Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಿಥುನ ರಾಶಿಗೆ ಮಂಗಳನ ಸಂಚಾರ: 3 ರಾಶಿಯವರಿಗೆ ಅದೃಷ್ಟ..! ಆರ್ಥಿಕ ಲಾಭ!
ಹೊಸ ವರ್ಷ 2025ರಲ್ಲಿ ಹಲವು ಗ್ರಹಗಳು ಹಲವು ರಾಶಿಗೆ ಚಲಿಸುತ್ತಿರುವುದು ತಮ್ಮ ದಿಕ್ಕು ಬದಲಿಸುತ್ತಿರುವುದು ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ಇದೇ ಜನವರಿಯಲ್ಲಿ ಹಲವು ಗ್ರಹಗಳ ಸಂಚಾರದಲ್ಲಿ ಉಂಟಾಗುತ್ತಿರುವ ಬದಲಾವಣೆಯು ಹಲವು ಲಾಭಗಳಿಗೆ ಕಾರಣವಾಗುತ್ತಿದೆ.
ಹಾಗೆ ಇದೇ ಜನವರಿ 21ರಂದು ಮಿಥುನ ರಾಶಿಗೆ ಮಂಗಳನ ಸಂಚಾರವಾಗುತ್ತಿದೆ. ಮಂಗಳ ಗ್ರಹಕ್ಕೆ ಜ್ಯೋತಿಷ್ಯದಲ್ಲಿ ಬಹಳ ಮಹತ್ವ ನೀಡಲಾಗಿದೆ. ಮಂಗಳನಿಂದ ಹಲವು ರೀತಿಯ ಲಾಭವಾಗುತ್ತದೆ. ಮಂಗಳ ಸಂಪತ್ತು, ಆರೋಗ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಾಗಿ ಮಂಗಳ ಗ್ರಹವು ಮಿಥುನ ರಾಶಿಯಲ್ಲಿ ಸಂಯೋಗವಾಗುತ್ತಿರುವುದು ಹಲವು ರೀತಿಯ ಲಾಭಕ್ಕೆ ಕಾರಣವಾಗುತ್ತದೆ.

ಹೀಗಾಗಿ ನಾವಿಂದು ಮಂಗಳ ಗ್ರಹವು ಮಿಥುನ ರಾಶಿಯಲ್ಲಿ ಚಲಿಸುವುದು ಯಾವೆಲ್ಲಾ ರಾಶಿಯವರಿಗೆ ಧನಾತ್ಮಕ ಲಾಭಕ್ಕೆ ಕಾರಣವಾಗುತ್ತೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೀನ ರಾಶಿ
ಮಂಗಳ ಗ್ರಹವು ಮೀನ ರಾಶಿಯ 4ನೇ ಮನೆಯಲ್ಲಿ ಸಂಚರಿಸಲಿದೆ. ಹೀಗಾಗಿ ಮೀನ ರಾಶಿಯ ಜನರಲ್ಲಿ ಆರ್ಥಿಕ ಲಾಭದ ಸೂಚನೆ ಇದೆ. ಉತ್ತಮ ಭೌತಿಕ ಲಾಭಗಳಿಗೆ ಇದು ಕಾರಣವಾಗುತ್ತಿದೆ. ಹೊಸ ವಾಸಹನ ಖರೀದಿ, ಆಸ್ತಿ ಖರೀದಿ, ಮಾರಾಟ, ವ್ಯಹವಾರ ಸೇರಿ ಹಲವು ರೀತಿಯ ಕಾರ್ಯದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು. ಮನದಲ್ಲಿದ್ದ ದೊಡ್ಡ ದುಗುಡ ಅಥವಾ ಗೊಂದಲ ನಿವಾರಣೆಯಾಗುತ್ತದೆ. ಶುಭ ಕೆಲಸಗಳ ಮಾಡಲು ಇದು ಉತ್ತಮ ಸಮಯವಾಗಿದೆ. ನೀವು ಮಾಡುವ ಕೆಲಸ ಕಾರ್ಯಗಳಿಗೆ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳಿಗೆ ಕುಟುಂಬಸ್ಥರಿಂದ ಸಕಲ ಬೆಂಬಲ ದೊರೆಯಲಿದೆ. ಹಣಕಾಸು ವಿಚಾರದಲ್ಲಿ ಧನಾತ್ಮಕವಾಗಿರಲಿದೆ. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳುವ ಭಾಗ್ಯವಿದೆ.
ಸಿಂಹ ರಾಶಿ
ಸಿಂಹ ರಾಶಿಯ 11ನೇ ಮನೆಯಲ್ಲಿ ಮಂಗಳ ಗ್ರಹ ಸಂಚರಿಸಲಿದೆ. ಇದು ಸಿಂಹ ರಾಶಿ ಮಂದಿಗೆ ಲಾಭದಾಯಕ ದಿನಗಳ ತರಲಿದೆ. ಏಕಾಏಕಿ ನೀವು ಆರ್ಥಿಕ ಸ್ವಾವಲಂಬಿಗಳಾಗುವ ದಿನ ಹತ್ತಿರವಾದ ಅನುಭವವಾಗಲಿದೆ. ನಿಮ್ಮ ಕೈಯಲ್ಲಿ ಹಣ ಸಂಚರಿಸಲಿದೆ. ಹೂಡಿಕೆ, ಸಾಲ ಇದರಲ್ಲಿ ಲಾಭ ನಿಮ್ಮ ಕಡೆ ಇರಲಿದೆ. ಹೊಸದಾಗಿ ಆದಾಯ ಮೂಲ ಹುಟ್ಟಿಕೊಳ್ಳಬಹುದು. ಉದ್ಯಮಿಗಳಲ್ಲಿ ವ್ಯಾಪಾರ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ನಿಮ್ಮ ಭವಿಷ್ಯದ ದೃಷ್ಟಿಯಿಂದ ನೀವು ತೆಗೆದುಕೊಳ್ಳುವ ನಿರ್ಧಾರ ನಿಮಗೆ ಒಳಿತಾಗುವಂತೆ ಮಾಡಲಿದೆ.
ಧನು ರಾಶಿ
ಧನು ರಾಶಿಯ 7 ನೇ ಮನೆಯಲ್ಲಿ ಮಂಗಳನು ಚಲಿಸುವುದು ಲಾಭದಾಯಕ ಸೂಚನೆಯಾಗಿದೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿದೆ.
ಮುಖ್ಯವಾಗಿ ಈ ರಾಶಿಚಕ್ರದ ಸಂಗಾತಿಗಳು ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರಿಗಳು ಉತ್ತಮ ಲಾಭದೊಂದಿಗೆ ವ್ಯಾಪಾರದ ವಿಸ್ತರಣೆಗೆ ಮುಂದಾಗಬಹುದು. ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾವಾಗಿರಲಿದೆ. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಗೆ ಈ ಸಮಯದಲ್ಲಿ ದಾರಿ ಸಿಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











