Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುಷ್ಯ ನಕ್ಷತ್ರಕ್ಕೆ ಮಂಗಳ ಸಂಚಾರ: ಈ 3 ರಾಶಿಯಲ್ಲಿ ಏಪ್ರಿಲ್ 12ರಿಂದ ಧನಾತ್ಮಕ ಬದಲಾವಣೆ!
ವೈದಿಕ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಗಳ ಚಲನೆ ಹಾಗೂ ಪ್ರತಿಯೊಂದು ನಕ್ಷತ್ರಗಳ ಚಲನೆಗೆ ಅದರದ್ದೆ ಆಗಿರುವ ಮಹತ್ವ ನೀಡಲಾಗಿದೆ. ಎಲ್ಲಾ ಗ್ರಹಗಳು ಆಗಾಗ ತಮ್ಮ ರಾಶಿ ಹಾಗೂ ನಕ್ಷತ್ರ ಬದಲಾಯಿಸುವುದನ್ನು ಗಮನಿಸಬಹುದು. ಈ ರೀತಿಯ ಬದಲಾವಣೆಯು ಹಲವು ರೀತಿಯಲ್ಲಿ ರಾಶಿಗಳ ಮೇಲೆ ಪರಿಣಾಮ ಬೀರುವುದನ್ನು ಕೂಡ ನೋಡಬಹುದು. ಹಾಗೆ ಪ್ರತಿಯೊಂದು ಗ್ರಹವು ರಾಶಿ ಬದಲಾಯಿಸಿದಂತೆ, ನಕ್ಷತ್ರವನ್ನು ಸಹ ಬದಲಾಯಿಸುತ್ತವೆ.
ಈಗ ಮಂಗಳ ಗ್ರಹವು ತನ್ನ ನಕ್ಷತ್ರ ಬದಲಾಯಿಸುತ್ತಿದೆ. ಮಂಗಳನನ್ನು ಗ್ರಹಗಳ ರಾಜ ಎಂದು ಕರೆಯಲಾಗಿದೆ. ಹಾಗೆ ಮಂಗಳನು ಸಂಪತ್ತನ್ನು ತರುವ, ಹಾಗೆ ಶುಭ ಕಾರ್ಯಗಳಿಗೆ ಕಾರವಾಗುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮಂಗಳನ ಅನುಗ್ರಹವಿದ್ದರೆ ವ್ಯಕ್ತಿಯೊಬ್ಬರ ಜೀವನ ಬದಲಾಗುವ ಸನ್ನಿವೇಶಗಳ ನಾವು ನೋಡಬಹುದು.

ಈಗ ಮಂಗಳನು ಕರ್ಕ ರಾಶಿಯಲ್ಲಿ ಸಾಗುತ್ತಿದ್ದಾನೆ. ಕರ್ಕ ರಾಶಿಯಲ್ಲಿರುವ ಮಂಗಳನು ಏಪ್ರಿಲ್ 12ರಂದು ಪುಷ್ಯ ನಕ್ಷತ್ರಕ್ಕೆ ಚಲಿಸಲಿದೆ. ಪುಷ್ಯ ನಕ್ಷತ್ರಕ್ಕೆ ಶನಿ ಅಧಿಪತಿಯಾಗಿದ್ದಾನೆ. ಈ ಪುಷ್ಯ ನಕ್ಷತ್ರಕ್ಕೆ ಈಗ ಮಂಗಳ ಸಂಚರಿಸುತ್ತಿರುವುದು ಹಲವರಲ್ಲಿ ಬದಲಾವಣೆಯ ಪರ್ವ ಆರಂಭಾಗಲಿದೆ. ಹಾಗಾದ್ರೆ ಮಂಗಳ ಗ್ರಹವು ಪುಷ್ಯ ನಕ್ಷತ್ರಕ್ಕೆ ಚಲಿಸುವುದು ಯಾರಿಗೆಲ್ಲಾ ಲಾಭದಾಯಕವಾಗುತ್ತಿದೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಪುಷ್ಯ ಶನಿ ವಾಸಸ್ಥಾನವಾಗಿದೆ. ಈ ನಕ್ಷತ್ರಕ್ಕೆ ಈಗ ಮಂಗಳನ ಸಂಚಾರವು ಹಲವು ರೀತಿಯ ಪ್ರಭಾವ ಉಂಟು ಮಾಡಲಿದೆ. ಈ ನಕ್ಷತ್ರಗಳ ಸಂಚಾರವು ವಿಶೇಷವಾಗಿ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ. ಇದರಿಂದ ಆದಾಯದಲ್ಲಿ ಉತ್ತಮ ಹೆಚ್ಚಳವಾಗುತ್ತದೆ ಮತ್ತು ಕೆಲಸ ಮಾಡುವವರಿಗೆ ಬಡ್ತಿಯ ಅವಕಾಶಗಳಿವೆ. ಈಗ ಮಂಗಳ ಗ್ರಹದ ಸಂಚಾರದಿಂದಾಗಿ ಯಾವ ರಾಶಿ ಜನರಿಗೆ ಅದೃಷ್ಟ ಒಲಿದು ಬರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಮಂಗಳನ ಈ ಸಂಚಾರವು ಆರ್ಥಿಕವಾಗಿ ಬಲಗೊಳ್ಳಲು ಕಾರಣವಾಗುತ್ತಿದೆ. ಮಂಗಳ ಸಂಪೂರ್ಣ ಆಶೀರ್ವಾದ ಪಡೆಯುವ ರಾಶಿ ಇವರದ್ದಾಗಿದೆ. ಅದರಲ್ಲು ನೀವು ಸ್ವಂತ ಉದ್ಯಮ ಅಥವಾ ಉದ್ಯೋಗ ಮಾಡುವವರಾಗಿದ್ದರೆ ಹಿಂದೆಂದೂ ನೋಡಿರದ ಧನಲಾಭ ನೋಡುವ ಕಾಲ ಇದಾಗಿದೆ. ನೀವು ಅವಿವಾಹಿತ ಯುವಕರಾಗಿದ್ದರೆ ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವುದು ನೋಡಬಹುದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗುವುದು ಕೂಡ ನೋಡಬಹುದು. ಈ ಸಮಯದಲ್ಲಿ ನಿಮ್ಮ ಹಲವು ಸಮಸ್ಯೆಗಳು ಬಗೆಹರಿಯಲಿದೆ. ಆಸ್ತಿ, ಭೂಮಿ, ಬಡ್ತಿ, ವ್ಯಾಪಾರದಲ್ಲಿ ಅಡ್ಡಿಯಾಗಿದ್ದ ಸಮಸ್ಯೆಯೊಂದು ಬಗೆಹರಿಯುವ ಎಲ್ಲಾ ಸಾಧ್ಯತೆ ಇದೆ. ಬಹಳ ದಿನಗಳಿಂದ ನೀವು ಮಾಡಬೇಕೆಂದು ಬಯಸಿದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ನಿಮ್ಮ ಆರೋಗ್ಯದಲ್ಲಿ ಹಿಂದೆಂದಿಗಿಂತ ಸುಖ ನೋಡಬಹುದು. ಕುಟುಂಬದಲ್ಲು ನೆಮ್ಮದಿ ನೋಡಬಹುದು.
ತುಲಾ ರಾಶಿ
ತುಲಾ ರಾಶಿಯವರು ಮಂಗಳ ಗ್ರಹದ ಸಂಚಾರದಿಂದ ಸಕಾರಾತ್ಮಕ ಲಾಭ ಪಡೆಯುತ್ತಾರೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಬಡ್ತಿ ಮತ್ತು ಹೊಸ ಜವಾಬ್ದಾರಿ ಸಿಗಬಹುದು. ವಾಹನ ಖರೀದಿಸುವ ನಿಮ್ಮ ಬಹುದಿನಗ ಬಯಕೆಯನ್ನು ಈ ಸಮಯದಲ್ಲಿ ಈಡೇರಿಸಿಕೊಳ್ಳಲು ಎಲ್ಲಾ ಕಡೆಯಿಂದಲೂ ನಿಮಗೆ ಬೆಂಬಲ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಘನತೆ ಹೆಚ್ಚಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯ ನಡೆಯಬಹುದು.
ಮೀನ ರಾಶಿ
ಮಂಗಳ ಗ್ರಹವು ಪುಷ್ಯ ನಕ್ಷತ್ರಕ್ಕೆ ಚಲಿಸುವುದು ಮೀನ ರಾಶಿಯ ಮಂದಿಗೆ ಲಾಭದಾಯಕವಾಗಲಿದೆ. ನಿಮ್ಮ ಅನೇಕ ಧನಾತ್ಮಕ ಬದಲಾವಣೆಗಳ ನೋಡಬಹುದಾಗಿದೆ. ನಿಮಗೆ ಅನಿರೀಕ್ಷಿತವಾದ ಮೂಲದಿಂದ ಹಠಾತ್ ಧನಲಾಭ ನೋಡಬಹುದು. ನಿಮ್ಮ ಜೀವನದ ದೊಡ್ಡ ನಿರ್ಧಾರಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಹಳಷ್ಟು ಲಾಭವಿದೆ. ನವವಿವಾಹಿತರು ದಾಂಪತ್ಯದಲ್ಲಿ ಸಂತಸದ ವಾತಾವರಣ ಇರಲಿದೆ. ಸ್ನೇಹಿತರಿಗೆ ನೀಡಿದ್ದ ಹಣ ಮರಳಿ ಬರಬಹುದು. ಪೂರ್ವ ನಿಗದಿ ಮಾಡಿದ್ದ ಕೆಲಸಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನೆರವೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications