Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೇಷ್ಠ ನಕ್ಷತ್ರಕ್ಕೆ ಮಂಗಳ ಸಂಚಾರ: ಬಹುಸಮಯದ ಆಸೆಗಳು ಈಡೇರಲಿದೆ, ಬಯಸಿದ ಜೀವನ ನಿಮ್ಮದಾಗಲಿದೆ!
ವೈದಿಕ ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳ ಸಂಚಾರವು ಹಲವು ಸಮಯದಲ್ಲಿ ಬೇರೆ ಬೇರೆ ಗ್ರಹಗಳೊಂದಿಗೆ ಚಲಿಸಲಿದೆ. ಗ್ರಹಗಳು ರಾಶಿ ಬದಲಿಸಿದಂತೆ ನಕ್ಷತ್ರ ಕೂಡ ಬದಲಾಯಿಸಲಿದ್ದಾನೆ. ಮಂಗಳನು ಈಗ ತನ್ನ ರಾಶಿ ಬದಲಾಯಿಸುವ ಜೊತೆಗೆ ನಕ್ಷತ್ರ ಬದಲಾಯಿಸುವುದು ಕೂಡ ನೋಡಬಹುದು. ಮಂಗಳವು ಒಂದು ರಾಶಿಯಲ್ಲಿ ಸುಮಾರು 45 ದಿನಗಳ ಕಾಲ ಇರುತ್ತದೆ. ಪರಿಣಾಮವಾಗಿ ಮಂಗಳನ ನಕ್ಷತ್ರಪುಂಜದ ಬದಲಾವಣೆಗಳ ಪರಿಣಾಮಗಳು 12 ರಾಶಿಗಳ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಉಂಟು ಮಾಡುವುದು ನೋಡಬಹುದು.
ಮಂಗಳವು ತನ್ನದೇ ರಾಶಿಯಾದ ವೃಶ್ಚಿಕದಲ್ಲಿ ಚಲಿಸಲಿದ್ದು, ಸೂರ್ಯ ಹಾಗೂ ಬುಧನೊಂದಿಗೆ ಸಂಯೋಗವಾಗಲಿದೆ. ಈ ನಡುವೆ ನಿನ್ನೆ (ನವೆಂಬರ್ 19) ಮಂಗಳನ ತನ್ನ ನಕ್ಷತ್ರ ಬದಲಾಯಿಸಿದೆ. ಮಂಗಳ ಡಿಸೆಂಬರ್ 7ರ ವರೆಗೂ ಜ್ಯೇಷ್ಠ ನಕ್ಷತ್ರದಲ್ಲಿ ಚಲಿಸಲಿದ್ದಾನೆ. ಮಂಗಳ ನವೆಂಬರ್ 19ರ ಸಂಜೆ 7:40 ಕ್ಕೆ ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸುತ್ತದೆ.

ಜ್ಯೇಷ್ಠವನ್ನು 27 ನಕ್ಷತ್ರಗಳಲ್ಲಿ 18 ನೇ ನಕ್ಷತ್ರವೆಂದು ಪರಿಗಣಿಸಲಾಗುತ್ತದೆ. ಇದರ ಅಧಿಪತಿ ಬುಧ ಮತ್ತು ಅದರ ರಾಶಿ ವೃಶ್ಚಿಕ. ಈ ನಕ್ಷತ್ರವನ್ನು ಪ್ರವೇಶಿಸುವುದರಿಂದ ಹಲವರಲ್ಲಿ ಶುಭಯೋಗ ನೋಡಬಹುದು. ಮಂಗಳನು ವೃಶ್ಚಿಕದಲ್ಲಿ ಬುಧ ಸೂರ್ಯನ ಸಂಯೋಗದಲ್ಲಿದ್ದಾಗಲೇ ನಕ್ಷತ್ರವನ್ನೂ ಬದಲಾಯಿಸುವುದು ವಿಶೇಷ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಮಂಗಳನ ಈ ನಕ್ಷತ್ರ ಬದಲಾವಣೆಯಿಂದ ಯಾರಿಗೆಲ್ಲಾ ಶುಭದಾಯಕ ಅನ್ನೋದನ್ನು ತಿಳಿದುಕೊಳ್ಳೋಣ.
ತುಲಾ ರಾಶಿ
ಜ್ಯೇಷ್ಠ ನಕ್ಷತ್ರಕ್ಕೆ ಮಂಗಳನ ಪ್ರವೇಶವು ಈ ತುಲಾ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಈ ರಾಶಿಯ ಎರಡನೇ ಮನೆಯಲ್ಲಿ ಮಂಗಳ ಸಾಗಲಿದ್ದಾನೆ. ಹೀಗಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿಸುವ ಕೆಲಸ ಮಾಡಲಿದ್ದೀರಿ. ಶುಕ್ರನ ಲಗ್ನ ಮನೆಯಲ್ಲಿ ಮಾಲವ್ಯ ರಾಜಯೋಗ ಸಹ ರೂಪುಗಳ್ಳಲಿದೆ. ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಸಹ ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಗಮನಾರ್ಹವಾಗಿ ಪ್ರಯೋಜನ ಪಡೆಯಬಹುದು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಅವಧಿಯಲ್ಲಿ ಪ್ರಾರಂಭಿಸುವುದರಿಂದ ಗಮನಾರ್ಹ ಲಾಭ ಮತ್ತು ಯಶಸ್ಸು ಸಿಗಬಹುದು.
ವೃಶ್ಚಿಕ ರಾಶಿ
ಮಂಗಳ ಗ್ರಹವು ಈ ರಾಶಿಯವರ ಜಾತಕದಲ್ಲಿ ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸಲಿದ್ದು, ಲಗ್ನ ಮನೆಯಲ್ಲಿ ಚಲಿಸಲಿದ್ದಾನೆ. ನಿಮ್ಮ ನಾಯಕತ್ವದ ಸಾಮರ್ಥ್ಯಗಳು ವೇಗವಾಗಿ ಸುಧಾರಿಸಬಹುದು. ಕೆಲಸದ ವಿಚಾರದಲ್ಲಿ ಹೊಸ ಜವಾಬ್ದಾರಿಗಳು ಹುಟ್ಟಿಕೊಳ್ಳಲಿದೆ. ಹಾಗೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇದರಿಂದ ನಿಮ್ಮ ನೆಮ್ಮದಿಯ ಜೀವನ ನೋಡಬಹುದು. ವೃತ್ತಿ ಜೀವನದಲ್ಲಿ ವೇತನ ಹೆಚ್ಚಳ, ವರ್ಗಾವಣೆ ಅಂತಹ ವಿಚಾರದಲ್ಲಿ ನಿಮಗೆ ಶುಭವಾಗಲಿದೆ. ನಿಮ್ಮ ದೀರ್ಘಕಾಲದ ಅನಾರೋಗ್ಯವೊಂದರಿಂದ ನೀವು ಮುಕ್ತರಾಗುವ ಅವಕಾಶ ಸಹ ಪಡೆಯಲಿದ್ದೀರಿ. ಅನೇಕರಲ್ಲಿ ಈ ಸಮಯವು ವ್ಯವಹಾರ ಲಾಭಕ್ಕೆ ಕಾರಣವಾಗಲಿದೆ. ದಾಂಪತ್ಯದಲ್ಲಿನ ಮನಸ್ತಾಪಗಳು ಸಹ ಪರಿಹಾರವಾಗಲಿದೆ.
ಮೀನ ರಾಶಿ
ಜ್ಯೇಷ್ಠ ನಕ್ಷತ್ರಕ್ಕೆ ಮಂಗಳನ ಪ್ರವೇಶವು ಈ ರಾಶಿಯವರಿಗೆ ಅನುಕೂಲಗಳ ತರಲಿದೆ. ಈ ರಾಶಿಯವರಿಗೆ ಮಂಗಳ ಗ್ರಹವು ಅದೃಷ್ಟದ ಮನೆಯಲ್ಲಿ ಇರಿಸಲ್ಪಟ್ಟಿದೆ. ಮಂಗಳ ಆದಿತ್ಯ ಯೋಗದಿಂದ ತ್ರಿಗ್ರಹಿವರೆಗೆ ಯೋಗಗಳು ರೂಪುಗೊಳ್ಳುತ್ತಿವೆ. ಪರಿಣಾಮವಾಗಿ ಈ ರಾಶಿಯವರ ಆರ್ಥಿಕ ಸಂಕಷ್ಟಗಳು ದೂರಾಗಲಿದೆ. ಹಾಗೆ ಅನೇಕರಲ್ಲಿ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಶುಭವಿದೆ. ನೀವು ಆಪ್ತರೊಂದಿಗೆ ಈ ಸಮಯದಲ್ಲಿ ಪ್ರವಾಸ ಮಾಡಬಹುದು. ವಿದೇಶ ಪ್ರವಾಸದ ಲಾಭವೂ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications










