Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಸಿಂಹ ರಾಶಿಗೆ ಮಂಗಳನ ಸಂಚಾರ: ಮೂರು ರಾಶಿಯವರಿಗೆ ಅಚ್ಚರಿಯ ಫಲಿತಾಂಶ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಅಪರೂಪಕ್ಕೆ ಸಂಭವಿಸುವ ಯೋಗಗಳಿಂದ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುವುದು ನೋಡಬಹುದು. ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ಮಾನವರ ಜೀವನದ ಮೇಲೆ ಪ್ರಭಾವ ಉಂಟು ಮಾಡಲಿದೆ. ಈಗ ಮಂಗಳನ ಸಂಚಾರದಲ್ಲಿ ಉಂಟಾಗುತ್ತಿರುವ ಬದಲಾವಣೆ ಎಲ್ಲಾ ರಾಶಿಗಳ ಮೇಲೆಯೂ ತನ್ನ ಪ್ರಭಾವ ಉಂಟು ಮಾಡುತ್ತಿದೆ.
ಮಂಗಳನು ಒಂದೇ ರಾಶಿಯಲ್ಲಿ 45 ದಿನಗಳ ಕಾಲ ಸಂಚರಲಿಸಲಿದೆ. ವೇಗವಾಗಿ ಚಲಿಸುವ ಗ್ರಹವಾಗಿದ್ದು, ಇದರಿಂದ ಎಲ್ಲಾ ರಾಶಿಗಳು ಮಂಗಳಕರ ಲಾಭ ಪಡೆಯಲಿವೆ. ಹಾಗೆ ಮಂಗಳ ಗ್ರಹವನ್ನು ಧೈರ್ಯ, ಶೌರ್ಯ, ಶಕ್ತಿ, ಆತ್ಮವಿಶ್ವಾಸ, ಲಾಭದ ಅಂಶಗಳ ತುಂಬಿರುವ ಪ್ರತೀಕ ಎಂದು ಕರೆಯಲಾಗುತ್ತದೆ. ಹೀಗಾಗಿ ಮಂಗಳನ ಆಶೀರ್ವಾದ ವಿದ್ದರೆ ನಿಮ್ಮ ಸಮಸ್ಯೆಗಳು ದೂರಾಗಲಿದೆ ಎಂಬ ಮಾತಿದೆ.

ಈಗ ಮಂಗಳನು ಜೂನ್ 7ರಂದು ಸಿಂಹ ರಾಶಿಗೆ ಚಲಿಸಲಿದ್ದಾನೆ. ಸಿಂಹ ರಾಶಿಯವರಲ್ಲಿ ಅನೇಕ ಬದಲಾವಣೆಗಳ ಜೊತೆಗೆ ಮತ್ತೊಂದಿಷ್ಟು ರಾಶಿಗಳಿಗೆ ವರದಾನವಾಗಲಿದೆ. ಹಾಗಾದ್ರೆ ಮಂಗಳನ ಈ ರಾಶಿ ಬದಲಾವಣೆಯಿಂದ ಯಾರಿಗೆಲ್ಲಾ ಶುಭಕರ ಆಗಲಿದೆ ಎಂಬುದನ್ನು ಇಲ್ಲಿ ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮಂಗಳ ಗ್ರಹವು ಮೇಷ ರಾಶಿಯ 5ನೇ ಮನೆಗೆ ಚಲಿಸುತ್ತಿದೆ. ಹೀಗಾಗಿ ಈ ರಾಶಿ ಜನರಲ್ಲಿ ಆಸ್ತಿ ಸಂಬಂಧಿತ ವಿಚಾರವಾಗಿ ಒಳ್ಳೆಯ ಸುದ್ದಿ ಕೇಳುತ್ತೀರಿ. ಮಂಗಳ ಗ್ರಹದ ಅನುಗ್ರಹದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಒಳ್ಳೆಯ ಸುದ್ದಿ ಕೇಳಬಹುದು. ನಿಮ್ಮ ಹಣಕಾಸು ಸಂಬಂಧಿತ ಸಮಸ್ಯೆಗಳು ಕೊನೆಗೂ ಸುಧಾರಿಸಬಹುದು. ನೀವು ಉದ್ಯೋಗ ಬದಲಾಯಿಸುವುದು ಅಥವಾ ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಆಪ್ತರೊಬ್ಬರ ಸಹಕಾರದಿಂದಾಗಿ ಒಳ್ಳೆಯ ಅವಕಾಶ ಪಡೆಯಲಿದ್ದೀರಿ. ವ್ಯಾಪಾರಿ ಜನರಲ್ಲಿ ಹಠಾತ್ ಲಾಭಗಳ ನೋಡಬಹುದು. ನೀವು ನಿರೀಕ್ಷೆ ಮಾಡದಂತಹ ಹಣದ ಹರಿವು ಇರಲಿದೆ. ಕುಟುಂಬದಲ್ಲಿ ಸಂತಸ ಇರಲಿದೆ.
ತುಲಾ ರಾಶಿ
ಮಂಗಳ ಗ್ರಹವು ತುಲಾ ರಾಶಿಯ 11ನೇ ಮನೆಗಯಲ್ಲಿ ಚಲಿಸುತ್ತಿದೆ. ಇದರಿಂದ ಆ ರಾಶಿ ಜನರ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಆದಾಯದ ಮೂಲಗಳು ನಿಮ್ಮ ಹಣಕಾಸು ಸಮಸ್ಯೆಗಳ ನಿವಾರಣೆಗೆ ನೆರವಾಗಬಹುದು. ಕಚೇರಿ ವಾತಾವರಣದಲ್ಲಿ ನಿಮ್ಮ ಪರವಾದ ಕೆಲಸಗಳು ಬೇಗ ಮುಗಿಯಲಿದೆ. ನೀವು ಯಾವುದಾದರು ಸರ್ಕಾರಿ ದಾಖಲೆಗಳು, ಮನೆ ಸಂಬಂಧಿತ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಇದು ಬಹಳ ದೊಡ್ಡ ಲಾಭದಾಯಕ. ವ್ಯಾಪಾರದಲ್ಲಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತಾದ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ವೃಶ್ಚಿಕ ರಾಶಿ
ಮಂಗಳ ಗ್ರಹವು ವೃಶ್ಚಿಕ ರಾಶಿಯ 10ನೇ ಮನೆಗೆ ಚಲಿಸುತ್ತಿದೆ. ಹೀಗಾಗಿ ನಿಮ್ಮ ಹಣಕಾಸು ವ್ಯವಹಾರ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಗೃಹಿಣಿಯರಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದು ನಿವಾರಣೆಯಾಗಬಹುದು. ಅಪೇಕ್ಷಿತ ಆದಾಯದ ಮೂಲದಿಂದ ನಿಮಗೆ ಲಾಭಾಂಶ ಹರಿದು ಬರಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಸಮಾಜದಲ್ಲಿ ಗೌರವ ಖ್ಯಾತಿ ಹೆಚ್ಚಾಗಲಿದೆ. ಮನೆಗಾಗಿ ದುಬಾರಿ ಅಥವಾ ಐಷಾರಾಮಿ ವಸ್ತು ಖರೀದಿಗೆ ಇದು ಸೂಕ್ತ ಸಮಯವಾಗಲಿದೆ. ಕೌಟುಂಬಿಕ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವು ಭವಿಷ್ಯದಲ್ಲಿ ಉತ್ತಮ ದಿನಗಳಿಗೆ ಕಾರಣವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











