಿಯರು ಬಹಳ ಸಮಯದಿಂದಲೂ ನೋವು, ಕಷ್ಟಗಳ ಅನುಭವಿಸಿದ್ದರೆ ಹಾಗೆ ಎಲ್ಲಾದರು ಹೂಡಿಕೆ ಮಾಡಿ ನಷ್ಟ ಅನುಭವಿಸಿದ್ದರೆ ಅದರಿಂದ ಕೂಡ ಪರಿಹಾರ ಪಡೆಯಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಮಂಗಳ ಗ್ರಹವು 10 ನೇ ಮನೆ ಮತ್ತು 5 ನೇ ಮನೆಯನ್ನು ಆಳುತ್ತದೆ, ಇದು ಅವರನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಮಂಗಳವು ಈಗ 4 ನೇ ಮನೆಯಲ್ಲಿದೆ. ತುಲಾ ರಾಶಿಯಲ್ಲಿ ಮಂಗಳ ಸಂಚಾರದ ಈ ಅವಧಿಯಲ್ಲಿ, ನೀವು ಹೊಸ ವಾಹನಗಳ ಖರೀದಿಗೆ ಮನಸ್ಸು ಮಾಡಬಹುದು. ಹಾಗೆ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತಾ ಬರಬಹುದು. ಅದ್ರಲ್ಲೂ ನಿಮ್ಮ ಸಾಲಗಳು ಮರುಪಾವತಿಯಾಗುವ ಸಾಧ್ಯತೆ ಹೆಚ್ಚಾಗಿರಲಿದೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಉತ್ತಮ ಅವಕಾಶಗಳು ಹುಡುಕಿ ಬರಲಿವೆ. ಹಾಗೆ ನಿಮ್ಮ ಹಲವು ಔದ್ಯೋಗಿಕ ಸಂಬಂಧಿ ವಿಚಾರಗಳಲ್ಲಿ ಶುಭ ಸುದ್ದಿಗಳ ಕೇಳುವಿರಿ. ಮಕ್ಕಳ ವಿದ್ಯಾಭ್ಯಾಸ ಅಥವಾ ಉದ್ಯೋಗ ಸಂಬಂಧವಾಗಿ ನಿಮಗೆ ಎದುರಾಗಿದ್ದ ದೊಡ್ಡ ಸವಾಲು ನಿವಾರಣೆಯಾಗಬಹುದು. ವಾಹನ ಸಂಬಂಧವಾಗಿ ನೀವು ಅಂದುಕೊಂಡಂತೆ ಶುಭವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಶುಭಕರವಾಗುತ್ತವೆ. ಅನಾರೋಗ್ಯ ಸಂಬಂಧವಾಗಿ ಹಣ ಖರ್ಚು ಮಾಡಿದ್ದರೆ ಅದರಿಂದ ಉತ್ತಮ ಫಲಿತಾಂಶವನ್ನು ನೋಡುವಿರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

English summary

Mars Transits Libra: Turning Point For These Two Zodiac Signs

Mars is going to move from Virgo to Libra, on September 13th, Mars will move to Libra. Libra is considered an enemy sign of Mars.
Story first published: Saturday, September 6, 2025, 16:59 [IST]
X
Desktop Bottom Promotion