Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ವಂತ ರಾಶಿಗೆ ಮಂಗಳ ಸಂಚಾರ: ಋಚಕ್ ರಾಜಯೋಗದಿಂದ ಅದೃಷ್ಟವೇ ಬದಲಾಗಲಿದೆ!
ಗ್ರಹಗಳ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಅದ್ರಲ್ಲೂ ಮಂಗಳ ಗ್ರಹದ ಸಂಚಾರದಿಂದ ಎಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ ಉಂಟಾಗುವುದು ನೋಡಬಹುದು. ಅದ್ರಲ್ಲೂ ಈ ಅಕ್ಟೋಬರ್‌ನಲ್ಲಿ ಉಂಟಾಗುತ್ತಿರುವ ಹಲವು ವಿದ್ಯಮಾನಗಳಲ್ಲಿ ಈ ಮಂಗಳ ಗ್ರಹದ ಸಂಚಾರವೂ ಕೂಡ ಬಹಳ ಪ್ರಮುಖ ಎನಿಸಿದೆ.
ಅಕ್ಟೋಬರ್‌ನಲ್ಲಿ ಮಂಗಳ ತನ್ನ ಸ್ವಂತ ರಾಶಿಗೆ ಚಲಿಸಲಿದ್ದಾನೆ. ಅಕ್ಟೋಬರ್ 27ರಂದು ಮಧ್ಯಾಹ್ನ 2:44ಕ್ಕೆ ಮಂಗಳನು ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಮಂಗಳನನ್ನು ಜ್ಯೋತಿಷ್ಯದಲ್ಲಿ ಧೈರ್ಯ, ಶುಭ, ಸಂಪತ್ತು, ಆರೋಗ್ಯದ ಸಂಕೇತವಾಗಿ ಪರಿಗಣಿಸಲಾಗಿದೆ. ಮಂಗಳನು ತನ್ನದೇ ಸ್ವಂತ ರಾಶಿಯಲ್ಲಿ ಚಲಿಸುವಾಗ ಅದರ ಪ್ರಭಾವ ಹೆಚ್ಚಾಗುತ್ತದೆ. ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡಲಿದೆ.

ಹಾಗೆ ಮಂಗಳನು ಈ ಸಮಯದಲ್ಲಿ ಅಪರೂಪದ ಋಚಕ್ ರಾಜಯೋಗವನ್ನು (Ruchak Rajyog) ಸೃಷ್ಟಿಸಲಿದ್ದಾನೆ. ಇದು ಯಶಸ್ಸು ಹಾಗೂ ಆತ್ಮಸ್ಥೈರ್ಯ ಹೆಚ್ಚಿಸುವಂತಹ ಯೋಗ ತರಲಿದೆ. ಹಾಗೆ ಈ ಯೋಗದಿಂದಾಗಿ ಹಲವು ರಾಶಿಯವರ ಜೀವನದಲ್ಲಿ ಬದಲಾವಣೆ ನೋಡಬಹುದಾಗಿದೆ. ಹಾಗಾದ್ರೆ ಮಂಗಳನ ಈ ಸಂಚಾರದಿಂದ ಯಾರಿಗೆಲ್ಲಾ ಶುಭವಾಗಲಿದೆ. ಯಾರಲ್ಲಿ ಹೊಸ ರೀತಿಯ ಜೀವನ ನೋಡಬಹುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮಂಗಳ ಗ್ರಹವು 6ನೇ ಮನೆಯಲ್ಲಿ ಸಾಗುತ್ತಿದ್ದು, ಇದು ಸ್ಪರ್ಧೆ, ಶತ್ರುಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಉತ್ತಮ ಫಲಿತಾಂಶಗಳ ತರಲಿದೆ. ನೀವು ಬೇರೆಯವರಿಂದ ಅಮೂಲ್ಯ ವಸ್ತುಗಳನ್ನು ಪಡೆಯಬಹುದು. ಆರ್ಥಿಕ ಲಾಭದ ಸಾಧ್ಯತೆ ದಟ್ಟವಾಗಿದೆ. ಕೆಲಸದಲ್ಲಿ ಸ್ಥಳದಲ್ಲಿ ನಿಮ್ಮ ಹಿಡಿತ ಹೆಚ್ಚಾಗಲಿದೆ. ಮನೆಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚುವುದು ನೋಡಬಹುದು. ನಿಮ್ಮ ಆದಾಯ ಹೆಚ್ಚಿಸಿಕೊಳ್ಳಲು ನೀವು ಮಾಡುವ ಪ್ರಯತ್ನ ಯಶಸ್ಸು ತರಲಿದೆ. ಈ ಅವಧಿಯು ನಿಮಗೆ ಆತ್ಮವಿಶ್ವಾಸ ಮತ್ತು ಯಶಸ್ಸಿನಿಂದ ತುಂಬಿರಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಲಾಭ ನೋಡುವ ಸಮಯ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಂಗಳ ಗ್ರಹವು ಧೈರ್ಯ, ಪ್ರಯತ್ನ ಮತ್ತು ಸಂವಹನದ ಮನೆ ಎಂದು ಪರಿಗಣಿಸಲಾದ ಮೂರನೇ ಮನೆಯಲ್ಲಿ ಸಂಚರಿಸಲಿದೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ವ್ಯಾಪಾರಿ ವರ್ಗವು ಲಾಭ ಮಾಡುವ ಸಮಯವಿದು. ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿನ ತೊಡಕ್ಕೊಂದು ನಿವಾರಣೆ ಮಾಡುವಿರಿ. ಪ್ರಯಾಣಗಳಲ್ಲಿ ಸುಖವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಲಾಭ ನೋಡಬಹುದು. ಆರೋಗ್ಯ ಸಂಬಂಧಿ ಸವಾಲುಗಳು ಕಡಿಮೆಯಾಗಲಿವೆ. ಆಪ್ತರೊಬ್ಬರ ಹಣಕಾಸಿನ ನೆರವು ನಿಮ್ಮಲ್ಲಿ ಹೊಸ ಆದಾಯ ತರಲು ಕಾರಣವಾಗಲಿದೆ.
ವೃಶ್ಚಿಕ ರಾಶಿ
ಮಂಗಳ ಗ್ರಹವು ಸ್ವಂತ ರಾಶಿಯಾದ ವೃಶ್ಚಿಕ ರಾಶಿಯ ಲಗ್ನ ಮನೆಯಾದ ಮೊದಲ ಮನೆಯಲ್ಲಿರುತ್ತದೆ. ಸಾಮಾನ್ಯವಾಗಿ ಮೊದಲ ಮನೆಯಲ್ಲಿ ಮಂಗಳನ ಸಂಚಾರವು ಕೆಲವು ಗೊಂದಲಗಳನ್ನು ತರಬಹುದು, ಆದರೆ ಈ ಬಾರಿ ಗುರುವಿನ ಪ್ರಭಾವವು ನಿಮಗೆ ಲಾಭ ತರಲಿದೆ. ಹಳೆಯ ವ್ಯವಹಾರಗಳಿಂದ ಲಾಭವಿದೆ. ನಿಮ್ಮ ಉಳಿತಾಯಗಳು ಹೆಚ್ಚಾಗಲಿವೆ. ಬುದ್ದಿವಂತಿಕೆಯಿಂದ ನೀವು ಎಲ್ಲಾ ಕೆಲಸವನ್ನು ನಿಭಾಯಿಸುತ್ತೀರಿ. ಯಶಸ್ಸು ನಿಮ್ಮನ್ನು ಹುಡುಕಿ ಬರಲಿದೆ. ಉದ್ಯಮಿಗಳು ಉತ್ತಮ ಲಾಭವನ್ನು ನೋಡುತ್ತಾರೆ ಮತ್ತು ಉದ್ಯೋಗದಲ್ಲಿರುವವರು ಹೊಸ ವೃತ್ತಿ ಅವಕಾಶಗಳನ್ನು ಕಂಡುಕೊಳ್ಳಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಮಂಗಳನ ಈ ಸಂಚಾರವು ಅವರ 9ನೇ ಮನೆಯಾದ ಅದೃಷ್ಟದ ಮನೆಯಲ್ಲಿ ನಡೆಯುತ್ತಿದೆ. ಈ ಮನೆಯಲ್ಲಿ ಮಂಗಳನ ಉಪಸ್ಥಿತಿಯು ಅದೃಷ್ಟ ಮತ್ತು ಶ್ರಮದ ಸಂಯೋಜನೆಯನ್ನು ಸೂಚಿಸುತ್ತದೆ. ಈ ಸಮಯವು ನಿಮಗೆ ಉತ್ತಮ ಅವಕಾಶಗಳನ್ನು ತರಬಹುದು, ಆದರೆ ವಿವಾದಗಳಿಂದ ದೂರವಿರುವುದು ಮುಖ್ಯ. ನಿಮಗೆ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ನಿರ್ಲಕ್ಷ್ಯ ವಹಿಸಬೇಡಿ. ಹಣ ಪಡೆಯುವ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ.



Click it and Unblock the Notifications










